
ಬೆಂಗಳೂರು (ಅ.03) ನಟಿ ರಚಿಚಾ ರಾಮ್ ಹುಟ್ಟು ಹಬ್ಬಕ್ಕಿಂತ ಅಭಿಮಾನಿ ಕೆನ್ನೆಗಿಂಡಿದ ಘಟನೆ ಭಾರಿ ವೈರಲ್ ಆಗಿದೆ. 33ನೇ ವರ್ಷದ ಹುಟ್ಟು ಹಬ್ಬವನ್ನು ಅಭಿಮಾನಿಗಳ ಜೊತೆ ಆಚರಿಸಿದ್ದರು. ತಮ್ಮ ನಿವಾಸದತ್ತ ಬಂದ ಅಭಿಮಾನಿಗಳ ಕೈಕುಲುಕಿ ಸಂದೇಶಗಳಿಗೆ ಧನ್ಯವಾದ ಹೇಳಿದ್ದರು. ಈ ವೇಳೆ ಅಭಿಮಾನಿಯೊಬ್ಬ ರಚಿತಾ ರಾಮ್ ಕೆನ್ನೆ ಗಿಂಡಿ ಎಸ್ಕೇಪ್ ಆಗಿದ್ದ. ಈ ವೇಳೆ ರಚಿತಾ ರಾಮ್ ನೀಡಿದ್ದ ಪ್ರತಿಕ್ರಿಯೆ ಕೂಡ ಭಾರಿ ವೈರಲ್ ಆಗಿತ್ತು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನಟಿ ರಚಿತಾ ರಾಮ್ ಪ್ರತಿಕ್ರಿಯೆ ನೀಡಿದ್ದಾರೆ. ಅಭಿಮಾನಿ ಪರವಾಗಿ ರಚಿತಾ ರಾಮ್ ಮಾತನಾಡಿದ್ದಾರೆ.
ಅಭಿಮಾನಿ ಆಗಮಿಸಿ ಅವರ ಪ್ರೀತಿಯನ್ನು ಕೆನ್ನೆಗಿಂಡಿ ತೋರಿಸಿದ್ದರು. ಈ ಘಟನೆ ವಿಡಿಯೋ ವೈರಲ್ ಆದ ಬಳಿಕ ಹಲವು ಆಪ್ತರು, ಸ್ನೇಹಿತರು ಈ ಕುರಿತು ನನ್ನ ಬಳಿ ಪ್ರಶ್ನಿಸಿದ್ದರು. ಅಭಿಮಾನಿ ಕೆನ್ನೆ ಗಿಂಡಿದಾಗ ಕೋಪ ಬಂದಿಲ್ವಾ, ಕಿರಿಕಿರಿ ಆಗಿಲ್ಲವೇ ಎಂದು ಪ್ರಶ್ನಿಸಿದ್ದರು. ಇಲ್ಲಿ ನನ್ನ ಅಭಿಮಾನಿಯೊಬ್ಬ ಬಂದು ಮಗುವನ್ನು ಮುದ್ದಾಡುವಂತೆ ಕೆನ್ನೆಗಿಂಡಿದ್ದಾನೆ. ಆತ ಬೇರೆ ಯಾವುದೇ ರೀತಿಯಲ್ಲಿ ನನ್ನ ಟಚ್ ಮಾಡಿಲ್ಲ. ಆತ ಕೆನ್ನೆಗಿಂಡಿದ್ದು ಮಗುವನ್ನು ಮುದ್ದು ಮಾಡಿದಂತೆ ಅನಿಸಿತು ಎಂದು ರಚಿತಾ ರಾಮ್ ತನ್ನ ಅಭಿಮಾನಿ ಪರವಾಗಿ ಮಾತನಾಡಿದ್ದಾರೆ. ಇದೇ ವೇಳೆ ಆತ ನನ್ನ ಅಬಿಮಾನಿ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಆತ ಬಂದು ಪ್ರೀತಿಯಿಂದ ಕೆನ್ನೆಗಿಂಡಿ ಮುದ್ದಾಡಿದ್ದಾನೆ. ಆತನ ಕೆನ್ನೆಗಿಂಡಿದ ಹಿಂದೆ ಪ್ರೀತಿ ಇತ್ತು. ಅಭಿಮಾನಿಯೊಬ್ಬ ಮುದ್ದು ಮಾಡಿದಾಗ ಅಧನ್ನು ಹೇಗೆ ಖಂಡಿಸಲಿ ಎಂದು ರಚಿತಾ ರಾಮ್ ಪ್ರಶ್ನಿಸಿದ್ದಾರೆ. ಆತನ ಮುದ್ದು ಇಷ್ಟವಾಯಿತು ಎಂದು ರಚಿತಾ ರಾಮ್ ಹೇಳಿದ್ದಾರೆ.
