ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಯಡಿ ಮನೆಯ ಮೇಲ್ಚಾವಣಿಯಲ್ಲಿ ಸೌರ ಘಟಕ ಅಳವಡಿಸಿ 20 ವರ್ಷ ಉಚಿತ ವಿದ್ಯುತ್ ಪಡೆಯಿರಿ. ಹೆಚ್ಚುವರಿ ವಿದ್ಯುತ್ ಮಾರಾಟ ಮಾಡಿ ಆದಾಯ ಗಳಿಸಿ, ಸರ್ಕಾರದ ಸಬ್ಸಿಡಿ ಪಡೆದು ಖರ್ಚು ಕಡಿಮೆ ಮಾಡಿ.
ನವದೆಹಲಿ: ಕೇಂದ್ರ ಸರ್ಕಾರವು "ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಜಿ ಯೋಜನೆ" (PM Surya Ghar Muft Bijli Yojana) ಅಡಿ ನಾಗರಿಕರಿಗೆ ಭರ್ಜರಿ ಸೌಲಭ್ಯ ಒದಗಿಸಿದೆ. ಈ ಯೋಜನೆಯಡಿ ತಮ್ಮ ಮನೆ ಮೇಲ್ಚಾವಣಿಯಲ್ಲಿ ಸೌರ ಘಟಕವನ್ನು ಅಳವಡಿಸಿಕೊಂಡರೆ 20 ವರ್ಷಗಳ ಕಾಲ ಉಚಿತ ವಿದ್ಯುತ್ ಪಡೆಯಬಹುದಾಗಿದೆ.
2024ರ ಫೆಬ್ರವರಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಘೋಷಿಸಿದ ಈ ಯೋಜನೆಯಡಿ, ದೇಶದಾದ್ಯಂತ ಒಂದು ಕೋಟಿ ಮನೆಗಳಲ್ಲಿ ಸೌರ ಘಟಕ ಅಳವಡಿಸುವ ಗುರಿ ಹೊಂದಲಾಗಿದೆ. ಇದರಿಂದ ಮನೆ ಮಾಲೀಕರಿಗೆ ಕೇವಲ ಉಚಿತ ವಿದ್ಯುತ್ ಸಿಗುವುದಲ್ಲದೆ, ಹೆಚ್ಚುವರಿ ಉತ್ಪಾದನೆಯಾಗುವ ವಿದ್ಯುತ್ ಅನ್ನು ಡಿಸ್ಕಾಂ (DISCOM) ಕಂಪನಿಗಳಿಗೆ ಮಾರಾಟ ಮಾಡುವ ಮೂಲಕ ಆದಾಯ ಗಳಿಸುವ ಅವಕಾಶವೂ ಸಿಗುತ್ತದೆ.
ಸೌರ ಘಟಕದಿಂದ ಸಿಗುವ ಪ್ರಮುಖ ಪ್ರಯೋಜನಗಳು
20 ವರ್ಷಗಳ ಉಚಿತ ವಿದ್ಯುತ್ ಬಳಕೆ
ವಿದ್ಯುತ್ ಬಿಲ್ಲು ಶೂನ್ಯಕ್ಕೆ ಸಮಾನ
ಹೆಚ್ಚುವರಿ ಉತ್ಪಾದನೆ ಮಾಡಿದರೆ ಅದನ್ನು ಸರ್ಕಾರಕ್ಕೆ ಮಾರಾಟಿಸಿ ಆದಾಯ
5 ವರ್ಷಗಳ ಉಚಿತ ತಾಂತ್ರಿಕ ನಿರ್ವಹಣೆ
25 ವರ್ಷಗಳ ದೀರ್ಘಾವಧಿಯ ಉಪಯೋಗ
ಕೇಂದ್ರ ಸರ್ಕಾರದಿಂದ ಆಕರ್ಷಕ ಸಬ್ಸಿಡಿ ಸೌಲಭ್ಯ
ಕೇವಲ 5 ನಿಮಿಷಗಳಲ್ಲಿ ಡಿಜಿಟಲ್ ಅರ್ಜಿ ಪ್ರಕ್ರಿಯೆ
ಪರಿಸರ ಸ್ನೇಹಿ – ಹಸಿರು ಶಕ್ತಿ ಬಳಕೆ
ವೆಚ್ಚ ಮತ್ತು ಸಬ್ಸಿಡಿ ಲೆಕ್ಕಾಚಾರ
ಸೌರ ಘಟಕ ಅಳವಡಿಸಲು ಮನೆಯ ಮೇಲ್ಚಾವಣಿಯಲ್ಲಿ ಪ್ರತಿ 1 ಕಿಲೋವಾಟ್ (KW) ಘಟಕಕ್ಕೆ 10x10 ಅಡಿ ಜಾಗ ಬೇಕಾಗುತ್ತದೆ.
