ಮಂತ್ರಾಲಯ ರಾಯರ ಆಶೀರ್ವಾದ ಪಡೆದ 'ಯುವರತ್ನ' ಪುನೀತ್

Published : Apr 05, 2021, 06:40 PM IST
ಮಂತ್ರಾಲಯ ರಾಯರ ಆಶೀರ್ವಾದ ಪಡೆದ 'ಯುವರತ್ನ' ಪುನೀತ್

ಸಾರಾಂಶ

ಯುವರತ್ನ ಯಶಸ್ಸಿನ ಖುಷಿಯಲ್ಲಿ ಮಂತ್ರಾಲಯಕ್ಕೆ ಭೇಟಿ ಕೊಟ್ಟ ಪುನೀತ್ ರಾಜ್ ಕುಮಾರ್/ ಪುನೀತ್ ಜೊತೆ ಯುವರತ್ನ ಚಿತ್ರತಂಡ ಭಾಗಿ/ ಇಂದು ಬೆಳಗ್ಗೆ ರಾಯರ ದರ್ಶನ ಪಡೆದ ಯುವರತ್ನ ಚಿತ್ರತಂಡ/ ನಿರ್ದೇಶಕ ಸಂತೋಷ್ ಆನಂದ್ ರಾಮ್, ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ, ಡೈರೆಕ್ಟರ್ ಯೋಗಿ ಜಿ ರಾಜ್ ಮಂತ್ರಾಲಯಕ್ಕೆ ಭೇಟಿ

ಮಂತ್ರಾಲಯ(ಏ. 05)  ಯುವರತ್ನ ಯಶಸ್ಸಿನ ಖುಷಿಯಲ್ಲಿ ಮಂತ್ರಾಲಯಕ್ಕೆ ಭೇಟಿ ಕೊಟ್ಟ  ನಟ ಪುನೀತ್ ರಾಜ್ ಕುಮಾರ್ ರಾಯರ ಆಶೀರ್ವಾದ ಪಡೆದುಕೊಂಡಿದ್ದಾರೆ. ಪುನೀತ್ ಜೊತೆ ಯುವರತ್ನ ಚಿತ್ರತಂಡ ಸಹ ತೆರಳಿತ್ತು.

ಸೋಮವಾರ ಬೆಳಗ್ಗೆ ರಾಯರ ದರ್ಶನವನ್ನು ಚಿತ್ರತಂಡ ಪಡೆದುಕೊಂಡಿತು. ನಿರ್ದೇಶಕ ಸಂತೋಷ್ ಆನಂದ್ ರಾಮ್, ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ, ಡೈರೆಕ್ಟರ್ ಯೋಗಿ ಜಿ ರಾಜ್  ಪುನೀತ್ ಜತೆಗಿದ್ದರು. ರಾಘವೇಂದ್ರ ಸ್ವಾಮಿಗಳ ಮಠಾಧೀಶರಾದ ಸುಭುದೇಂದ್ರ ತೀರ್ಥ ಸ್ವಾಮೀಜಿಗಳ ಆಶೀರ್ವಾದ ಪಡೆದುಕೊಂಡಿತು.

ಯುವರತ್ನ ಹೇಗಿದೆ? ಜೋಗಿ ವಿಮರ್ಶೆ

ಕೊರೋನಾ ಪ್ರಕರಣಗಳು ಕರ್ನಾಟಕದಲ್ಲಿ ಮಿತಿಮೀರಿದ ಕಾರಣ ಸರ್ಕಾರ ಕಟ್ಟುನಿಟ್ಟಿನ ಕ್ರಮ ಜಾರಿ ಮಾಡಿದೆ. ಸಿನಿಮಾ ಮಂದಿರಗಳಲ್ಲಿ ಶೇ.  50  ಸೀಟು ಭರ್ತಿಗೆ ಮಾತ್ರ ಅವಕಾಶ ಎನ್ನಲಾಗಿತ್ತು. ಸದಭಿರುಚಿಯ ಯುವರತ್ನ ಚಿತ್ರ ಮುನ್ನುಗ್ಗುತ್ತಿದ್ದು ಪುನೀತ್ ರಾಜ್ ಕುಮಾರ್ ಆದಿಯಾಗಿ ಸ್ಯಾಂಡಲ್ ವುಡ್ ಮಂದಿ ವಿರೋಧ ಮಾಡಿದ್ದರು.

ಜಿಮ್ ಮತ್ತು ಸ್ವಿಮಿಂಗ್ ಪೂಲ್ ಗಳ ಮೇಲೆಯೂ ಸರ್ಕಾರ ನಿರ್ಬಂಧ ವಿಧಿಸಿತ್ತು. ಅನೇಕ ಸುತ್ತಿನ ಚರ್ಚೆ ನಂತರ ಸರ್ಕಾರ ನಿರ್ಧಾರ ಹಿಂದಕ್ಕೆ ಪಡೆದಿದ್ದು ಪರಿಸ್ಥಿತಿ ನೋಡಿ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಆಂಧ್ರಪ್ರದೇಶದ X MLA Gummadi Narsaiah ಮನೆಗೆ ಹೋದಾಗ ನನ್ನ ತಂದೆ ಬಳಿಗೆ ಹೋದಂತಾಯ್ತು: Shiva Rajkumar
ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್