ಭೂಮಿ ಹೇಗೆ ತಿರುಗುತ್ತೆ? ಭಾರತದ ಖಗೋಳಶಾಸ್ತ್ರಜ್ಞ ಲಡಾಖ್‌ನಲ್ಲಿ ಸೆರೆ ಹಿಡಿದ ಅದ್ಭುತ ವಿಡಿಯೋ

Published : Feb 03, 2025, 04:16 PM IST
ಭೂಮಿ ಹೇಗೆ ತಿರುಗುತ್ತೆ? ಭಾರತದ ಖಗೋಳಶಾಸ್ತ್ರಜ್ಞ ಲಡಾಖ್‌ನಲ್ಲಿ ಸೆರೆ ಹಿಡಿದ ಅದ್ಭುತ ವಿಡಿಯೋ

ಸಾರಾಂಶ

ಕಾರಣ ಭೂಮಿ ಹೇಗೆ ತಿರುಗುತ್ತೆ ಅನ್ನೋ ಕುತೂಹಲ, ಗೊಂದಲ ಇದ್ದೇ ಇದೆ. ಇದೀಗ ಭಾತದ ಖಗೋಳ ಶಾಸ್ತ್ರಜ್ಞ ಭೂಮಿ ತನ್ನ ಕಕ್ಷೆಯಲ್ಲಿ ಹೇಗೆ ತಿರುಗುತ್ತೆ? ಅನ್ನೋದನ್ನು ಲಡಾಖ್‌ನಲ್ಲಿ ಬಾಹ್ಯಾಕಾಶದ ಮೂಲಕ ವಿಡಿಯೋ ಸೆರೆ ಹಿಡಿದಿದ್ದಾರೆ.

ಲಡಾಖ್(ಫೆ.3) ಭೂಮಿ ತಿರುಗುತ್ತೆ. ಶಾಲಾ ದಿನಗಳಿಂದ ಈ ವಿಷಯ ಹಲವರಿಗೆ ಯಾವತ್ತೂ ಕುತೂಹಲ. ಇದೀಗ ನಿಮ್ಮ ಕುತೂಹಲಕ್ಕೆ ಭಾರತದ ಖಗೋಳಶಾಸ್ತ್ರಜ್ಞ ದೊರ್ಜೆ ಅಂಗ್ಚುಕ್ ಲಡಾಖ್‌ನಲ್ಲಿ ಅದ್ಭುತ ವಿಡಿಯೋ ಒಂದನ್ನು ಸೆರೆ ಹಿಡಿದಿದ್ದಾರೆ. ಬಾಹ್ಯಾಕಾಶದಿಂದ ಈ ವಿಡಿಯೋ ಸೆರೆ ಹಿಡಿಯಲಾಗಿದೆ. ಈ ವಿಡಿಯೋದಲ್ಲಿ ಭೂಮಿ ತನ್ನ ಕಕ್ಷೆಯಲ್ಲಿ ಹೇಗೆ ತಿರುಗುತ್ತೆ ಅನ್ನೋದು ಈ ವಿಡಿಯೋದಲ್ಲಿ ಸ್ಪಷ್ಟವಾಗುತ್ತದೆ. ಈ ಅದ್ಭುತ ವಿಡಿಯೋ ಭಾರಿ ಸದ್ದು ಮಾಡುತ್ತಿದೆ. ವಿದ್ಯಾರ್ಥಿಗಳಿಂದ ಹಿಡಿದು ವಿಜ್ಞಾನಿಗಳ ವರೆಗೆ ಎಲ್ಲರು ಈ ವಿಡಿಯೋಗೆ ಭಾರಿ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

ಈ ವಿಡಿಯೋದಲ್ಲಿ ಭೂಮಿ 24 ಗಂಟೆ ತಿರುಗುವುದನ್ನು ಗಮಮಿಸಬಹುದು. ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಹೀಗೆ ನಿರಂತರವಾಗಿ ಭೂಮಿ ತಿರುಗುತ್ತಿದೆ. ಈ ಬದಲಾವಣೆ, ತಿರುಗುವಿಕೆಯನ್ನು ಗಮನಿಸಬಹುದು. ಈ ಕುರುತಿ ಖಗೋಳಶಾಸ್ತ್ರಜ್ಞ ದೊರ್ಜೆ ಅಂಗ್ಚುಕ್ ಎಕ್ಸ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಒಂದು ಚಲನೆಯಲ್ಲಿ ಭೂಮಿ ಹೇಗೆ ತಿರುಗುತ್ತದೆ ಅನ್ನೋದು ಸೆರೆ ಹಿಡಿಯಲಾಗಿದೆ. ನಕ್ಷತ್ರಗಳು ಸ್ಥಿರವಾಗಿರುತ್ತದೆ. ಆದರೆ ಭೂಮಿ ಮಾತ್ರ ತಿರುಗುತ್ತಲೇ ಇರುತ್ತದೆ. 24ಗಂಟೆಗಳ ಕಾಲ ಭೂಮಿ ಸುತ್ತುವಿಕೆಯನ್ನು ಸೆರೆ ಹಿಡಿಯಲಾಗಿದೆ. ಹಗಲು ರಾತ್ರಿ ಈ ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ದೊರ್ಜೆ ಹೇಳಿದ್ದಾರೆ. 

