ಎಷ್ಟು ಚಂದ ಐತೆ, ಎಂಥಾ ಅಂದ ಐತೆ ರಿಷಬ್ ಶೆಟ್ರ ಶಾಲೆ

By Web DeskFirst Published Apr 25, 2019, 4:57 PM IST
Highlights

ಸರ್ಕಾರಿ ಶಾಲೆಯನ್ನು ದತ್ತು ಪಡೆದ ರಿಷಬ್ ಶೆಟ್ಟಿ ಹಾಗೂ ತಂಡ |  ಶಾಲೆಯನ್ನು ಅಭಿವೃದ್ಧಿಪಡಿಸಿ ಮಕ್ಕಳನ್ನು ಕೈ ಬೀಸಿ ಕರೆಯುವಂತೆ ಮಾಡಿದ್ದಾರೆ | ಎಲ್ಲಾ ಮಕ್ಕಳು ತಪ್ಪದೇ ಶಾಲೆಗೆ ಬರಲು ಈ ಪ್ರಯತ್ನ ಮಾಡಿದ್ದಾರೆ 

ಸರ್ಕಾರಿ ಶಾಲೆಯನ್ನು ರಿಷಬ್ ಶೆಟ್ಟಿ ಹಾಗೂ ತಂಡ ದತ್ತು ಪಡೆದಿದೆ. ಕೇವಲ ನೆಪ ಮಾತ್ರಕ್ಕೆ ದತ್ತು ಪಡೆದು ಸುಮ್ಮನಾಗಿಲ್ಲ. ಆ ಶಾಲೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಕಲರ್‌ಫುಲ್ ಆಗಿಸಿದ್ದಾರೆ. ಬೇಸಿಗೆ ರಜೆ ಮುಗಿಸಿ ಬರುವ ಮಕ್ಕಳಿಗೆ ಸರ್ಪ್ರೈಸ್ ನೀಡಿದ್ದಾರೆ. 

ಆರ್ ಜೆ ಸಿರಿ ಫೋಟೋಗಳು ಸಖತ್ ಹಾಟ್ ಮಗಾ!

ಕನ್ನಡ ಶಾಲೆ ಉಳಿವಿಗಾಗಿ ಮೂಡಿ ಬಂದ ಸಿನಿಮಾ ರಿಷಬ್ ಶೆಟ್ಟಿಯವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು. ಕನ್ನಡ ಶಾಲೆಯ ಉಳಿವಿನ ಬಗ್ಗೆ, ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಅನಂತ್ ನಾಗ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸರ್ಕಾರಿ ಶಾಲೆ ಉಳಿವಿಗಾಗಿ ಹೋರಾಟ ಮಾಡಿ ಯಶಸ್ವಿಯೂ ಆಗಿದ್ದಾರೆ.

ಮತ್ತೆ ಕನ್ನಡ ನಾಡಿನ ರಸಿಕರ ಮನವ ಗೆಲ್ಲಲು ಬರುತ್ತಿದ್ದಾಳೆ ’ರಂಗನಾಯಕಿ’

ಇದು ಕೇವಲ ತೆರೆ ಮೇಲೆ ಮಾತ್ರವಾಗಿ ಉಳಿದಿಲ್ಲ. ರಿಷಬ್ ಶೆಟ್ಟಿ ತಂಡ ಶಾಲೆಯೊಂದನ್ನು ದತ್ತು ಪಡೆದು ಅಭಿವೃದ್ಧಿ ಮಾಡುವುದಾಗಿ ಹೇಳಿತ್ತು. ಅದರಂತೆ ಶಾಲೆಯೊಂದನ್ನು ದತ್ತು ಪಡೆದು ಸುಣ್ಣ ಬಣ್ಣ ಬಳಿದು ಮಾಡ್ರನ್ ಶಾಲೆಯನ್ನಾಗಿ ಮಾಡಿದೆ. ಶಾಲೆಯ ಗೋಡೆ ಮೇಲೆ ಬಣ್ಣ ಬಣ್ಣದ ಚಿತ್ತಾರ, ಕಲೆ, ಸಾಹಿತ್ಯ, ಸಂಸ್ಕೃತಿಯ ಚಿತ್ರಗಳನ್ನು ಬಿಡಿಸುವ ಮೂಲಕ ಶಾಲೆಗೆ ಹೊಸ ರೂಪ ನೀಡಿದ್ದಾರೆ. 

ಬೇಸಿಗೆ ರಜೆ ಮುಗಿಸಿ ಶಾಲೆಗೆ ಬರುವ ಮಕ್ಕಳಿಗೆ ಶಾಲೆ ಖುಷಿ ಕೊಡುವಂತಿರಬೇಕು. ಅವರ ಕಲಿಕೆಗೆ ಇನ್ನಷ್ಟು ಪ್ರೇರಣೆ ನೀಡುವಂತಿರಬೇಕು ಎಂಬುದು ರಿಷಬ್ ಶೆಟ್ಟಿ ಹಾಗೂ ತಂಡದ ಆಶಯ. 

 

ರಜೆ ಮುಗಿಸಿ ಬರುವ ಮಕ್ಕಳಿಗೆ ಹೊಸ ವರ್ಷಕ್ಕೆ ಹೊಸ ಶಾಲೆ, ಹೊಸ ಕಲಿಕೆ, ಹೊಸ ಜೀವನವನ್ನು ನೀಡುವ ಪ್ರಯತ್ನದಲ್ಲಿ ಮೊದಲ ಹೆಜ್ಜೆ ಇಟ್ಟಿದ್ದೇವೆ. ಆ ಮಕ್ಕಳ ಭವಿಷ್ಯಕ್ಕೂ, ನಮ್ಮ ಈ ಪ್ರಯತ್ನಕ್ಕೂ ನಿಮ್ಮ ಸಹಕಾರವಿರಲಿ :) pic.twitter.com/GRbkMQXtxo

— Rishab Shetty (@shetty_rishab)

ಕನ್ನಡ ಶಾಲೆ ಮುಚ್ಚಿ ಹೋಗುವ ಸ್ಥಿತಿ ಬಂದಾಗ ಮಕ್ಕಳೆಲ್ಲಾ ಸೇರಿ ಹೇಗೆ ಆ ಶಾಲೆಯನ್ನು ಉಳಿಸಿಕೊಳ್ಳುತ್ತಾರೆ ಎಂಬುದನ್ನು ಈ ಸಿನಿಮಾದಲ್ಲಿ ತೋರಿಸಲಾಗಿತ್ತು. ಈ ಚಿತ್ರದ ಹೇ ಶಾರದೆ.. ದಯೆ ತೋರೆಯಾ... ಹಾಡು ಶಾಲಾ ಮಕ್ಕಳ ಫೇವರೇಟ್ ಹಾಡಾಗಿದೆ.  

click me!