
ಹಿರಿಯ ನಟಿ ಬಿ ಸರೋಜದೇವಿ ಅವರು ಸಿನಿ ತಂತ್ರಜ್ಞರಿಗೆ ನೆರವು ನೀಡಲು ಮುಂದಾಗಿದ್ದಾರೆ. ನಾಲ್ಕು ಲಕ್ಷ ರುಪಾಯಿಗಳ ನೆರವು ನೀಡುವ ಮೂಲಕ ಕಷ್ಟ ಕಾಲದಲ್ಲಿ
ಸಿನಿ ತಂತ್ರಜ್ಞರ ಕೈಹಿಡಿಯುತ್ತಿದ್ದಾರೆ.
ಸಂಗೀತ ಕ್ಷೇತ್ರದಲ್ಲಿ ದುಡಿಯುತ್ತಿರುವವರಿಗೆ ಈ ಹಣವನ್ನು ಬಳಸಲು ಮತ್ತು ಕೊರೋನಾ ಸಂಕಷ್ಟ ಕಾಲದಲ್ಲಿ ಕೆಲಸ ಇಲ್ಲದೆ ಆರ್ಥಿಕವಾಗಿ ಕುಸಿದಿರುವವರ ನೆರವಿಗೆ ಈ
ಹಣ ಬಳಸುವಂತೆ ಬಿ ಸರೋಜದೇವಿ ಅವರು ಮನವಿ ಮಾಡಿಕೊಂಡಿದ್ದಾರೆ.
3,000 ಸಿನಿ ಕಾರ್ಮಿಕರ ಕುಟುಂಬಕ್ಕೆ ಉಪ್ಪಿ ನೆರವು
ಬಹುಭಾಷಾ ನಟಿ ಬಿ ಸರೋಜದೇವಿ ನೀಡಲಿರುವ 4 ಲಕ್ಷ ರುಪಾಯಿಗಳನ್ನು ಸಂಗೀತ ನಿರ್ದೇಶಕ ಸಾಧು ಕೋಕಿಲ ಅವರ ನೇತೃತ್ವದಲ್ಲಿ ಸಂಗೀತ ಕ್ಷೇತ್ರದಲ್ಲಿ ಕಷ್ಟದಲ್ಲಿ ಇರುವವರಿಗೆ ನೀಡಲು ನಿರ್ಧರಿಸಲಾಗಿದೆ.
ಬಹಳಷ್ಟು ಸಿನಿ ಸ್ಟಾರ್‌ಗಳು ಕೊರೋನಾ ಕಾಲದಲ್ಲಿ ಇಂಡಸ್ಟ್ರಿಯ ಜನರ ನೆರವಿಗೆ ನಿಂತಿದ್ದು ಸ್ಯಾಂಡಲ್‌ವುಡ್‌ನಲ್ಲಿರೋ 3 ಸಾವಿರ ಕುಟುಂಬಕ್ಕೆ ದಿನಸಿ ಕಿಟ್ ನೀಡುವುದಕ್ಕೆ ಉಪೇಂದ್ರ ನಿರ್ಧರಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.