ಸ್ಟಾರ್ ಸಿನಿಮಾಗಳಿಗೆ ಬೇಕೆಬೇಕು ನಮ್ಮ ಯಂಗ್ ಸಿನಿಮಾಟೋಗ್ರಾಫರ್ಸ್!

By Web DeskFirst Published Apr 7, 2019, 3:20 PM IST
Highlights

ಕನ್ನಡ ಸಿನಿಮಾರಂಗ ಬದಲಾಗಿದೆ. ಕೇವಲ ಕಥೆ ವಿಚಾರದಲ್ಲಿ ಮಾತ್ರವಲ್ಲದೇ, ಮೇಕಿಂಗ್ ಹಾಗೂ ಟೆಕ್ನಿಕಲಿಯಾಗಿಯೂ ಬೇರೆಯದ್ದೇ ರೀತಿಯಲ್ಲಿ ಸೌಂಡ್ ಮಾಡುತ್ತಿದೆ. ಅದರ ಜೊತೆಯಲ್ಲಿ ಸಿನಿಮಾ ನೋಡುವ ಪ್ರೇಕ್ಷಕರು ಕೂಡ ಬದಲಾಗಿದ್ದಾರೆ.

ಕನ್ನಡ ಸಿನಿಮಾರಂಗ ಬದಲಾಗಿದೆ. ಕೇವಲ ಕಥೆ ವಿಚಾರದಲ್ಲಿ ಮಾತ್ರವಲ್ಲದೇ, ಮೇಕಿಂಗ್ ಹಾಗೂ ಟೆಕ್ನಿಕಲಿಯಾಗಿಯೂ ಬೇರೆಯದ್ದೇ ರೀತಿಯಲ್ಲಿ ಸೌಂಡ್ ಮಾಡುತ್ತಿದೆ. ಅದರ ಜೊತೆಯಲ್ಲಿ ಸಿನಿಮಾ ನೋಡುವ ಪ್ರೇಕ್ಷಕರು ಕೂಡ ಬದಲಾಗಿದ್ದಾರೆ.

ಕಥೆ ಹೇಗಿದೆ? ಸೆಟ್ ವರ್ಕ್ ಚೆನ್ನಾಗಿದೆಯೋ ಇಲ್ವೋ? ಕ್ಯಾಮೆರಾ ವರ್ಕ್ ಹೇಗಿದೆ ಇವೆಲ್ಲವೂ ಇತ್ತೀಚಿನ ದಿನಗಳಲ್ಲಿ ಸಖತ್ ಇಂಪಾರ್ಟೆಂಟ್ ಆಗಿದೆ. ಈ ಎಲ್ಲಾ ಬೆಳವಣಿಗಳ ಮಧ್ಯೆ ಸ್ಯಾಂಡಲ್ ವುಡ್ ಅಪ್ಪಟ ದೇಸಿ ಪ್ರತಿಭೆಗಳು ಕನ್ನಡ ಚಿತ್ರವನ್ನು ಮತ್ತಷ್ಟು ಕಲರ್ ಫುಲ್ ಆಗಿಸುವಲ್ಲಿ ಶ್ರಮಪಡುತ್ತಿದ್ದಾರೆ. 

ಇತ್ತೀಚಿನ ದಿನಗಳಲ್ಲಿ ಸ್ಟಾರ್ ಸಿನಿಮಾಗಳಿಗೆಲ್ಲಾ ಈ ಸಿನಿಮಾಟೋಗ್ರಾಫರ್ ಗಳು ಬೇಕೆ ಬೇಕು ಅನ್ನುವಷ್ಟರ ಮಟ್ಟಿಗೆ ಡಿಮ್ಯಾಂಡ್ ಕ್ರಿಯೆಟ್ ಆಗಿದೆ. ಯಂಗ್ ಅಂಡ್ ಎನರ್ಜಿಟಿಕ್ ಆಗಿರೋ ಈ ಸಿನಿಮಾಟೋಗ್ರಾಫರ್ಸ್ ಯಾರು? ಹೇಗಿದೆ ಇವ್ರುಗಳ ಕ್ಯಾಮೆರಾ ಕೈಚಳಕ? ಇಲ್ಲಿದೆ ಓದಿ. 

