ವಿಜಯಲಕ್ಷ್ಮೀ ವಿಡಿಯೋ ನೋಡಿ ದರ್ಶನ್ ಫ್ಯಾನ್ಸ್ ಕಣ್ಣೀರು.. ಕತ್ತಲೆ ಕೋಣೆಯಲ್ಲಿರೋ ದರ್ಶನ್ ಏನಂತಿದಾರೋ..!?

Published : Jul 15, 2026, 03:21 PM IST
actor vijayalakshmi darshan wishes to gowri ganesh

ಸಾರಾಂಶ

ದರ್ಶನ್ ಮತ್ತು ವಿಜಯಲಕ್ಷ್ಮೀ ಅವರ ಬದುಕಿನಲ್ಲೂ ಈ ಹಾಡು ವಿಶೇಷ ಸ್ಥಾನ ಪಡೆದಿದೆ. ಈ ಹಿಂದೆ ದರ್ಶನ್ ಹಾಗೂ ವಿಜಯಲಕ್ಷ್ಮೀ ವೆಡ್ಡಿಂಗ್ ಆನಿವರ್ಸರಿ ಪಾರ್ಟಿ ನಡೆದಾಗ, ಪತ್ನಿಯ ಮೇಲಿನ ಪ್ರೀತಿಗಾಗಿ ದರ್ಶನ್ ಎಲ್ಲರ ಸಮ್ಮುಖದಲ್ಲಿ ಇದೇ ಹಾಡನ್ನ ಹಾಡಿ ರಂಜಿಸಿದ್ದರು. ಯಾವ್ ಹಾಡು ನೋಡಿ..!

ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan Thoogudeepa) ಸದ್ಯ ಪರಪ್ಪನ ಅಗ್ರಹಾರ ಜೈಲಿನ ಕತ್ತಲ ಕೋಣೆಯಲ್ಲಿದ್ದಾರೆ. ದರ್ಶನ್ ಜೈಲು ಸೇರಿ ದಿನಗಳು ಉರುಳುತ್ತಿದ್ದರೂ, ಅವರ ಸುತ್ತಲಿನ ಚರ್ಚೆ ಮಾತ್ರ ಕಮ್ಮಿಯಾಗಿಲ್ಲ. ಇದರ ನಡುವೆ ದರ್ಶನ್ ಪತ್ನಿ ವಿಜಯಲಕ್ಷ್ಮೀ (Vijayalakshmi Darshan) ಸೋಶಿಯಲ್ ಮೀಡಿಯಾದಲ್ಲಿ (Social Media) ಹಂಚಿಕೊಂಡಿರೋ ಒಂದು ವಿಡಿಯೋ ಈಗ ಸಖತ್ ವೈರಲ್ ಆಗ್ತಿದೆ. ಅದು ಅಭಿಮಾನಿಗಳಿಗಾಗಿ ಹಾಕಿರೋ ವಿಡಿಯೋ ಆದ್ರೂ, ಸದ್ಯದ ಪರಿಸ್ಥಿತಿಯಲ್ಲಿ ಇದು ವಿಜಯಲಕ್ಷ್ಮೀ ವಿರಹಗೀತೆಯಂತೆ ಭಾಸವಾಗ್ತಾ ಇದೆ..!

ದಾಸನ ಹಳೇ ಹಾಡು.. ವಿಜಯಲಕ್ಷ್ಮೀ ವಿರಹದ ಮೂಡು; ಜೈಲಲ್ಲಿರೋ ಪತಿಗೆ ಪತ್ನಿಯ ಭಾವನಾತ್ಮಕ ಹಾಡಿನ ಅರ್ಪಣೆ

