
ನಟಿ ಮೇಘನಾ ರಾಜ್ (Meghana Raj) ಧರ್ಮ ಮತ್ತು ಸಂಪ್ರದಾಯಗಳ ಬಗ್ಗೆ ಮಾತನಾಡಿರುವ ವೀಡಿಯೋವೊಂದು ಸೋಷಿಯಲ್ ಮೀಡಿಯಾ (Social Media) ಗಳಲ್ಲಿ ವೈರಲ್ ಆಗುತ್ತಿದೆ. ಕೆಲವು ಸಂಪ್ರದಾಯಗಳಿಗೆ ಅದರದ್ದೇ ಆದ ವೈಜ್ಞಾನಿಕ ಕಾರಣವಿದೆ. ಅಂಥದ್ದನ್ನು ನಾನು ಒಪ್ಪಿಕೊಂಡು ಅನುಸರಿಸುತ್ತೇನೆ ಎಂದಿದ್ದಾರೆ ನಟಿ ಮೇಘನಾ ರಾಜ್. ಸಂದರ್ಶನವೊಂದರಲ್ಲಿ ಮಾತನಾಡಿರುವ ನಟಿ ಮೇಘನಾ ರಾಜ್ ಈ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.
'ಮದುವೆಯಾದಾಗ ಟೋ ರಿಂಗ್ ಹಾಕ್ಕೋಬೇಕು ಅಂತಾರೆ, ಅದ್ರ ಹಿಂದೆ ಸೈಂಟಿಪಿಕ್ ರೀಸನ್ ಇದೆ. ನಿಜವಾಗಿ ಹೇಳಬೇಕು ಅಂದ್ರೆ, ಹಲವಾರು ಪದ್ಧತಿಗಳಿಗೆ ಸೈಂಟಿಫಿಕ್ ರೀಸನ್ ಇದೆ, ಅದನ್ನು ನಾನು ಫಾಲೋ ಮಾಡ್ತೀನಿ. ಅದನ್ನು ಯಾರೋ ಸುಮ್ನೆ ಒತ್ತಾಯಕ್ಕೆ ಪ್ರಾಕ್ಟೀಸ್‌ಗೆ ತಂದಿದ್ದು ಅಲ್ಲ. ಅದೊಂದು ಸುಮ್ನೆ ಮೆಟಲ್ ಪೀಸ್ ಅಲ್ಲ, ಅದ್ರ ಹಿಂದೆ ಸರಿಯಾದ ವೈಜ್ಞಾನಿಕ ಕಾರಣವಿದೆ. ಆದರೆ ಯಾರೋ ಬಂದು ಸುಮ್ನೆ ಏನೋ ಒಂದು ಹಾಕ್ಕೋ ಅಂದ್ರೆ ನಾನು ಹಾಕ್ಕೊಳ್ಳೋದಿಲ್ಲ, ಯಾಕಂದ್ರೆ ಯಾವ್ದನ್ನೂ ದೇವ್ರು ಬಂದು ಹೇಳೋದಿಲ್ಲ.
25 ದಿನ ಪೂರೈಸಿದ ದೀಕ್ಷಿತ್ ಶೆಟ್ಟಿಯ 'ಬ್ಲಿಂಕ್' ಸಿನಿಮಾ; ಪ್ರೇಕ್ಷಕರು ಅಪ್ಪಿಕೊಂಡು ಗೆಲ್ಲಿಸಿದರು ಎಂದ ಟೀಮ್!
ಸರಿಯಾದ ವೈಜ್ಞಾನಿಕ ಕಾರಣ ಹೇಳಿದ್ರೆ ನಾನು ಯಾವ ಸಂಪ್ರದಾಯಾನೇ ಆದ್ರೂ ಒಪ್ಕೋತೀನಿ, ಯಾವುದೇ ಪದ್ಧತಿ ಹೇಳಿದ್ರೂ ನಾನು ಅನುಸರಿಸ್ತೀನಿ. ನಾನು ಬೆಳೆದ ಎರಡೂ ಧರ್ಮಗಳಲ್ಲಿ ನಾನು ಶ್ರದ್ಧೆ, ನಂಬಿಕೆ ಹೊಂದಿದ್ದೇನೆ' ಎಂದಿದ್ದಾರೆ ನಟಿ ಮೇಘನಾ ರಾಜ್. ಮಲಯಾಳಂ ಸಿನಿಮಾಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡಿರುವ ಮೇಘನಾ ರಾಜ್, ಕನ್ನಡದಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ರಾಜಾಹುಲಿ' ಚಿತ್ರದಲ್ಲಿ ನಟಿಸಿದ್ದಾರೆ. ಕನ್ನಡ ಮೂಲದ ನಟಿಯಾಗಿದ್ದರೂ ಮೇಘನಾ ಹೆಚ್ಚಾಗಿ ಕಾಣಿಸಿಕೊಂಡಿದ್ದು ಮಲಯಾಳಂ ಸಿನಿಮಾರಂಗದಲ್ಲಿ ಎಂಬುದು ಗಮನಿಸಬೇಕಾದ ಸಂಗತಿ.
'ಬೊಂಬಾಟ್ ಭೋಜನ'ದಲ್ಲಿ ಯುಗಾದಿ ಸಂಭ್ರಮ, ಹಬ್ಬದೂಟಕ್ಕೆ ಆಗಮಿಸಿದ ಸ್ಯಾಂಡಲ್‌ವುಡ್ ಸ್ಟಾರ್ಸ್!
ಅಂದಹಾಗೆ, ನಟಿ ಮೇಘನಾ ರಾಜ್ ಅವರು ಮತ್ತೆ ನಟನೆ ಪ್ರಾರಂಭಿಸಿದ್ದಾರೆ. ಕಿರುತೆರೆ ಸೇರಿದಂತೆ, ಸಿನಿಮಾಗಳಲ್ಲಿ ಕೂಡ ನಟಿ ಮೇಘನಾ ರಾಜ್ ಮತ್ತೆ ಅಭಿನಯ ಶುರು ಮಾಡಿದ್ದಾರೆ. ಮಗುವಾದ ಬಳಿಕ ಸಹಜ ಎಂಬಂತೆ, ಮಗುವಿನ ಪಾಲನೆ-ಪೋಷಣೆ ನಿರ್ವಹಿಸಲು ಸ್ವಲ್ಪ ಕಾಲ ಬಣ್ಣದ ಬದುಕಿನಿಂದ ದೂರವಿದ್ದರು. ಈಗ ಮತ್ತೆ ಮೇಕಪ್ ಹಚ್ಚಿ ಕ್ಯಾಮೆರಾ ಮುಂದೆ ನಿಲ್ಲತೊಡಗಿದ್ದಾರೆ. ಈ ಕಾರಣದಿಂದ ನಟಿ ಮೇಘನಾ ರಾಜ್ ಅಭಿಮಾನಿಗಳು ಖುಷಿಯಾಗಿದ್ದಾರೆ.
ಸದ್ಯದಲ್ಲೇ ನೆನಪಿರಲಿ ಪ್ರೇಮ್-ಮಾನ್ವಿತಾ ಹರೀಶ್ ಜೋಡಿಯ 'ಅಪ್ಪಾ ಐ ಲವ್ ಯೂ' ತೆರೆಗೆ ಎಂಟ್ರಿ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.