ಶೈನಿಂಗ್ ಶ್ರೀಶಾ ಕೂದುವಳ್ಳಿ 

ಶ್ರೀಶಾ ಕೂದುವಳ್ಳಿ ಸದ್ಯ ಸ್ಯಾಂಡಲ್ ವುಡ್ ನಲ್ಲಿ ಶೈನಿಂಗ್ ಆಗುತ್ತಿರೋ ಸಿನಿಮಾಟೋಗ್ರಾಫರ್ ಹೆಸರುಗಳಲ್ಲಿ ಹೆಚ್ಚು ಕೇಳಿ ಬರುತ್ತಿರೋ ಹೆಸರು. ಗಜಕೇಸರಿ ಕೃಷ್ಣ ಜೊತೆ ಅಸಿಸ್ಟೆಂಟ್ ಆಗಿ ಸುಮಾರು ಏಳು ವರುಷ ಕೆಲಸ ಮಾಡಿರೋ ಶ್ರೀಶಾ ಈಗ ಕನ್ನಡ ಸಿನಿಮಾರಂಗದ ಬೇಡಿಕೆಯ ಸಿನಿಮಾಟೋಗ್ರಾಫರ್. ಒಂದು ಸಿನಿಮಾವನ್ನ ನೋಡುಗರ ಕಣ್ಣು ತಂಪಾಗಿಸುವಂತೆ ಕಲರ್ ಫುಲ್ ಆಗಿ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದು ಕೊಡುವ ಸಾಮರ್ಥ್ಯ ಶ್ರೀಶಾ ಕೈನಲ್ಲಿದೆ. 

ಉಪೇಂದ್ರ ಅಭಿನಯದ ಟೋಪಿವಾಲಾ ಚಿತ್ರದಲ್ಲಿ ಸ್ವಾತಂತ್ರ  ಕ್ಯಾಮೆರಾಮ್ಯಾನ್ ಆಗಿ ಕೆಲಸ ಸ್ಟಾರ್ಟ್ ಮಾಡಿದ ಶ್ರೀಶಾ ಇಂದಿನವರೆಗೂ ಹಿಂತಿರುಗಿ ನೋಡಿದ್ದೇ ಇಲ್ಲ. ಗಣೇಶ್, ಧ್ರುವಾ ಸರ್ಜಾ, ಧನಂಜಯ,ಸೇರಿದಂತೆ ಚಾಲೆಂಜಿಂಗ್ ಸ್ಟಾರ್ ಸಿನಿಮಾಗೂ ಕೆಲಸ ಮಾಡಿ ಸೈ ಎನ್ನಿಸಿಕೊಂಡಿದ್ದಾರೆ. 

ಗುರುವಿಗೆ ತಕ್ಕನಾದ ಶಿಷ್ಯ ಎಂದೇ ಕರೆಸಿಕೊಳ್ಳುವ ಶ್ರೀಶಾ ಸದ್ಯ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗೀತಾ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ದಿನದಿಂದ ದಿನಕ್ಕೆ ಶ್ರೀಶಾ ಸಕ್ಸಸ್ ಗ್ರಾಫ್ ಮುಂದುವರೆಯುತ್ತಿದ್ದು, ಯಂಗ್ ಅಂಡ್ ಸ್ಟಾರ್ ನಿರ್ದೇಶಕರು ಶ್ರೀಶಾ ಕ್ಯಾಮೆರಾ ವರ್ಕ್ ಗೆ ಮನಸೋತಿದ್ದಾರೆ. 

ಭರವಸೆಯ ಸಿನಿಮಾಟೋಗ್ರಾಫರ್ ಗಿರೀಶ್ ಗೌಡ 

ಸ್ಯಾಂಡಲ್ ವುಡ್ ನಲ್ಲಿ ಭರವಸೆಯ ಸಿನಿಮಾಟೋಗ್ರಾಫರ್ ಗಳಲ್ಲಿ ಮೊದಲಿರೋ ಹೆಸರು ಸತ್ಯ ಹೆಗಡೆ. ಅವರದ್ದೇ ಗರಡಿಯಲ್ಲಿ ಬೆಳೆದು ಸದ್ಯ ಸ್ವತಂತ್ರವಾಗಿ ತನ್ನ ಕೆಲಸದಿಂದಲೇ ಭರವಸೆ ಮೂಡಿಸಲು ಹೊರಟಿರೋ ಕ್ಯಾಮೆರಾ ಮ್ಯಾನ್ ಗಿರೀಶ್ ಗೌಡ. ಸಿನಿಮಾಟೋಗ್ರಾಫಿ ಕೋರ್ಸ್ ಮುಗ್ಸಿ ಚಿತ್ರರಂಗದಲ್ಲಿ ಅಸಿಸ್ಟೆಂಟ್ ಸಿಮಾಟೋಗ್ರಾಫರ್ ಆಗಿ ಕೆಲಸ ಮಾಡಿ ಸದ್ಯ ಸ್ಟಾರ್ ಚಿತ್ರಗಳಲ್ಲಿ ಕೆಲಸ ಮಾಡ್ತಿರೋ ಗಿರೀಶ್ ಗೌಡ ಕನ್ನಡ ಚಿತ್ರರಂಗದ ಉದಯೋನ್ಮುಖ ಕ್ಯಾಮೆರಾ ಮ್ಯಾನ್ ಗಳಲ್ಲಿ ಒಬ್ಬರು. 