ಫ್ಯಾನ್ಸ್ ಸಲುವಾಗಿ ದರ್ಶನ್ ಹಾಡಿದ್ದ ಸಾಂಗ್ ಡೆಡಿಕೇಟ್ ಮಾಡಿದ್ದಾರೆ ವಿಜಯಲಕ್ಷ್ಮೀ. 'ಜೈಲಲ್ಲಿರೋ ಪತಿ ನೆನೆದು ಕಣ್ಣೀರಿಟ್ರಾ ವಿಜಯಲಕ್ಷ್ಮೀ' ಅಂತ 'ಅತ್ತಿಗೆ' ಅಭಿಮಾನಿಗಳು ಸಹ ಕಣ್ಣು ತುಂಬಿಕೊಂಡಿದ್ದಾರೆ,

ಹೌದು, ನಟ ದರ್ಶನ್ ಎಷ್ಟೊಳ್ಳೆ ನಟನೋ.. ಅಷ್ಟೇ ಒಳ್ಳೆ ಹಾಡುಗಾರ ಕೂಡ. ಸಿನಿಮಾಗಳಲ್ಲಿ ಅವರು ಹಾಡಿದ್ದೂ ಕಡಿಮೆಯಾದ್ರೂ ಆಗಾಗ ಖಾಸಗಿ ಪಾರ್ಟಿಗಳಲ್ಲಿ ದರ್ಶನ್ ಮೈಕ್ ಹಿಡಿದು ಹಾಡು ಹಾಡ್ತಾ ಇದ್ರು. ತಮ್ಮ ಇಷ್ಟದ ಹಾಡುಗಳನ್ನ ಒಂದಾದ ಮೇಲೊಂದರಂತೆ ಹಾಡಿ ಅತಿಥಿಗಳನ್ನ ರಂಜಿಸ್ತಾ ಇದ್ರು.

ಹೀಗೆ ದರ್ಶನ್ ಈ ಹಿಂದೆ ಮೈಕ್ ಹಿಡಿದು ಹಾಡಿದ್ದ ಹಳೇ ವಿಡಿಯೋ ಒಂದನ್ನ ವಿಜಯಲಕ್ಷ್ಮೀ ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. "ಇದು ಅವರ ಸೆಲೆಬ್ರಿಟಿಗಳಿಗಾಗಿ' ಅಂತ ಬರೆದುಕೊಂಡಿದ್ದಾರೆ.

ವಿಡಿಯೋದಲ್ಲಿ ದರ್ಶನ್ ಹಿಂದಿಯ ಎವರ್‌ಗ್ರೀನ್ ಹಾಡಾದ 'ಮೈ ಶಾಯರ್ ತೋ ನಹೀ' ಹಾಡನ್ನ ಹಾಡಿದ್ದಾರೆ. ಸದ್ಯ ದರ್ಶನ್ ಜೈಲಿನಲ್ಲಿರೋದ್ರಿಂದ ಈ ವಿಡಿಯೋ ಅಭಿಮಾನಿಗಳ ಕಣ್ಣಲ್ಲಿ ನೀರು ತರಿಸ್ತಾ ಇದೆ. ಆದರೆ ಈ ಹಾಡಿನ ಹಿಂದೆ ಒಂದು ಸುಂದರವಾದ ಫ್ಲ್ಯಾಶ್‌ಬ್ಯಾಕ್ ಕೂಡ ಇದೆ.

1970ರ ದಶಕದಲ್ಲಿ ತೆರೆಕಂಡ ಸೂಪರ್ ಡೂಪರ್ ಹಿಟ್ ಸಿನಿಮಾ ‘ಬಾಬಿ' ಚಿತ್ರದ ಸಾಂಗ್ ಇದು. ವಿಶೇಷ ಅಂದ್ರೆ, ನಟ ದರ್ಶನ್ ಹುಟ್ಟಿದ್ದೂ ಕೂಡ 1970ರ ದಶಕದಲ್ಲೇ . ಹೀಗಾಗಿ ಬಾಲ್ಯದಿಂದಲೂ ದರ್ಶನ್‌ಗೆ ಈ ಹಾಡು ಅಂದ್ರೆ ಪಂಚಪ್ರಾಣ. ತಮಗೆ ಬಲು ಇಷ್ಟವಾದ ಈ ಹಾಡನ್ನು ದರ್ಶನ್ ಆಗಾಗ ಗುನುಗ್ತಾ ಇದ್ರು.