ಬ್ರಹ್ಮಾಂಡದ ಅತಿ ಪ್ರಖರ ಕಾಯ ಪತ್ತೆ : ಇದು ಸೂರ್ಯನಿಗಿಂತ 1700 ಕೋಟಿ ಪಟ್ಟು ದೊಡ್ಡ

ಇದು ಸರಳವಾಗಿ ಭೂಮಿ ಚಲನೆಯನ್ನು ಸೆರೆ ಹಿಡಿಯಲಾಗಿದೆ. ತಾಳ್ಮೆಯನ್ನು ಪರೀಕ್ಷಿಸುವ ಈ ಸಂಶೋಧನೆ, ಬಾಹ್ಯಾಕಾಶದ ಕುತೂಹಲಗಳ ಆಗರವಾಗಿರುವ ಒರಿಯನ್ ಫ್ರೇಮ್ ಮಾಡಲು ಯೋಜಿಸಲಾಗಿತ್ತು. ಆದರೆ ಪ್ರಮುಖವಾಗಿ ಲಡಾಖ್ ಪ್ರದೇಶ, ಅಕ್ಷಾಂಶಗಳ ಎತ್ತರ, ವಿಪರೀತ ಚಳಿ, ಬಹುಬೇಗನೆ ಬ್ಯಾಟರಿ ಖಾಲಿಯಾಗುತ್ತಿತ್ತು ಎಂದು ಸವಾಲುಗಳ ಕುರಿತು ದೋರ್ಜೆ ಹೇಳಿದ್ದಾರೆ. ಹೀಗಾಗಿ ಕೆಲ ಮಿತಿಗಳು ನಮ್ಮನ್ನು ಮತ್ತಷ್ಟು ಸಂಶೋಧನೆಗೆ ನಿರ್ಬಂಧಿಸುತ್ತದೆ ಎಂದಿದ್ದಾರೆ.

ಭೂಮಿಯ ತಿರುಗುವಿಕೆ ಸೆರೆ ಹಿಡಿಯಲು ಭಾರತೀಯ ಖಗೋಳಶಾಸ್ತ್ರಜ್ಞ  ನಾಲ್ಕು ದಿನ ತಯಾರಿ ಮಾಡಿದ್ದಾರೆ. ನಾಲ್ಕು ದಿನ ಸ್ಥಳದಲ್ಲಿದ್ದು ಭೂಮಿಯ ಚಲನೆ ಕುರಿತು ಅಧ್ಯಯನ ನಡೆಸಿದ್ದಾರೆ. ಈ ವೇಳೆ ಹಲವು ಹಿನ್ನಡೆಯನ್ನು ಎದುರಿಸಿರುವುದಾಗಿ ಹೇಳಿದ್ದಾರೆ. ಕ್ಯಾಮೆರಾ ಸ್ಟೋರೇಜ್, ಬ್ಯಾಟರಿ ವೈಫಲ್ಯ, ತಾಂತ್ರಿಕ ಸಮಸ್ಯೆ, ರೆಕಾರ್ಡಿಂಗ್ ಸಮಸ್ಯೆ ಸೇರಿದಂತೆ ಹಲವು ಸವಾಲುಗಳು ಎದುರಾಗಿತ್ತು ಎಂದಿದ್ದಾರೆ. ಇದೇ ವೇಳೆ ಈ ಸವಾಲುಗಳು ಹೊಸ ಅಧ್ಯಯನಕ್ಕೆ ನಾಂದಿ ಹಾಡಿದೆ ಎಂದಿದ್ದಾರೆ.  

 

 

