ದರ್ಶನ್ ಸಮಯ ಸರಿಯಾಗಿಲ್ಲ. ಗುರುಬಲ ಇಲ್ಲ. ಕೆಟ್ಟ ದೆಸೆ ನಡೆಯುತ್ತಿದೆ. ಶನಿ ಮಹಾತ್ಮನು ಆಸ್ಥಾನದಲ್ಲಿ ಬಂದು ಕೂತಿದ್ದಾನೆ. ಇನ್ನೆರಡು ತಿಂಗಳಲ್ಲಿ ಬಿಡುಗಡೆಯಾಗಲಿದ್ದಾನೆ. ದರ್ಶನ್ ಬಿಡುಗಡೆ ಬಗ್ಗೆ ದೈವ ನುಡಿದ ವಿಡಿಯೋ ವೈರಲ್
ಬೆಂಗಳೂರು (ಆ.11): ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅಂಡ್ ಗ್ಯಾಂಗ್ ಪರಪ್ಪನ ಅಗ್ರಹಾರ ಜೈಲು ಸೇರಿ ಇಂದಿಗೆ 50 ದಿನಗಳೇ ಕಳೆದುಹೋಗಿವೆ. ಆದರೆ ಇದುವರೆಗೆ ಎಷ್ಟೇ ಪ್ರಯತ್ನ ಪಟ್ಟರು ಬಿಡುಗಡೆಯಾಗುವ ಎಲ್ಲ ಕಾನೂನು ಮಾರ್ಗಗಳು ವಿಫಲಗೊಂಡಿವೆ. ದೇವರು ಕೈಹಿಡಿಯಬಹುದು ಅಂತಾ ಕೊನೆಗೆ ದೇವರ ಮೊರೆ ಹೋಗಿದ್ದ ದರ್ಶನ್ ಪತ್ನಿ ವಿಜಯಲಕ್ಷ್ಮೀ. ಕೊಲ್ಲೂರು ಮೂಕಾಂಬಿಕೆ ದೇವಿ ದೇವಸ್ಥಾನಕ್ಕೆ ತೆರಳಿ ಪತಿ ದರ್ಶನ್ ಬಿಡುಗಡೆಗಾಗಿ ವಿಶೇಷ ಪೂಜೆ ಸಲ್ಲಿಸಿದ್ದರು. ಇದಲ್ಲದೇ ಮಹಾಚಂಡಿಯಾಗ ಸಹ ಮಾಡಿದ್ದಾಯ್ತು. ಹಲವು ದೇವಸ್ಥಾನಗಳನ್ನು ಸುತ್ತಿ ಪೂಜೆ ಸಲ್ಲಿಸಿದ್ದೂ ಆಯ್ತು. ಇನ್ನು ಅಭಿಮಾನಿಗಳು ಪೂಜೆ, ಹರಕೆಗಳಿಗೆ ಲೆಕ್ಕವೇ ಇಲ್ಲ. ಇಷ್ಟಾದರೂ ದರ್ಶನ್ ಯಾವಾಗ ಬಿಡುಗಡೆಯಾಗುತ್ತಾರೆ ಎಂಬುದಕ್ಕೆ ಉತ್ತರವೇ ಸಿಗದಂತಾಗಿದೆ.
ಇದೀಗ ನಟ ದರ್ಶನ್ ಯಾವಾಗ ಬಿಡುಗಡೆಯಾಗುತ್ತಾರೆ ಅಂತಾ ದೇವಸ್ಥಾನದ ಅರ್ಚಕನೇ ದೈವದ ಮೊರೆ ಹೋಗಿದ್ದಾರೆ. ಹೌದು ಬೆಂಗಳೂರಿನ ಬಾಪೂಜಿನಗರದ ಶಾರದಾಂಬೆ ದೇವಸ್ಥಾನದ ಅರ್ಚಕರ ಮಗಳಿಂದ ದರ್ಶನ್ ಬಿಡುಗಡೆ ಭವಿಷ್ಯ ಹೊರಬಿದ್ದಿದೆ. ಕುಟ್ಟುವ ಕಲ್ಲಿನ ಮೂಲಕ ಭವಿಷ್ಯ ಕೇಳಿದ ದೇವಸ್ಥಾನದ ಅರ್ಚಕ. ಈ ವೇಳೆ ದರ್ಶನ್ ಬಗ್ಗೆ ಓಂ ಶಕ್ತಿ ಶಾರದಾಂಬೆ ದೇವಿ ಭವಿಷ್ಯ ನುಡಿದಿದೆ ಎನ್ನಲಾಗಿದೆ. ಮಗಳ ಮೂಲಕ ದೇವಿಯೇ ಅರ್ಚಕರೊಬ್ಬರ ಮಗಳಿಂದ ಕುಟ್ಟೊ ಕಲ್ಲು ಮೂಲಕ ಬರೆದು ಭವಿಷ್ಯ ನುಡಿದ ದೈವ.
