ಸೆಂಚೂರಿ ಬಾರಿಸಿದ ಕೆಜಿಎಫ್; ಇನ್ನೂ ಮುಗಿದಿಲ್ಲ ರಾಕಿ ಭಾಯ್ ಅಬ್ಬರ!

Published : Mar 30, 2019, 12:27 PM IST
ಸೆಂಚೂರಿ ಬಾರಿಸಿದ ಕೆಜಿಎಫ್; ಇನ್ನೂ ಮುಗಿದಿಲ್ಲ ರಾಕಿ ಭಾಯ್ ಅಬ್ಬರ!

ಸಾರಾಂಶ

ಇಡೀ ಚಿತ್ರರಂಗ ಸ್ಯಾಂಡಲ್‌ವುಡ್‌ನತ್ತ ನೋಡುವಂತೆ ಮಾಡಿದ ಸಿನಿಮಾ ಕೆಜಿಎಫ್. ಈ ಸಿನಿಮಾ ನೂರು ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಈ ಸಂತಸವನ್ನು ಚಿತ್ರತಂಡ ಶೇರ್ ಮಾಡಿಕೊಂಡಿದೆ. 

ಬೆಂಗಳೂರು (ಮಾ. 30): ಸ್ಯಾಂಡಲ್ ವುಡ್ ನಲ್ಲಿ ಹೊಸ ಅಲೆಯನ್ನೇ ಎಬ್ಬಿಸಿ ಅಬ್ಬರಿಸಿ ಬೊಬ್ಬಿರಿದಿದ್ದ ಕೆಜಿಎಫ್ ಗೆ ಶತಕದ ಸಂಭ್ರಮ. ಶತದಿನವನ್ನು ಪೂರೈಸಿ ಮುನ್ನುಗ್ಗುತ್ತಿದೆ. 

ರಾಕಿ ಭಾಯ್ ಅಭಿನಯದ ಕೆಜಿಎಫ್ ಕಳೆದ ಡಿಸಂಬರ್ 21 ರಂದು ವಿಶ್ವದಾದ್ಯಂತ ರಿಲೀಸ್ ಆಗಿತ್ತು. ಕೇವಲ ಸ್ಯಾಂಡಲ್ ವುಡ್ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗವೇ ರಾಕಿಭಾಯ್ ಗೆ ಸಲಾಂ ಎಂದಿತ್ತು. 
ರಾಕಿ ಭಾಯ್, ಶ್ರೀನಿಧಿ ಶೆಟ್ಟಿ, ಅನಂತ್ ನಾಗ್, ಮಾಳವಿಕಾ ಸೇರಿದಂತೆ ಸಾಕಷ್ಟು ನಟರ ಅಭಿನಯ ಜನರ ಮನಮುಟ್ಟುವಲ್ಲಿ ಯಶಸ್ವಿಯಾಗಿದೆ. ಬಾಕ್ಸಾಫೀಸ್ ಕಲಕ್ಷನ್ ನಲ್ಲಿಯೂ ಕೋಟಿ ಕ್ಲಬ್ ಸೇರಿದೆ. ಈಗಾಗಲೇ ಕೆಜಿಎಫ್-2 ಶೂಟಿಂಗ್ ಕೂಡಾ ಶುರುವಾಗಿದೆ. 

ನೂರು ದಿನಗಳ ಯಶಸ್ಸಿನ ಸಂತಸವನ್ನು ಕೆಜಿಎಫ್ ಟೀಂ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

RAMAYANA: ರಾಮಾಯಣ ಬಾಕ್ಸ್ ಆಫೀಸ್‌ನಲ್ಲಿ ರಾಕಿಂಗ್ ಸ್ಟಾರ್ 'ರಾವಣ'ನ ಅಬ್ಬರ; ಯಶ್‌ಗೆ ತೆರೆ ಮೇಲೆ ಜೈಕಾರ, ತೆರೆ ಹಿಂದೆ ಝಣಝಣ ಕಾಂಚಾಣ!
ರಾಮಾಯಣದಲ್ಲಿ ಯಶ್‌ 'ರಾವಣ' ಅವತಾರ: ಲಂಕಾಧಿಪತಿ ಧರಿಸಿದ್ದ 130 ಆಭರಣಗಳ ತೂಕವೆಷ್ಟು ಗೊತ್ತಾ?