Chandrayaan 3: ಮುಂದಿನ ಮೂನ್‌ ಮಿಷನ್‌ ಚಂದ್ರಯಾನ-4, ಮಾಹಿತಿ ನೀಡಿದ ಇಸ್ರೋ ವಿಜ್ಞಾನಿ!

Published : Aug 23, 2023, 10:31 PM IST
Chandrayaan 3: ಮುಂದಿನ ಮೂನ್‌ ಮಿಷನ್‌ ಚಂದ್ರಯಾನ-4, ಮಾಹಿತಿ ನೀಡಿದ ಇಸ್ರೋ ವಿಜ್ಞಾನಿ!

ಸಾರಾಂಶ

ವಿಕ್ರಮ್‌ ಲ್ಯಾಂಡರ್‌ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಯುವುದರೊಂದಿಗೆ ಚಂದ್ರಯಾನ-3 ದೊಡ್ಡ ಮಟ್ಟದ ಯಶಸ್ಸು ಸಂಪಾದಿಸಿದೆ. ಹಾಗಂತ ಚಂದ್ರನ ಮೇಲೆ ಇಸ್ರೋದ ಕೊನೆಯ ಯೋಜನೆ ಇದಲ್ಲ. ಚಂದ್ರಯಾನ-4 ಬಗ್ಗೆ ಇಸ್ರೋ ವಿಜ್ಞಾನಿಯೇ ಮಾಹಿತಿ ನೀಡಿದ್ದಾರೆ.

ಬೆಂಗಳೂರು (ಆ.23): ಇಡೀ ಭಾರತದ ಕನಸು ವಿಕ್ರಮ್‌ ಲ್ಯಾಂಡರ್‌ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡ್‌ ಆಗುವ ಮೂಲಕ ಈಡೇರಿದೆ. ಹಾಗಂತ ಭಾರತದ ಚಂದ್ರ ಯೋಜನೆ ಇಲ್ಲಿಗೆ ಮುಗಿಯಿತಾ ಅಂದುಕೊಳ್ಳಬೇಡಿ. ಇದು ಆರಂಭ ಮಾತ್ರ. ಚಂದ್ರಯಾನ-3 ಯೋಜನೆಯ ದೊಡ್ಡ ಮಟ್ಟದ ಯಶಸ್ಸಿನ ಬೆನ್ನಲ್ಲಿಯೇ ಚಂದ್ರಯಾನ-4 ರ ಕನಸುಗಳನ್ನು ರೆಕ್ಕೆ ಬಿಡಲು ಆರಂಭಿಸಿದೆ. ಚಂದ್ರಯಾನ-3 ವಿಕ್ರಮ್‌ ಲ್ಯಾಂಡರ್‌ ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದ ಖುಷಿಯಲ್ಲಿದ್ದ ಈ ಯೋಜನೆಯ ಭಾಗವಾಗಿದ್ದ ಡೆಪ್ಯುಟಿ ಮಿಷನ್‌ ಡೈರೆಕ್ಟರ್‌ ಶ್ರೀಕಾಂತ್‌ ಅವರಿಗೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಇದೇ ಪ್ರಶ್ನೆಯನ್ನು ಮುಂದಿಟ್ಟಿತು. ಚಂದ್ರಯಾನ-3 ಯಶಸ್ವಿಯಾಗಿದೆ. ಮುಂದಿನ ಮೂನ್‌ ಪ್ರಾಜೆಕ್ಟ್‌ ಆಗಿ ಚಂದ್ರಯಾನ-4 ನಿರೀಕ್ಷೆ ಮಾಡಬಹುದೇ ಎನ್ನುವುದಕ್ಕೆ ಅವೆಲ್ಲವೂ ಇನ್ನೂ ಚರ್ಚಾ ಹಂತದಲ್ಲಿದೆ ಎಂದರು. ಅದರೊಂದಿಗೆ ಭಾರತದ ಚಂದ್ರಬೇಟೆ ಚಂದ್ರಯಾನ-3ರೊಂದಿಗೆ ಕೊನೆಯಾಗೋದಿಲ್ಲ. 'ಚಂದ್ರಯಾನ-4ರ ಬಗ್ಗೆ ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ. ಅದಿನ್ನೂ ಚರ್ಚಾ ಹಂತದಲ್ಲಿದೆ. ಮುಂದಿನ ಕೆಲ ವರ್ಷಗಳು ಅದಕ್ಕೆ ಬೇಕಾಗಬಹುದು' ಎಂದು ಶ್ರೀಕಾಂತ್‌ ತಿಳಿಸಿದ್ದಾರೆ. ಚಂದ್ರಯಾನ--2 ಹಾಗೂ ಮಾರ್ಸ್‌ ಆರ್ಬಿಟರ್‌ ಮಿಷನ್‌ ಯೋಜನೆಯಲ್ಲೂ ಶ್ರೀಕಾಂತ್‌ ಭಾಗವಾಗಿದ್ದರು.

ಆಂಧ್ರದ ವಿಶಾಖಪಟ್ಟಣ ಮೂಲದ ಶ್ರೀಕಾಂತ್‌ ಕಳೆದ 16 ವರ್ಷಗಳಿಂದ ಇಸ್ರೋದಲ್ಲಿ ಕೆಲಸ ಮಾಡುತ್ತದ್ದಾರೆ. ಚಂದ್ರಯಾನ-4 ಯೋಜನೆ 2026ರ ವೇಳೆಗೆ ಆರಂಭವಾಗಬಹುದು. ಇದಕ್ಕೆ ಭಾರತದ ಇಸ್ರೋ ಸಂಸ್ಥೆಯೊಂದಿಗೆ ಜಪಾನ್‌ನ ಜಾಕ್ಸಾ ಕೂಡ ಕೈಜೋಡಿಸಲಿದೆ. ಈ ಯೋಜನೆಗೆ ಭಾರತ ತನ್ನ ಲ್ಯಾಂಡರ್‌ ಅನ್ನು ನೀಡಲಿದ್ದರೆ, ಜಪಾನ್‌ ತನ್ನ ಶಕ್ತಿಶಾಲಿ ರಾಕೆಟ್‌ ಹಾಗೂ ರೋವರ್‌ಅನ್ನು ನೀಡಲಿದೆ ಎಂದು ವರದಿಯಾಗಿದೆ.

