Parker Solar Probe ಸೂರ್ಯನಿಗೆ ಪಾರ್ಕರ್‌ ಮೊದಲ ಚುಂಬನ, ಮೊಟ್ಟಮೊದಲ ಬಾರಿ ಸೂರ್ಯನ ಮುಟ್ಟಿದ ನೌಕೆ

By Suvarna News  |  First Published Dec 16, 2021, 2:00 AM IST
  • ಮೊಟ್ಟಮೊದಲ ಬಾರಿ ಸೂರ್ಯನ ಮುಟ್ಟುವಲ್ಲಿ ಮನುಕುಲಕ್ಕೆ ಯಶಸ್ಸು
  • 2018ರ ನವೆಂಬರ್‌ ಉಡ್ಡಯನಗೊಂಡ ಪಾರ್ಕರ್‌ ನೌಕೆ 
  • ಮೊದಲ ಬಾರಿಗೆ ಸೂರ್ಯನ ಕರೋನಾ ತಲುಪಿದ ನೌಕೆ

ವಾಶಿಂಗ್ಟನ್(ಡಿ.16): ಸೂರ್ಯನ ಕುರಿತು ಅಧ್ಯಯನ ನಡೆಸಲು ಹಮ್ಮಿಕೊಳ್ಳಲಾಗಿದ್ದ ಅತಿ ಮುಖ್ಯ ಯೋಜನೆಯಲ್ಲಿ ಅಮೆರಿಕದ(America Space Administration) ಬಾಹ್ಯಾಕಾಶ ಸಂಸ್ಥೆ ನಾಸಾ(NASA) ಮೊದಲ ವಿಜಯ ಸಾಧಿಸಿದೆ. ನಾಸಾ ಉಡಾವಣೆ ಮಾಡಿದ್ದ ಪಾರ್ಕರ್‌ ಸೋಲಾರ್‌ ಪ್ರೋಬ್‌ ನೌಕೆ(Parker Solar Probe) ಮೊದಲ ಬಾರಿಗೆ ಸೂರ್ಯನ ಹೊರ ಪದರ ಕೊರೋನಾವನ್ನು ಪ್ರವೇಶಿಸಿ ಹೊರ ಬಂದಿದೆ. ಜೊತೆಗೆ ಸೂರ್ಯನ ಕುರಿತಾದ ಮುಂದಿನ ಅಧ್ಯಯನಕ್ಕೆ ಹೆಚ್ಚಿನ ಯೋಜನೆಗಳನ್ನು ಕೈಗೊಳ್ಳಲು ವಿಜ್ಞಾನಿಗಳಿಗೆ ಸ್ಫೂರ್ತಿ ನೀಡಿದೆ. ನಾಸಾದ ಈ ಯೋಜನೆಯ ಕುರಿತ ಒಂದಿಷ್ಟುಮಾಹಿತಿ ಇಲ್ಲಿದೆ.

ಯಾಕೆ ಈ ಯೋಜನೆ
ಅಂತರಿಕ್ಷ, ಚಂದ್ರ, ಮಂಗಳನ(Lunar) ಅಂಗಳವನ್ನು ಪ್ರವೇಶಿಸಿ ಅಧ್ಯಯನ ನಡೆಸಿದ ಮಾನವನ ಕನಸಿನ ಬಹುದೊಡ್ಡ ಯೋಜನೆ ಸೌರಯಾನ. ಭೂಮಿಯ ಹತ್ತಿರ ನಕ್ಷತ್ರವಾದ ಸೂರ್ಯನಿಂದ ಭೂಮಿಯ ಮೇಲಾಗುವ ಪರಿಣಾಮಗಳು, ಅಪಾಯಗಳು, ಅನುಕೂಲಗಳನ್ನು ಅಧ್ಯಯನ ಮಾಡಲು ಈ ಯೋಜನೆ ಕೈಗೊಳ್ಳಲು 1958ರಿಂದಲೂ ಪ್ರಯತ್ನಗಳನ್ನು ನಡೆಸಲಾಗುತ್ತಿತ್ತು. ಕೊನೆಗೂ 2018ರಲ್ಲಿ ನಾಸಾ ತನ್ನ ಪಾರ್ಕರ್‌ ಸೋಲಾರ್‌ ಪ್ರೋಬ್‌ ನೌಕೆಯನ್ನು ಉಡಾವಣೆ ಮಾಡಿತ್ತು.

