ಅಂದು ಸುದೀಪ್- ಪುನೀತ್, ಇಂದು ಅವರ ಮಕ್ಕಳು; ಸಾನ್ವಿ- ಧ್ರುತಿ ಫೋಟೋ ವೈರಲ್!

By Vaishnavi Chandrashekar  |  First Published Jul 3, 2023, 12:22 PM IST

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಹಿಸ್ಟರಿ ಕ್ರಿಯೇಟ್ ಮಾಡುವ ಫೋಟೋ. ನೆಟ್ಟಿಗರ ಕಾಮೆಂಟ್ ವೈರಲ್..... 


ಕನ್ನಡ ಚಿತ್ರರಂಗದ ಮುತ್ತು ರತ್ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಾಲ್ಯ ಸ್ನೇಹಿತರು. ಇಬ್ಬರು ಆಗಾಗ ಮನೆಯಲ್ಲಿ ಭೇಟಿ ಮಾಡಿ ಆಟವಾಡುತ್ತಿದ್ದಂತೆ. ಆಂದು ಸುದೀಪ್ ಮತ್ತು ಪುನೀತ್‌ ರಾಜ್‌ಕುಮಾರ್ ಜೊತೆಯಾಗಿ ನಿಂತುಕೊಂಡು ಕ್ಲಿಕ್ ಮಾಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಆಗಾಗ ವೈರಲ್ ಆಗುತ್ತಿದೆ. ಬ್ಲ್ಯಾಕ್ ಆಂಡ್ ವೈಟ್ ಫೋಟೋಗೆ ಎನರ್ಜಿ ಮತ್ತು ಪವರ್ ತುಂಬಲು ಮತ್ತೊಂದು ಕಲರ್‌ ಫೋಟೋ ವೈರಲ್ ಅಗುತ್ತಿದೆ. 

ಹೌದು! ಕಿಚ್ಚ ಸುದೀಪ್ ಮಗಳು ಸಾನ್ವಿ ಹಾಗೂ ಪವರ್ ಸ್ಟಾರ್ ಪುತ್ರಿ ಧ್ರುತಿ ಭೇಟಿ ಮಾಡಿರುವ ಫೋಟೋ ಸಾಮಾಜಿ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆರಂಭದಲ್ಲಿ ಇದು ಹಳೆ ಫೋಟೋ ಎನ್ನಲಾಗಿತ್ತು ಆದರೆ ಸಾನ್ವಿ ಹೊಸ ಲುಕ್‌ನಲ್ಲಿರುವ ಇರುವ ಕಾರಣ ರೀಸೆಂಟ್ ಫೋಟೋ ಎನ್ನಲಾಗಿದೆ. ಇಬ್ಬರು ಸ್ಟಾರ್‌ ಕಿಡ್‌ಗಳು ಡೆನಿಮ್‌ ಪ್ಯಾಂಟ್‌ಗೆ ಬ್ಲ್ಯಾಕ್ ಆಂಡ್ ಗ್ರೇಟ್‌ ಟಾಪ್‌ನಲ್ಲಿ ಮಿಂಚಿದ್ದಾರೆ.  ಒಬ್ಬರ ಹೆಗಲೆ ಮತ್ತೊಬ್ಬರು ಕೈ ಹಾಕಿರುವುದು ಅವರ ಆತ್ಮೀಯತೆ ತೋರಿಸುತ್ತದೆ. 

Tap to resize

Latest Videos

ಹಾಡು ಮೆಚ್ಚಿ ಅಪ್ಪ ತಬ್ಬಿಕೊಂಡ ಕ್ಷಣ ವಿಶೇಷ: ಸಾನ್ವಿ ಸುದೀಪ್

ಫೋಟೋ ಎಲ್ಲಿ ಕ್ಲಿಕ್ ಮಾಡಿರುವುದು? ಯಾರು ಕ್ಲಿಕ್ ಮಾಡಿರುವುದು ಎಲ್ಲಿ ಕ್ಲಿಕ್ ಮಾಡಿರುವುದು ಎಂಬುದರ ಬಗ್ಗೆ ಮಾಹಿತಿ ಇಲ್ಲ. ಬ್ಯಾಗ್ರೌಂಡ್ ನೋಡಿದರೆ ವಿದೇಶ ಎನ್ನಬಹುದು. ಧ್ರುತಿ ಪುನೀತ್ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವುದು ಆಗಾಗ ಬೆಂಗಳೂರಿಗೆ ಬಂದು ಹೋಗುತ್ತಾರೆ. ತಂದೆ ಅಗಲಿದ ನಂತರ ಧ್ರುತಿ ಹೆಚ್ಚಿಗೆ ಬೆಂಗಳೂರಿನಲ್ಲಿ ಸಮಯ ಕಳೆಯುತ್ತಾರೆ. ಸ್ಟಾರ್ ಮಕ್ಕಳು ಸ್ನೇಹ ಮಾಡಿಕೊಳ್ಳುವುದು ತುಂಬಾ ಕಡಿಮೆ ಅದರಲ್ಲಿ ಇವರಿಬ್ಬರು ಒಟ್ಟಿಗೆ ಇರುವುದು ನೋಡಿ ಖುಷಿಯಾಗುತ್ತಿದೆ ಎಂದು ನೆಟ್ಟಗರು ಕಾಮೆಂಟ್ ಮಾಡಿದ್ದಾರೆ. 

ಸಣ್ಣ ವಯಸ್ಸಲ್ಲೇ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಪುನೀತ್ ಮಗಳು ದೃತಿ...

ಧ್ರುತಿ ವಿದ್ಯಾಭ್ಯಾಸ ಮತ್ತು ಸಮಾಜ ಸೇವೆಯಲ್ಲಿ ಬ್ಯುಸಿಯಾಗಿದ್ದಾರೆ. ಸಾನ್ವಿ ವಿದ್ಯಾಭ್ಯಾಸದ ಜೊತೆ ಸಂಗೀತ ಮತ್ತು ಪೇಂಟಿಂಗ್ ಮಾಡುತ್ತಾರೆ. ಸುದೀಪ್ ಅಕ್ಕನ ಮಗ ಸಂಚಿತ್ ಜಿಮ್ಮಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಚಿತ್ರದ ಫಸ್ಟ್‌ ಲುಕ್‌ ಹಾಗೂ ಇಂಟ್ರಡಕ್ಷನ್ ಸಾಂಗ್ ವೈರಲ್ ಅಗಿತ್ತಿದೆ. ಇಂಟ್ರಡಕ್ಷನ್ ಸಾಂಗ್‌ನ ಸ್ವತಃ ಸಾನ್ವಿ ಬರೆದು ಹಾಡಿದ್ದಾರೆ. ಇಂಗ್ಲಿಷ್ ಹಾಗೂ ಕನ್ನಡ ಭಾಷೆಯನ್ನು ಮಿಕ್ಸ್‌ ಮಾಡಿ ಹಾಡಿದ್ದಾರೆ. ಅಲ್ಲದೆ ಸಾನ್ವಿ ಟ್ರಾನ್ಸ್‌ಫಾರ್ಮೆಷನ್ ವೈರಲ್ ಆಗುತ್ತಿದೆ ನೋಡಲು ಸೇಮ್ ಬಾಲಿವುಡ್ ಸ್ಟಾರ್ ನಟಿ ರೀತಿ ಇದ್ದಾರೆ ಎಂದು ಫ್ಯಾನ್ಸ್ ಕಾಮೆಂಟ್ ಮಾಡಿದ್ದರು. 

click me!