ಏನಿದು ಚಂದ್ರಯಾನ-4,ಅದರ ಮಾಹಿತಿ ಇಲ್ಲಿದೆ: ಚಂದ್ರಯಾನ-4ನ ಕೆಲಸಗಳು ಈಗಾಗಲೇ ಆರಂಭವಾಗಿದೆ. ಇದನ್ನು ಲುಪೆಕ್ಸ್‌ ಎಂದು ಕರೆಯಲಾಗಿದೆ. ಅದರರ್ಥ ಲೂನಾರ್‌ ಪೋಲಾರ್‌ ಎಕ್ಸ್‌ಪ್ಲೋರೇಷನ್‌ ಮಿಷನ್‌ (ಚಂದ್ರನ ಧ್ರುವ ಪರಿಶೋಧನೆ ಮಿಷನ್).ಇದು ರೋಬೋಟಿಕ್‌ ಯೋಜನೆಯಾಗಿದ್ದು ಭಾರತದೊಂದಿಗೆ ಜಪಾನ್‌ ಕೂಡ ಈ ಯೋಜನೆಗೆ ಹೆಗಲು ಕೊಡಲಿದೆ. ಜಪಾನ್‌ನ ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೋರೇಶನ್ ಏಜೆನ್ಸಿ ಅಥವಾ ಜಾಕ್ಸಾ ಜೊತೆ ಈಗಾಗಲೇ ಒಪ್ಪಂದವಾಗಿದ್ದು, ಚಂದ್ರಯಾನ-4ಗೆ ಬೇಕಾಗುವ ರೋವರ್‌ಗಳನ್ನು ನೀಡಲಿದೆ. ಚಂದ್ರನ ದಕ್ಷಿಣ ಧ್ರುವದ ಪರಿಶೋಧನೆಯೇ ಇದರ ಮುಖ್ಯ ಉದ್ದೇಶ. 2026ರ ವೇಳೆಗೆ ಈ ನೌಕೆ ಉಡಾವಣೆ ಮಾಡುವ ಯೋಜನೆ ರೂಪಿಸಲಾಗಿದೆ. ಇಷ್ಟು ಮಾತ್ರವಲ್ಲದೆ ತನ್ನ ಅಭಿವೃದ್ಧಿ ಹಂತದಲ್ಲಿರುವ ಎಚ್‌3 ಲಾಂಚ್‌ ವೆಹಿಕಲ್‌ ಅನ್ನು ಜಾಕ್ಸಾ ನೀಡಲಿದೆ. ಭಾರತ ತನ್ನ ಲ್ಯಾಂಡರ್‌ಅನ್ನು ಈ ಯೋಜನೆಗೆ ನೀಡಲಿದೆ.  ಇಸ್ರೋ ನೀಡಿರುವ ಮಾಹಿತಿಯ ಪ್ರಕಾರ ಈ ಯೋಜನೆಯು ಇನ್ನೂ ಪರಿಕಲ್ಪನೆಯ ಹಂತದಲ್ಲಿದೆ.

ಚಂದ್ರಯಾನ-3 ಆಯ್ತು.. ಚಂದ್ರಯಾನ-4ಗೆ ರೆಡಿಯಾದ ಇಸ್ರೋ!

2019ರ ಲ್ಯಾಡಿಂಗ್‌ ಪ್ರಯತ್ನದಲ್ಲಿ ಭಾರತದ ಲ್ಯಾಂಡರ್‌ ಚಂದ್ರನ ನೆಲದ ಮೇಲೆ ಕ್ರ್ಯಾಶ್‌ ಆಗಿತ್ತು. ಈ ಬಾರಿ ಭಾರತ ಚಂದ್ರಯಾನ-3 ಜೊತೆ ಮತ್ತೊಮ್ಮೆ ಪ್ರಯತ್ನ ಮಾಡಿ ಯಶಸ್ವಿಯಾಗಿದೆ. ಲ್ಯಾಂಡರ್‌ನ ಯಶಸ್ಸು ಮುಂದಿನ ಲುಪೆಕ್ಸ್‌ ಅಥವಾ ಚಂದ್ರಯಾನ-4ಗೆ ಬಹುದೊಡ್ಡ ಲಾಭವಾಗಲಿದೆ. ಈ ನಡುವೆ 2019ರ ಸೆಪ್ಟೆಂಬರ್‌ 24 ರಂದು ಜಾಕ್ಸಾ ಹಾಗೂ ನಾಸಾ ಜಂಟಿ ಹೇಳಿಕೆ ನೀಡಿದ್ದವು. ಈ ವೇಳೆ ಚಂದ್ರಯಾನ-4 ಯೋಜನೆಗೆ ನಾಸಾ ಭಾಗಿಯಾಗುವ ಬಗ್ಗೆ ಮಾತುಕತೆ ನಡೆಸಲಾಗಿತ್ತು.

ನಾಲ್ಕೇ ದಿನದಲ್ಲಿ ಚಂದ್ರನತ್ತ ಹೋಗುತ್ತೆ ಅಮೆರಿಕಾ, ಭಾರತಕ್ಕೆ ಏಕೆ 42 ದಿನ?

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಖಗೋಳ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