ಸ್ಲಿಮ್‌ ಆಗಲು ಹೋಗಿ ಖುಷ್ಬೂ ಯಡವಟ್ಟು, ಚೆಲುವೆಯ ಸ್ಥಿತಿ ಹಲವರಿಗೆ ಚಿಂತಾಜನಕ!

Published : Feb 14, 2025, 05:52 PM ISTUpdated : Feb 14, 2025, 05:59 PM IST
ಸ್ಲಿಮ್‌ ಆಗಲು ಹೋಗಿ ಖುಷ್ಬೂ ಯಡವಟ್ಟು, ಚೆಲುವೆಯ ಸ್ಥಿತಿ ಹಲವರಿಗೆ ಚಿಂತಾಜನಕ!

ಸಾರಾಂಶ

ಖ್ಯಾತ ನಟಿ ಖುಷ್ಬೂ, ತೂಕ ಇಳಿಸಿಕೊಳ್ಳಲು ಮಾಡಿದ ತೀವ್ರ ವ್ಯಾಯಾಮದಿಂದ ಸ್ನಾಯು ಅಲರ್ಜಿಗೆ ತುತ್ತಾಗಿದ್ದಾರೆ. ಬಾಲಿವುಡ್ ಮತ್ತು ದಕ್ಷಿಣ ಭಾರತದ ಚಿತ್ರರಂಗದಲ್ಲಿ ಪ್ರಸಿದ್ಧಿಯನ್ನು ಪಡೆದ ಖುಷ್ಬೂ, ತೂಕ ಇಳಿಸಿಕೊಂಡರೂ ಆರೋಗ್ಯ ಸಮಸ್ಯೆಯಿಂದ ಖುಷಿ ಅನುಭವಿಸಲು ಸಾಧ್ಯವಾಗುತ್ತಿಲ್ಲ. ಈ ಅಲರ್ಜಿ ಸಾಮಾನ್ಯವಾಗಿ ಕ್ರೀಡಾಪಟುಗಳಲ್ಲಿ ಕಂಡುಬರುತ್ತದೆ.

ಒಂದು ಕಾಲದ ಮಹಾ ಸುಂದರಿ, ಬಾಲಿವುಡ್ ಹಾಗೂ ದಕ್ಷಿಣ ಭಾರತದ ಚೆಂದದ ನಟಿ ಖುಷ್ಬೂ (Khushboo Sunder) ಯಡವಟ್ಟು ಮಾಡಿಕೊಂಡಿದ್ದಾರೆ. ಇಷ್ಟು ಹೇಳಿದರೆ ಸಾಕು, ಅದೆಷ್ಟೂ ಪುರುಷರ ಹೃದಯ ಜೋರಾಗಿ ಹೊಡೆದುಕೊಳ್ಳುತ್ತದೆ. ಪಾಪ, ಅವರಿಗೆ ಅದೇನಾಯ್ತೋ ಏನ್ ಕಥೆನೋ ಅಂತ ಬಹಳಷ್ಟು ಪುರುಷರು ಒದ್ದಾಡತೊಡಗುತ್ತಾರೆ. 90 ದಶಕದಲ್ಲಿ ಹರೆಯ ಅನುಭವಿಸುತ್ತಿದ್ದ ಹುಡುಗರೆಲ್ಲರ ಪಾಡೂ ಇದು ಎನ್ನಬಹುದು! ಕಾರಣ, ಆವತ್ತು ನಟಿ ಖುಷ್ಬೂ ಸ್ಟಾರ್ ನಟಿ, ಚೆಲುವಿನ ಖನಿ!
 
ಹೌದು, ನಟಿ ಖುಷ್ಬೂ ಅವರು 'ದಿ ಬರ್ನಿಂಗ್ ಟ್ರೇನ್' ಹೆಸರಿನ ಬಾಲಿವುಡ್ ಸಿನಿಮಾದಲ್ಲಿ ಬಾಲನಟಿಯಾಗಿ ಬಣ್ಣ ಹಚ್ಚುವ ಮೂಲಕ ಚಿತ್ರರಂಗಕ್ಕೆ ಪರಿಚಯ ಆದವರು. ಬಳಿಕ ಅವರು ತಮಿಳು, ತೆಲುಗು, ಕನ್ನಡ ಹಾಗೂ ಹಿಂದಿ ಸೇರಿದಂತೆ ಬಹಳಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲೇ ಅವರು ಬರೋಬ್ಬರಿ 20 ಸಿನಿಮಾಗಳಲ್ಲಿ ನಟಿಸಿ ಸ್ಯಾಂಡಲ್‌ವುಡ್ ಸಿನಿಪ್ರೇಕ್ಷಕರ ಅಚ್ಚುಮೆಚ್ಚಿನ ನಟಿ ಪಟ್ಟ ಪಡೆದಿದ್ದರು. ಇಂದಿಗೂ ಕೂಡ ಕನ್ನಡಿಗರು ಖುಷ್ಬೂವನ್ನು ಮರೆತಿಲ್ಲ. 

