ಸೂರ್ಯನ ಸಮೀಪದ ನಕ್ಷತ್ರ ಎಂದು ಸಾಸೇಜ್ ಫೋಟೋ ಶೇರ್ ಮಾಡಿದ ವಿಜ್ಞಾನಿ, ಟೀಕೆ ಬಳಿಕ ಕ್ಷಮೆ!

By Suvarna News  |  First Published Aug 6, 2022, 12:35 PM IST

ಫ್ರಾನ್ಸ್‌ನ ಖ್ಯಾತ ವಿಜ್ಞಾನಿ ನಕ್ಷತ್ರ ಫೋಟೋ ಎಂದು ಸಾಸೇಜ್ ಫೋಟೋ ಹಂಚಿಕೊಂಡು ನಗೆಪಾಟಲೀಗೀಡಾಗಿದ್ದಾರೆ. ಅಸಲಿ ಮಾಹಿತಿ ಬಹಿರಂಗೊಳ್ಳುತ್ತಿದ್ದಂತೆ ವಿಜ್ಞಾನಿ ಕ್ಷಮೆ ಯಾಚಿಸಿದ್ದಾರೆ.


ಫ್ರಾನ್ಸ್(ಆ.06):  ಸೌರ ಜ್ವಾಲೆ ಚಂಡಮಾರುತ ಭೂಮಿಗೆ ಅಪ್ಪಳಿಸುತ್ತಿದೆ ಅನ್ನೋ ಸುದ್ಧಿಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಜ್ವಾಲೆಯುಕ್ತ ಸೂರ್ಯನ ಚಿತ್ರಗಳು ಮಾಧ್ಯಮ, ಸಾಮಾಜಿಕ ಜಾಲತಾಣದಲ್ಲಿ ಕಳೆದ ಕೆಲ ದಿನಗಳಿಂದ ಹರಿದಾಡುತ್ತಿದೆ. ಇದರ ನಡುವೆ ಫ್ರೆಂಚ್ ವಿಜ್ಞಾನಿ ಎಟಿಯೆನ್ ಕ್ಲೈನ್ ಅದೇ ರೀಯಿ ಕೆಂಪು ಜ್ವಾಲೆಯ ರೀತಿಯ ಹೊಳೆಯುವ ಅಲ್ಲಲ್ಲಿ ರಂಧ್ರಗಳಿರುವಂತೆ, ಸಣ್ಣ ಸಣ್ಣ ತೇಪೆಗಳಿರುವಂತ ಫೋಟೋವನ್ನು ಹಂಚಿಕೊಂಡಿದ್ದಾರೆ. ಬಳಿಕ ಈ ಫೋಟೋ ಕುರಿತು ಕೆಲ ಮಾಹಿತಿ ಹಂಚಿಕೊಂಡಿದ್ದಾರೆ. ಇದು ಸೂರ್ಯನ ಸಮೀಪವಿರುವ ನಕ್ಷತ್ರ. ಪ್ರಾಕ್ಸಿಮಾ ಸೆಂಟೌರಿಯ ಜೇಮ್ಸ್ ವೆಬ್ ಬಾಹ್ಯಾಕಾಶ ಕೇಂದ್ರ ದೂರದರ್ಶಕದಿಂದ ತೆಗೆದ ಚಿತ್ರ ಇದಾಗಿದೆ ಎಂದು ಈ ಮಾಹಿತಿ ಹಂಚಿಕೊಂಡಿದ್ದಾರೆ.  ಆದರೆ ಈ ಫೋಟೋ ವೈರಲ್ ಆಗುತ್ತಿದ್ದಂತೆ ಇದರ ಸತ್ಯಾಸತ್ಯತೆ ಬಹಿರಂಗಗೊಂಡಿದೆ. ತಕ್ಷಣವೇ ತಪ್ಪಿನಿಂದ ಎಚ್ಚೆತ್ತ ವಿಜ್ಞಾನಿ, ಇದು ನಕ್ಷತ್ರವಲ್ಲ, ಸ್ಪ್ಯಾನಿಶ್ ನಾನ್ ವೆಜ್ ಸಾಸೇಜ್ ಆಹಾರದ ಫೋಟೋ ಎಂದಿದ್ದಾರೆ. ಇಷ್ಟೇ ಅಲ್ಲ ತಪ್ಪಿಗಾಗಿ ಕ್ಷಮೆಯಾಚಿಸಿದ್ದಾರೆ.

