ಪ್ರೇಮಿಗಳ ದಿನಕ್ಕೆ ಪೊಗರು ಟೀಮ್‌ನ ಸರ್ಪೈಸ್‌;ತಮಿಳಿನಲ್ಲೂ ಖರಾಬು ಸಾಂಗ್‌ ರಿಲೀಸ್‌!

Kannadaprabha News   | Asianet News
Published : Feb 08, 2021, 08:52 AM IST
ಪ್ರೇಮಿಗಳ ದಿನಕ್ಕೆ ಪೊಗರು ಟೀಮ್‌ನ ಸರ್ಪೈಸ್‌;ತಮಿಳಿನಲ್ಲೂ ಖರಾಬು ಸಾಂಗ್‌ ರಿಲೀಸ್‌!

ಸಾರಾಂಶ

ಪ್ರೇಮಿಗಳ ದಿನಕ್ಕೆ ದಾವಣಗೆರೆಯಲ್ಲಿ ಪೊಗರು ಚಿತ್ರದ ಗ್ರ್ಯಾಂಡ್‌ ಆಡಿಯೋ ರಿಲೀಸ್‌ ಮಾಡುತ್ತಿರುವುದಾಗಿ ಧ್ರುವ ಸರ್ಜಾ ಹೇಳಿದ್ದಾರೆ.

ಸೋಷಿಯಲ್‌ ಮೀಡಿಯಾ ಲೈವ್‌ನಲ್ಲಿ ಮಾತನಾಡಿದ ಧ್ರುವಸರ್ಜಾ, ‘ಪೊಗರು ತಮಿಳು ವರ್ಶನ್‌ನಲ್ಲಿ ನಿನ್ನೆ ಮಧ್ಯರಾತ್ರಿ 12 ಗಂಟೆ 12 ನಿಮಿಷಕ್ಕೆ ಖರಾಬು ಹಾಡು ಹೊರಬಿಟ್ಟಿದ್ದೇವೆ. ಇದು ತಂಡದ ತಕ್ಷಣದ ನಿರ್ಧಾರವಾಗಿತ್ತು’ ಎಂದರು.

‘ದಾವಣಗೆರೆಯಲ್ಲಿ ನಡೆಯುವ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಇಂಟ್ರೊಡಕ್ಷನ್‌ ಹಾಡು ರಿಲೀಸ್‌ ಮಾಡ್ಬೇಕಾ ಅಥವಾ ತಾಯಿ ಸೆಂಟಿಮೆಂಟ್‌ ಇರುವ ಹಾಡು ಬಿಡುಗಡೆ ಮಾಡಬೇಕಾ ಇಲ್ಲವೇ ಒಂದು ನಿಮಿಷದ ಟ್ರೇಲರ್‌ ಬಿಡುಗಡೆ ಮಾಡಬೇಕಾ ಎಂಬುದನ್ನು ಅಭಿಮಾನಿಗಳು ನಿರ್ಧರಿಸಬೇಕು. ಬಹುಮತ ನೋಡಿಕೊಂಡು ಯಾವ ಆಡಿಯೋ ರಿಲೀಸ್‌ ಅನ್ನೋದನ್ನು ನಿರ್ಧರಿಸುತ್ತೇವೆ. ಶ್ರೇಯಸ್‌ ಮೀಡಿಯಾ ವತಿಯಿಂದ ನಡೆಯುವ ಬೃಹತ್‌ ಕಾರ್ಯಕ್ರಮದಲ್ಲಿ ಸಾಕಷ್ಟುಸಮಯದಿಂದ ಸ್ಟೇಜ್‌ನಲ್ಲಿ ಒಟ್ಟಾಗಿರದ ಇಬ್ಬರು ಸೆಲೆಬ್ರಿಟಿಗಳು ಭಾಗವಹಿಸುತ್ತಾರೆ. ಅವರು ಯಾರು ಅನ್ನೋದೂ ಸರ್ಪೈಸ್‌’ ಎಂದರು.

ಮೂರು ವರ್ಷದ ನಂತರ ಕನ್ನಡಿಗರ ಮುಂದೆ ರಶ್ಮಿಕಾ ಮಂದಣ್ಣ; ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ! 

‘ ಈಗಾಗಲೇ ಚೆನ್ನೈಯಲ್ಲಿ ಪೊಗರು ಪ್ರಚಾರದ ಕಾರ್ಯ ಸಂಪೂರ್ಣವಾಗಿದೆ. ಇಂದಿನಿಂದ ತೆಲುಗುವಿನಲ್ಲಿ ಪಬ್ಲಿಸಿಟಿ ಆರಂಭಿಸುತ್ತಿದ್ದೇವೆ. ಫೆ.19ರಂದು ಚಿತ್ರ ಬಿಡುಗಡೆಯಾಗುತ್ತಿದ್ದು, ನಾನು ಯಾವ ಥಿಯೇಟರ್‌ನಲ್ಲಿ ಚಿತ್ರ ನೋಡುತ್ತೀನಿ ಅನ್ನೋದನ್ನು ದಾವಣಗೆರೆಯಲ್ಲಿ ತಿಳಿಸುತ್ತೇನೆ’ ಎಂದೂ ಧ್ರುವ ಸರ್ಜಾ ಹೇಳಿದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Mark Movie: ಡಿಸೆಂಬರ್‌ನಲ್ಲಿ ಏಕಕಾಲಕ್ಕೆ ಸ್ಟಾರ್‌ಗಳ ಸಿನಿಮಾ ರಿಲೀಸ್;‌ ಕಿಚ್ಚ ಸುದೀಪ್‌ ಏನಂದ್ರು?
ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!