ಮದುವೆ ಆನಿವರ್ಸರಿಯಲ್ಲಿ ಇದೇ ಹಾಡು ಹಾಡಿದ್ದ ದಾಸ..!

ಹೌದು ದರ್ಶನ್ ಮತ್ತು ವಿಜಯಲಕ್ಷ್ಮೀ ಅವರ ಬದುಕಿನಲ್ಲೂ ಈ ಹಾಡು ವಿಶೇಷ ಸ್ಥಾನ ಪಡೆದಿದೆ. ಈ ಹಿಂದೆ ದರ್ಶನ್ ಹಾಗೂ ವಿಜಯಲಕ್ಷ್ಮೀ ವೆಡ್ಡಿಂಗ್ ಆನಿವರ್ಸರಿ ಪಾರ್ಟಿ ನಡೆದಾಗ, ಪತ್ನಿಯ ಮೇಲಿನ ಪ್ರೀತಿಗಾಗಿ ದರ್ಶನ್ ಎಲ್ಲರ ಸಮ್ಮುಖದಲ್ಲಿ ಇದೇ ಹಾಡನ್ನ ಹಾಡಿ ರಂಜಿಸಿದ್ದರು.

ಈಗ ಪತಿ ಜೈಲಿನಲ್ಲಿರುವಾಗ ಅದೇ ಹಳೇ ನೆನಪುಗಳನ್ನು ವಿಜಯಲಕ್ಷ್ಮೀ ಮೆಲುಕು ಹಾಕುತ್ತಿದ್ದಾರೆ. ‘ನಾನು ಶಾಯರ್ ಅಲ್ಲ, ಆದ್ರೆ ನಿನ್ನನ್ನ ನೋಡಿದಾಗಿನಿಂದ ಶಾಯರಿ ಹುಟ್ಟುತ್ತಾ ಇದೆ' ಅನ್ನೋ ಅರ್ಥ ಇರೋ ಈ ಹಾಡು, ಈಗ ದರ್ಶನ್ ಪತ್ನಿಯ ವಿರಹದ ಮೂಡನ್ನ ಎತ್ತಿ ತೋರಿಸ್ತಾ ಇದೆ..! ನೋಡಿದವರನ್ನ ಭಾವುಕರನ್ನಾಗಿಸ್ತಾ ಇದೆ..! ಪತಿ ಜೈಲಿನಲ್ಲಿ ಇರೋದ್ರಿಂದ ಇದು ಸಹಜ ಎನ್ನಲೇಬೇಕು. ಆದರೆ ಈ ವಿರಹವೇದನೆ ಇನ್ನೆಷ್ಟು ದಿನ? ಗೊತ್ತಿಲ್ಲ, ಕಾಲವೇ ಉತ್ತರ ಕೊಡಬೇಕು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕಣ್ಣೀರಿನ ಲೆಕ್ಕ ಕೇಳಬೇಡಿ, ಅಜ್ಜಿ ಮೇಲಿನ ನನ್ನ ಪ್ರೀತಿ ಅಳೆಯಬೇಡಿ.. ಟ್ರೋಲ್‌ಗೆ ಬೇಸರಗೊಂಡ ಎಸ್‌ ಜಾನಕಿ ಮೊಮ್ಮಗಳು ಅಪ್ಸರಾ
380 ಕೋಣಗಳು, 700 ವರ್ಷದ ಇತಿಹಾಸ... 'ಕರಾವಳಿ' ಬಗ್ಗೆ ಹೊಸ ಮಾಹಿತಿ ಹೊರಬಿತ್ತು!