
ಅಯೋಗ್ಯ-2 ಸಿನಿಮಾದ 'ಅಣ್ಣಾ ಬಂದ್ರೆ' ಸಾಂಗ್ ರಿಲೀಸ್; ಹೊಸ ಖದರ್ನಲ್ಲಿ ನೀನಾಸಂ ಸತೀಶ್ ಮಸ್ತ್ಡಾನ್ಸ್..!
ಸ್ಯಾಂಡಲ್ವುಡ್ನಲ್ಲಿ ಮಂಡ್ಯ ನಾಟಿ ಸ್ಟೈಲ್ಸಿನಿಮಾ ಸಿದ್ಧವಾಗಿದೆ. ಅದು ನೀನಾಸಂ ಸತೀಶ್ ಹಾಗು ಡಿಂಪಲ್ ಕ್ವೀನ್ ರಚಿತಾ ರಾಮ್ ಕಾಂಬಿನೇಷನ್ನ ಅಯೋಗ್ಯ-2 ಸಿನಿಮಾ.. ಈಗ ಅಗಸ್ಟ್ನಲ್ಲಿ ಧಮಾಕ ಮಾಡೋಕೆ ಸಜ್ಜಾಗಿರೋ ಅಯೋಗ್ಯ-2 ಮಸ್ತ್ ಎನರ್ಜಿ ತುಂಬೋ ಸಾಂಗ್ ಒಂದು ರಿಲೀಸ್ ಆಗಿದೆ.
ಅಯೋಗ್ಯನ ಅಣ್ಣಮ್ಮಂದಿರ ಹಾಡು ಎಷ್ಟು ಸ್ಪೆಷಲ್ ಗೊತ್ತಾ..?
ಊರು ಅಂದ್ಮೇಲೆ ಅಲ್ಲೊಬ್ಬ ಅಯೋಗ್ಯ ಇದ್ದೇ ಇರ್ತಾನೆ. ಆ ಅಯೋಗ್ಯನ ಕಥೆಯನ್ನ ಏಳು ವರ್ಷದ ಹಿಂದೆ ನೋಡಿದ್ದಾಗಿದೆ. ಈಗ ಆ ಅಯೋಗ್ಯನನ್ನೂ ಮೀರಿಸೋ ಮತ್ತೊಬ್ಬ ಅಯೋಗ್ಯ ಹುಟ್ಟಿಕೊಂಡಿದ್ದಾನೆ. ಅದೇ ಅಯೋಗ್ಯ-2 ಸಿನಿಮಾ.. ಇದೀಗ ಅಯೋಗ್ಯ-2 ಸಿನಿಮಾದ ಅಣ್ಣ ಬಂದ್ರೆ ಹಾಡು ಬಿಡುಗಡೆ ಆಗಿದೆ..
ಹೌದು, ಅಯೋಗ್ಯ-2 ಸಿನಿಮಾ ಸ್ಯಾಂಡಲ್ವುಡ್ನಲ್ಲಿ ಹೊಸ ಬರವಸೆ ಮೂಡಿಸಿದೆ. ಅದಕ್ಕೆ ಕಾರಣ ಸಿನಿಮಾದ ಹಾಡುಗಳು.. 2019ರಲ್ಲಿ ಬಂದ ಅಯೋಗ್ಯ ಸಿನಿಮಾದ ಹಾಡುಗಳು ದೊಡ್ಡ ಹಿಟ್ ಆಗಿದ್ವು. ಈಗ ಬಂದಿರೋ ಅಯೋಗ್ಯ-2 ಹಾಡುಗಳು ಸಹ ಹಿಟ್ ಲಿಸ್ಟ್ ಸೇರುತ್ತಿವೆ. ಅದಕ್ಕೆ ಬೆಸ್ಟ್ ಎಕ್ಸಾಂಪಲ್ ಸಖತ್ ಕಿತ್ ಕೊಡ್ತಾ ಇರೋ, ಇದ್ದಲ್ಲೇ ಡಾನ್ಸ್ ಮಾಡೋಕೆ ಹುರಿ ದುಂಬಿಸುತ್ತಿರೋ ಈ ಅಣ್ಣ ಬಂದ್ರೆ ಸಾಂಗ್..
ನೀನಾಸಂ ಸತೀಶ್ ಈ ಹಾಡಿನಲ್ಲಿ ಸಿಕ್ಕಾಪಟ್ಟೆ ಎನರ್ಜಿಟಿಕ್ ಆಗಿ ಡಾನ್ಸ್ಮಾಡಿದ್ದಾರೆ. ಈ ಹಾಡಿನಲ್ಲಿ ಸತೀಶ್ ಡಾನ್ಸ್ಖದರ್ ಸಂಪೂರ್ಣ ಬದಲಾಗಿದೆ. ಪ್ರತಿಯೊಂದು ಸ್ಟೆಪ್ಸ್ಡಾನ್ಸ್ ನಂಬರ್ ಆಗಿ ಥ್ರಿಲ್ ಕೊಡುತ್ತಿದೆ. ಅರ್ಜುನ್ ಜನ್ಯ ಸಂಗೀತಾ, ಬಹದ್ದೂರ್ ಚೇತನ್ ಸಾಹಿತ್ಯ, ಆಂಟೋನಿ ದಾಸ್ ರ ಧ್ವನಿ ಮಿಕ್ಸ್ ಆಗಿ ಮಸ್ತ್ಸಾಂಗ್ ಸೃಷ್ಟಿಯಾಗಿದೆ.
ಅಯೋಗ್ಯ 2 ಅಪ್ಪಟ ಮಂಡ್ಯ ಮಂದ್ದೆಯಂತಾ ನಾಟಿ ಸ್ಟೈಲ್ ಸಿನಿಮಾ.. ರಚಿತಾ ಲುಕ್ಕು, ಸತೀಶ್ಹಾಸ್ಯದ ರಂಗು ಈ ಸಿನಿಮಾದ ಹೈಲೆಟ್. ಈ ಬಾರಿ ನಿರ್ಮಾಪಕ ಮುನೇಗೌಡ ಅದ್ದೂರಿ ಬಜೆಟ್ನಲ್ಲಿ ಈ ಸಿನಿಮಾ ನಿರ್ಮಾಣ ಮಾಡಿರೋದು ಸಿನಿಮಾದ ಸ್ಯಾಂಪಲ್ಸ್ನಲ್ಲೇ ಗೊತ್ತಾಗುತ್ತೆ. 100 ಡೇಸ್ ರನ್ನಿಂಗ್ ಸಕ್ಸಸ್ಫುಲ್ ಅಯೋಗ್ಯ ಕೊಟ್ಟಿರೋ ಮಹೇಶ್ ಕುಮಾರ್,ಈ ಬಾರಿ ಕೂಡ ಕಮಾಲ್ ಮಾಡೋ ಹಾಗೆ ಕಾಣುತ್ತಿದೆ. ಟೋಟಲಿ ಫ್ಯಾಮಿಲಿ ಎಂಟರ್‌ಟೈಂನ್‌ಮೆಂಟ್ ಅಯೋಗ್ಯ-2 ಅನ್ನೋ ನಿರೀಕ್ಷೆ ಹೆಚ್ಚಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.