Wedding Anniversary: ಅದ್ಭುತ ಕಂಠಸಿರಿಯಿಂದ ಪತ್ನಿಯ ನೆನೆದ ವಿಜಯ ರಾಘವೇಂದ್ರ: ಫ್ಯಾನ್ಸ್​ ಕಂಬನಿ

Published : Aug 26, 2025, 04:07 PM IST
Vijaya  Raghavendra wedding Anniversary

ಸಾರಾಂಶ

ವಿಜಯ ರಾಘವೇಂದ್ರ ಮತ್ತು ಸ್ಪಂದನಾ ಅವರು ಮದುವೆಯಾಗಿ ಇಂದಿಗೆ 18 ವರ್ಷಗಳಾಗಿವೆ. ಪತ್ನಿಯನ್ನು ಕಳೆದುಕೊಂಡ ಬಳಿಕ ಇದು 3ನೇ ವಾರ್ಷಿಕೋತ್ಸವ. ಪತ್ನಿಗಾಗಿ ಹಾಡು ಹಾಡಿದ್ದಾರೆ ನಟ. ವಿಡಿಯೋ ವೈರಲ್​ ಆಗಿದೆ. 

ಸ್ಯಾಂಡಲ್​ವುಡ್​ನ ಕ್ಯೂಟ್​ ಕಪಲ್​ ಎಂದೇ ಫೇಮಸ್​ ಆದವರು ವಿಜಯ ರಾಘವೇಂದ್ರ (Vijaya Raghavendra) ಮತ್ತು ಸ್ಪಂದನಾ ವಿಜಯ್ ರಾಘವೇಂದ್ರ (Spandana). ಇಂದು ಅವರ ಮದುವೆಗೆ 18ರ ಸಂಭ್ರಮ. ಆದರೆ ಈ ಸಂಭ್ರಮವನ್ನು ಆಚರಿಸಲು ಈಗ ಸ್ಪಂದನಾ ಇಲ್ಲ. ಆಗಸ್ಟ್ 6, 2023ರಂದು ಸ್ಪಂದನಾ ವಿಜಯ್ ರಾಘವೇಂದ್ರ ಚಿರನಿದ್ರೆಗೆ ಜಾರಿದ್ದರು. ಆಗಸ್ಟ್ 26, 2007ರಲ್ಲಿ ವಿಜಯ್ ರಾಘವೇಂದ್ರ, ಸ್ಪಂದನಾ ಅವರನ್ನು ಮದುವೆ ಆಗಿದ್ದರು. ಲವ್ ಮ್ಯಾರೇಜ್ ಆಗಿದ್ದ ವಿಜಯ್ ರಾಘವೇಂದ್ರ ಪತ್ನಿಯನ್ನು ಅಪಾರವಾಗಿ ಪ್ರೀತಿಸುತ್ತಿದ್ದರು. ಸ್ಯಾಂಡಲ್ವುಡ್ ನಲ್ಲಿ ವಿಜಯ್ ಹಾಗೂ ಸ್ಪಂದನಾ ಮಾದರಿ ಜೋಡಿಯಾಗಿದ್ದರು. ಶೌರ್ಯ ಹೆಸರಿನ ಮಗನ ಜೊತೆ ಈ ಜೋಡಿಯ ಫೋಟೋಗಳು ಅಭಿಮಾನಿಗಳ ಮನತಣಿಸುತ್ತಿತ್ತು. ಮಾತು ಮಾತಿಗೂ ಸ್ಪಂದನಾ ನೆನೆಯುತ್ತಿದ್ದ ವಿಜಯ್ ರಾಘವೇಂದ್ರ ಅವರಿಗೆ ಆಗಸ್ಟ್ ಆರು, ಜೀವನದಲ್ಲಿ ಮರೆಯಲಾಗದ ದಿನವಾಯ್ತು. ಸ್ನೇಹಿತರ ಜೊತೆ ಬ್ಯಾಂಕಾಂಗ್ ಗೆ ತೆರಳಿದ್ದ ಸ್ಪಂದನಾ, ಆಗಸ್ಟ್ 6ರಂದು ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಇದು ವಿಜಯ್ ರಾಘವೇಂದ್ರ ಅವರಿಗೆ ಮಾತ್ರವಲ್ಲ ಇಡೀ ರಾಜ್ಯಕ್ಕೆ ಶಾಕ್ ನೀಡಿತ್ತು. ಚಿಕ್ಕ ವಯಸ್ಸಿನಲ್ಲಿಯೇ ವಿಜಯ್ ರಾಘವೇಂದ್ರ ತಮ್ಮ ಮುದ್ದಿನ ಪತ್ನಿಯನ್ನು ಕಳೆದುಕೊಂಡಿದ್ದರು.

