ʻಕರಿಮಣಿ ಮಾಲೀಕ ನೀನಲ್ಲ’ ಒರಿಜಿನಲ್ ಹಾಡು ಹಾಡಿರೋ ಹುಡುಗಿ ಈಗ ಎಲ್ಲಿದಾರೆ, ಹೇಗಿದಾರೆ, ಏನ್ ಮಾಡ್ತಿದಾರೆ ನಿಮಗೆ ಗೊತ್ತಾ?
ಈಗ ಎಲ್ಲೆಲ್ಲೂ ರಿಯಲ್ ಸ್ಟಾರ್ ಉಪೇಂದ್ರ ನಟನೆಯ ʼಉಪೇಂದ್ರʼ ಸಿನಿಮಾದ ʻಕರಿಮಣಿ ಮಾಲೀಕ ನೀನಲ್ಲ’ ಹಾಡಿನದ್ದೇ ಗುಂಗು. ಎಲ್ಲೆಲ್ಲೂ ಅದರದ್ದೇ ರೀಲ್ಸ್. ವಿಕಿಪೀಡಿಯಾದ ಮುದ್ದುಮಣಿ ಇದರ ರೀಲ್ಸ್ ಮಾಡಿ ಬಿಟ್ಟ ನಂತರವಂತೂ ಕರಿಮಣಿ ಮಾಲಿಕ ಮತ್ತು ರಾವುಲ್ಲ ಇಬ್ರೂ ಕೂಡಿಯೇ ಜನಪ್ರಿಯರಾಗುತ್ತಿದ್ದಾರೆ. ಆದ್ರೆ ಇದರ ಒರಿಜಿನಲ್ ಹಾಡು ಹಾಡಿರೋ ಹುಡುಗಿ ಈಗ ಎಲ್ಲಿದಾರೆ, ಹೇಗಿದಾರೆ, ಏನ್ ಮಾಡ್ತಿದಾರೆ ನಿಮಗೆ ಗೊತ್ತಾ?
(Karimani Malika Ninalla) ಕ್ರೇಜ್ ಇನ್ನೂ ಕಡಿಮೆ ಆಗಿಲ್ಲ. ಉಪೇಂದ್ರ’ ಸಿನಿಮಾದ “ಓ ನಲ್ಲ..” ಹಾಡು ಇಷ್ಟೊಂದು ಟ್ರೆಂಡಿಂಗ್‌ನಲ್ಲಿ ಇರಲು ಕಾರಣ ಕಲ್ಯಾಣ ಕರ್ನಾಟಕ ಭಾಗದ ಕನಕ ಅವರು. ಕನಕ ತಮ್ಮ ಇನ್‌ಸ್ಟಾದಲ್ಲಿ ಪ್ರೀತಿಸಿದ ಹುಡುಗಿ ಕೈ ಕೊಟ್ಟು ಹೋದಾಗ ಆಕೆ ಹೇಳಿದ ಮಾತುಗಳು ಎಂದು ಹೇಳಿ ಈ ಹಾಡಿನ ಸಾಲುಗಳನ್ನು ಪೋಸ್ಟ್ ಮಾಡಿದ್ದರು. ಇದು ಸಖತ್ ವೈರಲ್ ಆಗಿತ್ತು. ಅಲ್ಲಿಂದ ಹಲವಾರು ಪ್ರತಿಭೆಗಳು ರೀಲ್ಸ್ ಹಂಚಿಕೊಂಡಿವೆ. ಆದರೆ
ಈ ಮೂಲ ಹಾಡನ್ನು ಯಾರು ಹಾಡಿರೋದು ಎಂದು ಹಲವರಾದರೂ ಹುಡುಕಿರಬಹುದು. ಅದಕ್ಕಿರೋ ಉತ್ರ ಎಂದರೆ, ಈ ಹಾಡನ್ನು ಹಾಡಿರುವುದು ಪ್ರತಿಮಾ ರಾವ್ ಅಲಿಯಾಸ್ ರಾಧಿಕಾ ರಾವ್. ಇವರ ಮೂಲ ಹೆಸರು ರಾಧಿಕಾ ರಾವ್. ಬಾಲ್ಯದಿಂದಲೇ ಹಾಡುತ್ತಿದ್ದಾರೆ. ಆದರೆ ಇವರು ಈಗ ಇರೋದು ಆಸ್ಟ್ರೇಲಿಯಾದ ಸಿಡ್ನಿಯಲ್ಲಿ!
