1 ಲೀಟರ್ ಮೂತ್ರದಿಂದ 6 ಗಂಟೆಗೆ ಬೇಕಾಗುವ ಕರೆಂಟ್ ಉತ್ಪಾದನೆ: ಆಫ್ರಿಕನ್ ಮಕ್ಕಳ ಅದ್ಭುತ ಅವಿಷ್ಕಾರ

Published : Sep 04, 2025, 11:54 AM IST
Scientists find a surprising use for urine

ಸಾರಾಂಶ

ಆಫ್ರಿಕಾದ ನಾಲ್ವರು ವಿದ್ಯಾರ್ಥಿನಿಯರು ಮಾನವ ಮೂತ್ರದಿಂದ ವಿದ್ಯುತ್ ಉತ್ಪಾದಿಸುವ ಜನರೇಟರ್ ಅನ್ನು ಕಂಡುಹಿಡಿದಿದ್ದಾರೆ. ವಿದ್ಯುತ್ ಸಂಪರ್ಕ ಕಷ್ಟಕರ ಎನಿಸುವ ಹಳ್ಳಿಗಳಲ್ಲಿ ಇದು ಅತ್ಯಂತ ಉಪಕಾರಿ ಆಗಬಲ್ಲುದು

ಮಕ್ಕಳ ಬುದ್ಧಿವಂತಿಕೆ ಕುತೂಹಲ, ಸೃಜನಶೀಲತೆಗೆ ಕೊನೆ ಇಲ್ಲ. ಸರಿಯಾದ ಮಾರ್ಗದರ್ಶನ ಮಾಡಿದರೆ ಮಕ್ಕಳು ಅದ್ಭುತವಾದುದನ್ನು ಸಾಧಿಸುತ್ತಾರೆ. ಕೆಲ ದಿನಗಳ ಹಿಂದೆ ಚೀನಾದ ಮಕ್ಕಳು ಸೋಡಾ ಬಾಟಲ್‌ನಿಂದ ಎರಡು ಹಂತದ ರಾಕೆಟ್ ಲಾಂಚರ್‌ ಮಾಡಿ ಅದನ್ನು ಯಶಸ್ವಿಯಾಗಿ ಲಾಂಚ್ ಮಾಡಿದ ವೀಡಿಯೋವೊಂದು ವೈರಲ್ ಆಗಿತ್ತು. ಅದೇ ರೀತಿ ಈಗ ಆಫ್ರಿಕನ್ ಮಕ್ಕಳು ಹೊಸದೊಂದು ಅವಿಷ್ಕಾರ ಮಾಡಿದ್ದು, ಇದು ಯೋಚನೆಗೆ ಹಾಗೂ ಅವಿಷ್ಕಾರಗಳಿಗೆ ಹೊಸ ಅವಕಾಶವೊಂದನ್ನು ತೆರೆದಿಟ್ಟಿದೆ ಎಂದರೆ ತಪ್ಪಾಗಲಾರದು.

ಮಾನವ ಮೂತ್ರದಿಂದ ವಿದ್ಯುತ್ ಉತ್ಪಾದನೆ:

ಮುಂದಿನ ಪೀಳಿಗೆಯವರಿಗೆ ಕೊರತೆಯಾಗಿ ಕಾಡಬಹುದಾದ ವಸ್ತುಗಳಲ್ಲಿ ಇಂಧನ ಕೂಡ ಒಂದು ಇದಕ್ಕಾಗಿ ಹಲವು ದೇಶಗಳ ಸರ್ಕಾರಗಳು ಸೋಲಾರ್ ಶಕ್ತಿಯ ಉತ್ಪಾದನೆ ಮಾಡುವುದಕ್ಕಾಗಿ ಕೋಟ್ಯಾಂತರ ರೂಪಾಯಿಯನ್ನು ವೆಚ್ಚ ಮಾಡುತ್ತಿದೆ. ಹೀಗಿರುವಾಗ ಆಫ್ರಿಕಾದ ಮೂವರು ವಿದ್ಯಾರ್ಥಿನಿಯರು ಮಾನವ ಮೂತ್ರದಿಂದ ವಿದ್ಯುತ್ ಉತ್ಪಾದಿಸುವ ಜನರೇಟರೊಂದನ್ನು ಆವಿಷ್ಕರಿಸಿದ್ದಾರೆ. ಈ ಮಕ್ಕಳು ಕಂಡು ಹಿಡಿದ ಈ ಜನರೇಟರ್ ಯಂತ್ರವೂ ಒಂದು ಲೀಟರ್ ಮೂತ್ರದಿಂದ 6 ಗಂಟೆಗಳಿಗೆ ಸಾಕಾಗುವಷ್ಟು ವಿದ್ಯುತ್‌ನ್ನು ಉತ್ಪಾದಿಸಿದೆ ಎಂದು ವರದಿಯಾಗಿದೆ.

