ಭಾರತದ ಅತ್ಯಂತ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಚಂದ್ರನ ಮೇಲೆ ಸಾಫ್ಟ್ ಲ್ಯಾಂಡ್ ಆಗುವ ದಿನಗಣನೆ ಆರಂಭವಾಗಿದೆ. ಆದರೆ, ಚಂದ್ರನ ಮೇಲೆ ಸಕ್ರಿಯವಾಗಿರುವುದು ಭಾರತದ ಚಂದ್ರಯಾನ-3 ಯೋಜನೆ ಮಾತ್ರವಲ್ಲ. ವಿವಿಧ ದೇಶಗಳ ಹಲವಾರು ಆರ್ಬಿಟರ್‌ಗಳು ಚಂದ್ರನ ಹುಡುಕಾಟದಲ್ಲಿ ನಿರತವಾಗಿದೆ.
ಬೆಂಗಳೂರು (ಆ.22): ಭಾರತ ಚಂದ್ರನ ಹಿಂದೆ ಬಿದ್ದುದ್ದು ಈಗಲ್ಲ. 2003ರ ಆಗಸ್ಟ್ 15 ರಂದು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಭಾರತದ ಮೂನ್ ಮಿಷನ್ ಘೋಷಣೆ ಮಾಡಿದಾಗ ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟಿದ್ದರು. ಆದರೆ, ಇಂದು ಭಾರತ ಚಂದ್ರನ ಮೇಲೆ ತನ್ನ ಕಾಲೂರುವ ಪ್ರಯತ್ನ ಮಾಡುತ್ತಿದೆ. ಹಾಗೇನಾದರೂ ಚಂದ್ರಯಾನ-3 ಸಾಫ್ಟ್ ಲ್ಯಾಂಡಿಂಗ್ ಆದಲ್ಲಿ ಬಾಹ್ಯಾಕಾಶದ ಒಂದು ಆಕಾಶಕಾಯದ ಮೇಲೆ ಸ್ಪರ್ಶ ಮಾಡಿದ ಮೊಟ್ಟಮೊದಲ ಸಾಧನೆ ಎನಿಸಲಿದೆ. ಹಾಗಂತ ಚಂದ್ರನ ಮೇಲೆ ಕಾಲಿಡುವ ಪ್ರಯತ್ನ ಮಾಡುವ ಹಾದಿಯಲ್ಲಿ ಭಾರತ ಮೊದಲ ರಾಷ್ಟ್ರವಲ್ಲ. ಅಮೆರಿಕ ಈಗಾಗಲೇ ಈ ಸಾಧನೆ ಮಾಡಿದ್ದರೆ ಇತ್ತೀಚೆಗೆ ರಷ್ಯಾ ತನ್ನ ಲೂನಾ 25 ಮೂಲಕ ಚಂದ್ರನ ಮೇಲೂರುವ ಪ್ರಯತ್ನ ವಿಫಲವಾಗಿತ್ತು. ಆದರೆ, ಚಂದ್ರ ಈಗ ಹೇಗಾಗಿದ್ದಾನೆ ಎಂದರೆ, ಆತನ ಒಂದೇ ಒಂದು ಸಣ್ಣ ಬದಲಾವಣೆ ಕೂಡ ಭೂಮಿಗೆ ತಿಳಿಯುತ್ತದೆ. ಅದಕ್ಕೆ ಕಾರಣ, ಭೂಮಿಯಿಂದ ಆತನ ಬಳಿಗೆ ಬಿಟ್ಟಿರುವ ಆರ್ಬಿಟರ್‌ಗಳು, ಲ್ಯಾಂಡರ್‌ಗಳು ಹಾಗೂ ರೋವರ್‌ಗಳು..
ಪ್ರಸ್ತುತ ಸಕ್ರಿಯವಾಗಿರುವ ಚಂದ್ರನ ಪರಿಶೋಧನೆಯ ಯೋಜನೆಗಳು
undefined
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಥವಾ ಇಸ್ರೋ ಪ್ರಕಾರ ಜುಲೈ 2023 ರ ಹೊತ್ತಿಗೆ ಚಂದ್ರನ ಕಕ್ಷೆಯಲ್ಲಿ ಆರು ಆರ್ಬಿಟರ್‌ಗಳು ಸುತ್ತುಹಾಕುತ್ತಿದೆ.