1 KW ಘಟಕ
ತಿಂಗಳಿಗೆ 100 ಯೂನಿಟ್ ವಿದ್ಯುತ್ ಉತ್ಪಾದನೆ
ವೆಚ್ಚ: ₹60,000 – ₹80,000
ಸಬ್ಸಿಡಿ: ₹30,000
ವಾರ್ಷಿಕ ಉಳಿತಾಯ: ₹9,600
2 KW ಘಟಕ
ತಿಂಗಳಿಗೆ 200 ಯೂನಿಟ್ ವಿದ್ಯುತ್ ಉತ್ಪಾದನೆ
ವೆಚ್ಚ: ₹1,20,000 – ₹1,60,000
ಸಬ್ಸಿಡಿ: ₹60,000
ವಾರ್ಷಿಕ ಉಳಿತಾಯ: ₹21,600
3 KW ಘಟಕ
ತಿಂಗಳಿಗೆ 300 ಯೂನಿಟ್ ವಿದ್ಯುತ್ ಉತ್ಪಾದನೆ
ವೆಚ್ಚ: ₹1,80,000 – ₹2,40,000
ಸಬ್ಸಿಡಿ: ₹60,000
ವಾರ್ಷಿಕ ಉಳಿತಾಯ: ₹35,000
ಯಾರು ಅರ್ಜಿ ಹಾಕಬಹುದು?
ಖಾಸಗಿ ಮನೆಮಾಲೀಕರು (ಗ್ರಾಮ ಮತ್ತು ನಗರ ಪ್ರದೇಶ)
ಅಪಾರ್ಟ್ಮೆಂಟ್ / ವಸತಿ ಸಮೂಹಗಳ ಸಂಘಗಳು
ಚಾವಣಿಯಲ್ಲಿ ಖಾಲಿ ಸ್ಥಳವಿರುವವರು
ಅಗತ್ಯ ದಾಖಲೆಗಳು
ಆಧಾರ್ ಕಾರ್ಡ್
ಇತ್ತೀಚಿನ ವಿದ್ಯುತ್ ಬಿಲ್
ಬ್ಯಾಂಕ್ ಪಾಸ್‌ಬುಕ್ ಪ್ರತಿಗೆ
ಚಾವಣಿಯ ಮೇಲಿನ ಸ್ಥಳದ ಫೋಟೋ
ಅರ್ಜಿ ಸಲ್ಲಿಸುವ ವಿಧಾನ
ಅಧಿಕೃತ ವೆಬ್‌ಸೈಟ್ pmsuryaghar.gov.in ಗೆ ಭೇಟಿ ನೀಡಿ
Apply for Rooftop Solar ಆಯ್ಕೆಮಾಡಿ
ರಾಜ್ಯ ಹಾಗೂ ವಿದ್ಯುತ್ ಪೂರೈಕೆ ಕಂಪನಿಯನ್ನು (BESCOM, MESCOM, HESCOM ಇತ್ಯಾದಿ) ಆಯ್ಕೆಮಾಡಿ
ಗ್ರಾಹಕ ಐಡಿ ನಮೂದಿಸಿ, ವಿವರಗಳನ್ನು ಭರ್ತಿ ಮಾಡಿ ಮತ್ತು ದಾಖಲೆಗಳನ್ನು ಅಪ್ಲೋಡ್ ಮಾಡಿ
ಅರ್ಜಿಯನ್ನು ಸಲ್ಲಿಸಿದ ನಂತರ Application ID ಪಡೆಯಿರಿ
ಅರ್ಜಿ ಸ್ಥಿತಿಯನ್ನು ವೆಬ್‌ಸೈಟ್ ಮೂಲಕವೇ ಪರಿಶೀಲಿಸಬಹುದು
ನೋಂದಣಿ ನಂತರದ ಹಂತಗಳು
ಸಂಬಂಧಿಸಿದ ಡಿಸ್ಕಾಂ ಅಧಿಕಾರಿಗಳು ತಾಂತ್ರಿಕ ಪರಿಶೀಲನೆ ನಡೆಸುತ್ತಾರೆ
ಅನುಮೋದನೆ ಬಳಿಕ ಏಜೆನ್ಸಿ ಮೂಲಕ ಸೌರ ಘಟಕ ಅಳವಡಿಸಲಾಗುತ್ತದೆ
ಸರ್ಕಾರ ನೀಡುವ ಸಬ್ಸಿಡಿ ಮೊತ್ತ ನೇರವಾಗಿ ಗ್ರಾಹಕರ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ
ಯೋಜನೆಯ ಮಹತ್ವ
ಈ ಯೋಜನೆ ಕೇವಲ ಉಚಿತ ವಿದ್ಯುತ್ ನೀಡುವುದಲ್ಲ, ಮನೆಮಂದಿಯ ಖರ್ಚು ಕಡಿಮೆ ಮಾಡುವುದರ ಜೊತೆಗೆ ಪರಿಸರ ಸಂರಕ್ಷಣೆಗೆ ಸಹಕಾರ ನೀಡುತ್ತದೆ. ವಿಶೇಷವಾಗಿ ನಿವೃತ್ತ ಹಿರಿಯ ನಾಗರಿಕರು, ಮಧ್ಯಮವರ್ಗದ ಕುಟುಂಬಗಳು ಹಾಗೂ ಪರಿಸರ ಜಾಗೃತಿ ಹೊಂದಿದವರಿಗೆ ಇದು ಅಮೂಲ್ಯ ಅವಕಾಶವಾಗಿದೆ. ಸೌರ ಶಕ್ತಿ ಅಳವಡಿಸಿಕೊಂಡು, ನಿಮ್ಮ ಮನೆಗೆ ನೈಸರ್ಗಿಕ ಬೆಳಕು ಮತ್ತು ಆರ್ಥಿಕ ಭದ್ರತೆ ಎರಡನ್ನೂ ಒಟ್ಟಿಗೆ ಪಡೆಯಿರಿ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.