
ಸುದೀಪ್ ಫ್ಯಾನ್ಸ್ ವಿರುದ್ಧ ದೂರು ನೀಡಿದ ವಿಜಯಲಕ್ಷ್ಮೀ
ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ (Vijayalakshmi Darshan) ಅವರು ತಮ್ಮ ಹೇಳಿಕೆಗೆ ಸೋಷಿಯಲ್ ಮೀಡಿಯಾಗಳಲ್ಲಿ (Social Media) ಬಂದಿರುವ ಕೆಟ್ಟ ಕಾಮೆಂಟ್‌ಗಳ ವಿರುದ್ಧ ಪೊಲೀಸ್ ಸ್ಟೇಷನ್‌ಗೆ ಹೋಗಿ ದೂರು ನೀಡಿದ್ದಾರೆ. ಈ ಹಿಂದೆ ನಟಿ ರಮ್ಯಾ (Ramya) ಅವರು ದರ್ಶನ್ ಫ್ಯಾನ್ಸ್‌ಗಳಿಂದ ಸೋಷಿಯಲ್ ಮೀಡಿಯಾಗಳಲ್ಲಿ ತಮಗೆ ಬಂದ ಕೆಟ್ಟ ಕಾಮೆಂಟ್‌ಗಳ ಬಗ್ಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಇದೀಗ ವಿಜಯಲಕ್ಷ್ಮೀ ಅವರು ಕಿಚ್ಚ ಸುದೀಪ್ (Kichcha Sudeep) ಫ್ಯಾನ್ಸ್ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಹಾಗಿದ್ದರೆ ನಿಜವಾಗಿಯೂ ಸ್ಯಾಂಡಲ್‌ವುಡ್ ಅಂಗಳದಲ್ಲಿ ಅದೇನು ನಡೆಯುತ್ತಿದೆ? ಈ ಸ್ಟೋರಿ ನೋಡಿ..
ನಟ ಕಿಚ್ಚ ಸುದೀಪ್ ಅವರು ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ 'ಮಾರ್ಕ್' ಈವೆಂಟ್‌ನಲ್ಲಿ 'ಯುಧ್ಧ'ದ ಬಗ್ಗೆ ಮಾತನ್ನಾಡಿದ್ದರು. ಅದು ದರ್ಶನ್ ಹಾಗೂ ಸುದೀಪ್ ಫ್ಯಾನ್ಸ್ ಮಧ್ಯೆ ಸ್ಟಾರ್ ವಾರ್ ಹುಟ್ಟುಹಾಕಿತ್ತು. ಬಳಿಕ, ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಕೂಲ್ ಆಗಿ ನಟ ಸುದೀಪ್ ಅವರಿಗೆ ಟಾಂಗ್ ಕೊಟ್ಟಿದ್ದರು. ಆ ಬಳಿಕ, ದರ್ಶನ್ ಆಪ್ತ, ನಟ ಧನ್ವೀರ್ ಗೌಡ ಅವರು ದರ್ಶನ್ ಪರ ಬ್ಯಾಟ್ ಬೀಸಿದ್ದರು. ಅದಾದ ಬಳಿಕ, ಸೋಷಿಯಲ್ ಮೀಡಿಯಾಗಳಲ್ಲಿ ಸುದೀಪ್ ಹಾಗೂ ದರ್ಶನ್ ಅಭಿಮಾನಿಗಳು ಪರಸ್ಪರ ದೂಷಿಸಿ ಕಾಮೆಂಟ್ ಹಾಕುತ್ತಿದ್ದಾರೆ.
ಈ ಮಧ್ಯೆ ನಿರ್ದೇಶಕ ಜೋಗಿ ಪ್ರೇಮ್ ಅವರು 'ದರ್ಶನ-ಸುದೀಪ್ ಇಬ್ಬರೂ ಜೋಡೆತ್ತುಗಳು ಇದ್ದಂತೆ.. ಅವರಿಬ್ಬರೂ ಒಬ್ಬರ ಮೇಲೆ ಮತ್ತೊಬ್ಬರೂ ಎಂದೂ ಕೆಟ್ಟದಾಗಿ ಹೇಳಿಕೆ ನೀಡೋದಿಲ್ಲ. ಅವರವರ ಪಾಡಿಗೆ ಅವರವರು ಇರುತ್ತಾರೆ' ಎಂದಿದ್ದರು. ಸುದೀಪ್ ಹಾಗೂ ದರ್ಶನ್ ಫ್ಯಾನ್ಸ್ ಮಧ್ಯೆ ಸೋಷಿಯಲ್ ಮೀಡಿಯಾಗಳಲ್ಲಿ ವಾರ್ ಹೊತ್ತಿ ಉರಿಯುತ್ತಿದ್ದರೆ, ಇತ್ತ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಪೋಸ್ಟ್ ಮೂಲಕ ನಟ ಸುದೀಪ್ ಹಾಗೂ ಅವರ ಅಭಿಮಾನಿಗಳಿಗೆ ಟಾಂಗ್ ಕೊಟ್ಟಿದ್ದಾರೆ. ಜೊತೆಗೆ, ತಮ್ಮ ವಿರುದ್ಧ ಕೆಟ್ಟ ಕಾಮೆಂಟ್ ಹಾಕಿರುವ ಸುದೀಪ್ ಅಭಿಮಾನಿಗಳ ಮೇಲೆ ಕಾಮೆಂಟ್ ಸ್ಕ್ರೀನ್ ಶಾಟ್ ಸಮೇತ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
'ಕ್ಲಾಸ್ ಫ್ಯಾನ್ಸ್ ಎಂದು ಕರೆಯಲ್ಪಡುವ ಎಲ್ಲರಿಗೂ ನಿಮ್ಮ ಮಟ್ಟವನ್ನು ಸಾರ್ವಜನಿಕವಾಗಿ ಪ್ರದರ್ಶಿಸಿದ್ದಕ್ಕಾಗಿ ಧನ್ಯವಾದಗಳು. ಈ ಖಾತೆಗಳ ವಿರುದ್ಧ ಪೊಲೀಸ್ ದೂರುಗಳನ್ನು ದಾಖಲಿಸಲಾಗಿದೆ. ಅಭಿಮಾನದ ಹೆಸರಲ್ಲಿ ಇನ್ನುಮುಂದೆ ಕಿರುಕುಳ ನಡೆಯುವುದಿಲ್ಲ.
