ಕೃಷಿಯಲ್ಲಿ ಚೀನಾ ಸಂಚಲನ, ಭೂಮಿಯಿಂದ 400 ಕಿಲೋ ಮೀಟರ್ ಎತ್ತರದಲ್ಲಿ ಭತ್ತ ಬಿತ್ತನೆ

Published : Oct 19, 2026, 07:23 PM IST
china tiangong space station rice harvest

ಸಾರಾಂಶ

ಚೀನಾದ ಟಿಯಾಂಗಾಂಗ್ ಬಾಹ್ಯಾಕಾಶ ನಿಲ್ದಾಣದಲ್ಲಿ ಗಗನಯಾತ್ರಿಗಳು ಭತ್ತ ಬೆಳೆಯುವ ಪ್ರಯೋಗದಲ್ಲಿ ಯಶಸ್ವಿಯಾಗಿದ್ದಾರೆ. ಭವಿಷ್ಯದ ಬಾಹ್ಯಾಕಾಶ ಯಾತ್ರೆಗಳಿಗೆ ಆಹಾರ ಒದಗಿಸುವ ಉದ್ದೇಶದಿಂದ ಈ ಅಧ್ಯಯನ ನಡೆಸಲಾಗುತ್ತಿದೆ. ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ಸಸ್ಯಗಳ ಬೆಳವಣಿಗೆ ಮತ್ತು ಜೀನ್‌ಗಳ ಬದಲಾವಣೆಗಳ ಬಗ್ಗೆ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆ.

ಚೀನಾ ಹೊಸ ಸಾಹಸಕ್ಕೆ ಕೈಹಾಕಿದೆ. ಭೂಮಿಯಿಂದ ನೂರಾರು ಕಿಲೋ ಮೀಟರ್ ಎತ್ತರದಲ್ಲಿ ಭತ್ತ ಬೆಳೆಯಲು ಮುಂದಾಗಿದೆ. ಈ ಪ್ರಯೋಗದಲ್ಲಿ ಸಕ್ಸಸ್ ಕೂಡ ಆಗಿದ್ದು, ಹೊಸ ಮೈಲಿಗಲ್ಲು ಊರಿದೆ.

ಹೌದು, ಚೀನಾದ ಟಿಯಾಂಗಾಂಗ್ ಬಾಹ್ಯಾಕಾಶ ನಿಲ್ದಾಣದಲ್ಲಿ ಗಗನಯಾತ್ರಿಗಳು ಭತ್ತ ಬೆಳೆಯುವ ಪ್ರಯೋಗದಲ್ಲಿ ಮಹತ್ವದ ಮೈಲಿಗಲ್ಲುನ್ನು ಪೂರ್ಣಗೊಳಿಸಿದ್ದಾರೆ. ಚೀನಾ ವಿಜ್ಞಾನಿಗಳು ನೀಡಿರುವ ಮಾಹಿತಿ ಪ್ರಕಾರ.. ಗಗನಯಾತ್ರಿಗಳು ಹೊಸ ಭತ್ತದ ಬೆಳೆಯನ್ನು ಕೊಯ್ಲು ಮಾಡಿದರು. ಬೀಜಗಳನ್ನ ಬಿತ್ತಿ ಸಂರಕ್ಷಿಸಿದ್ದಾರೆ ಎಂದು ವರದಿಯಾಗಿದೆ.