1 ಲೀಟರ್ ಮೂತ್ರದಲ್ಲಿ 4 ಗಂಟೆಗೆ ಬೇಕಾಗುವ ವಿದ್ಯುತ್ ಉತ್ಪಾದನೆ:

ಅಂದಹಾಗೆ ದಕ್ಷಿಣ ಆಫ್ರಿಕಾದ ನೈಜೀರಿಯಾದ ನಾಲ್ವರು ಹದಿಹರೆಯದ ಹುಡುಗಿಯರು ಈ ಸಾಧನೆ ಮಾಡಿದ್ದಾರೆ. ಈ ಪ್ರಕ್ರಿಯೆಯು ಮೂತ್ರದಿಂದ ಹೈಡ್ರೋಜನ್ ಅನ್ನು ಹೊರತೆಗೆಯುವ ಮೂಲಕ ಕಾರ್ಯನಿರ್ವಹಿಸುತ್ತದೆ, ನಂತರ ಅದನ್ನು ಜನರೇಟರ್‌ಗೆ ಶಕ್ತಿ ತುಂಬಲು ಬಳಸಲಾಗುತ್ತದೆ. ಈ ಆವಿಷ್ಕಾರವನ್ನು ಕಾರ್ಯರೂಪಕ್ಕೆ ಅಧಿಕ ವೆಚ್ಚವಿಲ್ಲ, ಮಾತ್ರವಲ್ಲದೆ ಪರಿಸರ ಸ್ನೇಹಿಯೂ ಆಗಿದೆ. ಸೀಮಿತ ವಿದ್ಯುತ್ ಸೌಲಭ್ಯವಿರುವ ಪ್ರದೇಶಗಳಿಗೆ ಇದು ನವೀಕರಿಸಬಹುದಾದ ಇಂಧನ ಪರಿಹಾರವನ್ನು ನೀಡುತ್ತದೆ. ವಿದ್ಯಾರ್ಥಿಗಳ ಈ ಆವಿಷ್ಕಾರವು ಸೃಜನಶೀಲತೆ, ವಿಜ್ಞಾನ ಮತ್ತು ನಿರ್ಣಯವು ತ್ಯಾಜ್ಯವನ್ನು ಸಂಪತ್ತಾಗಿ ಹೇಗೆ ಪರಿವರ್ತಿಸಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ. ಇದು ಶಕ್ತಿಯ ಭವಿಷ್ಯವು ಅತ್ಯಂತ ಅನಿರೀಕ್ಷಿತ ಸ್ಥಳಗಳಿಂದ ಬರಬಹುದು ಎಂಬುದನ್ನು ಸಾಬೀತುಪಡಿಸುತ್ತದೆ.