ಕೀಳು ಭಾಷೆ ಬಳಸುವ ಕ್ಲಾಸಿ ಹುಡುಗಿಯರಿಗೆ ಮತ್ತು ತಾಯಂದಿರು, ಸಭ್ಯತೆ ಮತ್ತು ಮೂಲಭೂತ ಶಿಷ್ಟಾಚಾರಗಳನ್ನು ಬೈಪಾಸ್ ಮಾಡಿ ನೇರವಾಗಿ ಆಕಾಶದಿಂದ ಬಿದ್ದಂತೆ ಕಾಣುವ ಕ್ಲಾಸಿ ಪುರುಷರಿಗೆ ವಿಶೇಷ ಅಭಿನಂದನೆಗಳು. ಇದರ ಬಗ್ಗೆ ಯಾವುದೇ ವಿವರಣೆ ಅಗತ್ಯವಿಲ್ಲ.
ನಾನು ಮೌನವಾಗಿದ್ದುಕೊಂಡು ಇದನ್ನು ಅನುಮತಿಸುವುದಿಲ್ಲ. ಇದು ನಿಮ್ಮ ನಿತ್ಯದ ಕಾಯಕ ಆಗಿರಬಹುದು, ಇಂದು ಮತ್ತು ಮುಂದಿನ ದಿನಗಳಲ್ಲಿ ದೇವರು ನಿಮ್ಮನ್ನು ಆಶೀರ್ವದಿಸಲಿ. ಇದು ಕೇವಲ ನನ್ನ ಬಗ್ಗೆ ಅಲ್ಲ. ಪ್ರತಿಯೊಬ್ಬ ಮಹಿಳೆಯೂ ಗೌರವಕ್ಕೆ ಅರ್ಹಳು ಎಂದು ಇದು ನಿಮಗೆ ನೆನಪಿಸುತ್ತದೆ.'
ಎಂದು ವಿಜಯಲಕ್ಷ್ಮೀ ಪೋಸ್ಟ್ ಮಾಡಿದ್ದಾರೆ. ಸದ್ಯಕ್ಕೆ ಹೊತ್ತಿ ಉರಿಯುತ್ತಿರುವ ಸುದೀಪ್-ದರ್ಶನ್ ಫ್ಯಾನ್ಸ್ ವಾರ್ ಮುಂದೆ ಎಲ್ಲಿಗೆ ತಲುಪುತ್ತೋ ಗೊತ್ತಿಲ್ಲ. ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಹಲವರು 'ಕನ್ನಡ ಚಿತ್ರರಂಗದಲ್ಲಿ ಈ ಫ್ಯಾನ್ಸ್ ವಾರ್, ಸ್ಟಾರ್ ವಾರ್ ಅನ್ನೋದು ರಾಜ್‌ಕುಮಾರ್-ವಿಷ್ಣುವರ್ಧನ್ ಕಾಲದಲ್ಲೇ ಶುರುವಾಗಿ, ಇಂದಿಗೂ ಅದು ಮುಗಿದಿಲ್ಲ.. ಸದ್ಯಕ್ಕೆ ಅದು ಮುಗಿಯುವ ಲಕ್ಷಣಗಳೂ ಕಾಣುತ್ತಿಲ್ಲ. ಇದು ಚಿತ್ರರಂಗಕ್ಕೆ ಹಾಗೂ ಪ್ರೇಕ್ಷಕರ ಮಧ್ಯೆ ಒಳ್ಳೆಯ ಬೆಳವಣಿಗೆ ಅಲ್ಲ' ಎಂದು ಪೋಸ್ಟ್ ಮಾಡಿ ಈ 'ಅಭಿಮಾನಿಗಳ ಹಾಗೂ ನಟರ ಸೋಷಿಯಲ್ ಮೀಡಿಯಾದಲ್ಲಿನ ಯುದ್ಧ'ಕ್ಕೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಮುಂದೇನು ಎಂಬುದನ್ನು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.