ಪ್ರೇಮ್ ಅಭಿನಯದ ಗಾಂಧಿಗಿರಿ ಸಿನಿಮಾದ ಮೂಲಕ ಇಂಡಸ್ಟ್ರಿಯಲ್ಲಿ ಕೆಲಸ ಆರಂಭ ಮಾಡಿದ ಗಿರೀಶ್ ನಂತ್ರ ಬಿಗ್ ಸ್ಟಾರ್ ಗಳಾದ ಕಿಚ್ಚ ಸುದೀಪ್ ಹಾಗೂ ಶಿವರಾಜ್ ಕುಮಾರ್ ಅಭಿನಯದ ದಿ ವಿಲನ್ ಚಿತ್ರಕ್ಕೂ ಸಿನಿಮಾಟೋಗ್ರಾಫರ್ ಆಗಿ ವರ್ಕ್ ಮಾಡಿದ್ರು.  ಸದ್ಯ ಶ್ರೀಮುರಳಿ ಅಭಿನಯದ ಭರಾಟೆ ಚಿತ್ರಕ್ಕೆ ಗಿರೀಶ್ ಗೌಡ ಅವ್ರ ಕ್ಯಾಮೆರಾ ಕೈಚಳಕವಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸ್ಟಾರ್ ಡೈರೆಕ್ಟರ್ ಹಾಗೂ ಎಕ್ಪೆರಿಮೆಂಟ್ ಚಿತ್ರಗಳಲ್ಲಿ ಕೆಲಸ ಮಾಡುವ ಅಭಿಲಾಶೆಯನ್ನು ಹೊಂದಿದ್ದಾರೆ ಗಿರೀಶ್. 

ಸಂಥಿಂಗ್ ಸ್ಪೆಷಲ್ ಎನ್ನಿಸುವ ಸಿನಿಮಾಟೋಗ್ರಾಫರ್ ಸ್ವಾಮಿ 

ಶ್ರೀಶಾ ಹಾಗೂ ಗಿರೀಶ್ ರಂತೆ ಯಂಗ್ ಕ್ಯಾಮೆರಾ ಮ್ಯಾನ್ ಗಳ ಲೀಸ್ಟ್ ನಲ್ಲಿ ಸೇರುವ ಸಿನಿಮಾಟೋಗ್ರಾಫರ್ ಸ್ವಾಮಿ. ಕೋರ್ಸ್ ಮುಗಿಸಿ ಚಿತ್ರರಂಗದಲ್ಲಿ ಸ್ಟಾರ್ ಕ್ಯಾಮೆರಾಮ್ಯಾನ್ ಆಗಿ ಗುರುತಿಸಿಕೊಳ್ಳಬೇಕು ಎಂದು ಆಸೆ ಹೊಂದಿದ್ದ ಸ್ವಾಮಿ ಅವ್ರಿಗೆ ಒಂದೊಳ್ಳೆ ಅವಕಾಶ ಸಿಕ್ಕಿದ್ದು ಶೇಖರ್ ಚಂದ್ರ ಅವರ ಮೂಲಕ. ಕೆಲ ಸಮಯ ಶೇಖರ್ ಚಂದ್ರ ಅವ್ರ ಜೊತೆಯಲ್ಲಿ ಕೆಲಸ ಮಾಡಿದ ಸ್ವಾಮಿ ನಂತರ ಎ ಹರ್ಷ ನಿರ್ದೇಶನದ ವಜ್ರಕಾಯ ಚಿತ್ರದ ಮೂಲಕ ಚಿತ್ರರಂಗಕ್ಕೆ ಸಿನಿಮಾಟೋಗ್ರಾಫರ್ ಆಗಿ ವರ್ಕ್ ಮಾಡಿದ್ರು. 

ಸ್ವಾಮಿ ಅವ್ರ ಕ್ಯಾಮೆರಾ ವರ್ಕ್ ಮೆಚ್ಚಿಕೊಂಡ ಎ ಹರ್ಷ ತಮ್ಮ ಮುಂದಿನ ಸಿನಿಮಾಗಳಿಗೆಲ್ಲಾ ಇವ್ರನ್ನೇ ಸಿನಿಮಾಟೋಗ್ರಾಫರ್ ಆಗಿ ಫಿಕ್ಸ್ ಮಾಡಿಕೊಂಡ್ರು. ಮಾರುತಿ 800,ಅಂಜನಿಪುತ್ರ, ಸೀತಾ ರಾಮ ಕಲ್ಯಾಣ ಚಿತ್ರಗಳಿಗೂ ಇವರದ್ದೇ ಕ್ಯಾಮೆರಾ ವರ್ಕ್. ಇವುಗಳ ಜೊತೆ ಉಪ್ಪಿ ಅಭಿನಯದ ಉಪೇಂದ್ರ ಮತ್ತೆ ಹುಟ್ಟಿ ಬಾ ಸಿನಿಮಾಗೂ ಕೆಲಸ ಮಾಡಿದ್ದಾರೆ. 

