ಮತ್ತೆ ಕಾಮಾಕ್ಯ ದೇವಿ ದರ್ಶನ ಪಡೆದ ದರ್ಶನ್ ಪತ್ನಿ... ಬೇಡಿಕೆ ಈಡೇರಿಸಿದ ತಾಯಿಯ ಹರಕೆ ತೀರಿಸಿದ್ರ ವಿಜಯಲಕ್ಷ್ಮಿ!

Published : Mar 05, 2025, 04:22 PM ISTUpdated : Mar 05, 2025, 04:33 PM IST
ಮತ್ತೆ ಕಾಮಾಕ್ಯ ದೇವಿ ದರ್ಶನ ಪಡೆದ ದರ್ಶನ್ ಪತ್ನಿ... ಬೇಡಿಕೆ ಈಡೇರಿಸಿದ ತಾಯಿಯ ಹರಕೆ ತೀರಿಸಿದ್ರ ವಿಜಯಲಕ್ಷ್ಮಿ!

ಸಾರಾಂಶ

ದರ್ಶನ್ ಬಿಡುಗಡೆಗಾಗಿ ವಿಜಯಲಕ್ಷ್ಮಿ ಕಾಮಾಕ್ಯ ದೇವಿಗೆ ಹರಕೆ ಹೊತ್ತಿದ್ದರು. ಇತ್ತೀಚೆಗೆ ಅವರು ಮತ್ತೆ ಕಾಮಾಕ್ಯ ಮಂದಿರಕ್ಕೆ ಭೇಟಿ ನೀಡಿದ್ದಾರೆ. ಈ ದೇಗುಲವು ಶಕ್ತಿ ಪೀಠಗಳಲ್ಲಿ ಒಂದು, ಇಲ್ಲಿ ಬೇಡಿಕೆಗಳು ಈಡೇರುತ್ತವೆ ಎಂಬ ನಂಬಿಕೆ ಇದೆ.  

ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಜೈಲು ಸೇರಿದ್ದ ದರ್ಶನ್ ತೂಗುದೀಪರನ್ನು ಜೈಲಿನಿಂದ ಹೊರ ತರೋದಕ್ಕೆ ಪತ್ನಿ ವಿಜಯಲಕ್ಷ್ಮೀ (Vijayalakshmi Darshan) ಕಾನೂನು ಹೋರಾಟಗಳನ್ನು ಮಾಡುತ್ತಿದ್ದರು, ಅದರ ಜೊತೆಗೆ ದೇಗುಲಗಳ ಭೇಟಿ ಕೂಡ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ವಿಜಯಲಕ್ಷ್ಮೀ ಅಸ್ಸಾಂನ ಗುವಾಹಟಿಯಲ್ಲಿರುವ ಕಾಮಕ್ಯಾ ದೇವಿ ಮಂದಿರಕ್ಕೂ ಭೇಟಿ ನೀಡಿದ್ದರು. ಕಾಮಾಕ್ಯಾ ದೇವಿ (Kamakhya Mandir) ದರ್ಶನ ಪಡೆದು ಬಂದ ಕೆಲವೇ ಸಮಯದಲ್ಲಿ ದರ್ಶನ್ ಗೆ ಬೇಲ್ ಸಿಕ್ಕಿ ಜೈಲಿನಿಂದ ಬಿಡುಗಡೆ ಕೂಡ ಆಗಿದ್ದರು. ಪತಿ ಬಿಡುಗಡೆಯಾದ ಸಂದರ್ಭದಲ್ಲೂ ವಿಜಯಲಕ್ಷ್ಮೀ ಕಾಮಾಕ್ಯ ಮಂದಿರದ ಫೋಟೊ ಶೇರ್ ಮಾಡಿದ್ದರು. ಇದೀಗ ಮತ್ತೆ ಕಾಮಕ್ಯ ಮಂದಿರಕ್ಕೆ ಭೇಟಿ ನೀಡಿದ್ದಾರೆ. 

41 ಸಾವಿರ ರೂ ಬನಾರಸಿ ಕುರ್ತಾ ಧರಿಸಿ ಕಾಮಾಕ್ಯ ದೇಗುಲಕ್ಕೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಭೇಟಿ!