ಆಫ್ರಿಕನ್ ವಿದ್ಯಾರ್ಥಿಗಳ ಈ ಸಾಧನೆಗೆ ಈಗ ಭಾರಿ ಶ್ಲಾಘನೆ ವ್ಯಕ್ತವಾಗಿದೆ. ಡುರೊ-ಐನಾ ಅಡೆಬೋಲಾ, ಅಕಿಂಡೆಲೆ ಅಬಿಯೋಲಾ, ಮತ್ತು ಫಲೆಕೆ ಒಲುವಾಟೊಯಿನ್, ಮತ್ತು ಬೆಲ್ಲೊ ಎನಿಯೋಲಾ ಈ ಅವಿಷ್ಕಾರದ ಹಿಂದಿರುವ ಆಫ್ರಿಕನ್ ಮಕ್ಕಳು. ನೈಜೀರಿಯಾದ ಲಾಗೋಸ್‌ನಲ್ಲಿ ನಡೆದ ವಾರ್ಷಿಕ ಕಾರ್ಯಕ್ರಮವಾದ 'ಮೇಕರ್ ಫೇರ್ ಆಫ್ರಿಕಾ'ದಲ್ಲಿ ಈ ಆವಿಷ್ಕಾರವನ್ನು ಪ್ರದರ್ಶಿಸಲಾಯಿತು, ಇದು ವಿದ್ಯಾರ್ಥಿಗಳ ಬುದ್ಧಿವಂತಿಕೆಯನ್ನು ಪ್ರದರ್ಶಿಸುವ ಒಂದು ಕಾರ್ಯಕ್ರಮವಾಗಿದೆ. .ಮೂತ್ರವನ್ನು ಇಂಧನವಾಗಿ ಬಳಸುವ ಕಲ್ಪನೆಯು ಹೊಸದಲ್ಲ ಆದರೆ ಬೋಲಾ, ಬಯೋಲಾ, ಟೊಯಿನ್ ಮತ್ತು ಎನಿಯೋಲಾ ಈ ಕಲ್ಪನೆಯನ್ನು ಕಾರ್ಯರೂಪಕ್ಕೆ ತರಲು ಪ್ರಾಯೋಗಿಕ ಮಾರ್ಗ ಕಂಡುಕೊಂಡಿದ್ದಾರೆ.

ಇದು ಹೇಗೆ ಕೆಲಸ ಮಾಡುತ್ತದೆ

makerfaireafrica.com ವೆಬ್‌ಸೈಟ್‌ನ ಬ್ಲಾಗ್‌ನಲ್ಲಿ ವಿವರಿಸಿದಂತೆ ಅದರ ಪ್ರಕ್ರಿಯೆ ಹೀಗಿದೆ.

ಮೂತ್ರವನ್ನು ವಿದ್ಯುದ್ವಿಚ್ಛೇದನ ಕೋಶಕ್ಕೆ ಹಾಕಲಾಗುತ್ತದೆ, ಇದು ಹೈಡ್ರೋಜನ್ ಅನ್ನು ಬೇರ್ಪಡಿಸುತ್ತದೆ.

ಮೂತ್ರವೂ ಹೈಡ್ರೋಜನ್ ಶುದ್ಧೀಕರಣಕ್ಕಾಗಿ ನೀರಿನ ಫಿಲ್ಟರ್‌ಗೆ ಹೋಗುತ್ತದೆ ಮತ್ತು ನಂತರ ಗ್ಯಾಸ್ ಸಿಲಿಂಡರ್‌ಗೆ ಹೋಗುತ್ತದೆ, ಇದು ಹೊರಾಂಗಣ ಬಾರ್ಬೆಕ್ಯೂ ಗ್ರಿಲ್‌ಗಳಿಗೆ ಬಳಸುವ ರೀತಿಯಂತೆಯೇ ಕಾಣುತ್ತದೆ.

ಇದನ್ನೂ ಓದಿ:  ಅಯ್ಯೋ ಕಂದಾ.. ಪೋಷಕರು ತೊರೆದ ಮಗುವಿಗೆ ಆಸ್ಪತ್ರೆಯಲ್ಲಿ ಇಲ್ಲಿ ಕಚ್ಚಿ ಸಾವು

ಇದನ್ನೂ ಓದಿ: ವಿಮಾನದಲ್ಲಿ ಬಂದ ತನ್ನ ಪೋಷಕರ ಭಾವುಕವಾಗಿ ಸ್ವಾಗತಿಸಿದ ಪೈಲಟ್‌ ಮಗಳು: ಹೆಮ್ಮೆಯಿಂದ ಎದೆಯುಬ್ಬಿಸಿದ ಅಪ್ಪ..!

 

 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಖಗೋಳ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