
ದರ್ಶನ್ ಅಲ್ಲ ಬೇರೆ?
ಇತ್ತೀಚಿಗೆ ಪರಪ್ಪನ ಅಗ್ರಹಾರದಲ್ಲಿ ರೌಡಿಗಳಿಗೆ ಸೌಲತ್ತುಗಳನ್ನ ನೀಡಿದ್ದ ವಿಡಿಯೋಗಳು ಹೊರಬಂದು ದೊಡ್ಡ ಸಂಚಲನ ಮೂಡಿಸಿದ್ವು. ಅಸಲಿಗೆ ಆ ವಿಡಿಯೋಗಳನ್ನ ದರ್ಶನ್ ತೂಗುದೀಪ ಕಡೆಯವರು ವೈರಲ್ ಮಾಡಿದ್ದಾರೆ ಅನ್ನೋ ಅನುಮಾನದಿಂದ ವಿಚಾರಣೆ ನಡೆಸಲಾಗಿತ್ತು. ಆದ್ರೆ ಆ ವಿಡಿಯೋಗಳ ಹಿಂದೆ ಕೆಲ ರೌಡಿಗಳ ಕೈವಾಡ ಇದೆ ಅನ್ನೋ ವಿಷ್ಯ ಈಗ ರಿವೀಲ್ ಆಗಿದೆ.
ಜೈಲಿನಲ್ಲಿ ದರ್ಶನ್ ನೆಮ್ಮದಿಗೆ ಕಂಟಕ, ದಾಸನಿಗೆ ಜೈಲುವಾಸಿ ರೌಡಿಗಳ ಕಾಟ..?
ಯೆಸ್ ಇತ್ತೀಚಿಗೆ ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗೆ ಮೊಬೈಲ್ ಫೋನ್, ಟಿವಿ ಸೇರಿದಂತೆ ಕೇಳಿದ್ದೆಲ್ಲಾ ಸೌಲತ್ತು ನೀಡಲಾಗ್ತಿದೆ ಅನ್ನೋದು ವೈರಲ್ ಆದ ವಿಡಿಯೋಸ್ ಮೂಲಕ ಜಗಜ್ಜಾಹೀರಾಗಿತ್ತು. ಟೆರೆರಿಸ್ಟ್ , ರೇಪಿಸ್ಟ್ಗಳಿಗೂ ಮೊಬೈಲ್ ಕೊಟ್ಟಿರೋ ವಿಡಿಯೋಸ್ ಹೊರಬಂದು ಸಂಚಲನ ಮೂಡಿಸಿದ್ವು.
ಈ ಬಗ್ಗೆ ಕ್ರಮ ಕೈಗೊಂಡಿದ್ದ ಗೃಹ ಸಚಿವರು, ಸಂಬಂದ ಪಟ್ಟ ಅಧಿಕಾರಿಗಳನ್ನ ಅಮಾನತ್ತು ಮಾಡಿ, ಈ ಕುರಿತ ಸಮಗ್ರ ತನಿಖೆಗೆ ಆದೇಶ ನೀಡಿದ್ರು. ಸದ್ಯ ಈ ಕುರಿತ ತನಿಖೆ ಚುರುಕಾಗಿ ನಡೀತಾ ಇದ್ದು, ಜೈಲೊಳಗಿನ ರಾಜಾತಿಥ್ಯದ ಜೊತೆಗೆ ಈ ವಿಡಿಯೋಗಳು ಹೊರಬಂದಿದ್ದು ಹೇಗೆ , ಹೊರಬಂದು ಹಂಚಿಕೆ ಆಗಿದ್ದು ಹೇಗೆ..? ಅನ್ನೋದರ ತನಿಖೆನೂ ನಡೀತಾ ಇದೆ.
ಈ ವಿಚಾರಣೆ ವೇಳೆ ತನಿಖಾಧಿಕಾರಿಗಳಿಗೆ ಒಂದು ವಿಚಿತ್ರ ಅನುಮಾನ ಬಂದಿತ್ತು. ದರ್ಶನ್ ತನಗೆ ಹಾಸಿಗೆ, ದಿಂಬು ಕೊಟ್ಟಿಲ್ಲ ಅಂತ ಪದೇ ಪದೇ ಕೋರ್ಟ್ಗೆ ದೂರು ಕೊಟ್ಟಿದ್ದಾರೆ. ತಾನು ಕೇಳಿದ್ದನ್ನ ಕೊಡದೇ ಸತಾಯಿಸ್ತಾ ಇರೋ ಜೈಲಾಧಿಕಾರಿಗಳ ಮೇಲಿನ ಕೋಪಕ್ಕೆ ಜೈಲೊಳಗಿನ ಅಕ್ರಮಗಳ ವಿಡಿಯೋ ವೈರಲ್ ಮಾಡಿಸಿರಬಹುದು ಅನ್ನೋ ಅನುಮಾನ ಬಂದಿತ್ತು.
ಅದೇ ಅನುಮಾನದ ಬೆನ್ನತ್ತಿ ದರ್ಶನ್ ಆಪ್ತನಾಗಿರೋ ನಟ ಧನ್ವೀರ್ ವಿಚಾರಣೆ ನಡೆಸಲಾಗಿತ್ತು. ಧನ್ವೀರ್ ವಿಚಾರಣೆಯಲ್ಲಿ ವಿಜಯಲಕ್ಷ್ಮೀ ಹೆಸರು ಹೇಳಿದ್ದಾರೆ ಅಂತ ಕೂಡ ಸುದ್ದಿಯಾಗಿತ್ತು. ಆದ್ರೆ ಆ ಕೇಸ್ಗೀಗ ಟ್ವಿಸ್ಟ್ ಸಿಕ್ಕಿದೆ.
