
ಸ್ಯಾಂಡಲ್‌ವುಡ್ ಸಾಹಸ ಸಿಂಹ ವಿಷ್ಣುವರ್ಧನ್ ನಮ್ಮನ್ನು ಅಗಲಿ ಡಿಸೆಂಬರ್ 30ಕ್ಕೆ 11 ವರ್ಷವಾಗುತ್ತದೆ. ಎಲ್ಲೆಡೆ ದಾದನ ಹೆಸರಿನಲ್ಲಿ ಅನ್ನದಾನ ಹಾಗೂ ರಕ್ತದಾನ ಕಾರ್ಯಕ್ರಮಗಳು ನಡೆಯುತ್ತವೆ. ಇನ್ನೇನು ಮೂರ್ನಾಲ್ಕು ದಿನದಲ್ಲಿ ಪುಣ್ಯ ಸ್ಮರಣೆ ಇದೆ ಎನ್ನುವಾಗಲೇ ದುರಂತವೊಂದು ನಡೆದು ಹೋಗಿದೆ.
ವಿಷ್ಣುವರ್ಧನ್ ಪುಣ್ಯ ಸ್ಮರಣೆಗೆ 4 ದಿನ ಇರುವಾಗಲೇ ಪ್ರತಿಮೆ ಒಡೆದು ಹಾಕಿದ ಕಿಡಿಗೇಡಿಗಳು
ಪ್ರತಿಮೆ ಧ್ವಂಸ:
ರಾಜ್ಯಾದ್ಯಂತ ಅಭಿಮಾನಿಗಳುನ್ನು ಹೊಂದಿರುವ ಡಾ. ವಿಷ್ಣು ಪ್ರತಿಮೆ ಪ್ರತಿ ಜಿಲ್ಲೆಯ ನಗರಗಳಲ್ಲಿವೆ. ಆರಾಧ್ಯ ದೈವ ಎಂದು ಅಭಿಮಾನಿಗಳು ಪೂಜೆ ಸಲ್ಲಿಸುತ್ತಾರೆ. ಆದರೆ ಮಾಗಡಿ ರಸ್ತೆಯಲ್ಲಿರುವ ಪ್ರತಿಮೆ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದೆ.
ಎರಡು ವರ್ಷಗಳ ಹಿಂದೆ ಸ್ಥಾಪಿಸಿದ್ದ ಈ ಪ್ರತಿಮೆಯನ್ನು ಕೆಲವು ಕಿಡಿಗೀಡಿಗಳು ನಾಶ ಮಾಡಿದ್ದುರು, ಅದನ್ನು ಪುನರ್ ಪ್ರತಿಷ್ಠಾಪನೆ ಮಾಡಲಾಗಿತ್ತು. ಆದರೀಗ ಮತ್ತದೇ ಪ್ರತಿಮೆಯನ್ನು ಪುಡಿ ಪುಡಿ ಮಾಡಿ ಒಡೆದು ಹಾಕಿದ್ದಾರೆ. ಈ ವಿಚಾರದ ಬಗ್ಗೆ ವಿಷ್ಣು ಅಭಿಮಾನಿಗಳು ಹಾಗೂ ಸ್ಟಾರ್ ನಟರಾದ ಸುದೀಪ್ ಹಾಗೂ ದರ್ಶನ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಡಾ. ವಿಷ್ಣು ಪ್ರತಿಮೆ ಧ್ವಂಸಕ್ಕೆ ಟ್ವಿಸ್ಟ್!ಸಚಿವ ಸೋಮಣ್ಣ ಹೊಸ ರಾಗ
ದರ್ಶನ್ ಟ್ಟೀಟ್:
'ಕರ್ನಾಟಕದಲ್ಲಿ ಅತಿಯಾಗಿ ಪ್ರೀತಿಸೋ, ಆರಾಧಿಸೋ ವ್ಯಕ್ತಿಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವ ನಮ್ಮ ನಲ್ಮೆಯ ಸಾಹಸ ಸಿಂಹ ಡಾ|| ವಿಷ್ಣು ಸರ್ ಪುತ್ಥಳಿಯನ್ನು ಯಾರೋ ಕಿಡಿಗೇಡಿಗಳು, ಯಾರು ಇಲ್ಲದ ಹೊತ್ತಿನಲ್ಲಿ ಧ್ವಂಸ ಮಾಡಿರುವುದು ನಾಚಿಕೆಯ ಸಂಗತಿ. ಇಂಥ ದುಷ್ಕರ್ಮಿಗಳಿಗೆ ತಕ್ಕ ಶಿಕ್ಷೆಯಾಗಲೇಬೇಕು.ನಿಮ್ಮ ದಾಸ ದರ್ಶನ್' ಎಂದು ಟ್ಟೀಟ್ ಮಾಡಿದ್ದಾರೆ.
ಸುದೀಪ್ ಟ್ಟೀಟ್:
'ವಿಷ್ಣು ಸರ್ ಪ್ರತಿಮೆಯನ್ನು ಒಡೆದು ಹಾಕಿರುವುದು ಈಗ ನನ್ನ ಗಮನಕ್ಕೆ ಬರ್ತಿದೆ.ಇದರ ಬಗ್ಗೆ ಜಾಸ್ತಿ ಹೇಳೋಕೆ ಹೋಗಲ್ಲ. ಒಡೆದು ಹಾಕಿರುವ ಮಹಾನ್‌ಭಾವನಿಗೆ ಒಂದಿಷ್ಟು ವಿಚಾರಗಳನ್ನು ಹೇಳೋಕೆ ಇಷ್ಟ ಪಡ್ತೀನಿ. ನಾನು ಅವರು ಅಭಿಮಾನಿಯಾಗಿ ಹೇಳ್ತಿದೀನಿ, ದಯವಿಟ್ಟು ಕೈಗೆ ಸಿಕ್ಹಾಕಿ ಕೊಳ್ಳಬೇಡಿ. ಯಾಕಂದ್ರೆ ಅವರು ಸಂಪಾದಿಸಿರುವ ಅಭಿಮಾನಿಗಳು ನಿಮ್ಮನ್ನ ಅದಕ್ಕಿಂತ ತುಂಬಾ ಹೀನಾಯವಾಗಿ ಒಡೆದು ಹಾಕುತ್ತಾರೆ. ಈ ರೀತಿ ಮಾಡಿರುವ ಉದ್ದೇಶ ಅರ್ಥವಾಗೋಲ್ಲ, ಮನುಷ್ಯರಾಗಿದ್ದರೆ ಬುದ್ಧಿ ಹೇಳೋಕೆ ಆಗಲ್ಲ. ನಿಮ್ಮ ಹೆಸರು ಗೊತ್ತಾಗಿದ ದಿನ ದಯವಿಟ್ಟು ದೇಶ ಬಿಟ್ಟು ಓಡ್ಹೋಗಿ,' ಎಂದು ಸುದೀಪ್ ವಿಡಿಯೋ ಮೂಲಕ ಮಾತನಾಡಿದ್ದಾರೆ.
ಡಾ. ವಿಷ್ಣು ಪ್ರತಿಮೆ ವಿವಾದ: ಮತ್ತಷ್ಟು ಪ್ರಶ್ನೆ ಹುಟ್ಟುಹಾಕಿದ ಸೋಮಣ್ಣ ಸ್ಪಷ್ಟನೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.