9 ಬಾರಿ ನೊಬೆಲ್‌ಗೆ ನಾಮನಿರ್ದೇಶನಗೊಂಡಿದ್ದ ಭೌತಶಾಸ್ತ್ರಜ್ಞ ಸುದರ್ಶನ್ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದೇಕೆ?

By Reshma Rao  |  First Published Jul 6, 2024, 3:48 PM IST

ಇಸಿಜಿ ಸುದರ್ಶನ್ ಒಬ್ಬ ಭಾರತೀಯ ಪ್ರತಿಭೆಯಾಗಿದ್ದು, ಅವರು ಭೌತಶಾಸ್ತ್ರಜ್ಞರಾಗಿ ಬಹಳ ಹೆಸರು ಮಾಡಿದ್ದರು. ಅವರ ಹೆಸರನ್ನು ಹಲವಾರು ಬಾರಿ ನೋಬೆಲ್ ‌ಗೆ ಶಿಫಾರಸ್ಸು ಮಾಡಲಾಗಿತ್ತು. ಆದರೆ, ರಾಜಕೀಯ ಕಾರಣಗಳಿಗಾಗಿ ಅವರದನ್ನು ಪಡೆಯಲು ಸಾಧ್ಯವಾಗಲಿಲ್ಲ.
 


ಎನ್ನಕಲ್ ಚಾಂಡಿ ಜಾರ್ಜ್ ಸುದರ್ಶನ್- ಇಸಿಜಿ ಸುದರ್ಶನ್ ಎಂದೇ ಜನಪ್ರಿಯವಾಗಿ, ಸೈದ್ಧಾಂತಿಕ ಭೌತಶಾಸ್ತ್ರ ಕ್ಷೇತ್ರದಲ್ಲಿ ಸ್ವತಃ ಹೆಸರು ಗಳಿಸಿದ ವಿಜ್ಞಾನಿ. 1931ರಲ್ಲಿ ಜನಿಸಿದ ಅವರು, ಭಾರತೀಯ ಅಮೇರಿಕನ್ ಸೈದ್ಧಾಂತಿಕ ಭೌತಶಾಸ್ತ್ರಜ್ಞ ಮತ್ತು ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದರು. 

ಇಸಿಜಿ ಸುದರ್ಶನ್ ಒಬ್ಬ ಭಾರತೀಯ ಪ್ರತಿಭೆಯಾಗಿದ್ದು, ಅವರು ಭೌತಶಾಸ್ತ್ರಜ್ಞರಾಗಿ ಬಹಳ ಹೆಸರು ಮಾಡಿದ್ದರು. ಅವರ ಹೆಸರನ್ನು ಹಲವಾರು ಬಾರಿ ನೋಬೆಲ್ ‌ಗೆ ಶಿಫಾರಸ್ಸು ಮಾಡಲಾಗಿತ್ತು. ಆದರೆ, ರಾಜಕೀಯ ಕಾರಣಗಳಿಗಾಗಿ ಅವರದನ್ನು ಪಡೆಯಲು ಸಾಧ್ಯವಾಗಲಿಲ್ಲ.

Tap to resize

Latest Videos

undefined

ಶೈಕ್ಷಣಿಕ ಸಾಧನೆ
ಸುದರ್ಶನ್ ಕೊಟ್ಟಾಯಂನ CMS ಕಾಲೇಜಿನಲ್ಲಿ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದರು ಮತ್ತು ನಂತರ ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಪದವಿ ಪಡೆದರು. ನಂತರ ಅವರು ಡಾ ಹೋಮಿ ಭಾಭಾ ಅವರೊಂದಿಗೆ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ (TIFR) ನಲ್ಲಿ ಕೆಲಸ ಮಾಡಿದರು. ಅಲ್ಲಿಗೇ ತೃಪ್ತರಾಗದೆ ಪಿಎಚ್‌ಡಿ ಪಡೆದರು. ನ್ಯೂಯಾರ್ಕ್‌ನ ರೋಚೆಸ್ಟರ್ ವಿಶ್ವವಿದ್ಯಾಲಯದಲ್ಲಿ ಮತ್ತು ಪೋಸ್ಟ್‌ಡಾಕ್ಟರಲ್ ಫೆಲೋ ಆಗಿ ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ತೆರಳಿದರು.

ಐಶ್ವರ್ಯಾ ರೈ ಯಿಂದ ಶಾಹೀದ್ ಕಪೂರ್‌ವರೆಗೆ.. ಬಿಟೌನ್ ಸೆಲೆಬ್ರಿಟಿಗಳ ಮೂಢನಂಬಿಕೆಗಳು ಒಂದೆರಡಲ್ಲ..
 

ಪತ್ನಿಗಾಗಿ ಮತಾಂತರ
ಸಿರಿಯನ್ ಕ್ರಿಶ್ಚಿಯನ್ ಕುಟುಂಬದಲ್ಲಿ ಜನಿಸಿದರೂ, ಇಸಿಜಿ ಸುದರ್ಶನ್ ಅವರು 1954ರಲ್ಲಿ ಲಲಿತಾ ರಾವ್ ಅವರನ್ನು ವಿವಾಹವಾದ ನಂತರ ಹಿಂದೂ ಧರ್ಮಕ್ಕೆ ಮತಾಂತರಗೊಂಡರು. ಮದುವೆಯು 1990 ರಲ್ಲಿ ವಿಚ್ಛೇದನದಲ್ಲಿ ಕೊನೆಗೊಂಡಿತು, ನಂತರ ಇಸಿಜಿ ಸುದರ್ಶನ್ ಅವರು ಟೆಕ್ಸಾಸ್, USನಲ್ಲಿ ಭಾಮತಿ ಗೋಪಾಲಕೃಷ್ಣನ್ ಅವರನ್ನು ವಿವಾಹವಾದರು.