ವಿಜಯ್ ರಾಘವೇಂದ್ರ, ಸ್ಪಂದನಾ ಇಲ್ಲದೆ ಇದೀಗ 3ನೇ ಮದುವೆ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ತಿದ್ದಾರೆ. ಇದುದ ಅವರಿಗೆ ಪತ್ನಿಯಿಲ್ಲದ 3ನೇ ವಾರ್ಷಿಕೋತ್ಸವ. ಮೊದಲ ವರ್ಷದ ವಾರ್ಷಿಕೋತ್ಸವ ಇನ್ನು 20 ದಿನ ಇರುವಾಗಲೇ ಸ್ಪಂದನಾ ಅಗಲಿದ್ದರು. ಆಗಸ್ಟ್ ಆರರಂದು ಸ್ಪಂದನಾ ನಗ್ತಿರುವ ಫೋಟೋ ಹಂಚಿಕೊಂಡಿದ್ದ ವಿಜಯ್ ರಾಘವೇಂದ್ರ ಚಿನ್ನ,ಮೌನದಲ್ಲಿ ಅರಳಿದ ನಗು ನಿನ್ನದು, ನೀ ನಡೆದ ಹಾದಿಯ ನೆನಪಿನ ಬೆಳಕು ನನ್ನದು ಎಂದಿದ್ದರು. ಆಗಸ್ಟ್ 9ರಂದು ಐ ಲವ್ ಯು ಚಿನ್ನು ಎನ್ನುತ್ತಲೇ ಸ್ಪಂದನಾರನ್ನು ನೆನೆದಿದ್ದರು ವಿಜಯ್ ರಾಘವೇಂದ್ರ. ಕಳೆದ ವರ್ಷವೂ ಪತ್ನಿಯನ್ನು ಭಾವುಕರಾಗಿ ನೆನಪಿಸಿಕೊಂಡಿದ್ದರು.

ಇದೀಗ, ಪತ್ನಿಗಾಗಿ ಜೀವ ತುಂಬಿದ ಕಣ್ಣುಗಳು ಜೀವನ ಬೆಸೆದ ಕ್ಷಣಗಳು, ನಿನ್ನನು ನೆನೆಯದ ದಿನವಿಲ್ಲ ನೆನಪುಗಳಲ್ಲೆಲ್ಲಾ ನೀನೇ ಎಲ್ಲ, I Love You Chinna ಎಂದು ಬರೆದುಕೊಂಡಿರುವ ವಿಜಯ ರಾಘವೇಂದ್ರ ಅವರು, ಭಾಗ್ಯದ ಲಕ್ಷ್ಮೀ ಬಾರಮ್ಮ ಚಿತ್ರದ ಯಾವ ಕವಿಯು ಬರೆಯಲಾರ ಹಾಡಿಗೆ ದನಿಯಾಗಿದ್ದಾರೆ. ಈ ಮೂಲಕ ಪತ್ನಿಯನ್ನು ನೆನೆಪಿಕೊಂಡಿದ್ದಾರೆ. ಇವರ ಈ ಹಾಡನ್ನು ಕೇಳಿ ಅಭಿಮಾನಿಗಳು ಭಾವುಕರಾಗಿದ್ದಾರೆ. ನಟನಿಗೆ ಸಾಂತ್ವನ ಹೇಳಿದ್ದಾರೆ. ಸ್ಪಂದನಾ ಅವರು ಎಲ್ಲಿಯೂ ಹೋಗಿಲ್ಲ, ಇಲ್ಲಿಯೇ ಇದ್ದಾರೆ ಎನ್ನುತ್ತಿದ್ದಾರೆ.

