
ದಾವಣಗೆರೆ(ಅ.12): ಅಮೆರಿಕದ ಸ್ಟ್ಯಾನ್ ಫೋರ್ಡ್ ವಿಶ್ವ ವಿದ್ಯಾನಿಲಯವು ಸಿದ್ಧಪಡಿಸಿದ ವಿಶ್ವದ ಉನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯದ ಗಣಿತ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ಬಿ.ಸಿ.ಪ್ರಸನ್ನಕುಮಾರ್ ಸೇರಿ ಆರು ಮಂದಿ ಪ್ರಾಧ್ಯಾಪಕರು, ಸಂಶೋಧನಾರ್ಥಿಗಳು ಸ್ಥಾನ ಪಡೆದಿದ್ದಾರೆ. ಸ್ಟ್ಯಾನ್ ಫೋರ್ಡ್ ವಿವಿಯ ಜಾಗತಿಕ ಮಟ್ಟದ ಶ್ರೇಷ್ಠ ಶೇ.2ರಷ್ಟು ವಿಜ್ಞಾನಿಗಳ ಪಟ್ಟಿಯಲ್ಲಿ ಪ್ರೊ.ಬಿ.ಸಿ.ಪ್ರಸನ್ನಕುಮಾರ್, ಪ್ರೊ.ಡಿ.ಜಿ.ಪ್ರಕಾಶ್ ಅವರು ಸ್ಥಾನ ಪಡೆಯುತ್ತಿರುವುದು ಇದು ಸತತ 2ನೇ ಬಾರಿ. 2020ನೇ ಸಾಲಿನಲ್ಲಿ ಪಟ್ಟಿಯಲ್ಲೂ ಈ ಇಬ್ಬರೂ ಪ್ರಾಧ್ಯಾಪಕರು ಸ್ಥಾನ ಪಡೆದಿದ್ದರು.
ಯಾರ‍್ಯಾರು?:
ಪ್ರೊ.ಬಿ.ಸಿ.ಪ್ರಸನ್ನಕುಮಾರ್(ಶಾಖ ಮತ್ತು ಸಮೂಹ ವರ್ಗಾವಣೆ, ಸಂಖ್ಯಾತ್ಮಕ ವಿಶ್ಲೇಷಣೆ, ಘನ ಚಲನಶಾಸ್ತ್ರ, ದ್ರವ ಚಲನಶಾಸ್ತ್ರ), ಪ್ರೊ.ಡಿ.ಜಿ.ಪ್ರಕಾಶ್ (ಭೇದಾತ್ಮಕ ರೇಖಾಗಣಿತ, ಭಿನ್ನರಾಶಿ, ಕಲನಶಾಸ್ತ್ರ, ಅನ್ವಯಿಕ ಗಣಿತ ಶಾಸ್ತ್ರ, ವಿಭಿನ್ನ ಸಮೀಕರಣಗಳಿಗೆ ಪರಿಹಾರ), ಪ್ರೊ.ಯು.ಎಸ್.ಮಹಾಬಲೇಶ್ವರ್ (ಶಾಖ ಮತ್ತು ಸಮೂಹ ವರ್ಗಾವಣೆ, ದ್ರವ ಚಲನಶಾಸ್ತ್ರ), ಡಾ.ಕೆ.ಗಣೇಶ್ ಕುಮಾರ್(ಶಾಖ ಮತ್ತು ಸಮೂಹ ವರ್ಗಾವಣೆ, ದ್ರವ ಚಲನಶಾಸ್ತ್ರ) ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನಪಡೆದ ಪ್ರಾಧ್ಯಾಪಕರು.
ALIEN NEWS: ಡಿಸೆಂಬರ್ 8ಕ್ಕೆ ಭೂಮಿಗೆ ಬರಲಿದ್ದಾರೆ ಅನ್ಯಗ್ರಹ ಜೀವಿಗಳು!
ಇವರ ಜತೆಗೆ ಸಂಶೋಧನಾರ್ಥಿಗಳಾದ ಆರ್.ಜೆ.ಪುನೀತ್ ಗೌಡ(ದ್ರವ ಚಲನಶಾಸ್ತ್ರ), ಆರ್.ನವೀನ್ ಕುಮಾರ್(ಶಾಖ ಮತ್ತು ಸಮೂಹ ವರ್ಗಾವಣೆ, ದ್ರವ ಚಲನಶಾಸ್ತ್ರ) ಅವರೂ ವಿಶ್ವ ಉನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಗುಣಮಟ್ಟದ ಸಂಶೋಧನೆ, ಸಂಶೋಧನಾ ವರದಿ, ಸಂಶೋಧನಾ ಉಲ್ಲೇಖಗಳು, ಲೇಖನಗಳನ್ನು ಒಳಗೊಂಡ ಎಚ್-ಇಂಡೆಕ್ಸ್, ಐ-ಟೆನ್ ಇಂಡೆಕ್ಸ್ ಸೇರಿ ವಿವಿಧ ಮಾನದಂಡಗಳನ್ನು ಪರಿಗಣಿಸಿ, ಪಟ್ಟಿಸಿದ್ಧಪಡಿಸಲಾಗಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.