ಹಿಮವಾರಿ ಉಪಗ್ರಹ ಸರೆಹಿಡಿತ್ತು ಭೂಮಿ ತಿರುಗುವಿಕೆ
ಹಿಮವಾರಿ-8 ಉಪಗ್ರಹ ಕೆಲ ವರ್ಷಗಳ ಹಿಂದೆ ಇದೇ ರೀತಿಯ ವಿಡಿಯೋ ಸೆರೆ ಹಿಡಿದಿತ್ತು. ಆದರೆ ಇದು ಬರೋಬ್ಬರಿ 36,000 ಕಿಲೋಮೀಟರ್ ಎತ್ತರದ ಬಾಹ್ಯಾಕಾಶ ಕೇಂದ್ರದಿಂದ ಸೆರೆ ಹಿಡಿಯಲಾಗಿತ್ತು. ಆದರೆ ಭಾರತದ ಖಗೋಳಶಾಸ್ತ್ರಜ್ಞ ಸೆರೆ ಹಿಡಿದ ವಿಡಿಯೋ ಸುಲಭಾಗಿ ಭೂಮಿಯ ತಿರುಗುವಿಕೆ ಅರ್ಥೈಸುವಂತಿದೆ. ಇಷ್ಟೇ ಅಲ್ಲ ಹಲವರ ಗೊಂದಲ ನಿವಾರಿಸುವಂತಿದೆ.  ಹಿಮವಾರಿ-8  ಉಹಗ್ರಹ ಸೆರೆಹಿಡಿಯಲಾದ ಹೊಸ ಟೈಮ್‌ಲ್ಯಾಪ್ಸ್ ವಿಡಿಯೋದಲ್ಲಿ, ಭೂಮಿಯ ದೈನಂದಿನ ತಿರುಗುವಿಕೆಯ ಅದ್ಭುತ ನೋಟವನ್ನು ವೀಕ್ಷಕರಿಗೆ ನೀಡಲಾಗಿದೆ. 36,000 ಕಿಲೋಮೀಟರ್ ಎತ್ತರದಿಂದ ತೆಗೆದ ಈ ದೃಶ್ಯವು, ಸೂರ್ಯನ ಬೆಳಕು ಮತ್ತು ಕತ್ತಲೆಯ ನಡುವಿನ ಪರಸ್ಪರ ಕ್ರಿಯೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ.

 ಬಾಹ್ಯಾಕಾಶದ ರಹಸ್ಯಗಳ ಬಗ್ಗೆ ಮಾನವನ ಕುತೂಹಲವು ನಮ್ಮ ಜ್ಞಾನದ ಅನ್ವೇಷಣೆಗೆ ದೀರ್ಘಕಾಲದಿಂದ ಪ್ರೇರಕ ಶಕ್ತಿಯಾಗಿದೆ. ಯುಎಫ್‌ಒವನ್ನು ಪತ್ತೆಹಚ್ಚುವುದಾಗಲಿ ಅಥವಾ ದೂರದಿಂದ ಭೂಮಿಯ ನೋಟವನ್ನು ಚಿಂತಿಸುವುದಾಗಲಿ, ನಮ್ಮ ಗ್ರಹದ ಚಲನಶಾಸ್ತ್ರದ ಬಗ್ಗೆ ಅಂತರ್ಗತ ಕುತೂಹಲವಿದೆ. ಬಾಹ್ಯಾಕಾಶ ವಿಜ್ಞಾನದಲ್ಲಿನ ಇತ್ತೀಚಿನ ಪ್ರಗತಿಗಳು ಈ ಕುತೂಹಲವನ್ನು ಹೆಚ್ಚಿಸಿವೆ. ಈ ಗಮನಾರ್ಹ ದೃಷ್ಟಿಕೋನವು ಭೂಮಿಯ ನೈಸರ್ಗಿಕ ವೈಭವವನ್ನು ಮಾತ್ರವಲ್ಲದೆ ಉಪಗ್ರಹದ ಅತ್ಯಾಧುನಿಕ ವೀಕ್ಷಣಾ ಸಾಮರ್ಥ್ಯಗಳನ್ನು ಸಹ ಎತ್ತಿ ತೋರಿಸುತ್ತದೆ. ಈ ವಿಡಿಯೋ ಜಗತ್ತಿನಾದ್ಯಂತ ಪ್ರೇಕ್ಷಕರನ್ನು ಆಕರ್ಷಿಸುತ್ತಿರುವಾಗ, ಇದು ನಮ್ಮ ಗ್ರಹದ ಸೌಂದರ್ಯ ಮತ್ತು ಸಂಕೀರ್ಣತೆಯನ್ನು ನೆನಪಿಸುತ್ತದೆ. "ಹಿಮವಾರಿ-8 ಉಪಗ್ರಹದಿಂದ 36,000 ಕಿಲೋಮೀಟರ್‌ಗಳಿಂದ ಕಾಣುವ ಭೂಮಿಯ ಮೇಲೆ ಒಂದು ದಿನ ಕಳೆಯುವುದು. (ಪೂರ್ಣ ಪರದೆಯಲ್ಲಿ ವೀಕ್ಷಿಸಿ)" ಎಂದು ಶೀರ್ಷಿಕೆ ಹೇಳುತ್ತದೆ.  

ಚಂದ್ರಯಾನ ಲೂನಾ 25 ನೌಕೆ ಪತನದಿಂದ ಅಸ್ವಸ್ಥಗೊಂಡ ರಷ್ಯಾ ವಿಜ್ಞಾನಿ ಆಸ್ಪತ್ರೆ ದಾಖಲು!
 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಖಗೋಳ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