1. ನ್ಯಾಷನಲ್ ಏರೋನಾಟಿಕ್ಸ್ ಮತ್ತು ಸ್ಪೇಸ್ ಅಡ್ಮಿನಿಸ್ಟ್ರೇಷನ್ ಅಥವಾ ನಾಸಾದ, ಥೇಮಿಸ್ (THEMIS) ಮಿಷನ್‌ನ ಎರಡು ಪ್ರೋಬ್‌ಗಳನ್ನು ಈಗ ಆರ್ಟೆಮಿಸ್ P1 ಮತ್ತು ಆರ್ಟೆಮಿಸ್ P2 ಎಂದು ಕರೆಯಲಾಗುತ್ತದೆ. ಆರ್ಟೆಮಿಸ್ ಉಪಕ್ರಮದ ಅಡಿಯಲ್ಲಿ ಈ ಎರಡೂ ಪ್ರೋಬ್‌ಗಳನ್ನು ಮರುಬಳಕೆ ಮಾಡಲಾಗುತ್ತಿದೆ.
2. ನಾಸಾದ ಚಂದ್ರನ ವಿಚಕ್ಷಣ ಆರ್ಬಿಟರ್ (LRO-ಲೂನಾರ್ ರಿಕಾನಿಯನೆನ್ಸ್ ಆರ್ಬಿಟರ್) ಚಂದ್ರನ ಸುತ್ತ ಸುಮಾರು ಧ್ರುವೀಯ, ಸ್ವಲ್ಪ ದೀರ್ಘವೃತ್ತದ ಮಾರ್ಗವನ್ನು ಗುರುತಿಸುತ್ತದೆ.
3. ಇಸ್ರೋದ ಚಂದ್ರಯಾನ-2 ಮತ್ತು ಕೊರಿಯಾ ಪಾತ್‌ಫೈಂಡರ್ ಲೂನಾರ್ ಆರ್ಬಿಟರ್ (ಕೆಪಿಎಲ್‌ಒ) ಎರಡೂ ಧ್ರುವೀಯ ಕಕ್ಷೆಗಳನ್ನು 100 ಕಿಮೀ ಎತ್ತರದಲ್ಲಿ ನ್ಯಾವಿಗೇಟ್ ಮಾಡುತ್ತವೆ.
4.NASA ದ ಕ್ಯಾಪ್‌ಸ್ಟೋನ್ 9:2 ಪ್ರತಿಧ್ವನಿಸುವ ದಕ್ಷಿಣ ಎಲ್2 NRHO ಪಥವನ್ನು ಅನುಸರಿಸುತ್ತದೆ, ಚಂದ್ರನ ಉತ್ತರ ಧ್ರುವದ ಮೇಲೆ 1500-1600 ಕಿಮೀ ಎತ್ತರದಲ್ಲಿ ಮತ್ತು ದಕ್ಷಿಣ ಧ್ರುವವು ಸರಿಸುಮಾರು 70,000 ಕಿಮೀ ದೂರದಲ್ಲಿ ಹಾರುತ್ತದೆ.
2009 ರಲ್ಲಿ ಜಪಾನ್‌ನ ಕಗುಯಾ/ಸೆಲೆನ್ ಮಿಷನ್‌ನಿಂದ ಬಾಹ್ಯಾಕಾಶ ನೌಕೆ ಔನಾ ಮತ್ತು 2008 ರಲ್ಲಿ ಉಡಾವಣೆಯಾದ ಭಾರತದ ಚಂದ್ರಯಾನ-1 ಯೋಜನೆಯ ನೌಕೆಗಳು ಈಗ ಕಾರ್ಯನಿರ್ವಹಿಸುತ್ತಿಲ್ಲ.