ರಚಿತಾ ರಾಮ್ ತಮ್ಮ 33ನೇ ವರ್ಷದ ಹುಟ್ಟುಹಬ್ಬ ಆಚರಣೆಯಲ್ಲಿ ಈ ಕೆನ್ನೆಗಿಂಡಿದ ಘಟನೆ ನಡೆದಿತ್ತು. ಇದೇ ಆಚರಣೆಯಲ್ಲಿ ಮತ್ತೊಬ್ಬ ಅಭಿಮಾನಿ ನಡೆಯಿಂದ ರಚಿತಾ ರಾಮ್ ಬೇಸರಗೊಂಡ ಘಟನೆಯೂ ನಡೆದಿದೆ. ಅಭಿಮಾನಿಯೊಬ್ಬ ರಚಿತಾ ರಾಮ್‌ಗೆ ಹುಟ್ಟು ಹಬ್ಬಕ್ಕೆ ವಿಶ್ ಮಾಡಿ ಅಪ್ಪಿಕೊಳ್ಳಲು ಮುಂದಾಗಿದ್ದಾರೆ. ಈ ವೇಳೆ ರಚಿತಾ ರಾಮ್ ಟಚ್ ಮಾಡಬೇಡಿ ಎಂದು ಮನವಿ ಮಾಡಿದ್ದು ಮಾತ್ರವಲ್ಲ, ಎಚ್ಚರಿಕೆಯನ್ನು ನೀಡಿದ್ದಾರೆ. ಬಳಿಕ ಅದೇ ಅಭಿಮಾನಿಗೆ ಫೋಟೋ ಕ್ಲಿಕ್ಕಿಸಲು ಅವಕಾಶ ನೀಡಿದ್ದಾರೆ. ಫೋಟೋ ತೆಗೆದ ಬಳಿಕ ಅಭಿಮಾನಿ ರಚಿತಾ ರಾಮ್ ಕೈನ್ನೆ ಗಿಂಡಿ ಬಳಿಕ ತನ್ನ ಕೈಗಳಿಗೆ ತಾನೇ ಮುತ್ತಿಕೊಂಡಿದ್ದಾನೆ.
ಈ ಘಟನೆಯಿಂದ ರಚಿತಾ ರಾಮ್ ಅಸಾಧಾನಗೊಂಡಿದ್ದಾರೆ. ಯಕೋ ಹೀಗೆ ಮಾಡ್ತೀರಾ ಎಂದು ರಚಿತಾ ರಾಮ್ ಬೇಸರ ಹೊರಹಾಕಿದ್ದಾರೆ. ಆದರೆ ಎಲ್ಲೂ ಕೂಡ ರಚಿತಾ ರಾಮ್ ತಾಳ್ಮೆ ಕಳೆದುಕೊಂಡಿಲ್ಲ. ರಚಿತಾ ರಾಮ್ ಈ ನಡೆ, ಅಭಿಮಾನಿ ಪರವಾಗಿ ಮಾತನಾಡಿದ ರೀತಿಗಳು ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.