ವಿಜಯ್‌ಗೆ ಕನ್ನಡದಲ್ಲೇ ನಮನ ಸಲ್ಲಿಸಿದ ಯುಎಸ್ ಕಾನ್ಸುಲೇಟ್ ಜನರಲ್

Published : Jun 15, 2021, 10:19 PM IST
ವಿಜಯ್‌ಗೆ ಕನ್ನಡದಲ್ಲೇ ನಮನ ಸಲ್ಲಿಸಿದ ಯುಎಸ್ ಕಾನ್ಸುಲೇಟ್ ಜನರಲ್

ಸಾರಾಂಶ

* ಸಂಚಾರಿ ವಿಜಯ್ ಗೆ ಅಂತಿಮ ನಮನ * ಕನ್ನಡದಲ್ಲಿ ಟ್ವೀಟ್ ಮಾಡಿದ ಯು.ಎಸ್. ಕಾನ್ಸುಲೇಟ್ ಜನರಲ್ * ಉತ್ತಮ ಬೆಳವಣಿಗೆ ಎಂದ ಕನ್ನಡಿಗರು

ಚೆನ್ನೈ(ಜೂ.  15)  ನಟ ಸಂಚಾರಿ ವಿಜಯ್ ಅಭಿಮಾನಿಗಳನ್ನು ಅಗಲಿದ್ದಾರೆ. ಇನ್ನಡ ಚಿತ್ರರಂಗ  ಸಂಚಾರಿ ವಿಜಯ್ ಅವರಿಗೆ ಅಂತಿಮ ನಮನ ಸಲ್ಲಿಸಿದೆ. ಸೋಶಿಯಲ್ ಮೀಡಿಯಾ ಮುಖೇನ ಅವರೊಂದಿಗೆ ಕೆಲಸ ಮಾಡಿದ ಅನೇಕರು ನೆನಪು ಹಂಚಿಕೊಂಡಿದ್ದಾರೆ.  ಈ ನಡುವೆ ಯು.ಎಸ್. ಕಾನ್ಸುಲೇಟ್ ಜನರಲ್, ಚೆನ್ನೈನ ಅಧಿಕೃತ ಟ್ವಿಟರ್ ಖಾತೆಯಿಂದ ಕನ್ನಡದಲ್ಲಿಯೇ ಟ್ವೀಟ್ ಮಾಡಿದೆ.

'ರಾಷ್ಟ್ರ ಪ್ರಶಸ್ತಿ ವಿಜೇತ  ಸಂಚಾರಿ ಅವರ ಕುಟುಂಬ ಹಾಗೂ ಅಭಿಮಾನಿ ಬಳಗಕ್ಕೆ ನಮ್ಮ ಸಂತಾಪಗಳು. 2018ರಲ್ಲಿ ಚೆನ್ನೈನ ಅಮೆರಿಕ ದೂತಾವಾಸದಲ್ಲಿ ಪ್ರೈಡ್ ತಿಂಗಳ ಆಚರಣೆಯ ಅಂಗವಾಗಿ LGBTQi+ ಸಮುದಾಯದ ಸಂಘರ್ಷವನ್ನು ಬಿಂಬಿಸುವ ಪ್ರಶಸ್ತಿ ವಿಜೇತ ಚಿತ್ರ “ನಾನು ಅವನಲ್ಲ…ಅವಳು” ಪ್ರದರ್ಶನ-ಸಂವಾದದಲ್ಲಿ ಸಂಚಾರಿ ವಿಜಯ್ ಭಾಗಿಯಾಗಿದ್ದರ.'  ಅವರ ಆತ್ಮಕ್ಕೆ ಶಾಂತಿ ಕೋರುತ್ತೇವೆ ಎಂದು  ಮಾಡಿರುವ ಟ್ವೀಟ್ ನ್ನು ಕನ್ನಡಿಗರು ಸ್ವಾಗತ ಮಾಡಿದ್ದಾರೆ.

ಸಂಚಾರಿ ವಿಜಯ್‌ಗೆ ಅಂತಿಮ ನಮನ ಸಲ್ಲಿಸಿದ ಸ್ಯಾಂಡಲ್‌ವುಡ್

ಧನ್ಯವಾದಗಳು, ನಮ್ಮ ದೇಶದವರೆ ಹೀಗೆ ಸಾಮಾನ್ಯ ಜನರಿಗೆ ಅರ್ಥ ಆಗುವ ರೀತಿ ಹಾಕುವುದಿಲ್ಲ ಎಂದು ಟ್ವಿಟರಿಗರೊಬ್ಬರು ಕಮೆಂಟ್ ಮಾಡಿದ್ದಾರೆ.  ಒಬ್ಬ ಕನ್ನಡದ ಕಲಾವಿದನಿಗೆ ಸರಿಯಾದ ರೀತಿಯಲ್ಲಿ ಗೌರವ ಸೂಚಿಸಿದ್ದೀರಿ ಎಂದು ಹೇಳಿದ್ದಾರೆ.

ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಸಂಚಾರಿ ವಿಜಯ್ ಅವರ ಮೆದುಳು  ಕೆಲಸ ಮಾಡುವುದನ್ನ ನಿಲ್ಲಿಸಿತ್ತು. ಅಂತಿಮವಾಗಿ  ಎಲ್ಲ ಪ್ರಯತ್ನಗಳು ಮುಗಿದ ಮೇಲೆ ಅವರ ಕುಟುಂಬ ಅಂಗಾಗ ದಾನಕ್ಕೆ ಒಪ್ಪಿಗೆ ನೀಡಿತು. ಸಂಚಾರಿ ವಿಜಯ್ ನೆನಪಿನಲ್ಲಿ ಅಜರಾಮರ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಮುಸ್ಲಿಮರ ವಿರುದ್ಧ ದ್ವೇಷದ ಅಸ್ತ್ರವಾಗಿ ವಂದೇ ಮಾತರಂ ಬಳಸಲಾಗ್ತಿದೆ: ನಟ ಕಿಶೋರ್‌ ಆಕ್ರೋಶ!
'ನಿಮ್ಮ ಪ್ರೀತಿಯ ಪ್ರತಿ ಹನಿ ಅವರಿಗೆ ತಲುಪಿಸುತ್ತೇನೆ..' ಡೆವಿಲ್‌ ವೀಕ್ಷಿಸಿ ಮನತುಂಬಿ ಬರೆದ ವಿಜಯಲಕ್ಷ್ಮೀ ದರ್ಶನ್‌