ರೋಬೋಟ್‌ಗೂ ತಟ್ಟಿದ ಕೆಲಸದ ಒತ್ತಡ, ಖಿನ್ನತೆ, ಕಟ್ಟಡದ ಮೇಲಿನಿಂದ ಜಿಗಿದು ರೋಬೋ ಆತ್ಮಹತ್ಯೆ!

By Chethan Kumar  |  First Published Jul 5, 2024, 8:06 AM IST

ಸದ್ಯದ ಯಾಂತ್ರೀಕ ಬದುಕಿನಲ್ಲಿ ಕೆಲಸದ ಒತ್ತಡ, ಖಿನ್ನತೆ ಸೇರಿದಂತೆ ಮಾನಸಿಕ ಆರೋಗ್ಯ ಸಮಸ್ಯೆಗಳು ಪ್ರತಿ ದಿನ ವರದಿಯಾಗುತ್ತಿದೆ. ಜೊತೆಗೆ ಹಲವರು ಇದೇ ಕಾರಣದಿಂದ ಬದುಕು ಅಂತ್ಯಗೊಳಿಸುತ್ತಿದ್ದಾರೆ. ಆದರೆ ಒತ್ತಡ, ಖಿನ್ನತೆ ರೋಬೋಟ್‌ಗೂ ತಟ್ಟಿದೆ. ತೀವ್ರ ಒತ್ತಡ, ಖಿನ್ನತೆಯಿಂದ ರೋಬೋಟ್ ಅತ್ಯಹತ್ಯೆ ಮಾಡಿದ ಘಟನೆ ವರದಿಯಾಗಿದೆ.
 


ಕೊರಿಯಾ(ಜು.05) ಇದು ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಕಾಲ. ಈಗ ಎಲ್ಲವು ಸಾಧ್ಯ. ಹೀಗಾಗಿ ರೋಬೋಟ್‌ ಕೂಡ ಆತ್ಮಹತ್ಯೆ ಮಾಡಿಕೊಂಡಿದೆ. ಹೌದು, ಇದು ನಿಜ. ಇದೀಗ ಈ ಘಟನೆ ಕುರಿತು ತನಿಖೆ ಕೂಡ ಆರಂಭಗೊಂಡಿದೆ. ತೀವ್ರ ಕೆಲಸದ ಒತ್ತಡದಿಂದ ರೋಬೋಟ್ ಕಟ್ಟದ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದೆ. ಇದು ವಿಶ್ವದ ಮೊದಲ ರೋಬೋ ಆತ್ಮಹತ್ಯೆ ಪ್ರಕರಣವಾಗಿದೆ. ಇಷ್ಟೇ ಅಲ್ಲ, ಇದು ನಿಜಕ್ಕೂ ಸಾಧ್ಯವೇ ಅನ್ನೋ ಅಚ್ಚರಿಗೂ ಕಾರಣವಾಗಿದೆ.  ದಕ್ಷಿಣ ಕೊರಿಯಾದಲ್ಲಿ ಈ ಘಟನೆ ನಡೆದಿದೆ. ಇದರ ಅಂತ್ಯಕ್ರಿಯೆ ನಡೆಸಿರುವ ಕುರಿತು ಯಾವುದೇ ಮಾಹಿತಿ ಇಲ್ಲ. 

ದಕ್ಷಿಣ ಕೊರಿಯಾದಲ್ಲಿ ಗುಮಿ ಸಿಟಿ ಕೌನ್ಸಿಲ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈ ರೋಬೋಟ್ ತೀವ್ರ ಕೆಲಸದ ಒತ್ತಡ, ಖಿನ್ನತೆಯಿಂದ ಬಳಲಿತ್ತು ಎಂದು ತಂತ್ರಜ್ಞರು ಅಭಿಪ್ರಾಯ ಪಟ್ಟಿದ್ದಾರೆ. 2023ರಲ್ಲಿ ಗುಮಿ ಸಿಟಿ ಕೌನ್ಸಿಲ್‌ನಲ್ಲಿ ಕೆಲಸಕ್ಕೆ ನಿಯೋಜನೆಗೊಂಡಿದ್ದ ಈ ರೋಬೋ ಹಲವು ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿತ್ತು. ಪ್ರಮುಖವಾಗಿ ಸಿಟಿ ಕೌನ್ಸಿಲ್‌ನ ಕಡತಗಳ ವಿಲೇವಾರಿ, ವಿತರಣೆ ಸೇರಿದಂತೆ ಹಲವು ಕೆಲಸಗಳನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿತ್ತು. 

