
ನಟಿ ರಮ್ಯಾ ಅಶ್ಲೀಲ ಕಾಮೆಂಟ್ ಹಾಗೂ ಮೆಸೇಜ್ ವಿರುದ್ಧ ದೂರು ನೀಡಿದ ಬೆನ್ನಲ್ಲೇ ನಟ ದರ್ಶನ್ ಅಭಿಮಾನಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಪೊಲೀಸರು ಮುಂದಾಗಿದ್ದಾರೆ. ರಮ್ಯಾ ಅವರು ಒಟ್ಟು 43 ಅಕೌಂಟ್ಸ್ ಉಲ್ಲೇಖಿಸಿ ಕಮಿಷನರ್ಗೆ ದೂರು ನೀಡಿದ್ದಾರೆ. ಇದೆಲ್ಲದರ ಮಧ್ಯೆ ಈಗ ನಟಿ ರಮ್ಯಾ ಬೆಂಬಲಕ್ಕೆ ನಟ ಶಿವರಾಜ್ ಕುಮಾರ್ ಮತ್ಯು ಗೀತಾ ಶಿವರಾಜ್ ಕುಮಾರ್ ಬೆಂಬಲಕ್ಕೆ ಬಂದಿದ್ದಾರೆ. ದಂಪತಿ ಈ ಬಗ್ಗೆ ಧ್ವನಿ ಎತ್ತಿ ಬರೆದುಕೊಂಡಿದ್ದಾರೆ.
ರಮ್ಯಾ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಕ್ತವಾದ ಅಪಮೃತ್ಯುಕರವಾದ ಭಾಷೆಯನ್ನು ಅವರು ಕಠಿಣವಾಗಿ ಖಂಡಿಸಿದ್ದಾರೆ. ನಿಮ್ಮ ನಿಲುವು ಸರಿಯಾಗಿದೆ, ರಮ್ಯಾ. ನಿಮ್ಮೊಂದಿಗೆ ನಾನು ಸದಾ ನಿಲ್ಲುತ್ತೇನೆ ಎಂದು ಶಿವರಾಜ್ ಕುಮಾರ್ ತಮ್ಮ ಸ್ಪಷ್ಟ ಮತ್ತು ಧೈರ್ಯವಂತ ನಿಲುವನ್ನು ವ್ಯಕ್ತಪಡಿಸಿದ್ದಾರೆ.
ರಮ್ಯಾ ಅವರ ವಿರುದ್ಧ ಬಳಸಿದ ಅಪಮಾನಕಾರಿ ಪದಗಳು ಖಂಡನೀಯ. ಯಾವುದೇ ಮಹಿಳೆಯ ವಿರುದ್ಧ ಆ ರೀತಿ ಮಾತನಾಡುವುದು ಸರಿಯಲ್ಲ. ನಾವೆಲ್ಲರೂ ಮಹಿಳೆಯರನ್ನು ತಾಯಿಯಾಗಿ, ಅಕ್ಕನಾಗಿ, ಮಗಳಾಗಿ, ಮಡದಿಯಾಗಿ ಮತ್ತು ಅತ್ಯಂತ ಪ್ರಮುಖವಾಗಿ ಒಬ್ಬ ವ್ಯಕ್ತಿಯಾಗಿ ಗೌರವಿಸುವ ಜವಾಬ್ದಾರಿಯನ್ನು ಹೊಂದಿದ್ದೇವೆ.
ರಮ್ಯಾ ಅವರ ವಿರುದ್ಧ ಬಳಸಿರುವ ಪದಗಳು ಖಂಡನೀಯ. ಯಾವ ಮಹಿಳೆಯ ವಿರುದ್ಧವೂ ಆ ರೀತಿ ಮಾತನಾಡುವುದು ಸರಿಯಲ್ಲ; ಅದನ್ನು ನಾವು ಸಹಿಸಬಾರದು. ಮಹಿಳೆಯರನ್ನು ತಾಯಿಯಾಗಿ, ಅಕ್ಕನಾಗಿ, ಮಗಳಾಗಿ, ಮಡದಿಯಾಗಿ ಮತ್ತು ಮೊಟ್ಟಮೊದಲು ಒಬ್ಬ ವ್ಯಕ್ತಿಯಾಗಿ ಗೌರವಿಸುವುದು ತುಂಬಾ ಮುಖ್ಯ. ಸೋಶಿಯಲ್ ಮೀಡಿಯಾ ತುಂಬಾ ಬಲಿಷ್ಠವಾದ ಅಸ್ತ್ರ, ಅದನ್ನು ತಮ್ಮ ಏಳಿಗೆಗಾಗಿ ಬಳಸಬೇಕೇ ಹೊರತು, ಅವಾಚ್ಯ ಶಬ್ದಗಳಿಂದ ನಿಂದಿಸಿ, ದ್ವೇಷ- ಅಸೂಯೆಯನ್ನು ಬಿತ್ತಲು ಬಳಸಬಾರದು. ನಿಮ್ಮ ನಿಲುವು ಸರಿಯಿದೆ, ರಮ್ಯಾ. ನಿಮ್ಮ ಜೊತೆಗೆ ನಾವು ಸದಾ ನಿಲ್ಲುತ್ತೇವೆ. -ಇಂತೀ ಶಿವರಾಜ್‌ಕುಮಾರ್, ಗೀತಾ ಶಿವರಾಜ್‌ಕುಮಾರ್
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ನಟ ವಿನಯ್ ರಾಜ್ ಕುಮಾರ್ ರಮ್ಯಾ ಪರ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಇಂದು ನಟ ಶಿವರಾಜ್ ಕುಮಾರ್ ರಮ್ಯಾ ಗೆ ಬೆಂಬಲ ಕೊಟ್ಟಿದಾರೆ. ಜೊತೆಗೆ ಶಿವಣ್ಣ ಅವರ ಪೋಸ್ಟ್ ಅನ್ನು ರೀ ಪೋಸ್ಟ್ ಮಾಡಿಕೊಂಡಿದ್ದಾರೆ ನಟ ಯುವ ರಾಜ್ ಕುಮಾರ್ . ನಟ ಯುವ ರಾಜ್ ಎಕ್ಕ ಸಿನಿಮಾ ಹೀರೋ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.