ಇದಾಗಲೇ ವಿಜಯ ರಾಘವೇಂದ್ರ ಅವರು ಎರಡನೆಯ ಮದುವೆಯ ಬಗ್ಗೆ ಮಾತನಾಡಿದ್ದಾರೆ. ಇದು ಸಾಧ್ಯವಿಲ್ಲ ಎಂದಿದ್ದಾರೆ. ಮೊದಲಿಗೆ ನಿಮ್ಮ ಚಿತ್ರದ ಯಶಸ್ಸು ಬಂದಾಗ ಪಕ್ಕದಲ್ಲಿ ಇನ್ನೊಬ್ಬರು ಅದನ್ನು ಸಂಭ್ರಮಿಸುತ್ತಿದ್ದರು, ಈಗ...? ಎಂದು ಪ್ರಶ್ನಿಸಿದಾಗ ಅದರ ಒಳಾರ್ಥ ತಿಳಿದ ನಟ ವಿಜಯ ರಾಘವೇಂದ್ರ ಅವರು, ಚಿತ್ರದಲ್ಲಿ ಅಲ್ಲ ಸರ್​, ಅವರು ನನ್ನ ಜೀವನದಲ್ಲಿ ಇದ್ದದ್ದು, ನೀವು ಹೇಳುವ ಪ್ರಶ್ನೆ ನನಗೆ ಅರ್ಥವಾಯಿತು. ಆದರೆ ಆ ಖಾಲಿತನ ಎನ್ನುವುದು ಮೇಲ್ನೋಟಕ್ಕೆ ಇದೆ. ಆದರೆ ಆಕೆ ಇಂದಿಗೂ ನನ್ನ ಮನಸ್ಸಿನಲ್ಲಿ ಜೀವಂತವಾಗಿ ಇದ್ದಾರೆ ಎಂದರು. ನನ್ನ ಮತ್ತು ಮಗನ ಜೊತೆ ಅವರು ಇದ್ದಾರೆ. ಅದೇ ಪ್ರೀತಿಯನ್ನು ಅಭಿಮಾನಿಗಳು ಹೊರಗಡೆಯಿಂದ ತೋರಿಸುತ್ತಿದ್ದಾರೆ. ನನಗೆ ಸಿಕ್ಕಾಗ ಒಳ್ಳೆಯ ಮಾತುಗಳನ್ನಾಡಿಸಿ ಅವರನ್ನು ಜೀವಂತವಾಗಿ ಇರಿಸಿದ್ದಾರೆ. ಯಾವಾಗಲೂ ಪಕ್ಕದ ಸೀಟೇ ಫಿಲ್​ ಆಗಬೇಕೆಂದೇನೂ ಇಲ್ಲ. ಅದು ಆಗಬೇಕೆಂದೇನೂ ಇಲ್ಲ. ಪಕ್ಕದಲ್ಲಿ ಮಗ ಇದ್ದಾನೆ. ಆ ಕಡೆ ಈ ಕಡೆ ಸ್ನೇಹಿತರು ಇದ್ದಾರೆ, ಹಿತೈಷಿಗಳು ಇದ್ದಾರೆ. ಸಿನಿಮಾ ಕಲೀಗ್ಸ್​ ಇದ್ದಾರೆ. ಅಷ್ಟೇ ಸಾಕು ಎನ್ನುವ ಮೂಲಕ 2ನೇ ಮದುವೆಯ ಬಗ್ಗೆ ಮತ್ತೆ ಕೇಳಬೇಡಿ ಎಂದು ಪರೋಕ್ಷವಾಗಿ ನುಡಿದಿದ್ದಾರೆ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ
‘ನೀನಾದೆ ನಾ’ ಹಾಡು 100 Million Views ದಾಟಿದ ಖುಷಿಯಲ್ಲಿ ‘ಯುವರತ್ನ’ ನಾಯಕಿ ಸಯ್ಯೇಷಾ ಸೈಗಲ್