ಎಲ್ಲಾ ಇತರ ಆರ್ಬಿಟರ್‌ಗಳನ್ನು ಚಂದ್ರನ ಕಕ್ಷೆಯ ಪ್ರಭಾವದಿಂದ ಹೊರಕ್ಕೆ ಸ್ಥಳಾಂತರಿಸಲಾಗಿದೆ ಅಥವಾ ಚಂದ್ರನ ಮೇಲ್ಮೈಗೆ ಕ್ರ್ಯಾಶ್ ಲ್ಯಾಂಡ್ ಆಗಿದೆ. ಕೆಲವೊಂದನ್ನು ಉದ್ದೇಶಪೂರ್ವಕವಾಗಿ ಚಂದ್ರನ ಮೇಲೆ ಕ್ರ್ಯಾಶ್ ಲ್ಯಾಂಡ್ ಮಾಡಲಾಗಿದ್ದರೆ, ಇನ್ನೂ ಕೆಲವುಗಳು ಪ್ರಯತ್ನದಲ್ಲಿ ಸೋಲು ಕಂಡು ಕ್ರ್ಯಾಶ್ ಲ್ಯಾಂಡ್ ಆಗಿವೆ. ಚೀನಾದ ಚಾಂಗ್-4 ಮಿಷನ್‌ಗಾಗಿ Queqiao ಡೇಟಾ ರಿಲೇ ಉಪಗ್ರಹ, 2018 ರಲ್ಲಿ ಉಡಾವಣೆಯಾದ ನಂತರ ಭೂಮಿ-ಚಂದ್ರ L2 ಪಾಯಿಂಟ್‌ನ ಬಳಿ ಹಾಲೋ ಕಕ್ಷೆಗೆ ಸ್ಥಳಾಂತರಗೊಂಡಿತು
ಪ್ರಕಾಶ್ ರಾಜ್ ಚಂದ್ರಯಾನ ಗೇಲಿ ವಿವಾದ: ಸ್ಪಷ್ಟನೆ ನೀಡಿದ ನಟ.
ಚಂದ್ರನ ಮೇಲ್ಮೈಯಲ್ಲಿ ಇರುವ ಲ್ಯಾಂಡರ್: ಪ್ರಸ್ತುತ, ಚಾಂಗ್-ಇ 4 ಮೂಲಕ ಕಳುಹಿಸಲಾದ ಯುಟು-2 ರೋವರ್ ಚಂದ್ರನ ಮೇಲ್ಮೈಯಲ್ಲಿ ಏಕೈಕ ಆಪರೇಟಿಂಗ್ ರೋವರ್ ಆಗಿದೆ. ಚಂದ್ರನ ದೂರದ ಭಾಗವನ್ನು ಸಕ್ರಿಯವಾಗಿ ಅನ್ವೇಷಣೆ ಮಾಡುತ್ತಿದೆ.
Chandrayaan-3 Updates: ಚಂದ್ರನ ಕಕ್ಷೆಯಲ್ಲಿ ಚಂದ್ರಯಾನ-2 ಜೊತೆ ಸಂಪರ್ಕ ಸಾಧಿಸಿದ ವಿಕ್ರಮ್ ಲ್ಯಾಂಡರ್!
ಡಿಕ್ಕಿಯಾಗುವ ಅಪಾಯವೂ ಹೆಚ್ಚು: ಚಂದ್ರನ ಕಕ್ಷೆಯಲ್ಲಿ ಹಲವಾರು ಬಾಹ್ಯಾಕಾಶ ನೌಕೆಗಳಿವೆ. ಒಮ್ಮೊಮ್ಮೆ ಇವು ಡಿಕ್ಕಿಯಾಗುವಷ್ಟು ಹತ್ತಿರ ಬರುತ್ತದೆ. ಈ ಸಂದರ್ಭದಲ್ಲಿ ಭೂಮಿಯಿಂದಲೇ ಘರ್ಷಣೆ ತಪ್ಪಿಸುವ ಕಕ್ಷೆ ಇಳಿಸುವ ಕಾರ್ಯಗಳು ನಡೆಯುತ್ತದೆ ಎಂದು ಇಸ್ರೋ ಹೇಳಿದೆ. ಚಂದ್ರಯಾನ-2 ಆರ್ಬಿಟರ್ ನಾಸಾದ ಎಲ್‌ಆರ್‌ಓ ಹಾಗೂ ಕೊರಿಯಾದ ಕೆಪಿಎಲ್‌ಓ ಜೊತೆ ಘರ್ಷಣೆಯಾಗುವ ಆತಂಕವಿತ್ತು. ಈ ವೇಳೆ ಮೂರು ಬಾರಿ ಕಕ್ಷೆ ಇಳಿಸುವ ಕ್ರಮಗಳನ್ನು ಮಾಡಲಾಗಿತ್ತು ಎಂದು ಇಸ್ರೋ ಮಾಹಿತಿ ನೀಡಿದೆ.