ವಿಜ್ಞಾನಿ ಎಟಿಯೆನ್ ಕ್ಲೈನ್ ಈ ಫೋಟೋ ಹಂಚಿಕೊಂಡ ಬೆನ್ನಲ್ಲೇ ಹಲವರು ಇದು ಬೆರಗುಗೊಳಿಸುವ ಚಿತ್ರ ಎಂದು ಕಮೆಂಟ್ ಮಾಡಿದ್ದಾರೆ. ಗೆಲಕ್ಸಿಗಳ ಚಿತ್ರ ಯಾವತ್ತೂ ಕುತೂಹಲ ಮೂಡಿಸುತ್ತದೆ. ಇದೀಗ ಮತ್ತೊಂದು ಚಿತ್ರ ಜಗತ್ತನ್ನೇ ಬೆರಗುಗೊಳಿಸುತ್ತಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದರು. ಈ ಫೋಟೋ ಭಾರಿ ಸಂಚಲನ ಸೃಷ್ಟಿಸಿದೆ. ಸಾಮಾನ್ಯ ಜನರಿಗೆ ಕೌತುಕದ ಫೋಟೋವಾಗಿ ಗೋಚರಿಸಿದರೆ ವಿಜ್ಞಾನಿಗಳಿಗೆ ಈ ಚಿತ್ರ ಸೌರಮಂಡಲ, ಗ್ಯಾಲಕ್ಸಿ ರೀತಿ ಗೋಚರಿಸಿಲ್ಲ. ಈ ಚಿತ್ರದ ಕುರಿತು ಅನುಮಾನಗಳು ವ್ಯಕ್ತವಾಗತೊಡಗಿದೆ. ಈ ಚಿತ್ರ ಗ್ಯಾಲಕ್ಸಿ ರೀತಿ ಕಾಣುತ್ತಿಲ್ಲ ಎಂದು ಕೆಲ ವಿಜ್ಞಾನಿಗಳು ವಾದಿಸಿದ್ದಾರೆ.

Tap to resize

Latest Videos

undefined

James Webb Telescope ತೆಗೆದ ಅದ್ಭುತ ಚಿತ್ರ, ಬಾಹ್ಯಾಕಾಶದಲ್ಲಿ ಕಂಡಿತು ಕೃಷ್ಣನ ಸುದರ್ಶನ ಚಕ್ರ!

ವಾದ ವಿವಾದಗಳು ಹೆಚ್ಚಾಗತೊಡಗಿದೆ. ಈ ವೇಳೆ ಈ ಫೋಟೋದ ಸತ್ಯಾಸತ್ಯೆ ಅರಿಯಲು ಸ್ವತಃ ಎಟಿಯೆನ್ ಕ್ಲೈನ್ ಮುಂದಾಗಿದ್ದಾರೆ. ಕೆಲವೇ ಹೊತ್ತಲ್ಲಿ ಎಟಿಯೆನ್ ಕ್ಲೈನ್ ಮತ್ತೊಂದು ಟ್ವೀಟ್ ಮೂಲಕ ಗೊಂದಲಕ್ಕೆ ಪರಿಹಾರ ನೀಡಿದ್ದಾರೆ. ಈ ಚಿತ್ರ ಸೂರ್ಯನಿಂದ 4 ಜ್ಯೋತಿವರ್ಷಗಳ ಅಂತರದಲ್ಲಿರುವ ನಕ್ಷತ್ರದ ಚಿತ್ರವಲ್ಲ. ಇದು ಸ್ಪ್ಯಾನಿಷ್ ತಿನಿಸು ಮಸಾಲೆಯುಕ್ತ ಸಾಸೇಜ್ ಎಂದಿದ್ದಾರೆ. ಅಲ್ಲಿಗೆ ಈ ಹೊಸ ನಕ್ಷತ್ರದ ಅನ್ವೇಷೆಣೆಗೆ ತೆರೆ ಬಿದ್ದಿದೆ. ಇಷ್ಟೇ ಅಲ್ಲ ತನ್ನ ತಪ್ಪಿಗೆ ವಿಜ್ಞಾನಿ ಎಟಿಯೆನ್ ಕ್ಲೈನ್ ಕ್ಷಮೆ ಯಾಚಿಸಿದ್ದಾರೆ.