ಆ ವ್ಯಕ್ತಿ ನನ್ನೊಟ್ಟಿಗೆ ಮೇಕಪ್‌ ರೂಮ್‌ನಲ್ಲಿ ಅಶ್ಲೀಲವಾಗಿ ವರ್ತಿಸಿದ್ದರು, ಕೋಪದಿಂದ ಚಪ್ಪಲಿ ತೋರಿಸಿದ್ದೀನಿ: ನಟಿ ಖುಷ್ಬೂ

ನಟ ರವಿಚಂದ್ರನ್ ಅವರ 'ರಣಧೀರ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾದವರು ನಟಿ ಖುಷ್ಬೂ. ಬಳಿಕ, ಸಾಹಸಸಿಂಹ ವಿಷ್ಣುವರ್ಧನ್‌ ನಟನೆಯ 'ಜೀವನದಿ', ಅನಂತ್‌ ನಾಗ್ ನಟನೆಯ 'ಗಗನ' ಹೀಗೆ ಸಾಲುಸಾಲು ಚಿತ್ರಗಳಲ್ಲಿ ನಟಿಸಿದ್ದಾರೆ. ತಮಿಳಿನಲ್ಲಿ ಕೂಡ ಜನಪ್ರಿಯ ನಟಿಯಾಗಿದ್ದವರು ಖುಷ್ಬೂ. ಅವರಿಗೆಂದೇ ತಮಿಳು ಅಭಿಮಾನಿಯೊಬ್ಬ ದೇವಸ್ಥಾನ ಕಟ್ಟಿಸಿ ಮಿತಿಮೀರಿದ ಅಭಿಮಾನ ಪ್ರದರ್ಶಿಸಿದ್ದ. ಬಳಿಕ ಅವರು ಖುಷ್ಬೂ ಸುಂದರ್ ಆದ್ಮೇಲೆ ಅಂತಹ ಹುಚ್ಚಾಟಗಳೆಲ್ಲವೂ ಕಡಿಮೆ ಆಗಿದೆ.

ಇಂಥ ನಟಿ ಖುಷ್ಬೂ ಅವರು ಇದೀಗ ಸಣ್ಣಗಾಗಿದ್ದಾರೆ. ಆದರೆ, ಸ್ನಾಯು ಅಲರ್ಜಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೌದು, ಖುಷ್ಬೂ ಇತ್ತೀಚಿನ ವರ್ಷಗಳಲ್ಲಿ ಜಾಸ್ತಿ ದಪ್ಪಗಾಗಿ ಭಾರವಾದ ದೇಹದಿಂದ ತೊಂದರೆ ಅನುಭವಿಸುತ್ತಿದ್ದರಂತೆ. ಅದಕ್ಕಾಗಿ ಸಣ್ಣಗಾಗಲು ಅವರು ಸಾಕಷ್ಟು ವರ್ಕೌಟ್ ಮೊರೆ ಹೋಗಿದ್ದಾರೆ. ಆದರೆ, ದೇಹಕ್ಕೆ ನೀಡಿದ ವ್ಯಾಯಾಮ ಜಾಸ್ತಿ ಆಯ್ತೋ ಏನೋ ಎಂಬಂತೆ ಅವರು ಸ್ಯಾಯು ಅಲರ್ಜಿ ಕಾಯಿಲೆಗೆ ತುತ್ತಾಗಿದ್ದಾರೆ. 

Kiss controversy: ದಲೀಪ್ ತಾಹಿಲ್‌ 'ಕಿಸ್‌'ಗೆ ಜಯಪ್ರದಾರಿಂದ ಕಪಾಳಮೋಕ್ಷ!

ಈ ಸ್ಯಾಯು ಅಲರ್ಜಿ ಕಾಯಿಲೆ ಸಾಮಾನ್ಯವಾಗಿ ಕ್ರೀಡಾಪಟುಗಳನ್ನು ಬಾಧಿಸುತ್ತದೆ. ಕಾರಣ, ಅವರು ಮಿತಿಮೀರಿದ ವ್ಯಾಯಾಮ ಮಾಡುತ್ತಾರೆ. ಸಾಮಾನ್ಯವಾಗಿ ನಟಿಯರು ಹೆಚ್ಚಿನ ವ್ಯಾಯಾಮ ಮಾಡುವುದಿಲ್ಲ. ಆದರೆ, ನಟಿ ಖುಷ್ಬೂಗೆ ಯಾಕೆ ಈ ಕಾಯಿಲೆ ಬಂತೋ ಗೊತ್ತಿಲ್ಲ. ಆದರೆ, ಸ್ಯಾಯು ಅಲರ್ಜಿಯಿಂದ ಬಳಲುತ್ತಿರುವ ಅವರು ಸಣ್ಣಗಾದರೂ ಅದರ ಖುಷಿ ಅನುಭವಿಸಲು ಸಾಧ್ಯವಾಗುತ್ತಿಲ್ಲ. ಸ್ಲಿಮ್ ಆಗಲು ಹೋಗಿ ಯಡವಟ್ಟು ಮಾಡಿಕೊಂಡಿದ್ದಾರೆ. ಈಗ ಸ್ಲಿಮ್ ಏನೋ ಆಗಿದ್ದಾರೆ, ಆದರೆ ಆರೋಗ್ಯ ಕೈ ಕೊಟ್ಟಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಬೆಂಗಳೂರಿನಲ್ಲಿ ಬಿಗ್ ಮ್ಯೂಸಿಕಲ್ ನೈಟ್; JAM JUNXION"ನಲ್ಲಿ ಚಂದನ್ ಶೆಟ್ಟಿ ಸೇರಿದಂತೆ ಪ್ರಸಿದ್ಧ ಬ್ಯಾಂಡ್ ಧಮಾಕಾ!
ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep