ಗಾಜಿನಂತ ಪಾರದರ್ಶಕ ತಲೆ, ಹೊಳೆಯುವ ಹಸಿರು ಕಣ್ಣಿನ ವಿಚಿತ್ರ ಮೀನು ಕ್ಯಾಮೆರಾದಲ್ಲಿ ಸೆರೆ

Published : Nov 02, 2026, 03:16 PM IST
Unusual Deep Sea Fish With Transparent Head Goes Viral

ಸಾರಾಂಶ

ವಿಜ್ಞಾನಿಗಳು ವಿಚಿತ್ರ ಮೀನನ್ನು ಪತ್ತೆ ಹಚ್ಚಿದ್ದಾರೆ. ತಲೆ ಸಂಪೂರ್ಣ ಪಾರದರ್ಶಕ, ಹೊಳೆಯುತ್ತಿರುವ ಹಸಿರು ಕಣ್ಣ, ತಲೆ ಸಂಪೂರ್ಣ ಭಾಗ ಎಲ್ಇಡಿ ಲೈಟ್‌ನಂತೆ ಹೊಳೆಯುತ್ತಿರುವ ವಿಚಿತ್ರ ಮೀನು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದೇ ಮೊದಲ ಬಾರಿಗೆ ಈ ಮೀನು ಪತ್ತೆಯಾಗಿದೆ.

ಸಮುದ್ರದ ಲಕ್ಷಾಂತರ ಜೀವಿಗಳಲ್ಲಿ ಮನುಷ್ಯನ ಕಣ್ಣಿಗೆ ಬಿದ್ದ ಜೀವಿಗಳು ಕಡಿಮೆ. ಆಳ ಸಮುದ್ರದಲ್ಲಿನ ರಹಸ್ಯವನ್ನು ಮಾನವನಿಗೆ ಭೇದಿಸಲು ಸಾಧ್ಯವಾಗಿಲ್ಲ. ಸಂಶೋಧನೆ ವೇಳೆ ವಿಜ್ಞಾನಿಗಳಿಗೆ ಹಲವು ಚಿತ್ರ ವಿಚಿತ್ರ ಜೀವಿಗಳು ಪತ್ತೆಯಾಗಿದೆ. ಇದೀಗ ವಿಜ್ಞಾನಿಗಳ ಕ್ಯಾಮೆರಾಗೆ ವಿಚಿತ್ರ ಮೀನೊಂದು ಪತ್ತೆಯಾಗಿದೆ. ಈ ಮೀನಿನ ತಲೆ ಪಾರದರ್ಶಕವಾಗಿದೆ. ಇಷ್ಟೇ ಅಲ್ಲ ಇಡೀ ತಲೆ ಎಲ್ಐಡಿ ಲೈಟ್‌ನಂತೆ ಹೊಳೆಯುತ್ತಿದೆ. ಕತ್ತಲಲ್ಲೂ ತಲೆ ಹಾಗೂ ಬಾಲ ಸ್ಪಷ್ಟವಾಗಿ ಗೋಚರಿಸುತ್ತದೆ. ಇನ್ನು ಹಸಿರು ಬಣ್ಣದ ಹೊಳೆಯುವ ಕಣ್ಣುಗಳನ್ನು ಈ ಮೀನು ಹೊಂದಿದೆ. ತಲೆ ಮಾತ್ರ ಪಾರದರ್ಶಕವಾಗಿದೆ. ಇನ್ನುಳಿದ ಭಾಗ ಇತರ ಮೀನುಗಳಂತೆ ಇದೆ. ಈ ವಿಚಿತ್ರ ಹಾಗೂ ಅಪರೂಪದ ಮೀನಿಗೆ ಬ್ಯಾರಲ್ಐಯ್ ಫಿಶ್ ಎಂದು ಕರೆಯುತ್ತಾರೆ.