Tap to resize

Latest Videos

undefined

NASA’s 10 New Astronauts: ನಾಸಾ ಆಯ್ಕೆ ಮಾಡಿದ 10 ಗಗನಯಾತ್ರಿಗಳ ಪೈಕಿ ಭಾರತೀಯ ಮೂಲದ ಅನಿಲ್ ಮೆನನ್!

ಪಾರ್ಕರ್‌ ನೌಕೆ
ಇದು ಸೂರ್ಯನ ಕೊರೋನಾ ಪ್ರವೇಶಿಸಿದ ಮೊದಲ ನೌಕೆ. ಇದನ್ನು ಜಾನ್‌ ಹಾಪ್ಕಿನ್ಸ್‌ ವಿಶ್ವವಿದ್ಯಾನಿಲಯದ ವಿಜ್ಞಾನಗಳು ತಯಾರಿಸಿದ್ದರು. ಖ್ಯಾತ ಖಗೋಳ ಶಾಸ್ತ್ರಜ್ಞ ಯೂಜೀನ್‌ ಪಾರ್ಕರ್‌ನ ಹೆಸರನ್ನು ಈ ನೌಕೆಗೆ ಇರಿಲಾಗಿದೆ. ಜೊತೆಗೆ ನೌಕೆಯನ್ನು ತಯಾರಿಸವವಲ್ಲಿ ಕೆಲಸ ಮಾಡಿದ 10 ಲಕ್ಷಕ್ಕೂ ಹೆಚ್ಚು ಹೆಸರರುಗಳಿರುವ ಮೆಮೋರಿ ಕಾರ್ಡ್‌ನ್ನು ಈ ನೌಕೆಯ ಕೆಳಭಾಗದಲ್ಲಿ ಅಳವಡಿಸಲಾಗಿತ್ತು. 2018ರ ಆಗಸ್ಟ್‌ 12ರಂದು ಉಡಾವಣೆಗೊಂಡ ನೌಕೆ, ಸೂರ್ಯನ ಕೊರೋನಾ ತಲುಪಿ, ಅಲ್ಲಿನ ಸೌರ ಜ್ವಾಲೆಗಳನ್ನು ಹಾದು ಅಲ್ಲಿನ ಕಾಂತ ವಲಯಕ್ಕೆ ಸಂಬಂಧಿಸಿದ ಅತ್ಯಮೂಲ್ಯ ಮಾಹಿತಿ ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ.

ನೌಕೆ ಸೂರ್ಯನನ್ನು ತಲುಪಿದ್ದು ಹೇಗೆ?
2018ರ ನವೆಂಬರ್‌ ಉಡ್ಡಯನಗೊಂಡ ಪಾರ್ಕರ್‌ ನೌಕೆ ಸೂರ್ಯನನ್ನು 150 ದಿನದಲ್ಲಿ ಒಂದು ಸುತ್ತು ಸುತ್ತುತ್ತಿತ್ತು. ಪ್ರತಿ ಬಾರಿಯ ಪೆರಿಲಿಯನ್‌ (ಭೂಮಿ ಮತ್ತು ಸೂರ್ಯನ ನಡುವಿನ ಅತ್ಯಂತ ಸಮೀಪದ ದೂರ) ಸಮಯದಲ್ಲಿ ತನ್ನ ಪಥವನ್ನು ಕುಗ್ಗಿಸಿಕೊಂಡು ಸೂರ್ಯನ ಸಮೀಪಕ್ಕೆ ತಲುಪುತ್ತಿತ್ತು. 2021ರಲ್ಲಿ ಮೊದಲ ಬಾರಿಗೆ ಸೂರ್ಯನ ಕರೋನಾ ತಲುಪಿದ ನೌಕೆ(solar atmosphere) ಸೂರ್ಯನಿಂದ 80 ಲಕ್ಷ ಕಿ.ಮೀ ದೂರದಲ್ಲಿತ್ತು. ಏಪ್ರಿಲ್‌ 2021ರ ವೇಳೆಗೆ ಸೂರ್ಯನಿಂದ 1.3 ಕೋಟಿ ಕಿ.ಮೀ ದೂರದಲ್ಲಿ ಸೌರಜ್ವಾಲೆಯನ್ನು ಹಾದು ಬಂದಿದೆ. ಸೂರ್ಯನಿಂದ ಕೇವಲ 61 ಲಕ್ಷ ಕಿ.ಮೀ ದೂರಕ್ಕೆ ತಲುಪಿ ಅಧ್ಯಯನ ನಡೆಸುವುದು ಈ ಯೋಜನೆಯ ಮುಖ್ಯ ಉದ್ದೇಶ. 2025ಕ್ಕೆ ಇದನ್ನು ಪಾರ್ಕರ್‌ ಸಾಧಿಸಲಿದೆ ಎಂದು ನಾಸಾ ಹೇಳಿದೆ.

