
ಬೀಜಿಂಗ್ (ಆ.18) ಮಕ್ಕಳ ಪಡೆಯಲು ಇನ್ಮುಂದೆ ಹೆರಿಗೆ ನೋವು ಅನುಭವಿಸಬೇಕಿಲ್ಲ, ಐವಿಎಫ್ ತಂತ್ರಜ್ಞಾನ, ಸರೋಗಸಿ ತಾಯಿ ಹುಡುಕಬೇಕಿಲ್ಲ. ಚೀನಾ ವಿಜ್ಞಾನಿಗಳು ವಿಶ್ವದ ಮೊದಲ ಫಸ್ಟ್ ಜನರೇಶನ್ ರೋಬೋಟ್ ಅಭಿವೃದ್ಧಿಪಡಿಸಿದ್ದಾರೆ. ವಿಶೇಷ ಅಂದರೆ ಈ ರೋಬೋಟ್ ಮಾನವನ ಮಗುವಿಗೆ ಜನ್ಮ ನೀಡಲಿದೆ. ಗರ್ಭಿಣಿಯಿಂದ ಮಗುವಿಗೆ ಜನ್ಮ ನೀಡುವವರೆಗೆ ಎಲ್ಲಾ ಪ್ರಕ್ರಿಯೆಗಳು ರೋಬೋಟ್ ನಿರ್ವಹಿಸಲಿದೆ. ತಾಯಿ ಹೊಟ್ಟೆಯಲ್ಲಿ ಮಗುವಿನ ಬೆಳವಣಿಗೆ, ಜನನ ಎಲ್ಲಾ ಪ್ರಕ್ರಿಯೆಗಳು ಈ ರೋಬೋಟ್ ನಿರ್ವಹಿಸಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. 2026ರಲ್ಲಿ ಈ ತಾಯಿ ರೋಬೋಟ್ ಮಾರುಕಟ್ಟೆ ಪ್ರವೇಶಿಸಲಿದೆ.
ತಾಯಿ ರೋಬೋಟ್‌ನ್ನು ಚೀನಾದ ಗೌಂಝುಗು ಪ್ರಾಂತ್ಯದ ಕೈವಾ ಟೆಕ್ನಾಲಜಿ ಅಭಿವೃದ್ಧಿಪಡಿಸಿದೆ. ಸಿಂಗಾಪೂರನ ನನ್ಯಾಂಗ್ ಟೆಕ್ನಾಲಜಿ ವಿಶ್ವವಿದ್ಯಾಲದಯ ವಿಜ್ಞಾನಿ ಡಾ. ಝಾಂಗ್ ಖಿಪೆಂಗ್ ನೇತೃತ್ವದಲ್ಲಿ ನಡೆದ ಸಂಶೋಧನೆಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ವಿಶೇಷ ಅಂದರೆ ಈ ರೋಬೋಟ್ ಹೊಟ್ಟೆಯಲ್ಲಿ ಕೃತಕ ಗರ್ಭ ಅಭಿವೃದ್ಧಿಪಿಡಿಲಾಗಿದೆ.. ಇದಕ್ಕೆ ಬೇಕಾದ ಪೌಷ್ಠಿಕಾಂಶಗಳನ್ನು ಟ್ಯೂಬ್ ಮೂಲಕ ನೀಡಲಾಗುತ್ತದೆ. ಈ ಮೂಲಕ ರೋಬೋಟ್ ಗರ್ಭದಲ್ಲಿ ಮಗು ಬೆಳೆಯಲಿದೆ.
ಅಭಿವೃದ್ಧಿಪಡಿಸಿರುವ ರೋಬೋಟ್ ಗರ್ಭಕ್ಕೆ ವೀರ್ಯ ಹಾಗೂ ಅಂಡಾಣುಗಳನ್ನು ಸಂಯೋಜಿಸಲಾಗುತ್ತದೆ. ಹೇಗೆ ಗರ್ಭದಲ್ಲಿ ಮಗು ಬೆಳವಣಿಗೆ ಪ್ರಕ್ರಿಯೆ ನಡೆಯುತ್ತದೋ, ಅದೇ ರೀತಿ ರೋಬೋಟ್ ಗರ್ಭದಲ್ಲಿ ಕೃತಕತೆ ಸೃಷ್ಟಿಸಲಾಗಿದೆ. ಈ ಮೂಲಕ ಮಗು ಬೆಳವಣಿಗೆಯಾಗಲಿದೆ. ಇದಕ್ಕೆ ಬೇಕಾದ ಪೌಷ್ಠಿಕಾಂಶಗಳನ್ನು ನೀಡಲಾಗುತ್ತದೆ.