ಇಸಿಜಿ ಸುದರ್ಶನ್ ಅವರು 9 ಬಾರಿ ನೊಬೆಲ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರೂ ಅದನ್ನು ಗೆದ್ದಿಲ್ಲ!  1960ರಲ್ಲಿ, ECG ಸುದರ್ಶನ್ ರೋಚೆಸ್ಟರ್ ವಿಶ್ವವಿದ್ಯಾಲಯದಲ್ಲಿ ಕ್ವಾಂಟಮ್ ಆಪ್ಟಿಕ್ಸ್‌ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಎರಡು ವರ್ಷಗಳ ನಂತರ, ಗ್ಲೌಬರ್ ಎಂಬ ವಿಜ್ಞಾನಿ ECG ಸುದರ್ಶನ್ ಅವರು ಆಪ್ಟಿಕಲ್ ಕ್ಷೇತ್ರಗಳನ್ನು ವಿವರಿಸುವಲ್ಲಿ ಶಾಸ್ತ್ರೀಯ ವಿದ್ಯುತ್ಕಾಂತೀಯ ಸಿದ್ಧಾಂತದ ಬಳಸುವುದನ್ನು  ಖಂಡಿಸಿದರು. ಇದು ಸುದರ್ಶನ್‌ಗೆ ನುಂಗಲಾರದ ತುತ್ತಾಯಿತು. ಏಕೆಂದರೆ, ಅವರು ತಮ್ಮ ಸಿದ್ಧಾಂತಕ್ಕೆ ಸರಿಯಾದ ಕಾರಣಗಳನ್ನು ನೀಡಿರುವುದಾಗಿ ನಂಬಿದ್ದರು. 

ಆದರೆ, ನಂತರದಲ್ಲಿ ಈ ಸಿದ್ಧಾಂತ ಗ್ಲೌಬರ್ ಸುದರ್ಶನ್ ಸಿದ್ಧಾಂತ ಎಂದು ಹೆಸರಾಯಿತು ಮತ್ತು ಇದಕ್ಕಾಗಿ ಗ್ಲೌಬರ್‌ಗೆ ನೊಬೆಲ್ ನೀಡಲಾಯಿತು. ಈ ಬಗ್ಗೆ ಮಾತನಾಡಿದ್ದ ಸುದರ್ಶನ್, 'ನನಗೆ ನೊಬೆಲ್ ಪ್ರಶಸ್ತಿ ಬರಲಿಲ್ಲ, ಆದರೆ, ನಾನು ಮಾಡಿದ ಕೆಲಸಕ್ಕೆ ಬಂದಿದೆ' ಎಂದಿದ್ದರು. 

ಬ್ಲ್ಯಾಕ್ ಡ್ರೆಸ್ಸಲ್ಲಿ ಬೋಲ್ಡ್ ಆದ ಭೂಮಿ ಶೆಟ್ಟಿ; 'ಹಾಟ್ ಚಾಕೋಲೇಟ್' ಅಂತಿದಾರೆ ಫಾಲೋವರ್ಸ್
 

ಇನ್ನು 1979ರಲ್ಲಿಯೂ ಸುದರ್ಶನ್ ನೊಬೆಲ್‌ಗೆ ಆಯ್ಕೆಯಾಗಿರಲಿಲ್ಲ. ಆದರೆ, ಆಗ ನೊಬೆಲ್ ಪ್ರಶಸ್ತಿ ಪಡೆದಿದ್ದ ಸ್ಟೀವನ್ ವೈನ್‌ಬರ್ಗ್, ಶೆಲ್ಡನ್ ಗ್ಲಾಶೋ ಮತ್ತು ಅಬ್ದುಸ್ ಸಲಾಮ್ ಅವರು ಸುದರ್ಶನ್ ವಿದ್ಯಾರ್ಥಿಯಾಗಿ ಮಾಡಿದ್ದ ಕೆಲಸವನ್ನೇ ಪಡದು ಅದರ ಮುಂದಿನ ಸಿದ್ಧಾಂತಗಳನ್ನು ರಚಿಸಿದ್ದರು. ಈ ಬಗ್ಗೆ ಸುದರ್ಶನ್, 'ನೀವು ಕಟ್ಟಡಕ್ಕೆ ಬಹುಮಾನ ನೀಡಿದರೆ, ಎರಡನೇ ಮಹಡಿ ಕಟ್ಟಿದವರಿಗಿಂತ ಮೊದಲು ಮೊದಲ ಮಹಡಿ ಕಟ್ಟಿದವರಿಗೆ ಬಹುಮಾನ ನೀಡಬೇಡವೇ?' ಎಂದಿದ್ದರು. 

ಇಸಿಜಿ ಸುದರ್ಶನ್ ಅವರು 2018ರಲ್ಲಿ ಯುಎಸ್‌ನ ಆಸ್ಟಿನ್‌ನಲ್ಲಿ ತಮ್ಮ 86 ನೇ ವಯಸ್ಸಿನಲ್ಲಿ ನಿಧನರಾದರು.
 

click me!