ನಾನು ಜಗಳವಾಡುತ್ತೇನೆ, ನನ್ನಿಂದಾನೇ ಆಗೋದು, ಬೇರೆಯವರಿಂದ ಅಲ್ಲ; ಸತೀಶ್ ನೀನಾಸಂ ಹೇಳಿಕೆ ವೈರಲ್!

By Shriram Bhat  |  First Published Apr 7, 2024, 9:50 PM IST

'ಹೌದು, ನಾನು ಜಗಳಗಳನ್ನು ಆಡ್ತೀನಿ, ಆಡಲ್ಲ ಅಂತೇನಿಲ್ಲ. ನಾನು ಸ್ವಲ್ಪ ಸ್ಟ್ರೈಟ್ ಫಾರ್ವಡ್‌ ಆಗಿರೋದ್ರಿಂದ, ಏನೇ ಇದ್ದರೂ ನೇರವಾಗಿ ಮಾತಾಡೋದ್ರಿಂದ ಸಾಕಷ್ಟು ಸಮಯ ಜಗಳಗಳು ಆಗ್ತವೆ. ಜಗಳಗಳು ನನ್ನಿಂದಾನೇ ಆಗೋದು, ಬೇರೆಯವರಿಂದ ಅಲ್ಲ...'


ಸ್ಯಾಂಡಲ್‌ವುಡ್ ನಟ ಸತೀಶ್ ನೀನಾಸಂ (Sathish Ninasam)ಅವರು 'ತಾನು ಜಗಳ ಆಡುತ್ತೇನೆ' ಎಂದಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡುತ್ತ ನಟ ಸತೀಶ್ ನೀನಾಸಂ, ನಿರೂಪಕಿ ಕೇಳಿದ ಪ್ರಶ್ನೆಗೆ ಉತ್ತರಿಸುತ್ತ 'ಹೌದು ನಾನು ಜಗಳ ಆಡುತ್ತೇನೆ' ಎಂದಿದ್ದಾರೆ. ಜಗಳ ಆಡುತ್ತೇನೆ ಎಂದಿರುವ ನಟ ನೀನಾಸಂ ಸತೀಶ್, ಅದಕ್ಕೆ ಸವಿವರವಾದ ಉತ್ತರವನ್ನೂ ಕೊಟ್ಟಿದ್ದಾರೆ.  ಹಾಗಿದ್ದರೆ, ಸತೀಶ್ ಹೇಳಿದ್ದಾದರೂ ಏನು? ಅವರಾಡುವ ಜಗಳಕ್ಕೆ ಕಾರಣವಾದರೂ ಏನು ಎಂಬುದನ್ನು ಸ್ವಲ್ಪ ನೋಡಬಹುದು.

'ಹೌದು, ನಾನು ಜಗಳಗಳನ್ನು ಆಡ್ತೀನಿ, ಆಡಲ್ಲ ಅಂತೇನಿಲ್ಲ. ನಾನು ಸ್ವಲ್ಪ ಸ್ಟ್ರೈಟ್ ಫಾರ್ವಡ್‌ ಆಗಿರೋದ್ರಿಂದ, ಏನೇ ಇದ್ದರೂ ನೇರವಾಗಿ ಮಾತಾಡೋದ್ರಿಂದ ಸಾಕಷ್ಟು ಸಮಯ ಜಗಳಗಳು ಆಗ್ತವೆ. ಜಗಳಗಳು ನನ್ನಿಂದಾನೇ ಆಗೋದು, ಬೇರೆಯವರಿಂದ ಅಲ್ಲ' ಎಂದಿದ್ದಾರೆ ನಟ ಸತೀಶ್ ನೀನಾಸಂ. 'ನಾನು ಖಂಡಿತ ಜಗಳ ಆಡ್ತೀನಿ, ಅದ್ರಲ್ಲಿ ಡೌಟೇನೂ ಇಲ್ಲ. 

Tap to resize

Latest Videos

ನಾನು ಬೆಳೆದ ಎರಡೂ ಧರ್ಮಗಳಲ್ಲಿ ನಂಬಿಕೆ ಹೊಂದಿದ್ದೇನೆ; ನಟಿ ಮೇಘನಾ ರಾಜ್ ಮಾತಿನ ಮರ್ಮವೇನಿದೆ?