ಹೌದು, ಅವರು ಹಲವು ಜನಪ್ರಿಯ ಹಿಂದಿ ಮತ್ತು ಪ್ರಾದೇಶಿಕ ಚಲನಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ರಾಧಿಕಾ ತಮ್ಮ ವೃತ್ತಿಜೀವನವನ್ನು ಚಿಕ್ಕ ವಯಸ್ಸಿನಿಂದಲೇ ಬಾಲ ಕಲಾವಿದೆಯಾಗಿ ಪ್ರಾರಂಭಿಸಿದರು. ವೇದಿಕೆಗಳಲ್ಲಿ ಪ್ರದರ್ಶನ ನೀಡಿದರು. ಕೆಲವು ಸೂಪರ್‌ಹಿಟ್ ಚಲನಚಿತ್ರಗಳಿಗೆ ಹಿನ್ನೆಲೆ ಗಾಯನ ಹಾಡಿದರು. ರಾಜಶ್ರೀ ಪ್ರೊಡಕ್ಷನ್‌ನ ಬ್ಲಾಕ್‌ಬಸ್ಟರ್ ಹಮ್ ಸಾಥ್ ಸಾಥ್ ಹೈ, ಕನ್ನಡ ನಟ ಉಪೇಂದ್ರ ಅವರ ಬ್ಲಾಕ್‌ಬಸ್ಟರ್ ಚಲನಚಿತ್ರಗಳಾದ ಎ, ಓಂ, ಉಪೇಂದ್ರಗೆ ರಾಧಿಕಾ ಹಾಡಿದ್ದಾರೆ. ಅವರ ಉಪೇಂದ್ರ ಚಿತ್ರದ ʼಏನಿಲ್ಲ ಏನಿಲ್ಲʼ ಹಾಡು ಸೆನ್ಸೇಷನಲ್ ಹಿಟ್.
ʼಬೊಂಬಾಯಿ ಪ್ರಿಯುಡುʼ ಚಿತ್ರದ ಹಿಟ್ ಹಾಡುಗಳಲ್ಲಿ ಒಂದನ್ನು ಎಸ್‌ಪಿ ಬಾಲ ಸುಬ್ರಮಣಿಯಂ ಅವರೊಂದಿಗೆ ಹಾಡಿದ ನೆನಪು ತನಗೆ ತುಂಬಾ ಹತ್ತಿರ ಎಂದು ರಾಧಿಕಾ ಭಾವಿಸುತ್ತಾರೆ. ರಾಧಿಕಾ ರಾವ್ ಅವರು 14 ವರ್ಷಗಳ ಕಾಲ ಪ್ರಖ್ಯಾತ ಗುರುಗಳ ಬಳಿ ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತ ಎರಡನ್ನೂ ಕಲಿತಿರುವುದರಿಂದ ಶಾಸ್ತ್ರೀಯ ಸಂಗೀತದಲ್ಲಿ ಹೆಚ್ಚು ತರಬೇತಿ ಪಡೆದಿದ್ದಾರೆ. ರಾಧಿಕಾ ರಾವ್ ಗಾಯಕಿ – ಗೀತರಚನೆಕಾರ್ತಿ. 60 ಮತ್ತು 70ರ ದಶಕದ ಬಾಲಿವುಡ್ ಹಾಡುಗಳನ್ನು ಆಗಾಗ ಹಾಡುತ್ತಲೇ ಇರುತ್ತಾರೆ. ರಾಧಿಕಾ ಮ್ಯೂಸಿಕ್ ಎಂಬ ಯುಟ್ಯೂಬ್ ಚಾನೆಲ್ ಹೊಂದಿದ್ದಾರೆ. ಕೆಲವು ಕವರ್ ಸಾಂಗ್‌ಗಳು, ಕ್ಲಾಸಿಕ್, ಹೊಸ ಹಾಡುಗಳನ್ನು ಹಾಡಿ ಪೋಸ್ಟ್ ಮಾಡುತ್ತಾರೆ. ಅವರದ್ದೇ ಆದ ಅಭಿಮಾನ ಬಳಗ ಕೂಡ ಹೊಂದಿದ್ದಾರೆ.
ವಿಶೇಷ ಅಂದರೆ ಇತ್ತೀಚೆಗೆ ʼಕರಿಮಣಿ ಮಾಲಿಕ ನೀನಲ್ಲʼ ಮತ್ತೆ ಟ್ರೆಂಡ್ ಆಗುತ್ತಿರುವಾಗ ರಾಧಿಕಾ ಮತ್ತೆ ಅದೇ ಹಾಡನ್ನು ಹಾಡಿ ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಹಾಕಿದ್ದಾರೆ. ಅದನ್ನು ಕೂಡ ಸಾಕಷ್ಟು ಮಂದಿ ನೋಡಿದ್ದಾರೆ. ತಮ್ಮ ಚಾನೆಲ್‌ನಲ್ಲಿ ರಾಧಿಕಾ ಸಾಕಷ್ಟು ಬೇರೆ ಹಾಡುಗಳನ್ನೂ ಪೋಸ್ಟ್ ಮಾಡಿದ್ದಾರೆ.