ವಿಜ್ಞಾನಿಗಳ ಕ್ಯಾಮೆರಾದಲ್ಲಿ ವಿಚಿತ್ರ ಫಿಶ್

ಈ ವಿಚಿತ್ರ ಮೀನಿನ ಅದ್ಭುತ ದೃಶ್ಯ ವಿಜ್ಞಾನಿಗಳ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಮೆರಿಕದ ಮೊಂಟರೆ ಬೇ ಅಕ್ವೇರಿಯಂ ರಿಸರ್ಚ್ ಸಂಸ್ಥೆ ವಿಜ್ಞಾನಿಗಳ ತಂಡದ ಅಧ್ಯಯನದಲ್ಲಿ ಈ ಮೀನು ಪತ್ತೆಯಾಗಿದೆ. ಪೆಸಿಫಿಕ್ ಮಹಾಸಾಗರದ ಮೊಂಟೆರಿ ಕ್ಯಾನನ್‌ನಿಂದ 55 ಮೈಲಿ ದೂರದ ಸಾಗರದ ಆಳದಲ್ಲಿ ಸಂಶೋಧನೆ ನಡೆಸಲಾಗಿತ್ತು. ಹಡಗಿನ ಮೂಲಕ ವಿಜ್ಞಾನಿಗಳ ತಂಡ ತೆರಳಿ ಡಾಕ್ ರಿಕೆಟ್ಸ್ ಅನ್ನೋ ರಿಮೂಟ್ ಕಂಟ್ರೋಲ್ ವಾಹನದ ಮೂಲಕ ಸಂಶೋಧನೆ ನಡೆಸಲಾಗಿದೆ. ಈ ರಿಮೂಟ್ ಕಂಟ್ರೋಲ್ ವಾಹನವನ್ನು ಸಮುದ್ರದ ಆಳಕ್ಕೆ ಇಳಿಸಲಾಗಿದೆ. ಮಹಾಸಾಗರದಲ್ಲಿ 1,970 ಅಡಿ ಆಳದಲ್ಲಿ ಈ ಮೀನು ಪತ್ತೆಯಾಗಿದೆ.

ಸೂರ್ಯನ ಬೆಳಕು ಪ್ರವೇಶಿಸದಷ್ಟು ಆಳದಲ್ಲಿ ಈ ಮೀನುಗಳು ಸ್ವಚ್ಚಂದವಾಗಿ ಆಹಾರ ಹುಡುಕುತ್ತಾ ಸಾಗುತ್ತಿರುವ ದೃಶ್ಯಗಳು ಪತ್ತೆಯಾಗಿದೆ. ಈ ವಿಚಿತ್ರ ಮೀನು ಪತ್ತೆಯಾಗುತ್ತಿದ್ದಂತೆ ವಿಜ್ಞಾನಿಗಳ ತಂಡ ಈ ಮೀನನ್ನೇ ಕೇಂದ್ರಿಕರಿಸಿ ದೃಶ್ಯ ಸೆರೆ ಹಿಡಿದಿದ್ದಾರೆ. ರಿಮೋಟ್ ಕಂಟ್ರೋಲ್ ವಾಹನದಲ್ಲಿ ಅಳವಡಿಸಿದ್ದ ಕ್ಯಾಮೆರಾ ಮೂಲಕ ಮೀನಿನ ಚಲನವಲನಗಳನ್ನು ಸೆರೆ ಹಿಡಿದ್ದಾರೆ.