Tap to resize

Latest Videos

undefined

ಐ ಲವ್ ಯು ರೋಬೋಟ್; ಚಾಟ್ ಜಿಪಿಟಿ ಪ್ರೀತಿಗೆ ಬಿದ್ದ ಹುಡುಗಿ!

ತ್ವರಿತ ಕಡತ ವಿಲೇವಾರಿಗೆ ರೋಬೋಟಿಕ್ಸ್ ಟೆಕ್ ಸಂಸ್ಥೆ ಈ ರೋಬೋಟ್ ಅಭಿವೃದ್ಧಿಪಡಿಸಿತ್ತು. ಬಳಿಕ 2023ರಿಂದ ನಗರ ಪಾಲಿಕೆಯಲ್ಲಿ ಕೆಲಸದಲ್ಲಿ ತೊಡಗಿತ್ತು. ರೋಟೋ ಕಾರಣ ಒಂದು ನಿಮಿಷವೂ ಬಿಡುವಿಲ್ಲದೆ ಕಡತಗಳ ವಿಲೇವಾರಿ, ವಿತರಣೆಗೆ ಆಜ್ಞೆಗಳನ್ನು ನೀಡಲಾಗಿತ್ತು. ಹೀಗೆ ಕೆಲಸದಲ್ಲಿ ತೊಡಗಿದ್ದ ರೋಬೋಟೋ ಮೆಟ್ಟಿಲಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದೆ. ಜಿಗಿದ ಪರಿಣಾಮ ರೋಬೋ ಚಿಪ್,ಬಿಡಿ ಭಾಗಗಳು ನಾಶವಾಗಿದೆ.

ಇತ್ತ ರೋಬೋಟಿಕ್ಸ್ ಸಂಸ್ಥೆಯ ವಿಜ್ಞಾನಿಗಳು ಸ್ಥಳಕ್ಕೆ ಆಗಮಿಸಿ ಬಿಡಿ ಭಾಗಗಳನ್ನು ವಶಪಡಿಸಿಕೊಂಡಿದ್ದಾರೆ. ಜೊತೆಗೆ ಸಿಸಿಟಿವಿ ದೃಶ್ಯಗಳನ್ನು ವಶಪಡಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ. ಘಟನೆ ಕಾರಣ ಏನು ಅನ್ನೋದನ್ನು ಪತ್ತೆ ಹಚ್ಚಲಾಗುತ್ತದೆ ಎಂದು ರೋಬೋಟಿಕ್ಸ್ ಸಂಸ್ಥೆ ಹೇಳಿದೆ. 

ಇದೀಗ ಈ ಘಟನೆ ವರದಿಯಾಗುತ್ತಿದ್ದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆಯಾಗುತ್ತಿದೆ. ರೋಬೋಟ್ ಆದರೂ ಮೆಟ್ಟಿನಿಂದ ಕಾಲು ಜಾರಿ ಅಥವಾ ಜಾರಿ ಬಿದ್ದಿರಬಹುದು, ಇದನ್ನು ಆತ್ಮಹತ್ಯೆ ಎಂದು ಹೇಳಲು ಸಾಧ್ಯವೇ? ಎಂದು ಹಲವರು ಪ್ರಶ್ನಿಸಿದ್ದಾರೆ. ಮತ್ತೆ ಕೆಲವರು ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ಮರಳಿಸಿ ಎಂದು ಆಗ್ರಹಿಸಿದ್ದಾರೆ. ಎಲ್ಲವೂ ಒಕೆ ಅಂತ್ಯಕ್ರಿಯೆ ಕುರಿತು ಯಾವುದೇ ಮಾಹಿತಿ ನೀಡಿಲ್ಲ ಯಾಕೆ ಎಂದು ಕೆಲವರು ಪ್ರಶ್ನಿಸಿದ್ದಾರೆ.

ಮಹಿಳಾ ವರದಿಗಾರ್ತಿಯನ್ನು ಅನುಚಿತವಾಗಿ ಸ್ಪರ್ಶಿಸಿದ ಸೌದಿಯ ಮೊದಲ ಪುರುಷ ರೋಬೋಟ್! ವಿಡಿಯೋ ವೈರಲ್
 

click me!