ವೈದ್ಯ ಹಾಗೂ ರೋಗಿ ನಡುವಿನ ಅಂತರ ಬರೋಬ್ಬರಿ 8,000 ಕಿ.ಮಿ. 5 ಜಿ ಹಾಗೂ ಫೈಬರ್ ಆಪ್ಟಿಕ್ ನೆಟ್‌ವರ್ಕ್ ಬಳಸಿಕೊಂಡು ವೈದ್ಯ ರೊಬೋಟ್ ಮೂಲಕ ಯಶಸ್ವಿಯಾಗಿ ಸರ್ಜರಿ ನಡೆಸಲಾಗಿದೆ. ಇದು ವೈದ್ಯಲೋಕದ ಅಚ್ಚರಿ ಮಾತ್ರವಲ್ಲ, ಭವಿಷ್ಯದಲ್ಲಿ ವೈದ್ಯರ ಸೇವೆಯನ್ನು ಎಲ್ಲಿಂದ ಬೇಕಾದರೂ ಪಡೆಯಲು ಈ ಸಾಹಸ ನೆರವಾಗಿದೆ.
ಬೀಜಿಂಗ್(ಜು.08) ವೈದ್ಯಲೋಕದಲ್ಲಿ ಹಲವು ಅಸಾಧಾರ, ಅಸಮಾನ್ಯ ಪ್ರಕರಣಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಮರು ಜೀವನ ನೀಡಿದ ಘಟನೆಗಳು ವರದಿಯಾಗಿದೆ. ತಂತ್ರಜ್ಞಾನ, ವಿಜ್ಞಾನ ಬಳಸಿಕೊಂಡು ಪರಿಣಾಮಕಾರಿಯಾಗಿ ಹಾಗೂ ತುರ್ತು ಚಿಕಿತ್ಸೆ ಸಿಗುವಂತೆ ಮಾಡಿ ಹಲವರು ಜೀವ ಕಾಪಾಡಿದ ಅದೆಷ್ಟೋ ಘಟನೆಗಳು ಮಾದರಿಯಾಗಿದೆ. ಇದೀಗ ವೈದ್ಯ ಲೋಕದಲ್ಲಿ ಮತ್ತೊಂದು ಸಾಹಸಮಯ ಶಸ್ತ್ರಚಿಕಿತ್ಸೆ ಅತ್ಯಂತ ಯಶಸ್ವಿಯಾಗಿ ನಿರ್ವಹಿಸಲಾಗಿದೆ. ಹೌದು ರೋಗಿ ಚೀನಾದ ಬೀಜಿಂಗ್‌ನಲ್ಲಿರು ಆಸ್ಪತ್ರೆಯಲ್ಲಿ ದಾಖಲಾದರೆ, ವೈದ್ಯ ರೋಮ್‌ನಲ್ಲಿ ಕುಳಿತು ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಿರ್ವಹಿಸಿದ ಘಟನೆ ನಡೆದಿದೆ.
ಟೆಲಿಸರ್ಜರಿ ಭವಿಷ್ಯದ ದಿಕ್ಕು ಬದಲಿಸಲಿದೆ. ಚೀನಾದ ಪೀಪಲ್ ಲಿಬರೇಶನ್ ಆರ್ಮಿ ಆಸ್ಪತ್ರೆಯ ಯುರೋಲಜಿ ವೈದ್ಯ ಝಾಂಗ್ ಕ್ಸು ಈ ಅಚ್ಚರಿ ಶಸ್ತ್ರಚಿಕಿತ್ಸೆ ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ವೈದ್ಯರು ರೋಮ್ ಪಟ್ಟಣದಲ್ಲಿದ್ದರೆ ರೋಗಿ 8,000 ಕಿಲೋಮೀಟರ್ ದೂರದ ಬೀಜಿಂಗ್ ಆಸ್ಪತ್ರೆಯಲ್ಲಿದ್ದರು. ರೋಮ್‌ನಿಂದ ವೈದ್ಯ ಝಾಂಗ್ ಕ್ಸು ರೋಗಿಗೆ ಟೆಲಿಸರ್ಜರಿ ವಿಧಾನದಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿಸಿದ್ದಾರೆ.
