* ಬಾಗಲಕೋಟೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ನಟಿ ಸೋನು ಪಾಟೀಲ್ ತಾಯಿ
* ತಾಯಿಯ ವೈದ್ಯಕೀಯ ಚಿಕಿತ್ಸೆಗೆ ಹಣ ಇಲ್ಲದೇ ಪರದಾಡಿದ್ದ ಸೋನು ಪಾಟೀಲ್
* ಕಿಚ್ಚ ಚಾರಿಟೇಬಲ್ ಟ್ರಸ್ಟ್ ಮೂಲಕ ಸಹಾಯ ಮಾಡಿದ ನಟ ಸುದೀಪ
ಬಾಗಲಕೋಟೆ(ಮೇ.09): ಕನ್ನಡದ ಬಿಗ್‌ಬಾಸ್ ಸೀಸನ್ 6ರ ಸ್ಪರ್ಧಿಯ ತಾಯಿಯ ವೈದ್ಯಕೀಯ ಚಿಕಿತ್ಸೆಗೆ ನೆರವು ನೀಡುವ ಮೂಲಕ ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ ಮಾನವೀಯತೆ ಮೆರೆದಿದ್ದಾರೆ. ಹೌದು, ಜಿಲ್ಲೆಯ ಕಿರುತೆರೆ ನಟಿ ಸೋನು ಪಾಟೀಲ್ ತಾಯಿಯ ವೈದ್ಯಕೀಯ ಚಿಕಿತ್ಸೆಗೆ ಸುದೀಪ ನೆರವು ನೀಡಿದ್ದಾರೆ.
ನ್ಯೂಮೋನಿಯಾ ರೋಗದಿಂದ ಬಳಲುತ್ತಿದ್ದ ನಟಿ ಸೋನು ಪಾಟೀಲ್ ತಾಯಿ ಮಹಾದೇವಿ ಅವರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ತಾಯಿಯ ವೈದ್ಯಕೀಯ ಚಿಕಿತ್ಸೆಗೆ ಹಣ ಇಲ್ಲದೇ ಸೋನು ಪಾಟೀಲ್ ಪರದಾಡುತ್ತಿದ್ದರು. ಈ ವಿಷಯ ಅರಿತ ಕಿಚ್ಚ ಸುದೀಪ ಅವರು ತಮ್ಮ ಕಿಚ್ಚ ಚಾರಿಟೇಬಲ್ ಟ್ರಸ್ಟ್ ಮೂಲಕ ಹಣದ ಸಹಾಯ ಮಾಡಿದ್ದಾರೆ.
ಕಿಚ್ಚ ಸುದೀಪ್ ಕೊರೋನಾ ಗೆದ್ದ ಇಂಟ್ರೆಸ್ಟಿಂಗ್ ಕತೆ, ಮನೆ ಮದ್ದು ಸಹಾಯಕ್ಕೆ ಬಂತಾ?
ಆಸ್ಪತ್ರೆಯ ಎಲ್ಲ ವೈದ್ಯಕೀಯ ಚಿಕಿತ್ಸೆಯ ಬಿಲ್ ಅನ್ನು ನಟ ಸುದೀಪ ಭರಿಸಿದ್ದಾರೆ. ಸಕಾಲದಲ್ಲಿ ತಾಯಿಯ ವೈದ್ಯಕೀಯ ಚಿಕಿತ್ಸೆಗೆ ನೆರವಾದ ನಟ ಸುದೀಪ ಅವರಿಗೆ ಸೋನು ಪಾಟೀಲ್ ಕಣ್ಣೀರಿಟ್ಟು ಧನ್ಯವಾದ ಅರ್ಪಿಸಿದ್ದಾರೆ. ನಟ ಸುದೀಪ ಸುಮಾರು 5 ಲಕ್ಷ ರೂ. ಸಹಾಯ ಮಾಡಿದ್ದಾರೆ ಎಂದು ತಿಳಿದು ಬಂದಿದೆ.