ಹೌದು, ಇದೀಗ ದರ್ಶನ್ (Darshan Thoogudeepa) ಜೈಲಿನಿಂದ ಬಿಡುಗಡೆಯಾಗಿ ಹಲವು ತಿಂಗಳ ಬಳಿಕ ವಿಜಯಲಕ್ಷ್ಮೀ ಮತ್ತೆ ಅಸ್ಸಾಂನಲ್ಲಿರುವ ಶಕ್ತಿಶಾಲಿ ದೇವತೆಯಾದ, ಶಕ್ತಿ ಪೀಠಗಳಲ್ಲಿ ಒಂದಾದ ಕಾಮಕ್ಯ ಮಂದಿರಕ್ಕೆ ಭೇಟಿ ನೀಡಿದ್ದಾರೆ. ನಂಬಿಕೆಯ ಪ್ರಕಾರ ಈ ದೇಗುಲದಲ್ಲಿ ಹರಕೆ ಹೇಳಿದರೆ, ಆ ಕಾರ್ಯವು ಖಂಡಿತವಾಗಿಯೂ ನೆರವೇರುತ್ತೆ ಎನ್ನುವ ನಂಬಿಕೆ ಇದೆ. ಅದೇ ರೀತಿ ವಿಜಯಲಕ್ಷ್ಮಿಯ ಬೇಡಿಕೆಯೂ ಈಡೇರಿದ್ದು, ಇದೀಗ ಹರಕೆ ತೀರಿಸೋಕೆ ವಿಜಯಲಕ್ಷ್ಮಿ ಕಾಮಕ್ಯಾ ದೇಗುಲಕ್ಕೆ ಭೇಟಿ ನೀಡಿರಬಹುದು ಎನ್ನಲಾಗಿದೆ. ಕೆಂಪು ಬಣ್ಣದ ಸಲ್ವಾರ್ ಧರಿಸಿ ವಿಜಯಲಕ್ಷ್ಮೀ ದೇಗುಲಕ್ಕೆ ಭೇಟಿ ನೀಡಿದ್ದು, ಈ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇವರ ಫೋಟೊಗೆ ದರ್ಶನ್ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲದೇ ಅತ್ತಿಗೆ ಅಣ್ಣನಿಗಾಗಿ ಹರಕೆ ತೀರಿಸೋಕೆ ಹೋಗಿದ್ದಾರೆ ಅಂತಾನೂ ಹೇಳುತ್ತಿದ್ದಾರೆ. 

ದರ್ಶನ್‌ನ ಕಾಪಾಡಿದ ಅಸ್ಸಾಂನ 'ಕಾಮಾಕ್ಯ', ಇಲ್ಲಿ ಹರಕೆ ಹೊತ್ತವರಿಗೆ ಸೋಲೇ ಇಲ್ಲ
ಕಾಮಾಕ್ಯ ದೇವಿ ಮಂದಿರದ ಬಗ್ಗೆ ಹೇಳೋದಾದ್ರೆ ಇದು ಅತ್ಯಂತ ಪ್ರಭಾವಿ ಹಾಗೂ ಶಕ್ತಿ ದೇವತೆಯಾಗಿರುವ ಮಾತೆ ಸತಿಯ ಯೋನಿ ಬಿದ್ದಂತಹ ತಾಣವಾಗಿದೆ. ಭಾರತದ 51 ಭಾಗದಲ್ಲಿ ಸತಿ ದೇವಿಯ ದೇಹದ ತುಣುಕುಗಳು ಬಿದ್ದಿದೆ. ಈ ಸ್ಥಳಗಳು ಇದೀಗ ಶಕ್ತಪೀಠವಾಗಿ (Shakthi Peetha) ಗುರುತಿಸಿಕೊಂಡಿದೆ.  ಅವುಗಳಲ್ಲಿ ಒಂದು ಕಾಮಾಕ್ಯ ದೇವಿ ಶಕ್ತಿ ಪೀಠ, ಈ ಮಂದಿರ ಎಷ್ಟೊಂದು ಪವರ್ ಫುಲ್ ಆಗಿದೆ ಅಂದ್ರೆ, ಈ ದೇಗುಲದಲ್ಲಿ ಏನೇ ಬೇಡಿಕೊಂಡರೂ ಸಹ ಅದು ನೆರವೇರುತ್ತದೆ ಎನ್ನುವ ನಂಬಿಕೆ ಇದೆ. ಹಾಗಾಗಿಯೇ ದೇಶದ ಪ್ರಸಿದ್ಧ ನಟ-ನಟಿಯರು ಕೂಡ ಈ ದೇಗುಲಕ್ಕೆ ಹೆಚ್ಚಾಗಿ ಭೇಟಿ ನೀಡುತ್ತಲೇ ಇರುತ್ತಾರೆ. ವಿಜಯಲಕ್ಷ್ಮೀ ಕೂಡ ಗಂಡನ ಬಿಡುಗಡೆಗೆ ಮೊರೆ ಇಟ್ಟಿದ್ದು ಕಾಮಾಕ್ಯ ದೇವಿಗೆ (Kamakhya Devi). ಇದೀಗ ಆ ಬೇಡಿಕೆಯೂ ಈಡೇರಿರುವ ಸಂಭ್ರಮದಲ್ಲಿದ್ದಾರೆ ವಿಜಯಲಕ್ಷ್ಮೀ. 