undefined
ತನ್ನದೇ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಸಾಕ್ಷಿಯಾದ ರೋಗಿ; ಸರ್ಜರಿ ಕೂಲ್ ಆಗಿತ್ತೆಂದ ಯುವಕ
5ಜಿ ನೆಟ್‌ವವರ್ಕ್ ಹಾಗೂ ಆಪ್ಟಕಲ್ ಕೇಬಲ್ ನೆಟವರ್ಕ್ ಮೂಲಕ ಹೈಸ್ಪೀಡ್ ಇಂಟರ್ನೆಟ್ ಸೇವೆಯನ್ನು ಬಳಸಿಕೊಳ್ಳಲಾಗಿದೆ. ವೈದ್ಯರು ಟೆಲಿ ಸ್ಕ್ರೀನ್ ಮೂಲಕ ರೋಗಿಯ ಶಸ್ತ್ರಚಿಕಿತ್ಸೆ ಮಾಡಿದರೆ, ಇದರ ಸಂಜ್ಞೆಗಳನ್ನು ಆಸ್ಪತ್ರೆಯ್ಲಲಿ ರೋಗಿ ಮುಂದೆ ಅಳವಡಿಸಿದ್ದ ರೋಬೋಟಿಕ್ ಮಿಶನ್ ಸ್ವೀಕರಿಸಿ ಶಸ್ತ್ರಚಿಕಿತ್ಸೆ ಮಾಡಿದೆ.
ರೋಬೋಟಿಕ್ ಮೂಲಕ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಝಾಂಗ್ ಕ್ಸು ರೋಮ್‌ನಿಂದ ಪ್ರಾಸೆಕ್ಟೊಮಿ ಶಸ್ತ್ರಚಿಕಿತ್ಸೆಯನ್ನು ರೋಬೋಟಿಕ್ ಸಹಾಯದೊಂದಿಗೆ ಮಾಡಿದ್ದಾರೆ. ಇತ್ತ ಬೀಜಿಂಗ್‌ನಲ್ಲಿ ಅಡ್ಮಿಟ್ ಆಗಿದ್ದ ರೋಗಿ ಪಕ್ಕದಲ್ಲೇ ಮತ್ತೊಂದು ವೈದ್ಯರ ತಂಡ ಕೂಡ ಸಜ್ಜಾಗಿತ್ತು. ಯಾವುದೇ ಕ್ಷಣದಲ್ಲಿ ತಾಂತ್ರಿಕ ದೋಷ ಕಂಡು ಬಂದರೆ ತಕ್ಷಣವೇ ಬೀಜಿಂಗ್‌ನಲ್ಲಿ ನಿಯೋಜಿಸಿದ್ದ ವೈದ್ಯರ ತಂಡ ಶಸ್ತ್ರಚಿಕಿತ್ಸೆ ಮುಂದುವರಿಸಲು ಎಲ್ಲಾ ತಯಾರಿ ಮಾಡಲಾಗಿತ್ತು. ರಿಮೂಟ್ ಶಸ್ತ್ರಚಿಕಿತ್ಸೆಯಲ್ಲಿ ಯಾವುದೇ ಅಡೆ ತಡೆ, ಅಡಚಣೆಗಳು ಎದುರಾಗಿಲ್ಲ. ಹೀಗಾಗಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೇರವೇರಿದೆ.
ಪಾರ್ಕಿನ್ಸನ್ ರೋಗಿಗೆ ಫೋರ್ಟಿಸ್ ವೈದ್ಯರಿಂದ ಎಂಇಆರ್ ಸಿಸ್ಟಂ ಬಳಸಿ ಯಶಸ್ವಿ ಶಸ್ತ್ರಚಿಕಿತ್ಸೆ
ರೋಮ್‌ನಿಂದ ವೈದ್ಯರು ಟೆಲಿಸ್ಕ್ರೀನ್ ಮೂಲಕ ಕ್ಯಾನ್ಸರ್ ಅಂಗಾಂಶವನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದರೆ, ಇತ್ತ ಸಂಜ್ಞೆಗಳನ್ನು ಪಡೆದ ರೋಬೋಟಿಕ್ ಮಶಿನ್ ಕೈಗಳು ರೋಗಿಗೆ ಶಸ್ತ್ರಚಿಕಿತ್ಸೆ ಮಾಡಿತ್ತು. ಈ ಟೆಲಿಸರ್ಜರಿಯಲ್ಲಿ ಯಾವುದೇ ವಿಳಂಬ ಇರಲಿಲ್ಲ. ವೈದ್ಯರ ಸಂಜ್ಞೆಗಳು ಹೈಸ್ಪೀಡ್ ಕನೆಕ್ಷನ್ ಕಾರ ಸೆಕೆಂಡ್‌ಗಳ ಅಂತರವಿಲ್ಲದೆ ನೇರವೇರಿತ್ತು. ಆದರೆ ಈ ರೀಟಿ ಟೆಲಿಸರ್ಜರಿಯಲ್ಲಿ ಎದುರಾಗುವ ಪ್ರಮುಖ ಸಮಸ್ಯೆ ವೈದ್ಯರ ಕ್ರಿಯೆ ಹಾಗೂ ರೋಬೋಟ್ ಪ್ರಕ್ರಿಯೆಯಲ್ಲಿ ಸೆಕೆಂಡ್‌ಗಳ ಅಂತರದಲ್ಲಿ ವಿಳಂಬವಾದರೂ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.