ಕೃಷ್ಣನ ಗರಡಿಯಲ್ಲಿ ಪಳಗಿದ ಸಿನಿಮಾಟೋಗ್ರಾಫರ್ ಕರ್ಣ 

ವಾವ್ಹ್ ಎನ್ನಿಸೋ ದೃಶ್ಯಗಳನ್ನ ಹಾಗೂ ಪ್ರಕೃತಿಯನ್ನ ಕ್ಯಾಮೆರಾದಲ್ಲಿ ಸೆರೆಹಿಡಿಯೋದರಲ್ಲಿ ಸರದಾರ ಅಂದ್ರೆ ಗಜಕೇರಿ ಕೃಷ್ಣ. ಸಣ್ಣ ದೃಶ್ಯವನ್ನು ಅದ್ಭುತವಾಗಿ ಕಟ್ಟಿಕೊಡುವ ಕೃಷ್ಣ ಸದ್ಯ ಡೈರೆಕ್ಟರ್ ಆಗಿ ಬಡ್ತಿ ಪಡೆದಿದ್ದಾರೆ. ತಮ್ಮ ಸಿನಿಮಾಗೆ ತಮ್ಮಂತೆಯೇ ಆಲೋಚನೆ ಮಾಡುವ ಸಿನಿಮಾಟೋಗ್ರಾಫರ್ ಬೇಕು ಅಂದಾಗ ಕೃಷ್ಣ ಆರಿಸಿಕೊಂಡಿದ್ದು ತಮ್ಮದೇ ಶಿಷ್ಯ ವೃಂದದಲ್ಲಿದ್ದ ಕರುಣಾಕರ್ ಅವ್ರನ್ನ. ಸಾಕಷ್ಟುಈ ಸಿನಿಮಾ ಹಾಗೂ ಬೇರೆ ಬೇರೆ ಕ್ಷೇತ್ರದಲ್ಲಿ ಕ್ಯಾಮೆರಾ ವರ್ಕ್ ಮಾಡಿದ್ದ ಕರುಣಾಕರ್ ಸಿನಿಮಾಟೋಗ್ರಾಫರ್ ಆಗಿ ನೆಲೆ ಕಂಡುಕಂಡಿದ್ದು ಕೃಷ್ಣ ಅವ್ರ ಗರಡಿಯಲ್ಲಿ. 

ಶರಣ್ ಅಭಿನಯದ ಜೈ ಲಲಿತಾಯಿಂದ ಕೆರಿಯರ್ ಆರಂಭಿಸಿ ನಂತ್ರ ಕಿಚ್ಚನ ಹೆಬ್ಬಿಲಿ ಚಿತ್ರದ ಮೂಲಕ ವೀಕ್ಷಕರಗಮನ ಸೆಳೆದ ಕರುಣಾಕರ್ ಸದ್ಯ ಪೈಲ್ವಾನ್ ಚಿತ್ರಕ್ಕೂ ಸಿನಿಮಾಟೋಗ್ರಾಫರ್. 

ಒಟ್ಟಾರೆ ಈ ನಾಲ್ವರು ಸಿನಿಮಾಟೋಗ್ರಾಫರ್ ಸ್ಯಾಂಡಲ್‌ವುಡ್‌ನಲ್ಲಿ ತಮ್ಮ ಕೆಲಸದ ಮೂಲಕವೇ ಬೇಡಿಕೆಯನ್ನ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಇವರ ಹೊಸ ಬಗೆಯ ಫ್ರೆಮಿಂಗ್ ನೋಡುಗರಿಗೆ ಹೊಸತನದ ಫೀಲ್ ಕೊಡುತ್ತಿದೆ. ಮುಂದಿನ ದಿನಗಳಲ್ಲಿ ಕೇವಲ ಕನ್ನಡ ಮಾತ್ರವಲ್ಲದೇ ಅಕ್ಕ ಪಕ್ಕದ ಇಂಡಸ್ಟ್ರಿಯವರು ನಮ್ಮ ಸಿನಿಮಾಟೋಗ್ರಾಫರ್ ಗಳ ಕೆಲಸವನ್ನ ಮೆಚ್ಚಿ ಅವಕಾಶಗಳನ್ನ ನೀಡುವ ಎಲ್ಲಾ ಸೂಚನೆಗಳು ಈ ಮೂಲಕ ಸಿಕ್ತಿದೆ. 

- ಪವಿತ್ರಾ ಬಿ, ಎಂಟರ್‌ಟೇನ್ಮೆಂಟ್ ಬ್ಯುರೋ

click me!