ಅಮ್ಮನ ಬಂಗಾರ ಮಾರಿ, ಬರಿಗಾಲಲ್ಲೇ ನಡೆದು ದೊಡ್ಡ ವಿಜ್ಞಾನಿಯಾದವರ ಯಶೋಗಾಥೆ!

By Roopa HegdeFirst Published Jun 30, 2024, 12:20 PM IST
Highlights

ಸಾಧನೆ ಮಾಡ್ಬೇಕೆಂದ್ರೆ ಕಷ್ಟಗಳನ್ನು ಎದುರಿಸಿ ಮುನ್ನುಗ್ಗಬೇಕು. ಗುರಿ ಸಾಧನೆಯೊಂದೆ ಅಂತಿಮ ಗುರಿಯಾದ್ರೆ ಅದನ್ನು ತಲುಪೋದು ಸುಲಭ. ಅದಕ್ಕೆ ಆಂಧ್ರದ ಈ ವಿಜ್ಞಾನಿ ಮಾದರಿ. ಕಿತ್ತು ತಿನ್ನುವ ಬಡತನವಿದ್ರೂ ಅವರ ಉತ್ಸಾಹಕ್ಕೆ, ಓದಿಗೆ ಇದು ಅಡ್ಡಿಯಾಗ್ಲಿಲ್ಲ.

ಕಷ್ಟಪಟ್ಟು ಕೆಲಸ ಮಾಡೋದೇ ಕಠಿಣ ಕೆಲಸ. ಆದ್ರೆ ದೃಢತೆ ಮತ್ತು ಸಂಕಲ್ಪವಿದ್ದರೆ  ಅವನ ಶ್ರಮ ಫಲ ನೀಡುತ್ತದೆ. ಇದಕ್ಕೆ ಆಂಧ್ರಪ್ರದೇಶದ ವಿಜ್ಞಾನಿ ಉಪ್ಪುಗುಂಡೂರಿ ಅಶ್ವತ್ಥನಾರಾಯಣ ಅವರ ಜೀವನ ಉತ್ತಮ ನಿದರ್ಶನ. ಯಶಸ್ಸು ಅವರಿಗೆ ಸುಲಭವಾಗಿ ಸಿಗಲಿಲ್ಲ. ಸಾಕಷ್ಟು ಕಷ್ಟಪಟ್ಟು ಜೀವನದಲ್ಲಿ ಮುಂದೆ ಬಂದ ವ್ಯಕ್ತಿಗಳಲ್ಲಿ ಉಪ್ಪುಗುಂಡೂರಿ ಅಶ್ವತ್ಥನಾರಾಯಣ ಒಬ್ಬರು. 

ಬಡತನ (Poverty) ಅಶ್ವತ್ಥನಾರಾಯಣ ಅವರಿಗೆ ಮೊದಲ ಸವಾಲಾಗಿತ್ತು. ಅವರು ಆಂಧ್ರಪ್ರದೇಶದ ಒಂಗೋಲ್‌ನಲ್ಲಿರುವ ಮುನ್ಸಿಪಲ್ ಹೈಸ್ಕೂಲ್‌ನಲ್ಲಿ ವ್ಯಾಸಂಗ ಮಾಡಿದರು. ಯಾವುದೇ ವಾಹನ ಸೌಲಭ್ಯ ಅವರಿಗೆ ಇರಲಿಲ್ಲ. ಸುಡುವ ಬಿಸಿಲಿನಲ್ಲಿ ಅವರು ಸಾಕಷ್ಟು ದೂರ ಬರಿಗಾಲಿನಲ್ಲಿ ನಡೆಯಬೇಕಾಗಿತ್ತು. ಇದೇ ಕಾರಣಕ್ಕೆ ಅವರು ಮದ್ರಾಸ್ (Madras) ಪ್ರೆಸಿಡೆನ್ಸಿಯ ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್‌ನ ಗಣಿತ (Math) ಪರೀಕ್ಷೆಗೆ ಹಾಜರಾಗಲು ಮೂವತ್ತು ನಿಮಿಷ ತಡವಾಗಿತ್ತು. ಆದ್ರೆ ಅವರು ಈ ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದರು. ಒಟ್ಟು ಅಂಕಗಳ ಹಿಂದಿನ ದಾಖಲೆಯನ್ನು ಮುರಿದರು ಮತ್ತು ಗಣಿತಶಾಸ್ತ್ರದಲ್ಲಿ ಪೂರ್ಣ ಅಂಕಗಳನ್ನು ಗಳಿಸಿದ್ದರು. 

