ಮೊದಲ ಬಾರಿ ಮಾನವನಿಗೆ ವೈರ್‌ಲೆಸ್ ಬ್ರೈನ್ ಚಿಪ್ ಅಳವಡಿಸಿದ ಎಲೋನ್‌ ಮಸ್ಕ್‌ನ ನ್ಯೂರಾಲಿಂಕ್!

By BK Ashwin  |  First Published Jan 30, 2024, 11:32 AM IST

ನ್ಯೂರಾಲಿಂಕ್‌ನ ತಂತ್ರಜ್ಞಾನವು ಮುಖ್ಯವಾಗಿ "ಲಿಂಕ್" ಎಂಬ ಇಂಪ್ಲಾಂಟ್ ಮೂಲಕ ಕಾರ್ಯನಿರ್ವಹಿಸುತ್ತದೆ. ಈ ‘’ಲಿಂಕ್’’ ಅನ್ನು ಶಸ್ತ್ರಚಿಕಿತ್ಸೆಯ ಮೂಲಕ ಮಾನವ ಮೆದುಳಿನೊಳಗೆ ಇರಿಸಲಾಗುತ್ತದೆ ಹಾಗೂ ಇದು ಐದು ಪೇರಿಸಿದ ನಾಣ್ಯಗಳ ಗಾತ್ರದ ಸಾಧನವಾಗಿದೆ.


ಸ್ಯಾನ್ ಫ್ರಾನ್ಸಿಸ್ಕೋ (ಜನವರಿ 30, 2024): ವಿಶ್ವದ ಟಾಪ್ 2 ಶ್ರೀಮಂತ ಎಲೋನ್‌ ಮಸ್ಕ್‌ ರವರ ನ್ಯೂರಾಲಿಂಕ್‌ ಸ್ಟಾರ್ಟಪ್‌ ಕಂಪನಿಗೆ ಆರಂಭಿಕ ಯಶಸ್ಸು ಸಿಕ್ಕಿದೆ. ತನ್ನ ಮೊದಲ ಮಾನವ ರೋಗಿಗೆ "ಭರವಸೆಯ" ಆರಂಭಿಕ ಫಲಿತಾಂಶಗಳೊಂದಿಗೆ ಮಿದುಳಿನ ಇಂಪ್ಲಾಂಟ್ ಅನ್ನು ಸ್ಥಾಪಿಸಿದೆ ಎಂದು ಎಲೋನ್ ಮಸ್ಕ್ ಮಂಗಳವಾರ ಹೇಳಿದ್ದಾರೆ.

2016 ರಲ್ಲಿ ಎಲೋನ್‌ ಮಸ್ಕ್ ರಿಂದ ಸಹ-ಸ್ಥಾಪಿತವಾದ ನ್ಯೂರೋಟೆಕ್ನಾಲಜಿ ಕಂಪನಿಯು ಮೆದುಳು ಮತ್ತು ಕಂಪ್ಯೂಟರ್‌ಗಳ ನಡುವೆ ನೇರ ಸಂವಹನ ಮಾರ್ಗಗಳನ್ನು ನಿರ್ಮಿಸುವ ಗುರಿ ಹೊಂದಿದೆ. ಮಾನವ ಸಾಮರ್ಥ್ಯಗಳನ್ನು ಸೂಪರ್‌ಚಾರ್ಜ್‌ ಮಾಡುವುದು, ALS ಅಥವಾ ಪಾರ್ಕಿನ್ಸನ್‌ನಂತಹ ನರವೈಜ್ಞಾನಿಕ ಅಸ್ವಸ್ಥತೆಗಳಿಗೆ ಚಿಕಿತ್ಸೆ ನೀಡುವುದು ಮತ್ತು ಬಹುಶಃ ಒಂದು ದಿನ ಮಾನವರು ಮತ್ತು ಕೃತಕ ಬುದ್ಧಿಮತ್ತೆಯ ನಡುವೆ ಸಹಜೀವನದ ಸಂಬಂಧವನ್ನು ಸಾಧಿಸುವುದು ಮಹತ್ವಾಕಾಂಕ್ಷೆಯಾಗಿದೆ.