ಮುಂದಿನ ದಿನಗಳಲ್ಲಿ ಬಾಹ್ಯಾಕಾಶದಲ್ಲಿ ಭತ್ತ ಬೆಳೆಯಲು ಆಗುತ್ತಾ ಅನ್ನೋ ಉದ್ದೇಶದಿಂದ ಚೀನಾ ಸಾಹಸಕ್ಕೆ ಕೈಹಾಕಿತ್ತು. ಇನ್ನು, ಯಾತ್ರೆಗಳಿಗೆ ಈ ಪ್ರಯೋಗ ಪ್ರಮುಖವಾಗಲಿದೆ. ಒಂದು ವೇಳೆ ಭತ್ತ ಬೆಳೆಯಲು ಸಾಧ್ಯವಾದರೆ ಮುಂದಿನ ಪೀಳಿಗೆಗೆ ಆಹಾರವನ್ನು ಒದಗಿಸುವುದು ಸಾಧ್ಯವಾಗಲಿದೆ ಅನ್ನೋದು ಚೀನಾದ ಲೆಕ್ಕಾಚಾರ. ಅಂದರೆ ಪ್ರಸ್ತುತ ಬಾಹ್ಯಾಕಾಶಕ್ಕೆ ಹೋಗುವ ಗಗನಯಾತ್ರಿಗಳು ಆಹಾರವನ್ನು ಭೂಮಿಯಿಂದ ಕೊಂಡೊಯ್ಯುತ್ತಾರೆ. ಆಧುನಿಕ ತಂತ್ರಜ್ಞಾನದ ಮೂಲಕ ಇದು ಸಾಧ್ಯವಾದರೆ.. ಭೂಮಿಯ ಸರಬರಾಜಿನ ಮೇಲಿನ ಅವಲಂಬನೆ ಕಡಿಮೆ ಮಾಡಬಹುದು ಎಂಬುವುದು ಚೀನಾದ ಯೋಜನೆ.

ಪ್ರಯೋಗವು ಭೂಮಿಯಿಂದ ತಂದ ಭತ್ತದ ಬೀಜಗಳಿಂದ ಪ್ರಾರಂಭವಾಯಿತು. ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ಬೀಜ ಮೊಳಕೆಯೊಡೆಯುವಿಕೆ, ಸಸ್ಯಗಳ ಬೆಳವಣಿಗೆ, ಹೂಬಿಡುವಿಕೆ ಮತ್ತು ಬೀಜ ರಚನೆಯ ಪ್ರಕ್ರಿಯೆ ಬಗ್ಗೆ ವಿಜ್ಞಾನಿಗಳು ಅಧ್ಯಯನ ಮಾಡಿದರು. ಇನ್ಮುಂದೆ ಅಲ್ಲಿ ಬೆಳೆದ ಬೀಜಗಳಿಂದ ಸಸ್ಯಗಳನ್ನ ಅಭಿವೃದ್ಧಿಪಡಿಸಿ ಭೂಮಿಯಂತೆ ಬಾಹ್ಯಾಕಾಶದಲ್ಲಿ ಭತ್ತ ಬೆಳೆಯುವ ಪ್ರಕ್ರಿಯೆ ಮುಂದುವರಿಸಬಹುದೇ ಅನ್ನೋದಕ್ಕೆ ಈ ಅಧ್ಯಯನ ಸಹಾಯ ಆಗಲಿದೆ.

ಚೈನೀಸ್ ಅಕಾಡೆಮಿ ಆಫ್ ಸೈನ್ಸಸ್ ಪ್ರಕಾರ.. ಈ ಪ್ರಯೋಗವು 2026 ರಲ್ಲಿ ಪ್ರಾರಂಭವಾಯಿತು. ಬೀಜದಿಂದ ಬೀಜಕ್ಕೆ ಎರಡು ಸಂಪೂರ್ಣ ಚಕ್ರಗಳನ್ನು ಪೂರ್ಣಗೊಳಿಸುವುದು ಇದರ ಗುರಿಯಾಗಿದೆ. ವಿಜ್ಞಾನಿಗಳು ಬಾಹ್ಯಾಕಾಶದಲ್ಲಿ ಸಸ್ಯಗಳು ಬೆಳೆಯಬಹುದೇ ಎಂದು ನೋಡಲು ಮಾತ್ರವಲ್ಲ, ಅಲ್ಲಿ ಉತ್ಪತ್ತಿಯಾಗುವ ಬೀಜಗಳು ನಂತರದ ಪೀಳಿಗೆಗೆ ಹೇಗೆ ಬೆಳೆಯುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯೋಗ ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.