ಪ್ರಾಕ್ಸಿಮಾ ಸೆಂಟೌರಿಯ ಜೇಮ್ಸ್ ವೆಬ್ ಬಾಹ್ಯಾಕಾಶ ಕೇಂದ್ರ ತೆಗೆದ ನಕ್ಷತ್ರ ಫೋಟೋ ಎಂಬ ಮಾಹಿತಿಯೊಂದಿಗೆ ಅಧಿಕೃತ ಮೂಲದಿಂದ ನನಗೆ ಈ ಫೋಟೋ ಬಂದಿದೆ. ಹೀಗಾಗಿ ಹೆಚ್ಚಿನ ಅನ್ವೇಷನೆ, ಸತ್ಯಾಸತ್ಯತೆ ನೋಡದೆ ಹಂಚಿಕೊಂಡೆ. ಆದರೆ ನನ್ನ ತಪ್ಪಿನ ಅರಿವಾಗಿದೆ. ಹೀಗಾಗಿ ಕ್ಷಮೆ ಯಾಚಿಸಲು ಪೋಸ್ಟ್ ಮಾಡುತ್ತಿದ್ದೇನೆ ಎಂದು ವಿಜ್ಞಾನಿ ಎಟಿಯೆನ್ ಕ್ಲೈನ್ ಹೇಳಿದ್ದಾರೆ.  ಸುಖಾಸುಮ್ಮನೆ ಟ್ವೀಟ್ ಮಾಡಿ ಗೊಂದಲ ಸೃಷ್ಟಿಸಿದ ವಿಜ್ಞಾನಿ ಎಟಿಯೆನ್ ಕ್ಲೈನ್ ಇದೀಗ ಮತ್ತೊಂದು ತಲೆನೋವಿಗೆ ಗುರಿಯಾಗಿದ್ದಾರೆ. ಖ್ಯಾತ ಹಾಗೂ ಜವಾಬ್ದಾರಿಯುತ ವಿಜ್ಞಾನಿಯಾಗಿರುವ ಎಟಿಯೆನ್ ಕ್ಲೈನ್ ತಪ್ಪು ಮಾಹಿತಿ ನೀಡುವ ಪೋಸ್ಟ್‌ನಿಂದ ಫ್ರಾನ್ಸ್‌ನ ಪರ್ಯಾಯ ಶಕ್ತಿಗಳು ಮತ್ತು ಪರಮಾಣು ಶಕ್ತಿ ಆಯೋಗದ ನಿರ್ದೇಶಕ ಸ್ಥಾನದಿಂದ ವಜಾಗೊಳ್ಳುವ ಸಾಧ್ಯತೆ ಇದೆ.

ಜೆಫ್‌ ಬೆಜೋಸ್‌ ರಾಕೆಟ್‌ನಲ್ಲಿ ಬಾಹ್ಯಾಕಾಶಕ್ಕೆ 6 ಮಂದಿ ಪ್ರಯಾಣ, 1 ಟಿಕೆಟ್‌ ಬೆಲೆ ಇಷ್ಟೊಂದಾ!

click me!