
ಕನ್ನಡ ಚಿತ್ರರಂಗದಲ್ಲಿ ಸುಮಾರು 365ಕ್ಕೂ ಹೆಚ್ಚು ಜನ ಬೆಳಕಿನ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಯಾವುದೇ ಸಿನಿಮಾ ಸೆಟ್ಟೇರಿದರೂ ಅಲ್ಲಿ ಲೈಟ್ ಸೆಟ್ಟಿಂಗ್ ಮಾಡುವುದು, ಬೆಳಕಿನ ಕಿರಣಗಳನ್ನು ಮೂಡಿಸುವುದು ಇದೇ ಲೈಟ್‌ಮ್ಯಾನ್ ಅಸೋಸಿಯೇಷನ್‌ನ ಕಾರ್ಮಿಕರು.
ಮುಖ್ಯಮಂತ್ರಿ ಪರಿಹಾರ ನಿಧಿಗೆ 10 ಲಕ್ಷ ರೂ. ದೇಣಿಗೆ ನೀಡಿದ ಗಾಯಕ ವಿಜಯ್ ಪ್ರಕಾಶ್!
ಈ 365 ಕುಟುಂಬಗಳಿಗೆ ಸ್ವತಃ ತಾವೇ ಒಂದು ವಾಹನದಲ್ಲಿ ರೇಷನ್ ತುಂಬಿಕೊಂಡು ಹೋಗಿ ಅಗತ್ಯ ದಿನಸಿಯನ್ನು ಒಳಗೊಂಡ ರೇಷನ್ ಕಿಟ್ ವಿತರಣೆ ಮಾಡಿದ್ದಾರೆ ರವಿವರ್ಮ.
ಸಿಎಂ ಪರಿಹಾರ ನಿಧಿಗೆ ಐದು ಲಕ್ಷ ರೂ.ದೇಣಿಗೆ ನೀಡಿದ ಹಿರಿಯ ನಟಿ ಸರೋಜ ದೇವಿ!
ಕಳೆದ ಒಂದು ತಿಂಗಳಿನಿಂದ ಯಾರಿಗೂ ಕೆಲಸ ಇಲ್ಲ. ಲೈಟ್‌ಮ್ಯಾನ್‌ಗಳಿಗೆ ಸಿನಿಮಾ ಕೆಲಸ ಬಿಟ್ಟರೆ ಬೇರೇನೂ ಕೆಲಸ ಗೊತ್ತಿಲ್ಲ. ಇಂಥ ಹೊತ್ತಿನಲ್ಲಿ ನಮ್ಮ ಲೈಟ್‌ಮ್ಯಾನ್ ಕುಟುಂಬಗಳಿಗೆ ರವಿವರ್ಮ ರೇಷನ್ ನೀಡಿದ್ದಾರೆ. ಅವರ ಈ ನೆರವು ನಾವು ಮರೆಯುವುದಿಲ್ಲ ಎನ್ನುತ್ತಾರೆ ಲೈಟ್‌ಮ್ಯಾನ್ ಅಸೋಸಿಯೇಷನ್‌ನ ಮಹೇಶ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.