ಜೀನ್‌ಗಳು ಬದಲಾಗುತ್ತಾ?

ಭೂಮಿಯಲ್ಲಿ ಗುರುತ್ವಾಕರ್ಷಣೆ ಮೂಲಕ ಬೆಳೆಯುವ ಪ್ರಕ್ರಿಯೆ ತುಂಬಾನೇ ವಿಕಸನಗೊಂಡಿದೆ. ಆದರೆ ಬಾಹ್ಯಾಕಾಶದಲ್ಲಿನ ಪರಿಸ್ಥಿತಿ ವಿಭಿನ್ನ. ಅಲ್ಲಿನ ಸಸ್ಯಗಳು ಭೂಮಿಯ ಮೇಲೆ ಅನುಭವಿಸುವ ಗುರುತ್ವಾಕರ್ಷಣೆ ಸಿಗೋದಿಲ್ಲ. ಇದು ಅವುಗಳ ಅಭಿವೃದ್ಧಿ, ಬೆಳವಣಿಗೆ ಮತ್ತು ಸಂತಾನೋತ್ಪತ್ತಿಯ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದು ಪ್ರಶ್ನೆಯಾಗಿದೆ.

ಈ ಅಕ್ಕಿ ಪ್ರಯೋಗವು ಸಸ್ಯಗಳ ಆನುವಂಶಿಕ ಸ್ಥಿರತೆಯನ್ನು ಅಧ್ಯಯನ ಮಾಡುತ್ತಿದೆ. ಬಾಹ್ಯಾಕಾಶದಲ್ಲಿ ಬಹು ತಲೆಮಾರುಗಳ ಬೆಳವಣಿಗೆಯ ಸಮಯದಲ್ಲಿ ಸಸ್ಯಗಳ ಜೀನ್‌ಗಳಲ್ಲಿ ಯಾವುದೇ ಬದಲಾವಣೆಗಳು ಸಂಭವಿಸುತ್ತವೆಯೇ ಎಂದು ವಿಜ್ಞಾನಿಗಳು ನಿರ್ಧರಿಸುತ್ತಾರೆ. ಎಪಿಜೆನೆಟಿಕ್ಸ್‌ನತ್ತಲೂ ಗಮನ ಹರಿಸಲಾಗುತ್ತಿದೆ. ಸರಳವಾಗಿ ಹೇಳುವುದಾದರೆ, ಇದು ಜೀನ್ ಚಟುವಟಿಕೆ ಹೇಗೆ ಬದಲಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತದೆ. ಇದರರ್ಥ ಬಾಹ್ಯಾಕಾಶದಲ್ಲಿ ಬೆಳೆದ ಬೀಜಗಳಿಂದ ಸಸ್ಯಗಳನ್ನು ಪುನರುತ್ಪಾದಿಸಲು ಸಾಧ್ಯವಿದೆ. ಆದರೆ ಅವುಗಳ ಕಾರ್ಯವನ್ನು ಬದಲಾಯಿಸಬಹುದು.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಅಮೆಜಾನ್ ನದಿಗೆ ಸೇತುವೆ ಕಟ್ಟಲು ಹೋದ ಇಂಜಿನಿಯರ್ಸ್ ಸೋತು ಸುಣ್ಣವಾಗಿ ಓಡಿಬಂದಿದ್ದೇಕೆ? ನದಿಯಲ್ಲಿ ಕಾದಿತ್ತಾ ಘೋರ ಸಾವು?
ISRO: ಗಗನಯಾನದ ಹಾದಿಯಲ್ಲಿ ಇಸ್ರೋದ ಮಹತ್ವದ ಹೆಜ್ಜೆ: ಬೇರ್ಪಡಿಸುವ ಪರೀಕ್ಷೆ ಯಶಸ್ವಿ