ಚಂದ್ರಯಾನ-ನಾಸಾ ಆರ್ಬಿಟರ್‌ ಡಿಕ್ಕಿ ತಪ್ಪಿಸಿದ ಇಸ್ರೋ!

ಸೌರಯಾನಕ್ಕಿದ್ದ ಅಡೆತಡೆಗಳು
1. ಸೂರ್ಯನ ಶಾಖ: ಸೌರಯಾನಕ್ಕಿದ್ದ ಅತಿ ದೊಡ್ಡ ಅಡ್ಡಿ ಎಂದರೆ ಅದು ಸೂರ್ಯನ ಶಾಖ. ಸೂರ್ಯನ ಕೊರೋನಾದ ಉಷ್ಣಾಂಶವೇ 1.1 ಕೋಟಿ ಡಿಗ್ರಿ ಸೆಲ್ಷಿಯಸ್‌ಗಿಂತ ಹೆಚ್ಚಿದೆ. ಇಷ್ಟುಶಾಖದ ಹತ್ತಿರಕ್ಕೆ ಯಾವುದೇ ವಸ್ತು ಬಂದರೂ ಅದು ಬೂದಿಯಾಗುವುದು ಖಚಿತ. ಅದಕ್ಕಾಗಿ ಸೂರ್ಯನ ಶಾಖವನ್ನು ಹೀರಿಕೊಳ್ಳದೇ ಅದನ್ನು ಪ್ರತಿಫಲಿಸುವ ಸಾಮರ್ಥ್ಯವುಳ್ಳ ವಸ್ತುಗಳನ್ನು ಬಳಸಿ ತಯಾರಿಸಲಾಯ್ತು. ಜೊತೆಗೆ ಭಾರೀ ಉಷ್ಣಾಂಶದಿಂದಾಗುವ ಹಾನಿ ತಪ್ಪಿಸಲು ನೌಕೆಯ ವೇಗವನ್ನು ಗಂಟೆಗೆ 5 ಲಕ್ಷ ಕಿ.ಮೀ.ಗೆ ಹೆಚ್ಚಿಸಲಾಗಿತ್ತು.

2. ಶುಕ್ರ, ಬುಧನ ಗುರುತ್ವಾಕರ್ಷಣಾ ಬಲ
ಭೂಮಿಯಿಂದ ಹೊರಟ ನೌಕೆ ಶುಕ್ರ ಅಥವಾ ಬುಧನ ಗುರುತ್ವಾಕರ್ಷಣೆಗೆ ಸಿಲುಕಿ ಅವುಗಳ ಸುತ್ತಾ ಸುತ್ತಬಹುದಾದ ಅಪಾಯವಿತ್ತು. ಹಾಗಾಗಿ ಇವುಗಳ ಗುರುತ್ವಾಕರ್ಷಣಾ ಬಲವನ್ನು ಮೀರಿ ಮುಂದೆ ಸಾಗುವಷ್ಟುಶಕ್ತಿಶಾಲಿಯಾಗಿ ನೌಕೆಯನ್ನು ತಯಾರು ಮಾಡಬೇಕಾಗಿತ್ತು. ಇದಕ್ಕಾಗಿ ಸರಿಯಾದ ದಿನ, ಮತ್ತು ಸಮಯವನ್ನು ನಿಗದಿ ಮಾಡಿ ನಿಗದಿತ ಸಮಯದಲ್ಲಿ ನೌಕೆಯ ವೇಗದಲ್ಲಿ ಬದಲಾವಣೆ ಮಾಡುವ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಲಾಯಿತು.

3. ಸಂಪರ್ಕ
ಸೂರ್ಯ ಮತ್ತು ಭೂಮಿಯ ನಡುವಿನ ಸರಾಸರಿ ಅಂತರ 14.7 ಕೋಟಿ ಕಿ.ಮೀ. ಭೂಮಿಯಿಂದ ಬೆಳಕಿನ ವೇಗದಲ್ಲಿ ಸಂದೇಶ ಕಳುಹಿಸಿದರೂ ಅದು ನೌಕೆಯನ್ನು ತಲುಪಲು ಕನಿಷ್ಠ 8 ನಿಮಿಷಗಳ ಸಮಯ ತೆಗೆದುಕೊಳ್ಳುತ್ತಿತ್ತು. ಈ ತಡೆಯನ್ನು ನಿವಾರಿಸಲು ಎಲ್ಲಾ ಪರಿಸ್ಥಿತಿಗಳಲ್ಲೂ ಸ್ವಯಂ ನಿರ್ಣಯ ತೆಗೆದುಕೊಳ್ಳುವ ಕಂಪ್ಯೂಟರ್‌ಗಳನ್ನು ನೌಕೆಯಲ್ಲಿ ಅಳವಡಿಸಲಾಗಿತ್ತು.