ಹೌದು ವಿಡಿಯೋ ಒಂದರಲ್ಲಿ ಡ್ಯಾನ್ಸ್ ಮಾಡುತ್ತಿದ್ದ ನಟೋರಿಯಸ್ ರೌಡಿ ಶೀಟರ್ ಒಬ್ಬನ ವಿಚಾರಣೆ ಮಾಡಲಾಗಿದೆ. ಆತ ಕೊಲೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಟೋರಿಯಸ್ ರೌಡಿ ವಾರೆಂಟ್ ಇದ್ದರೂ ಪೊಲೀಸರ ಕೈಗೆ ಸಿಗದೆ ಕಣ್ತಪ್ಪಿಸಿ ಓಡಾಡುತ್ತಿದ್ದ. ಸದ್ಯ ಆತನನ್ನ ಪರಪ್ಪನ ಅಗ್ರಹಾರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಜೈಲಿನಲ್ಲಿ ಡ್ಯಾನ್ಸ್ ಮಾಡಿದ್ದು ನಿಜ ಅಂತ ಒಪ್ಪಿಕೊಂಡ ಕುದುರೆ ಮಂಜ, ಆ ವಿಡಿಯೋವನ್ನ ಗುಬ್ಬಚ್ಚಿ ಸೀನ ಮತ್ತು ವಿಲ್ಸನ್ ಗಾರ್ಡನ್ ನಾಗನಿಗೆ ಶೇರ್ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಸದ್ಯ ಬೆಳಗಾವಿ ಜೈಲಿನಲ್ಲಿರೋ ಸೀನ & ನಾಗ ವಿಡಿಯೋವನ್ನ ವೈರಲ್ ಮಾಡಿದ್ರು ಎನ್ನಲಾಗ್ತಾ ಇದೆ.
ಇದೀಗ ಗುಬ್ಬಚ್ಚಿ ಸೀನ ಮತ್ತು ವಿಲ್ಸನ್ ಗಾರ್ಡನ್ ನಾಗನನ್ನ ವಿಚಾರಣೆ ಮಾಡ್ಲಿಕ್ಕೆ ತನಿಖಾಧಿಕಾರಿಗಳು ಮುಂದಾಗಿದ್ದಾರೆ. ಕೋರ್ಟ್ ಅನುಮತಿ ಪಡೆದು ಇಬ್ಬರನ್ನ ವಿಚಾರಣೆ ನಡೆಸಲು ಪೊಲೀಸರು ನಿರ್ಧರಿಸಿದ್ದು ಬೆಳಗಾವಿ ಹಿಂಡಲಗಾ ಜೈಲಿನಲ್ಲಿರೋ ಗುಬ್ಬಚ್ಚಿ ಸೀನ ಮತ್ತು ನಾಗನಿಗೆ ಗಾಳ ಹಾಕಿದ್ದಾರೆ.
ಹೌದು ಕಳೆದ ಸಾರಿ ದರ್ಶನ್ ಪರಪ್ಪನ ಅಗ್ರಹಾರದಲ್ಲಿದ್ದಾಗ ಇದೇ ನಾಗನ ಜೊತೆಗೆ ಫ್ರೆಂಡ್ ಶಿಪ್ ಬೆಳೆಸಿದ್ರು. ನಾಗನ ಜೊತೆ ಕೂತು ದರ್ಶನ್ ದಂ ಹೊಡೀತಾ ಇರೋ ಫೋಟೋ ವೈರಲ್ ಆಗಿತ್ತು. ಆಗ ದಾಸನನ್ನ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಿದ್ರೆ, ನಾಗನನ್ನ ಬೆಳಗಾವಿ ಜೈಲ್ಗೆ ಕಳಿಸಲಾಗಿತ್ತು.
ಇನ್ನೂ ಈ ವರ್ಷ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬರ್ತಡೇ ಆಚರಿಸಿಕೊಂಡಿದ್ದ ಗುಬ್ಬಚ್ಚಿ ಸೀನನನ್ನೂ ಬೆಳಗಾವಿಗೆ ಎತ್ತಂಗಡಿ ಮಾಡಲಾಗಿತ್ತು. ಈಗ ಅದೇ ಸೀನ್ ಌಂಡ್ ನಾಗ ಸೇರಿ ಪರಪ್ಪನ ಅಗ್ರಹಾರ ವಿಡಿಯೋ ವೈರಲ್ ಮಾಡಿದ್ದಾರೆ ಅನ್ನೋ ಆರೋಪ ಬಂದಿದೆ. ಇವರು ದರ್ಶನ್ಗಾಗಿ ಇದನ್ನ ಮಾಡಿದ್ರಾ,,. ಅಥವಾ ಬೇರೆ ಏನಾದ್ರೂ ಉದ್ದೇಶ ಇತ್ತಾ ಅನ್ನೋ ತನಿಖೆ ನಡೀತಾ ಇದೆ.
ಜೈಲು ಅಂದ ಮೇಲೆ ಕ್ರಿಮಿನಲ್ ಗಳ ಸಂತೆ. ಇಲ್ಲಿ ಯಾರು ಅದೇನು ಕ್ರೈಂ ಮಾಡ್ತಾರೋ, ಅದೇನು ಸಂಚು ಮಾಡ್ತಾರೋ ಗೊತ್ತಿಲ್ಲ. ಇಂಥಾ ಅಪರಾಧಿಗಳ ಅಡ್ಡಾದಲ್ಲಿ ನಟ ದರ್ಶನ್ ಸಿಲುಕಿರೋದು ಮಾತ್ರ ದುರಂತವೇ ಸರಿ.
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.