ಜನ್ಮದಿನಕ್ಕೂ ಮುನ್ನ ಲೈವ್ ಬಂದ ಯುವರತ್ನ, ನೀವ್ ಬರಬೇಡಿ ನಾನೇ ಬರ್ತೇನೆ

Published : Mar 15, 2021, 06:43 PM IST
ಜನ್ಮದಿನಕ್ಕೂ ಮುನ್ನ ಲೈವ್ ಬಂದ ಯುವರತ್ನ, ನೀವ್ ಬರಬೇಡಿ ನಾನೇ ಬರ್ತೇನೆ

ಸಾರಾಂಶ

ಫೇಸ್ ಬುಕ್ ಲೈವ್ ಬಂದ ಯುವರತ್ನ/ ಜನ್ಮದಿನಾಚರಣೆ ಒಂದು ವಿಚಾರ ತಿಳಿಸಿದ ಪವರ್ ಸ್ಟಾರ್/ ನಾನು ಮನೆಯಲ್ಲಿ ಅಂದು ಇರುವುದಿಲ್ಲ/ ಎಲ್ಲರೂ ಕೊರೋನಾ ನಿಯಮ ಪಾಲನೆ ಮಾಡಿ

ಬೆಂಗಳೂರು( ಮಾ. 15) ಪುನೀತ್ ರಾಜ್ ಕುಮಾರ್ ಲೈವ್ ಬಂದಿದ್ದಾರೆ. ಅನೇಕ ವಿಚಾರಗಳನ್ನು ಹೇಳಿದ್ದಾರೆ. ನನ್ನ ಜನ್ಮದಿನ ಮಾರ್ಚ್ (17)  ಯಾರೂ ದಯವಿಟ್ಟು ಮನೆಗೆ ಬರಬೇಡಿ ಎಂದು ವಿನಂತಿ ಮಾಡಿಕೊಂಡಿದ್ದಾರೆ.

ಈ ಬಾರಿ ನನ್ನ ಜನ್ಮದಿನದಂದು ನಾನು ಮನೆಯಲ್ಲಿ ಇರುವುದಿಲ್ಲ. ಕುಟುಂಬದೊಂದಿಗೆ ದೇವಾಲಯಕ್ಕೆ ತೆರಳಿದ್ದೇನೆ ಹಾಗಾಗಿ ಯಾರೂ ಬರುವುದು ಬೇಡ ಎಂದಿದ್ದಾರೆ. ಜತೆಗೆ ಇನ್ನೊಂದು ವಿಚಾರವನ್ನು ಹೇಳಿದ್ದಾರೆ.

ಸಖತ್ತಾಗಿ ಅಡುಗೆ ಕಲಿತ ಪುನೀತ

ಮೈಸೂರಿನಲ್ಲಿ ಮಾರ್ಚ್  20  ರಂದು ಆಯೋಜನೆ ಮಾಡಿದ್ದ ಯುವರತ್ನ ಸಂಭ್ರಮ ಕಾರ್ಯಕ್ರಮ ರದ್ದಾಗಿದೆ. ನಾನೇ ಎಲ್ಲ ಜಿಲ್ಲೆಗೆ ಬಂದು ನಿಮ್ಮನ್ನು  ಭೇಟಿ ಮಾಡಲಿದ್ದೇನೆ. ಒಂದು ಜಿಲ್ಲೆಗೆ ಸೀಮಿತ  ಮಾಡುವುದು ಬೇಡ. ಯಾವ ದಿನಾಂಕದಂದು ಯಾವ ಜಿಲ್ಲೆ ಎಂಬುದನ್ನು ನಮ್ಮ ತಂಡ ತಿಳಿಸಲಿದೆ ಎಂದಿದ್ದಾರೆ.

ಏಪ್ರಿಲ್  1  ರಂದು ಯುವರತ್ನ ತೆರೆಕಾಣಲಿದೆ. ಪುನೀತ್ ಅಭಿಮಾನಿಗಳಲ್ಲಿ ಹೆಚ್ಚಿನ ನಿರೀಕ್ಷೆ ಮೂಡಿಸಿದ್ದು ಅವರ ಗಡ್ಡದಾರಿ ಲುಕ್ ಈಗಾಗಲೇ ಟ್ರೆಂಡ್ ಆಗಿದೆ .

 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಆರ್ಯನ್ ಖಾನ್‌ಗೆ ಝೈದ್ ಖಾನ್ ಸಪೋರ್ಟ್; ಆದ್ರೂ ಪಬ್ಲಿಕ್‌ ಪ್ಲೇಸ್‌ನಲ್ಲಿ 'ಮಿಡ್ಲ್ ಫಿಂಗರ್' ಎತ್ತಿದ್ದು ತಪ್ಪು ಅಂತಿರೋ ನೆಟ್ಟಿಗರು!
ರಿಷಬ್ ಶೆಟ್ಟಿ ದೈವದ ಮುಂದೆ ಅತ್ಬಿಟ್ರಾ? ಅಳಬೇಡ ಅಂತ ಸಂತೈಸಿದ್ದೇಕೆ ಪಂಜುರ್ಲಿ ದೈವ?