ರೋಬೋಟ್ ಅಭಿವೃದ್ಧಿಪಡಿಸಿರುವ ವಿಜ್ಞಾನಿಗಳ ತಂಡ, ಸದ್ಯ ಹಲವು ಹಂತದ ಪರೀಕ್ಷೆಯಲ್ಲಿ ತೊಡಗಿದೆ.ಮಗುವಿನ ಬೆಳವಣಿಗೆ, ಇತರ ಆರೋಗ್ಯ ಸಮಸ್ಯೆಗಳು, ವಾತಾವರಣದ ಬದಲಾವಣೆ ಸೇರಿದಂತೆ ಎಲ್ಲವನ್ನು ಪರೀಕ್ಷೆ ಮಾಡಲಾಗುತ್ತಿದೆ. ಈ ರೋಬೋಟ್ ಯಶಸ್ವಿಯಾದರೆ ಜಗತ್ತಿನಲ್ಲೇ ಮಹಾ ಕ್ರಾಂತಿಯಾಗಲಿದೆ. ಪ್ರಮುಖವಾಗಿ ಮಕ್ಕಳಾಗದೇ ಐವಿಎಫ್ ಸೇರಿದಂತೆ ಇತರ ಮಾರ್ಗದ ಮೂಲಕ ಮಕ್ಕಳ ಪಡೆಯಲು ಹಂಬಲಿಸುವ ದಂಪತಿಗಳಿಗೆ ಈ ತಂತ್ರಜ್ಞಾನ ವರದಾನವಾಗಲಿದೆ.
ವಿಜ್ಞಾನಿಗಳ ಸತತ ಪ್ರಯತ್ನದ ಫಲವಾಗಿ ರೋಬೋಟ್ ಅಭಿವೃದ್ಧಿಪಡಿಸಲಾಗಿದೆ. ಕೆಲ ಪರೀಕ್ಷೆಗಳು ನಡೆಯುತ್ತಿದೆ. 2026ರ ವೇಳೆಗೆ ಈ ರೋಬೋಟ್ ಲಾಂಚ್ ಆಗಲಿದೆ. ಗರ್ಭಧರಿಸುವ ಈ ರೋಬೋಟ್ ಈಗಾಗಲೇ ಭಾರಿ ಕುತೂಹಲ ಸೃಷ್ಟಿಸಿದೆ. ಈ ರೋಬೋಟ್ ಅಂದಾಡು ಬೆಲೆ 12.23 ಲಕ್ಷ ರೂಪಾಯಿ.
ತಾಯಿಯ ಗರ್ಭದಲ್ಲಿ ಮಗು ಬೆಳೆಯುವಾಗ ಮಾನಸಿಕವಾಗಿ ಸದೃಢವಾಗಿರುತ್ತದೆ. ಜೊತೆಗೆ ತಾಯಿ ಜೊತೆಗೆ ಮಗುವಿನ ಬಾಂಧವ್ಯ ಬೆಳೆದಿರುತ್ತದೆ. ಮಗುವಿನ ದೈಹಿಕ ಆರೋಗ್ಯ, ಮಾನಿಸಿಕ ಆರೋಗ್ಯ ಕೂಡ ಅತೀ ಮುಖ್ಯವಾಗುತ್ತದೆ. ಆದರೆ ರೋಬೋಟ್ ಕೃತಕ ಗರ್ಭದಲ್ಲಿ ಮಗುವಿನ ಬೆಳವಣಿಗೆ ಕೊನೆಗೆ ಹೆರಿಗೆಯನ್ನೂ ಮಾಡಬಹುದು. ಆದರೆ ಮಾಗುವಿ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ತಜ್ಞ ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.