
-ಹೀಗೊಂದು ಪ್ರಶ್ನೆ ಎದ್ದಿದೆ. ಕೆಲವು ದಿನಗಳಿಂದ ಸ್ಯಾಂಡಲ್‌ವುಡ್‌ನಲ್ಲೂ ಚರ್ಚೆ ಆಗುತ್ತಿದೆ. ಕಾಂಗ್ರೆಸ್‌ನ ಐಟಿ ಸೆಲ್ ಜವಾಬ್ದಾರಿಯಿಂದ ದೂರವಾದ ಬಳಿಕ ರಮ್ಯಾ ಕೆಲ ಕಾಲ ಎಲ್ಲಿದ್ದರು ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಆದರೆ, ಈಗ ಬಂದಿರುವ ಮಾಹಿತಿಯಂತೆ ಅವರು ಮತ್ತೆ ಸಿನಿಮಾಗಳಲ್ಲಿ ನಟಿಸುವುದಕ್ಕೆ ಒಲವು ತೋರಿದ್ದಾರೆ ಎನ್ನಲಾಗುತ್ತಿದೆ. ‘ಪಾಲಿಟಿಕ್ಸ್‌ಗೆ ನೋ, ಆಧ್ಯಾತ್ಮ ಓಕೆ, ಸಿನಿಮಾ ಬಹುಷಃ’ ಎನ್ನುವ ಮೂಲಕ ರಾಜಕೀಯದಿಂದ ದೂರವಾದ ಒಂದಿಷ್ಟುವರ್ಷಗಳ ಬಳಿಕ ಈಗ ಮತ್ತೆ ಬಣ್ಣದ ಜಗತ್ತನ್ನು ನೆನಪಿಸಿಕೊಳ್ಳುತ್ತಿದ್ದಾರೆ ರಮ್ಯಾ.
ರಾಜಕೀಯ ಇನ್ನು ಮುಂದೆ ಇಲ್ಲ. ಆಧ್ಯಾತ್ಮ ಇರುತ್ತದೆ. ಇದರ ಜತೆಗೆ ಸಿನಿಮಾಗಳಲ್ಲಿ ನಟಿಸಿದರೂ ನಟಿಸಬಹುದು ಎನ್ನುವ ಮೂಲಕ ತಮ್ಮ ಮೂಲ ವೃತ್ತಿ ಬಗ್ಗೆ ಒಲವು ತೋರುತ್ತಿದ್ದಾರೆ. ಹೀಗೆ ತಮ್ಮ ನಟನಾ ಆಸಕ್ತಿಯನ್ನು ಹೇಳಿಕೊಳ್ಳುವ ಮೂಲಕ ನಟಿ ರಮ್ಯಾ ಮತ್ತೆ ಚಿತ್ರರಂಗಕ್ಕೆ ಬರುವ ಸಾಧ್ಯತೆಗಳನ್ನು ಹುಟ್ಟು ಹಾಕಿದ್ದಾರೆ. ಸದ್ಯಕ್ಕೆ ಬೆಂಗಳೂರಿನಲ್ಲೇ ಇರುವ ರಮ್ಯಾ ಅವರ ಸಿನಿಮಾ ನಡೆ ಇನ್ನೂ ಕೆಲವೇ ದಿನಗಳಲ್ಲಿ ಗೊತ್ತಾಗಬಹುದು.
ಹ್ಯಾಕರ್ಸ್ ಸ್ಯಾಂಡಲ್‌ವುಡ್ ನಟ-ನಟಿಯರನ್ನೇ ಟಾರ್ಗೇಟ್ ಮಾಡ್ತಿರೋದೇಕೆ?
ದರ್ಶನ್ ಜತೆ ಮತ್ತೆ ರಮ್ಯಾ?
ಚಿತ್ರರಂಗಕ್ಕೆ ನಟಿ ರಮ್ಯಾ ಮತ್ತೆ ಮರಳುತ್ತಿದ್ದಾರೆ ಎನ್ನುವ ಸುದ್ದಿಯ ಬೆನ್ನಲ್ಲೇ ಕೇಳಿ ಬರುತ್ತಿರುವ ವಿಷಯ ದರ್ಶನ್ ಜತೆ ಬಣ್ಣ ಹಚ್ಚುತ್ತಾರೆಯೇ ಎಂಬುದು. ಹೌದು, ದರ್ಶನ್ ನಾಯಕನಾಗಿ, ರಾಜೇಂದ್ರ ಸಿಂಗ್ ಬಾಬು ನಿರ್ದೇಶನ, ರಾಕ್ ಲೌನ್ ವೆಂಕಟೇಶ್ ನಿರ್ಮಾಣದ ರಾಜಾವೀರ ಮದಕರಿ ನಾಯಕ ಚಿತ್ರಕ್ಕೆ ರಮ್ಯಾ ನಾಯಕಿ ಆಗಲಿದ್ದಾರೆ ಎನ್ನುವ ರೂಮರ್ ಇದೆ. ಬಹು ಕೋಟಿ ವೆಚ್ಚದಲ್ಲಿ ತಯಾರಾಗುತ್ತಿರುವ ಈ ಐತಿಹಾಸಿಕ ಚಿತ್ರವೇ ರಮ್ಯಾ ಅವರ ರೀ ಎಂಟ್ರಿಗೆ ಸೂಕ್ತ ಸಿನಿಮಾ ಎಂಬುದು ಅವರ ನಂಬಿಕೆ. ಅಲ್ಲದೆ ಚಿತ್ರರಂಗದಲ್ಲಿ ನಟಿ ರಮ್ಯಾ ಅವರಿಗೆ ನಿರ್ಮಾಪಕರಾದ ರಾಕ್ ಲೈನ್ ವೆಂಕಟೇಶ್, ಮುನಿರತ್ನ ಅವರು ಆತ್ಮೀಯರು. ಹೀಗಾಗಿ ರಾಕ್ ಲೈನ್ ನಿರ್ಮಾಣದ ಚಿತ್ರದ ಮೂಲಕ ಮತ್ತೆ ಬಣ್ಣ ಹಚ್ಚಿ ಕ್ಯಾಮೆರಾ ಮುಂದೆ ನಿಲ್ಲುವ ಸಾಧ್ಯತೆಗಳಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.