ದರ್ಶನ್ ಬಿಡುಗಡೆ ಯಾವಾಗ?
ಓಂ ಶಕ್ತಿ ಶಾರದಾಂಬೆ ಬಿಸೋ ಕಲ್ಲು ಮೂಲಕ ಭವಿಷ್ಯ ಬರೆಸುತ್ತಿದೆಯಾ ದೈವ. ದರ್ಶನ್ ಸದ್ಯ ಮೀನರಾಶಿಯಲ್ಲಿದ್ದಾರಂತೆ, ದರ್ಶನ್ ಸಮಯ ಸರಿಯಾಗಿಲ್ಲ. ಗುರುಬಲ ಇಲ್ಲ. ಕೆಟ್ಟ ದೆಸೆ ನಡೆಯುತ್ತಿದೆ. ಶನಿ ಮಹಾತ್ಮನು ಆಸ್ಥಾನದಲ್ಲಿ ಬಂದು ಕೂತಿದ್ದಾನೆ. ಜೊತೆಗೆ ರಾಜರಾಜೇಶ್ವರಿನಗರದ ದರ್ಶನ್ ನಿವಾಸಕ್ಕೆ ವಾಸ್ತುದೋಷವಿದೆ. ಮನೆಯ ಮೂಲೆಯೇ ಸರಿಯಿಲ್ಲ. ಇದೇ ಕಾರಣಕ್ಕೆ ಬಿಡುಗಡೆಗೆ ಅಡೆತಡೆಗಳಾಗುತ್ತಿವೆ. ಇನ್ನೂ ಒಂದೂವರೆ ಎರಡು ತಿಂಗಳು ಬಿಡುಗಡೆಯ ಭಾಗ್ಯ ಇಲ್ಲ. ಬಳಿಕ ಜೈಲಿನಿಂದ ಹೊರಬರ್ತಾರೆ ಎಂದು ಭವಿಷ್ಯ ನುಡಿದ ದೈವ.
ರೇಣುಕಾಸ್ವಾಮಿ ಕೊಲೆ ಪ್ರಕರಣ; ದರ್ಶನ್ ಆಪ್ತ ಚಿಕ್ಕಣ್ಣಗೆ ತಪ್ಪದ ಕಂಟಕ!
ದೈವ ಭವಿಷ್ಯ ನುಡಿಯುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡ ದೇವಸ್ಥಾನದ ಅರ್ಚಕ. ಸದ್ಯ ವೈರಲ್ ಆಗಿದ್ದು, ದರ್ಶನ್ ಇನ್ನೆರಡು ತಿಂಗಳಲ್ಲಿ ಬಿಡುಗಡೆಯಾಗಲಿರುವ ಭವಿಷ್ಯ ಕೇಳಿ ಖುಷಿಯಾಗಿದ್ದಾರೆ. ಇನ್ನು ಕೆಲವರು ದರ್ಶನ್ ವಿರುದ್ಧ ಸಾಕ್ಷ್ಯಗಳಿದ್ದು ಯಾವುದೇ ಕಾರಣಕ್ಕೂ ಹೊರಬರುವುದಿಲ್ಲ. ದರ್ಶನ್ ಗೆ ಜಾಮೀನು ಸಿಗುವುದು ಅಷ್ಟು ಸುಲಭವಿಲ್ಲ ಎಂದಿದ್ದಾರೆ. ದೈವ ನುಡಿದ ಭವಿಷ್ಯ ನಿಜವಾಗುತ್ತದಾ? ದರ್ಶನ್ ಎರಡು ತಿಂಗಳಲ್ಲಿ ಹೊರಬರ್ತಾರಾ ಕಾಲವೇ ಉತ್ತರಿಸಬೇಕು.