ಅಪ್ರಾಪ್ತ ಬಾಲಕನನ್ನು ಸೆಕ್ಸ್‌ಗೆ ಬಳಸಿದ ಆರೋಪ, ಕೋರ್ಟ್‌ಗೆ ಹಾಜರಾಗಿ ಮೌನಕ್ಕೆ ಶರಣಾದ ನಟಿ!
ಈಗ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ರಾಧಿಕಾ ಅವರು ಸಂಗೀತದಲ್ಲಿನ ತಮ್ಮ ಬೇರುಗಳನ್ನು ಬಿಟ್ಟಿಲ್ಲ. ಕಳೆದುಹೋದ ಹಿಂದಿನ ಮಾಧುರ್ಯವನ್ನು ಹೊಸ ಹಾಡುಗಳ ರೂಪದಲ್ಲಿ ಮರಳಿ ತರುವ ಉದ್ದೇಶದಿಂದ ತಮ್ಮದೇ ಆದ ಹಾಡುಗಳನ್ನು ಮಾಡುತ್ತಿದ್ದಾರೆ. ಯುಟ್ಯೂಬ್ ಚಾನೆಲ್ ರಾಧಿಕಾ ಮ್ಯೂಸಿಕ್‌ನಲ್ಲಿ ಅವರ ಹೊಸ ಹಾಡು ʼಹರೇ ಕೃಷ್ಣ ಹರೇ ರಾಮʼವೂ ಇದೆ.
1999ರಲ್ಲಿ ʻಉಪೇಂದ್ರʼ ಸಿನಿಮಾ ಬಿಡುಗಡೆಯಾಗಿತ್ತು. 1999ರ ಅಕ್ಟೋಬರ್ 22ಕ್ಕೆ ಬಿಡುಗಡೆಯಾದ ಈ ಸಿನಿಮಾ ಹಿಟ್ ಆಗಿತ್ತು. ನಟಿ ಪ್ರೇಮಾ, ರವೀನಾ ಟಂಡನ್, ದಾಮಿನಿ ಮೂವರು ನಾಯಕಿಯರಾಗಿದ್ದರು. ಈ ಹಾಡು ಮಾತ್ರವಲ್ಲ ಸಿನಿಮಾದ ಇತರೆ ಹಾಡುಗಳು ಕೂಡ ಭಾರಿ ಸದ್ದು ಮಾಡಿದ್ದವು. ಆಗ ಉಪೇಂದ್ರ ಹಾಗೂ ಪ್ರೇಮಾ ಮಧ್ಯೆ ಏನೋ ಇದೆ ಎನ್ನುವ ಗಾಸಿಪ್‌ಗಳು ಹುಟ್ಟಿಕೊಂಡಿದ್ದವು. ಹಾಗೇನೂ ಇಲ್ಲ ಎಂದು ಹೇಳಲು ʻಉಪೇಂದ್ರʼ ಸಿನಿಮಾದಲ್ಲಿ ಗುರು ಕಿರಣ್ ಈ ಹಾಡು ಮಾಡಲು ಪ್ಲಾನ್ ಮಾಡಿದ್ದರು. ಏನಿಲ್ಲ ಏನಿಲ್ಲ ಅಂತಲೇ ಶುರು ಮಾಡಿದ್ದರು. ಹಾಗೆ ಏನೀಲ್ಲ ಏನೀಲ್ಲ ನನ್ನ ನಿನ್ನ ನಡುವೆ ಏನಿಲ್ಲ… ಹೀಗೆ ಹಲವು ಪದಗಳು ಸೇರಿ ಒಂದು ಪಲ್ಲವಿ ಕೂಡ ಆಗಿತ್ತು. ಉಪ್ಪಿ ಹೆಸರಿನ ಸಿನಿಮಾಕ್ಕೂ ಗುರುಕಿರಣ್ ಸಂಗೀತ ಸಂಯೋಜಿಸಿದ್ದರು.
ಉಪೇಂದ್ರ 'ಯುಐ' ಸಿನಿಮಾದಲ್ಲಿ ಸನ್ನಿ ಲಿಯೋನ್ ಕುಣಿಯುತ್ತಿಲ್ಲ, ನಟಿಸುತ್ತಿದ್ದಾರೆ; ಯಾಕೆ ಅಂತಿದಾರೆ ಏನ್ ಹೇಳೋದು!