ದರ್ಶನ್‌ಗೆ ಜಾಮೀನು ಸಿಕ್ಕಿದ್ದೇ ಈ ದೇವರಿಂದ! ವಿಶೇಷ ನಮನ ಸಲ್ಲಿಸಿದ ವಿಜಯಲಕ್ಷ್ಮೀ, ಮಹಾ ಕಾರಣಿಕದ ಆ ದೇವತೆ ಯಾರು?

ಕಾಮಾಕ್ಯ ಮಂದಿರವು ಅಸ್ಸಾಂನ ರಾಜಧಾನಿ ದಿಸ್ಪುರದಿಂದ ಸುಮಾರು 10 ಕಿಮೀ ದೂರದಲ್ಲಿರುವ ನೀಲಾಂಚಲ್ ಪರ್ವತದ ಮೇಲೆ ಇದೆ. ಈ ದೇವಾಲಯದ ವಿಶೇಷವೆಂದರೆ ಇಲ್ಲಿ ಯಾವುದೇ ದೇವರ ವಿಗ್ರಹ ರೂಪ ಇಲ್ಲ.  ಈ ದೇವಾಲಯದಲ್ಲಿ ದೇವಿಯ ಯೋನಿಯನ್ನು ಪೂಜಿಸಲಾಗುತ್ತದೆ. ಇಂದಿಗೂ ಇಲ್ಲಿ ತಾಯಿ ಋತುಮತಿಯಾಗುತ್ತಾಳೆ. ಆ ಸಂದರ್ಭವನ್ನು ಹಬ್ಬವಾಗಿ ಆಚರಿಸಲಾಗುತ್ತದೆ. ಪ್ರತಿ ವರ್ಷವೂ ಇಲ್ಲಿ ಅಂಬುಬಚ್ಚಿ ಜಾತ್ರೆ ನಡೆಯುತ್ತದೆ. ಜಾತ್ರೆಯ ಸಮಯದಲ್ಲಿ, ಹತ್ತಿರದ ಬ್ರಹ್ಮಪುತ್ರದ ನೀರು ಮೂರು ದಿನಗಳವರೆಗೆ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಇದಕ್ಕೆ ಕಾರಣ ತಾಯಿಗೆ ಋತುಸ್ರಾವವಾಗೋದು ಎನ್ನುವ ನಂಬಿಕೆ ಇದೆ.  ಆ ಮೂರು ದಿನಗಳ ಕಾಲ ದೇಗುಲವನ್ನು ಮುಚ್ಚಲಾಗುತ್ತೆ. ನಾಲ್ಕನೇಯ ದಿನ ಬಾಗಿಲು ತೆರೆಯಲಾಗುತ್ತೆ. ದೇವರಿಗೆ ಇಟ್ಟಂತಹ ಬಿಳಿ ಬಟ್ಟೆ ಕೆಂಪಾಗಿರುತ್ತೆ, ದೇವಿಯ ಋತುಸ್ರಾವದ ಈ ಬಟ್ಟೆಯನ್ನೇ ಇಲ್ಲಿ ಜನರಿಗೆ ಪ್ರಸಾದವಾಗಿ ನೀಡಲಾಗುತ್ತೆ. ಇಲ್ಲಿ ಅಗೋರಿಗಳು ಕೂಡ ಹೆಚ್ಚಾಗಿ ಕಾಣಸಿಗುತ್ತಾರೆ. ಅಲ್ಲದೇ ಈ ಸ್ಥಳ, ವಾಮಾಚಾರ, ಮಾಟ ಮಂತ್ರಕ್ಕೆ ಹೆಚ್ಚು ಪ್ರಸಿದ್ಧಿ ಪಡೆದಿರುವ ತಾಣವಾಗಿದೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬೆಂಗಳೂರಿನಲ್ಲಿ ಬಿಗ್ ಮ್ಯೂಸಿಕಲ್ ನೈಟ್; JAM JUNXION"ನಲ್ಲಿ ಚಂದನ್ ಶೆಟ್ಟಿ ಸೇರಿದಂತೆ ಪ್ರಸಿದ್ಧ ಬ್ಯಾಂಡ್ ಧಮಾಕಾ!
ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep