ಗೀತಾ ಅವರೂ ಅಷ್ಟೇ, ಕ್ಯಾನ್ಸರ್ ಶಸ್ತ್ರ ಚಿಕಿತ್ಸೆ ಆದಾಗಿನಿಂದಲೂ ನಟ ಶಿವಣ್ಣ ಫುಲ್ ಖುಷಿಯಿಂದ ಇರುವುದನ್ನು ಹೇಳಿಕೊಂಡರು. ಬೆಂಗಳೂರಿನ ತಮ್ಮ ಮನೆಗೆ ಬಂದಿರುವ ಶಿವಣ್ಣ ಅವರು ಮನೆಯಲ್ಲಿ ಮ್ಯೂಸಿಕ್ ಹಾಕಿಕೊಂಡು ಡಾನ್ಸ್ ಮಾಡುತ್ತಿರುವುದನ್ನೂ ಸಹ...
ನಟ, ಕರುನಾಡ ಚಕ್ರವರ್ತಿ ಖ್ಯಾತಿಯ ಅಣ್ಣಾವ್ರು ಮಗ ಶಿವರಾಜ್‌ಕುಮಾರ್ (Shivarajkumar) ಅವರು ಅಮೆರಿಕಾದಿಂದ ವಾಪಸ್ ಆಗಿರೋದು ಗೊತ್ತೇ ಇದೆ. ಕ್ಯಾನ್ಸರ್ ಚಿಕಿತ್ಸೆ, ಸರ್ಜರಿ ಮುಗಿಸಿ ಅಮೆರಿಕಾದ ಮಿಯಾಮಿಯಿಂದ ಬೆಂಗಳೂರಿನ ತಮ್ಮ ಮನೆಗೆ ನಟ ಶಿವಣ್ಣ ವಾಪಸ್ಸಾಗಿದ್ದಾರೆ. ಅದಾದ ಬಳಿಕ ಸಹಜವಾಗಿಯೇ ಆಪ್ತರು, ಮಾಧ್ಯಮ ಮಿತ್ರರು ಎಲ್ಲರ ಜೊತೆ ಶಿವಣ್ಣ ಮಾತನಾಡುತ್ತಿದ್ದಾರೆ. ಇದೇ ವೇಳೆ ತಮಗೆ ಕೇಳಿದ ಪ್ರಶ್ನೆಯೊಂದಕ್ಕೆ ನಟ ಶಿವಣ್ಣ ಅವರಿಗೆ ಹುಸಿ ಕೋಪ ಬಂದಿದೆ.
ಹಾಗಿದ್ದರೆ, ಅಲ್ಲೇನು ನಡೆಯಿತು? ಯಾವ ಪ್ರಶ್ನೆ ಕೇಳಲಾಯ್ತು? ಅದಕ್ಕೆ ಪಂಚ್ ಡೈಲಾಗ್ ಮೂಲಕ ನಟ ಶಿವಣ್ಣ ಕೊಟ್ಟ ಉತ್ತರವೇನು? ಅಷ್ಟಕ್ಕೂ ನಟ ಶಿವಣ್ಣ ಅವರು ಅಲ್ಲಿ ಏನೇನು ಮಾತನಾಡಿದ್ರು? ಎಲ್ಲ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.. ಅಮೆರಿಕಾದಲ್ಲಿ ಚಿಕಿತ್ಸೆ ಪಡೆದು ಕ್ಯಾನ್ಸರ್ ಮುಕ್ತರಾಗಿ ಭಾರತಕ್ಕೆ ಬಂದು ಖುಷಿಖುಷಿಯಾಗಿರುವ ನಟ ಶಿವಣ್ಣ ಅವರು ಅಲ್ಲಿನ ಅನುಭವದ ಬಗ್ಗೆ ಮಾತನ್ನಾಡಿದ್ದಾರೆ. ಪತ್ನಿ ಗೀತಾ ತಮ್ಮನ್ನು ನೋಡಿಕೊಂಡ ಬಗ್ಗೆ, ಅವರ ಆರೈಕೆ-ಹಾರೈಕೆ ಬಗ್ಗೆ ಶಿವರಾಜ್‌ಕುಮಾರ್ ಹೇಳಿಕೊಂಡಿದ್ದಾರೆ. ಅದೇ ರೀತಿ ವೈದ್ಯರು ಹಾಗೂ ಅಭಿಮಾನಿಗಳ ಬಗ್ಗೆಯೂ ಶಿವಣ್ಣ ಮಾತನ್ನಾಡಿದ್ದಾರೆ.
ಗೀತಾ ಅವರೂ ಅಷ್ಟೇ, ಕ್ಯಾನ್ಸರ್ ಶಸ್ತ್ರ ಚಿಕಿತ್ಸೆ ಆದಾಗಿನಿಂದಲೂ ನಟ ಶಿವಣ್ಣ ಫುಲ್ ಖುಷಿಯಿಂದ ಇರುವುದನ್ನು ಹೇಳಿಕೊಂಡರು. ಬೆಂಗಳೂರಿನ ತಮ್ಮ ಮನೆಗೆ ಬಂದಿರುವ ಶಿವಣ್ಣ ಅವರು ಮನೆಯಲ್ಲಿ ಮ್ಯೂಸಿಕ್ ಹಾಕಿಕೊಂಡು ಡಾನ್ಸ್ ಮಾಡುತ್ತಿರುವುದನ್ನೂ ಸಹ ಹೇಳಿಕೊಂಡರು. ಸದ್ಯ ಆಕ್ಷನ್ ಸೀನ್‌ನಲ್ಲಿ ಭಾಗಿಯಾಗಲು ಆಗೋದಿಲ್ಲ ಎಂಬ ಕಾರಣಕ್ಕೆ ನಟ ಶಿವಣ್ಣ ಶೂಟಿಂಗ್‌ಗೆ ಹೋಗಿಲ್ಲ ಎಂಬ ಸತ್ಯವನ್ನೂ ಸಹ ಈ ವೇಳೆ ರಿವೀಲ್ ಮಾಡಲಾಯ್ತು.
ಅದೇ ವೇಳೆ, ನಟ ಶಿವಣ್ಣ ಅವರಿಗೆ 'ಸದ್ಯ ನೀವು ವಿಶ್ರಾಂತಿಯಲ್ಲಿ ಇದ್ದೀರಿ, ಆದರೆ ಮನೆಗೆ ತುಂಬಾ ಜನರು ಬಂದು ಹೋಗುತ್ತಾರೆ, ಬಹಳಷ್ಟು ಮಾತನಾಡಬೇಕಾಗುತ್ತದೆ. ಇದರಿಂದ ನಿಮ್ಗೆ ತೊಂದ್ರೆ ಆಗುತ್ತೆ ಅಲ್ವಾ?' ಎಂದು ಕೇಳಲಾದ ಪ್ರಶ್ನೆಗೆ ನಟ ಶಿವಣ್ಣ ಹುಸಿಕೋಪ ವ್ಯಕ್ತಪಡಿಸಿದ್ದಾರೆ. ಮಕ್ಕಳಂತೆ ಕೋಪಿಸಿಕೊಂಡ ಶಿವಣ್ಣ ಅವರು 'ಯಾಕೆ ತೊಂದ್ರೆ? ನಾನು ಮುಂದೆ ಶೂಟಿಂಗ್ ಹೋಗೋದು ಬೇಡ್ವಾ, ಸಿನಿಮಾ ಮಾಡೋದು ಬೇಡ್ವಾ..?' ಎಂದು ಕೇಳುವ ಮೂಲಕ ಅಲ್ಲಿದ್ದವರು ಒಮ್ಮೆ ಬೆಚ್ಚಿಬೀಳುವಂತೆ ಮಾಡಿದ್ದಾರೆ.