Latest Videos

undefined

ಮಾನವನ ಮೆದುಳಿಗೆ ಚಿಪ್‌ ಜೋಡಿಸಿ ಪ್ರಯೋಗ: ಎಲಾನ್‌ ಮಸ್ಕ್‌ ಕಂಪನಿಗೆ ಅಮೆರಿಕ ಅಸ್ತು

ಮೊದಲ ಮಾನವನು ನಿನ್ನೆ ನ್ಯೂರಾಲಿಂಕ್‌ನಿಂದ ಇಂಪ್ಲಾಂಟ್ ಅನ್ನು ಸ್ವೀಕರಿಸಿದರು  ಮತ್ತು ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದಾರೆ" ಎಂದು ಎಲಾನ್‌ ಮಸ್ಕ್ X ನಲ್ಲಿ ಪೋಸ್ಟ್ ಮಾಡಿದ್ದಾರೆ. ಹಾಗೂ, ಆರಂಭಿಕ ಫಲಿತಾಂಶಗಳು ಭರವಸೆಯ ನ್ಯೂರಾನ್ ಸ್ಪೈಕ್ ಪತ್ತೆಯನ್ನು ತೋರಿಸುತ್ತವೆ ಎಂದೂ ಅವರು ಹೇಳಿದರು. ಜನರಲ್ಲಿ ತನ್ನ ಮೆದುಳಿನ ಇಂಪ್ಲಾಂಟ್‌ಗಳನ್ನು ಪರೀಕ್ಷಿಸಲು ಯುಎಸ್ ನಿಯಂತ್ರಕರಿಂದ ಅನುಮೋದನೆಯನ್ನು ಗಳಿಸಿದೆ ಎಂದು 2023ರಲ್ಲಿ ಹೇಳಿಕೊಂಡಿದ್ದರು.

ನ್ಯೂರಾಲಿಂಕ್‌ನ ತಂತ್ರಜ್ಞಾನವು ಮುಖ್ಯವಾಗಿ "ಲಿಂಕ್" ಎಂಬ ಇಂಪ್ಲಾಂಟ್ ಮೂಲಕ ಕಾರ್ಯನಿರ್ವಹಿಸುತ್ತದೆ. ಈ ‘’ಲಿಂಕ್’’ ಅನ್ನು ಶಸ್ತ್ರಚಿಕಿತ್ಸೆಯ ಮೂಲಕ ಮಾನವ ಮೆದುಳಿನೊಳಗೆ ಇರಿಸಲಾಗುತ್ತದೆ ಹಾಗೂ ಇದು ಐದು ಪೇರಿಸಿದ ನಾಣ್ಯಗಳ ಗಾತ್ರದ ಸಾಧನವಾಗಿದೆ. ಡೇಟಾ ಕಂಪನಿ ಪಿಚ್‌ಬುಕ್ ಪ್ರಕಾರ, ಕಳೆದ ವರ್ಷ ಕ್ಯಾಲಿಫೋರ್ನಿಯಾ ಮೂಲದ ನ್ಯೂರಾಲಿಂಕ್ 400 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿತ್ತು ಮತ್ತು ಕನಿಷ್ಠ 363 ಮಿಲಿಯನ್ ಡಾಲರ್‌ ಸಂಗ್ರಹಿಸಿದೆ.

ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ ಟೆಸ್ಲಾದ ಅತಿ ಕಡಿಮೆ ಬೆಲೆಯ ಎಲೆಕ್ಟ್ರಿಕ್‌ ಕಾರು!

ಈ ಕಂಪನಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದರೂ, ಅಧಿಕೃತವಾಗಿ ಬ್ರೈನ್-ಮೆಷಿನ್ ಅಥವಾ ಬ್ರೈನ್-ಕಂಪ್ಯೂಟರ್ ಇಂಟರ್ಫೇಸ್ ಸಂಶೋಧನೆ ಎಂದು ಕರೆಯಲ್ಪಡುವ ಕ್ಷೇತ್ರದಲ್ಲಿ ಪ್ರಗತಿಯನ್ನು ಸಾಧಿಸಲು ಪ್ರಯತ್ನಿಸುವಲ್ಲಿ ಎಲೋನ್‌ ಮಸ್ಕ್‌ ಒಬ್ಬರೇ ಅಲ್ಲ. ಸ್ಟಾರ್ಟಪ್‌ ವಿಳಂಬದಿಂದ ಸಂಭಾವ್ಯ ಹೂಡಿಕೆಯ ಕುರಿತು ಇಂಪ್ಲಾಂಟ್ ಡೆವಲಪರ್ ಸಿಂಕ್ರಾನ್‌ ಜತೆ ಎಲಾನ್‌ ಮಸ್ಕ್‌ ಮಾತುಕತೆ ನಡೆಸಿದ್ದರು ಎಂದು ವರದಿಯಾಗಿತ್ತು.

ನ್ಯೂರಾಲಿಂಕ್‌ನ ಲಿಂಕ್‌ನಂತೆ, ಸಿಂಕ್ರಾನ್‌ ಇಂಪ್ಲಾಂಟ್ ಆವೃತ್ತಿಯನ್ನು ಸ್ಥಾಪಿಸಲು ತಲೆಬುರುಡೆಯನ್ನು ಕತ್ತರಿಸುವ ಅಗತ್ಯವಿಲ್ಲ. ಆಸ್ಟ್ರೇಲಿಯಾ ಮೂಲದ ಸಿಂಕ್ರಾನ್ ತನ್ನ ಮೊದಲ ಸಾಧನವನ್ನು ಯುಎಸ್ ರೋಗಿಗೆ ಜುಲೈ 2022 ರಲ್ಲಿ ಅಳವಡಿಸಿತ್ತು.

click me!