ಇಸ್ರೋ ನೌಕೆ ಇಳಿದ ಚಂದ್ರನ ದಕ್ಷಿಣ ಧ್ರುವದಲ್ಲೇ ನೌಕೆ ಇಳಿಸಿದ ಚೀನಾ

By Kannadaprabha News  |  First Published Jun 3, 2024, 11:07 AM IST

ಇಸ್ರೋ ನೌಕೆ ಇಳಿದ ಚಂದ್ರನ ದಕ್ಷಿಣ ಧ್ರುವಕ್ಕೆ ಚೀನಾ ನೌಕೆ. ಮಾದರಿ ಸಂಗ್ರಹಿಸಿ ಭೂಮಿಗೆ ತರುವ ಉದ್ದೇಶ


ಬೀಜಿಂಗ್‌ (ಜೂ.3): ಕಳೆದ ವರ್ಷದ ಆಗಸ್ಟ್‌ ತಿಂಗಳಲ್ಲಿ ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ಇಸ್ರೋ’ದ ಚಂದ್ರಯಾನ ನೌಕೆ 3 ಇಳಿದ ಚಂದ್ರನ ದಕ್ಷಿಣ ಧ್ರುವದಲ್ಲಿ ಇದೀಗ ಚೀನಾ ಕೂಡಾ ತನ್ನ ನೌಕೆಯನ್ನು ಇಳಿಸುವಲ್ಲಿ ಯಶಸ್ವಿಯಾಗಿದೆ.

ಕಳೆದ ಮೇ 3ರಂದು ಹಾರಿಬಿಡಲಾಗಿದ್ದ ‘ಚಾಂಗ್‌ ಇ-6’ ನೌಕೆ, ಭಾನುವಾರ ಚೀನಾ ಕಾಲಮಾನ ಬೆಳಗ್ಗೆ 6.23ಕ್ಕೆ ಪೂರ್ವ ನಿಗದಿತ ಅಪೋಲೋ ಬೇಸಿನ್‌ ಎಂಬ ಸ್ಥಳದಲ್ಲಿ ಯಶಸ್ವಿಯಾಗಿ ಇಳಿದಿದೆ. ಈ ನೌಕೆಯು ಆರ್ಬಿಟರ್‌, ರಿಟರ್ನರ್‌, ಲ್ಯಾಂಡರ್‌ ಮತ್ತು ಅಸೆಂಡರ್‌ ಎಂಬ 4 ಉಪಕರಣಗಳನ್ನು ಹೊಂದಿದೆ.

Tap to resize

Latest Videos

undefined

ವಿಶ್ವದ ಮೊದಲ 3ಡಿ ಪ್ರಿಂಟೆಡ್ ರಾಕೆಟ್‌ ಹಾರಿಸಿದ ಭಾರತ..!

ಈ ನೌಕೆಯು ಸೂರ್ಯನ ಬೆಳಕೇ ಬೀಳದ, ಎಂದಿಗೂ ಭೂಮಿಯಿಂದ ನೋಡಲಾಗದ ಪ್ರದೇಶದಿಂದ ಕಲ್ಲು, ಮಣ್ಣಿನ ಮಾದರಿ ಸಂಗ್ರಹಿಸಿ ಅದನ್ನು ಭೂಮಿಗೆ ತರಲಿದೆ. ಈ ಪ್ರದೇಶದಿಂದ ಕಲ್ಲು ಮಣ್ಣು ಭೂಮಿಗೆ ತರುತ್ತಿರುವ ಮೊದಲ ಉದಾಹರಣೆ ಇದಾಗಿದೆ. ಚಂದ್ರನ ದಕ್ಷಿಣದ ಧ್ರುವದ ಮೇಲೆ ನೌಕೆ ಇಳಿಸಿದ ವಿಶ್ವದ ಮೊದಲ ದೇಶ ಎಂಬ ಹಿರಿಮೆ ಭಾರತಕ್ಕಿದೆ. ಇಸ್ರೋ ತನ್ನ ಪ್ರಜ್ಞಾನ್‌ ನೌಕೆಯನ್ನು ಅಲ್ಲಿ ಇಳಿಸಿತ್ತು.

ಒಡಿಶಾದಲ್ಲಿ ಬಿಜೆಪಿ-ಬಿಜೆಡಿ ಸಮಬಲ: ಸಮೀಕ್ಷೆ!

click me!