ನಾನು ಕೆಲಸಗಳಿಗೆ ಜಗಳ ಆಡ್ತೀನಿ, ನಾನು ಸಿನಿಮಾ ವಿಚಾರವಾಗಿ ಜಗಳ ಆಡ್ತೀನಿ, ಸಾಂಗ್ ಚೆನ್ನಾಗಿ ಬಂದಿಲ್ಲ ಅಂದ್ರೆ ಜಗಳ ಆಡ್ತೀನಿ, ಶೂಟಿಂಗ್ ಟೈಮ್ ಕರೆಕ್ಟಾಗಿ ಶುರುವಾಗಿಲ್ಲ ಅಂದ್ರೆ ಜಗಳ ಆಡ್ತೀನಿ, ನಂಗೆ ಚೆನ್ನಾಗಿ ಸ್ಕ್ರಿಪ್ಟ್ ಮಾಡಿಲ್ಲ ಅಂದ್ರೆ ಜಗಳ ಆಡ್ತೀನಿ, ಪ್ರೊಪೆಶನಲ್ ಆಗಿ ಇಲ್ಲ ಅಂದ್ರೆ ಜಗಳ ಆಡ್ತೀನಿ, ಶಿಸ್ತಿಲ್ಲ ಅಂದ್ರೆ ಜಗಳ ಆಡ್ತೀನಿ, ಈ ವಿಚಾರಗಳಿಗೆ ಜಗಳ ಆಡ್ತೀನಿ. ನಾನ್ಯಾವತ್ತೂ ಇಂಟರ್‌ಫಿಯರ್ ಆಗಲ್ಲ, ಇನ್‌ವಾಲ್ವ್‌ ಆಗ್ತೀನಿ' ಎಂದು ತಮ್ಮ ಜಗಳಗಳಿಗೆ ಸಮಜಾಯಿಶಿ ಕೂಡ ಕೊಟ್ಟಿದ್ದಾರೆ. 

'ಬೊಂಬಾಟ್ ಭೋಜನ'ದಲ್ಲಿ ಯುಗಾದಿ ಸಂಭ್ರಮ, ಹಬ್ಬದೂಟಕ್ಕೆ ಆಗಮಿಸಿದ ಸ್ಯಾಂಡಲ್‌ವುಡ್ ಸ್ಟಾರ್ಸ್!

ನಟ ನೀನಾಸಂ ಸತೀಶ್ ಅವರು 'ಡ್ರಾಮಾ', ಲೂಸಿಯಾ ಸೇರಿದಂತೆ ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ರಚಿತಾ ರಾಮ್ ಹಾಗು ಸತೀಶ್ ನೀನಾಸಂ ಜೋಡಿಯ 'ಅಯೋಗ್ಯ' ಸಿನಿಮಾ ಸಾಕಷ್ಟು ಮೆಚ್ಚುಗೆ ಗಳಿಸಿತ್ತು. ಇತ್ತೀಚೆಗೆ ಸತೀಶ್ ನೀನಾಸಂ ಸಿನಿಮಾಗಳು ತೆರೆಗೆ ಬಂದಿದ್ದು ತುಂಬಾ ಕಡಿಮೆಯೆಂದೇ ಹೇಳಬೇಕು. ಅದಕ್ಕೆ ಕಾರಣ, ಅವರು ಈಗ ಸಿನಿಮಾ ಆಯ್ಕೆಯ ವಿಷಯದಲ್ಲಿ ತುಂಬಾ ಚೂಸಿಯಾಗಿರುವುದು ಎನ್ನಲಾಗಿದೆ. ಸದ್ಯ 'ಅಯೋಗ್ಯ 2' ಸಿನಿಮಾದಲ್ಲಿ ಬ್ಯುಸಿಯಾಗಿರುವ ನಟ ಸತೀಶ್ ನೀನಾಸಂ ಮುಂದಿನ ನಡೆ ಏನಿರಬಹುದು ಎಂಬ ಕುತೂಹಲ ಹಲವರ ತಲೆಯಲ್ಲಿದೆ. 

25 ದಿನ ಪೂರೈಸಿದ ದೀಕ್ಷಿತ್ ಶೆಟ್ಟಿಯ 'ಬ್ಲಿಂಕ್' ಸಿನಿಮಾ; ಪ್ರೇಕ್ಷಕರು ಅಪ್ಪಿಕೊಂಡು ಗೆಲ್ಲಿಸಿದರು ಎಂದ ಟೀಮ್!

click me!