
ಬಾಹ್ಯಾಕಾಶದಲ್ಲಿ ಪ್ರತಿನಿತ್ಯ ಹಲವು ವಿಸ್ಮಯಗಳು ಘಟಿಸುತ್ತದೆ. ವಿಜ್ಞಾನಿಗಳು ಪ್ರತಿ ದಿನ ಸೂಕ್ಷ್ಮವಾಗಿ ಗಮನಿಸಿ ಅಧ್ಯಯನ ನಡೆಸುತ್ತಲೇ ಇರುತ್ತಾರೆ. ಹೀಗೆ ಘಟಿಸಿದ ವಿಸ್ಮಯ ವಿದ್ಯಾಮಾನವೊಂದರಲ್ಲಿ ಭೂಮಿಗೆ ಮತ್ತೊಂದು ಚಂದ್ರ ಲಭ್ಯವಾಗಿದ್ದಾನೆ. ಸದ್ಯ ಭೂಮಿಯ ಸುತ್ತ ಪ್ರದಕ್ಷಿಣೆ ಹಾಕುತ್ತಿರುವ ಈ ಮಿನಿ ಮೂನ್‌ಗೆ 2026 QQ8 ಎಂದು ಹೆಸರಿಡಲಾಗಿದೆ. ತಾತ್ಕಾಲಿಕವಾಗಿ ಪ್ರದಕ್ಷಿಣೆ ಹಾಕುತ್ತಿರುವ ಈ ಮಿನಿ ಮೂನ್ ಒಂದು ಕ್ಷುದ್ರ ಗ್ರಹ ಅನ್ನೋದು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.
ಭೂಮಿಯ ಪ್ರಬಲ ಗುರತ್ವಾಕರ್ಷಣ ಬಲದಿಂದ ಈ ಕ್ಷುದ್ರಗ್ರಹವನ್ನು ತನ್ನತ್ತ ಸೆಳೆದುಕೊಂಡಿದೆ. ಹೀಗಾಗಿ ತಾತ್ಕಾಲಿಕವಾಗಿ ಈ ಕ್ಷುದ್ರ ಗ್ರಹ ಭೂಮಿ ಸುತ್ತು ತಾತ್ಕಾಲಿಕ ಚಂದ್ರನಂತೆ ಸುತ್ತುತ್ತಿದೆ. ಹಂಗೇರಿಯನ್ ಖಗೋಳಶಾಸ್ತ್ರಜ್ಞ ಕ್ರಿಸ್ಟಿಯನ್ ಸಾರ್ನೆಸ್ಕಿ ಈ ತಾತ್ಕಾಲಿಕ ಚಂದ್ರನ ಪತ್ತೆ ಹಚ್ಚಿದ್ದಾರೆ. ಹವಾಯಿ ವಿಶ್ವವಿದ್ಯಾಲದ 2.2 ಮೀಟರ್ ಟೆಲಿಸ್ಕೋಪ್ ಮೂಲಕ ಅಧ್ಯಯನ ನಡೆಸಿದಾಗ ಸಣ್ಣ ವಸ್ತುವೊಂದು ಚಂದ್ರನಂತೆ ಭೂಮಿಯ ಸುತ್ತು ಸುತ್ತುತ್ತಿರುವುದು ಪತ್ತೆಯಾಗಿದೆ. ಆರಂಭದಲ್ಲಿ ಇದು ಬಾಹ್ಯಾಕಾಶದ ತ್ಯಾಜ್ಯ ಎಂದು ವಿಜ್ಞಾನಿಗಳು ಸಂಶೋಧನೆಗೆ ಇಳಿದಿದ್ದಾರೆ. ಆದರೆ ಇದೊಂದು ಕ್ಷುದ್ರ ಗ್ರಹ ಅನ್ನೋದು ಅಧ್ಯಯನ ವೇಳೆ ಗೊತ್ತಾಗಿದೆ.