HEALTH : 24 ಗಂಟೆ ಬರೀ ಹಣ್ಣು, ಬಿಸಿ ನೀರು ಕುಡಿದ್ರೆ ಏನಾಗುತ್ತೆ?

ಹೈಸ್ಕೂಲ್‌ನಲ್ಲಿ ಅತ್ಯುತ್ತಮ ಸಾಧನೆ ಮಾಡಿದರೂ ಕಾಲೇಜಿಗೆ ಹೋಗುವ ಆಸೆಯನ್ನು ಬಿಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಅವರ ಪೋಷಕರು ಕಾಲೇಜು ಶುಲ್ಕವನ್ನು ಪಾವತಿಸಲು ಅಸಮರ್ಥರಾಗಿದ್ದರು. ಆದ್ರೆ ಅವರ ತಾಯಿ ತಮ್ಮ ಬಳಿ ಇದ್ದ ಎಲ್ಲ ಆಭರಣವನ್ನು ಮಾರಾಟ ಮಾಡಿ  ಕಾಲೇಜು ಶಿಕ್ಷಣ ಮತ್ತು ನಂತರದ ವಿಶ್ವವಿದ್ಯಾನಿಲಯ ಶಿಕ್ಷಣವನ್ನು ಪಡೆಯಲು ಸಹಾಯ ಮಾಡಿದ್ರು.     

ಆ ನಂತ್ರ ಅಶ್ವತ್ಥನಾರಾಯಣ ತಿರುಗಿ ನೋಡಲೇ ಇಲ್ಲ. ಅವರು ತಮ್ಮ ಮಾರ್ಗದರ್ಶಕರಾದ ಆಂಧ್ರ ವಿಶ್ವವಿದ್ಯಾಲಯದ ಪ್ರೊ. ಸಿ.ಮಹದೇವನ್ ಅವರ ದೂರದೃಷ್ಟಿಯಿಂದಾಗಿ ಡಾಕ್ಟರೇಟ್ ಅಧ್ಯಯನವನ್ನು ಪ್ರಾರಂಭಿಸಿದರು. ಅದು ನಂತರ ನ್ಯೂಕ್ಲಿಯರ್ ಜಿಯಾಲಜಿ ಎಂದು ಕರೆಯಲ್ಪಟ್ಟಿತು. ಆ ಸಮಯದಲ್ಲಿ ಯಾವುದೇ ವಿಶೇಷ ಸೌಲಭ್ಯ ಇರಲಿಲ್ಲ. ಭೂವಿಜ್ಞಾನವು ಕೇವಲ ಸುತ್ತಿಗೆ ಮತ್ತು ಕೈ ಮಸೂರದ ಪ್ರಯತ್ನವಾಗಿತ್ತು. ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್‌ನ ಸಹಾಯದಿಂದ ಅವರು ತಮ್ಮ ಡಾಕ್ಟರೇಟ್ ಕೆಲಸಕ್ಕಾಗಿ ವಿಕಿರಣಶೀಲತೆಯ ಅಧ್ಯಯನಗಳನ್ನು ನಡೆಸಲು ತಮ್ಮದೇ ಆದ ಉಪಕರಣವನ್ನು ನಿರ್ಮಿಸಿದರು.