ಮಂದ ಬೆಳಕಿನಲ್ಲಿ ತಲೆಯ ಬೆಳಕಿನಿಂದ ಆಹಾರ ಹುಡುಕಾಟ

ಸಮುದ್ರದ ಆಳದಲ್ಲಿ ಈ ಮೀನುಗಳು ವಾಸಿಸುತ್ತವೆ. ಇದೇ ಕಾರಣಕ್ಕೆ ಇದರ ತಲೆ ಪಾರದರ್ಶಕವಾಗಿದ್ದು, ಕಣ್ಣುಗಳು ಹೊಳೆಯುತ್ತಿದೆ. ಕಣ್ಣು ಹಾಗೂ ಹೊಳೆಯುವ ತಲೆಯಿಂದ ಬರವು ಬೆಳಕಿನಲ್ಲಿ ಸಾಗರದ ಆಳದಲ್ಲಿ ಇದು ಆಹಾರ ಹುಡುಕುತ್ತವೆ. ಶತಮಾನಗಳ ಹಿಂದೆ ಈ ಮೀನುಗಳು ಮೀನುಗಾರರ ಬಲೆಗೆ ಬೀಳುತ್ತಿತ್ತು. ಆದರೆ ಆಳ ಸಮುದ್ರ ಮೀನುಗಾರಿಕೆ ಮಾಡುವರು ದಡ ಸೇರುವಾಗ ಈ ಪಾರದರ್ಶಕ ಮೀನಿನ ತಲೆ ನಶಿಸುತ್ತಿತ್ತು. ಪಾರದರ್ಶಕ ಕಾರಣ ಬಹುಬೇಗನೆ ಈ ಮೀನಿನ ತಲೆ ನಾಶವಾಗುತ್ತಿತ್ತು. ಬಲೆಯಲ್ಲಿ ಸಿಲುಕಿದ ಈ ಮೀನುಗಳನ್ನು ಎಸೆಯಲಾಗುತ್ತಿತ್ತು. ಬಳಿಕ ಈ ಮೀನುಗಳು ನಾಶವಾಗಿತ್ತು. ಈ ಮೀನುಗಳು ಇದುವರೆಗೆ ಎಲ್ಲೂ ಪತ್ತೆಯಾಗಿರಲಿಲ್ಲ. ಇದೀಗ ಸಾಗರದ ಆಳದಲ್ಲಿ ಈ ಮೀನುಗಳು ಮೊದಲ ಬಾರಿಗೆ ಜೀವಂತವಾಗಿ ಪತ್ತೆಯಾಗಿದೆ ಎಂದು ಸಂಶೋಧನಾ ತಂಡದ ವಿಜ್ಞಾನಿ ಸ್ಟೀವನ್ ಹ್ಯಾಡಾಕ್ ಹೇಳಿದ್ದಾರೆ.

ಸರಿಸುಮಾರು 6 ಇಂಚಿನಷ್ಟು ಉದ್ದವಿರುವ ಈ ಮೀನು ಸಮುದ್ರದ 2000 ದಿಂದ 2600 ಅಡಿ ಆಳದಲ್ಲಿ ಈ ಮೀನುಗಳು ಜೀವಿಸುತ್ತದೆ. ತಲೆ ಸಂಪೂರ್ಣವಾಗಿ ಪಾರದರ್ಶಕವಾಗಿದೆ. ಈ ಮೀನಿನ ತಲೆಯ ಒಳಗೆ ಏನೆಲ್ಲಾ ಇದೆ ಅನ್ನೋದು ಗಾಜಿನಂತೆ ಹೊರಗೆ ಕಾಣಿಸುತ್ತಿದೆ. ಜೊತೆಗೆ ಹೊಳೆಯುವ ಕಣ್ಣುಗಳು, ಮೀನಿನ ಬಾಲಗಳು ಸ್ಪಷ್ಟವಾಗಿ ಕಾಣಿಸುತ್ತದೆ.

ಕಳೆದ 40 ವರ್ಷದ ಸಮುದ್ರ ಸಂಶೋಧನೆಯಲ್ಲಿ ಒಟ್ಟು 10 ಬಾರಿ ಬಹಳ ದೂರದಿಂದ ಈ ಮೀನುಗಳು ಪತ್ತೆಯಾಗಿದೆ. ಆದರೆ ಇದುವರೆಗೂ ಸ್ಪಷ್ಟ ಚಿತ್ರಣ ಸಿಕ್ಕಿರಲಿಲ್ಲ. ಇದೇ ಮೊದಲ ಬಾರಿಗೆ ಈ ಮೀನಿನ ಕುರಿತು ಸ್ಪಷ್ಟ ವಿಡಿಯೋ ಲಭ್ಯವಾಗಿದೆ ಎಂದು ಹ್ಯಾಡಾಕ್ ಹೇಳಿದ್ದಾರೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಬಾಹ್ಯಾಕಾಶದಿಂದ ಭೂಮಿಗೆ ಬಂದು ಬಿತ್ತು ಮಂಗಳ ಗ್ರಹದ ಕಲ್ಲು.. ಬಿದ್ದಿದ್ದು ಎಲ್ಲಿ ಗೊತ್ತಾ?
ಕಾಗೆ ಅಥವಾ ಮಾನವ,ಯಾರಿಗಿದೆ ವೇಗವಾಗಿ ನಿರ್ಧಾರ ತಳೆಯುವ ಸಾಮರ್ಥ್ಯ? ಅಚ್ಚರಿಗೊಳಿಸಿದ ಅಧ್ಯಯನ