ಇದರಿಂದಾದ ಅನುಕೂಲಗಳು:
1. ನಾಸಾದ ಕಿರೀಟಕ್ಕೆ ಮತ್ತೊಂದು ಗರಿ: ಹಲವಾರು ಯಶಸ್ವಿ ಬಾಹ್ಯಾಕಾಶ ಯೋಜನೆಗಳನ್ನು ಕೈಗೊಂಡಿರುವ ನಾಸಾಕ್ಕೆ ಸೌರಯೋಜನೆ ಮತ್ತೊಂದು ಗರಿ ನೀಡಿದೆ. ಇದರಿಂದಾಗಿ ನಾಸಾ ಸೂರ್ಯನ ಕುರಿತಾದ ಮತ್ತಷ್ಟುಯೋಜನೆಗಳನ್ನು ಕೈಗೊಳ್ಳಲು ಸಹಾಯ ಮಾಡಲಿದೆ.

2. ಉಳಿದ ದೇಶಗಳಿಗೆ ಸ್ಫೂರ್ತಿ: ಸೂರ್ಯನ ಕುರಿತು ಅಧ್ಯಯನ ನಡೆಸಲು ಯೋಜನೆಗಳನ್ನು ರೂಪಿಸುತ್ತಿರುವಂತಹ ಭಾರತದಂತಹ ದೇಶಗಳಿಗೆ ಈ ಯಶಸ್ಸು ಮತ್ತಷ್ಟುಹರುಪು ನೀಡಲಿದೆ. ಈ ಯೋಜನೆಯಿಂದ ದೊರೆತ ಮಾಹಿತಿಗಳನ್ನು ಆಧರಿಸಿ ಹೆಚ್ಚಿನ ಸಂಶೋಧನೆ ಕೈಗೊಳ್ಳಲು ಅನುಕೂಲ ಒದಗಿಸಲಿದೆ.

3. ಸೂರ್ಯನ ಹೆಚ್ಚು ಮಾಹಿತಿ: ಹತ್ತಿರದ ನಕ್ಷತ್ರ ಕುರಿತು ಅಧ್ಯಯನ ನಡೆಸುತ್ತಿದ್ದ ದೇಶಗಳಿಗೆ ಹೆಚ್ಚಿನ ಮಾಹಿತಿಯನ್ನು ಈ ಯೋಜನೆ ನೀಡಿದೆ. ಸೂರ್ಯನ ಮ್ಯಾಗ್ನೆಟಿಕ್‌ ವಲುದ ಮಾಹಿತಿ ಸಿಕ್ಕಿರುವುದರಿಂದ ಸೂರ್ಯನಿಂದ ಭೂಮಿಯ ಮೇಲಾಗುವ ಪರಿಣಾಮಗಳನ್ನು ಅಧ್ಯಯನ ಮಾಡಲು ಇದು ನೆರವಾಗಲಿದೆ.

ಪಾರ್ಕರ್‌:
2018 ಆ.12 - ಉಡಾವಣೆ
2018 ಅ.3 - ಶುಕ್ರನ ಪರಿಧಿಯಲ್ಲಿ ಪರಿಭ್ರಮಣೆ
2018 ನ.6 - ಮೊದಲ ಬಾರಿ ಸೂರ್ಯನತ್ತ ಪ್ರಯಾಣ
2019 ಡಿ.26 - ಶುಕ್ರನ ಪರಿಧಿ ದಾಟಿ ಸೂರ್ಯನತ್ತ
2021 ಜ.17 - ಸೂರ್ಯನ ಕರೋನಾ ಪರಿಧಿಗೆ
2021 ಏ.29 - ಸೌರಜ್ವಾಲೆ ಹಾದು ಬಂದ ನೌಕೆ
2025 ಡಿ.12 - ಸೂರ್ಯನ ಅತೀ ಸಮೀಪಕ್ಕೆ
 

click me!