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್‌ನ ಸಹಾಯದಿಂದ ಅವರು ತಮ್ಮ ಡಾಕ್ಟರೇಟ್ ಪ್ರಬಂಧಕ್ಕಾಗಿ ವಿಕಿರಣಶೀಲತೆಯ ಅಧ್ಯಯನಗಳನ್ನು ನಡೆಸಿದರು. ಅವರು ಸ್ವತಃ ನಿರ್ಮಿಸಿದ ಉಪಕರಣಗಳನ್ನು ಬಳಸಿದರು. ಭಾರತದಲ್ಲಿ ಪರಮಾಣು ಭೂವಿಜ್ಞಾನದ ಮೊದಲನೆಯ ಪ್ರಬಂಧ ಇದಾಗಿತ್ತು. ಇದನ್ನು ಆಕ್ಸ್‌ಫರ್ಡ್‌ ನಲ್ಲಿ ಲೂಯಿಸ್ ಅಹ್ರೆನ್ಸ್, ಯುಕೆ ಆರ್ಥರ್ ಹೋಮ್ಸ್,  ಕೆನಡಾದ ಜೆ. ತುಜೊ ವಿಲ್ಸನ್, ಎಫ್.ಆರ್.ಎಸ್.  ಪರಿಶೀಲಿಸಿದ್ದರು. 1957 ರಲ್ಲಿ ಅವರು ಕ್ಯಾಲ್ಟೆಕ್‌ನಲ್ಲಿ ಕ್ಲೇರ್ ಪ್ಯಾಟರ್ಸನ್ ಅವರೊಂದಿಗೆ ಸೀಸದ ಐಸೊಟೋಪ್‌ಗಳ ಪೋಸ್ಟ್  ಡಾಕ್ಟರೇಟ್ ರಿಸರ್ಚರ್ ಆಗಿ ಕೆಲಸ ಮಾಡಿದರು. 1963 ರಲ್ಲಿ ಅವರು ಇಂಗ್ಲೆಂಡ್‌ನ ಆಕ್ಸ್‌ಫರ್ಡ್‌ನಲ್ಲಿ ಸ್ಟೀಫನ್ ಮೂರ್‌ಬಾತ್ ಅವರೊಂದಿಗೆ Rb-Sr ಮತ್ತು K-Ar ಡೇಟಿಂಗ್ ವಿಜ್ಞಾನಿಯಾಗಿ ಕೆಲಸ ಮಾಡಿದರು.

ಪರಿಸರದಲ್ಲಿ ಪ್ರಚಲಿತದಲ್ಲಿರುವ ರೋಗಗಳನ್ನು ಗುರುತಿಸಲು ಮತ್ತು ಪರಿಹರಿಸಲು ಭೂವಿಜ್ಞಾನವನ್ನು ಬಳಸಿಕೊಂಡು ಆಫ್ರಿಕಾದಲ್ಲಿ ಮಾನವ ಕಲ್ಯಾಣವನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ಯೋಜನೆಯೊಂದಕ್ಕೆ NDP ಮತ್ತು ಫಿನ್ನಿಷ್ ಸಹೋದ್ಯೋಗಿಗಳು, ಅಶ್ವನಾಥನಾರಾಯಣನ್ ಅವರನ್ನು ಸೇರಿಸಿಕೊಂಡಿತ್ತು. 

ನಿಮಗಿಷ್ಟದ 'ಸಿಹಿ' ತಿಂಡಿಯ ಮೂಲಕ ಜೋಡಿಯ ವರ್ಣಿಸಿ: ಸೀತಾರಾಮ ತಂಡದಿಂದ ಹೀಗೊಂದು ಆಫರ್​

ಅಶ್ವನಾಥ್ ನಾರಾಯಣ್ ಅವರು ತಮ್ಮ ಅಸಾಧಾರಣ ಕೆಲಸಕ್ಕಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ, ಜಿಯೋಗ್ರಾಫಿಕಲ್ ಎಜ್ಯುಕೇಷನ್ ಪ್ರಶಸ್ತಿ (2005), ಅಮೇರಿಕನ್ ಜಿಯೋಫಿಸಿಕಲ್ ಯೂನಿಯನ್‌ನ ಅಂತರರಾಷ್ಟ್ರೀಯ ಪ್ರಶಸ್ತಿ (2007), ಇಂಟರ್ನ್ಯಾಷನಲ್ ಅಸೋಸಿಯೇಷನ್ ಆಫ್ ಜಿಯೋಕೆಮಿಸ್ಟ್ರಿಯ ಸರ್ಟಿಫಿಕೆಟ್ ಆಫ್ ರೆಕಗ್ನೈಜೇಶನ್‌ (2007), ಮತ್ತು ಹೈಡ್ರಾಲಜಿಯಲ್ಲಿ ಶಿವಾನಂದ ಟ್ರಸ್ಟ್ ಆಫ್ ಇಂಡಿಯಾದ ಎಮಿನೆಂಟ್  ಸಿಟಿಜನ್ ಅವಾರ್ಡ್ (2007) ಪಡೆದಿದ್ದಾರೆ. 

click me!