ಅಧ್ಯಯನ ವೇಳೆ ಇದೊಂದು ಸಣ್ಣ ಕ್ಷುದ್ರ ಗ್ರಹ ಅನ್ನೋದು ಖಚಿತವಾಗಿದೆ. ಭೂಮಿಯ ಗುರುತ್ವಾಕರ್ಷಣೆಯಿಂದ ಕಕ್ಷೆಯಲ್ಲಿ ಸಿಲುಕಿ ಭೂಮಿಗೆ ಪ್ರದಕ್ಷಿಣೆ ಹಾಕುತ್ತಿದೆ. ಆದರೆ ಚಂದ್ರನಂತೆ ವೃತ್ತಾಕಾರದಲ್ಲಿ ಈ ಮಿನಿ ಮೂನ್ ಚಲಿಸುತ್ತಿಲ್ಲ. ವಿಚಿತ್ರ ಆಕಾರದಲ್ಲಿ ಭೂಮಿಗೆ ಸುತ್ತು ಬರುತ್ತಿದೆ. ಮೂತ್ರ ಪಿಂಡದ ಆಕಾರದಲ್ಲಿ ಸುತ್ತಬರುತ್ತಿರುವ ಈ ಮಿನಿ ಮೂನ್ ಶಾಶ್ವತವಲ್ಲ.
ಮಿನಿ ಮೂನ್ ತಾತ್ಕಾಲಿಕ ಮಾತ್ರ. ಕಾರಣ ಭೂಮಿಯ ಕಕ್ಷೆ ಪ್ರವೇಶಿಸಿದ್ದರೂ ಇತರ ಗ್ರಹಗಳ ಪ್ರಭಾವಕ್ಕೆ ಈ ಮಿನಿ ಮೂನ್ ಉರಿದು ಭಸ್ಮವಾಗುವ ಸಾಧ್ಯತೆ ಇದೆ. ಭೂಮಿಯ ವಾತಾವರಣಕ್ಕೆ ಪ್ರವೇಶ ಪಡೆದರೂ ಸಹ ಮೇಲ್ಮೆಗೆ ಅಪ್ಪಳಿಸುವ ಮುನ್ನವೇ ಉರಿದು ಭಸ್ಮವಾಗುವ ಸಾಧ್ಯತೆ ಹೆಚ್ಚು. ಡಿಸೆಂಬರ್ ತಿಂಗಳ ವೇಳೆಗೆ ಭೂಮಿಯ ಗುರುತ್ವಾಕರ್ಷಣೆಯಿಂದ ಮುಕ್ತಿ ಪಡೆಯಲಿರುವ ಈ ಕ್ಷುದ್ರ ಗ್ರಹ, ಸೌರಮಂಡಲದಲ್ಲಿ ಸ್ವಚ್ಚಂದವಾಗಿ ಪಯಣ ಮುಂದುವರಿಸಲಿದೆ.
2026 QQ8 ಮಿನಿ ಮೂನ್ ಅಥವಾ ಕ್ಷುದ್ರ ಗ್ರಹ ಭೂಮಿಯ ಹತ್ತಿರದಿಂದ ಹಾದು ಹೋಗುವುದು ಇದೇ ಮೊದಲಲ್ಲ. ಪ್ರತಿ 10 ವರ್ಷಗಳಿಗೊಮ್ಮೆ ಈ ರೀತಿಯ ಕ್ಷುದ್ರ ಗ್ರಹ ಭೂಮಿಯ ಹತ್ತಿರದಿಂದ ಹಾದು ಹೋಗುತ್ತದೆ. ಆದರೆ ಈ ಹಿಂದೆ ಕಕ್ಷೆಗೆ ಪ್ರವೇಶ ಪಡೆದಿರಲಿಲ್ಲ. ಈ ಕ್ಷುದ್ರ ಗ್ರಹ ಕಕ್ಷೆ ಪ್ರವೇಶಿಸಿ ಭೂಮಿಯ ಸುತ್ತ ಸುತ್ತುತ್ತಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.