ಕೆಜಿಎಫ್‌ 2 ಯಾವಾಗ? ಕೊನೆಗೂ ಗುಟ್ಟು ಬಿಟ್ಟುಕೊಟ್ಟ ರಾಕಿ ಭಾಯ್ !

Published : Mar 05, 2020, 10:58 PM ISTUpdated : Mar 05, 2020, 11:10 PM IST
ಕೆಜಿಎಫ್‌ 2 ಯಾವಾಗ? ಕೊನೆಗೂ ಗುಟ್ಟು ಬಿಟ್ಟುಕೊಟ್ಟ ರಾಕಿ ಭಾಯ್ !

ಸಾರಾಂಶ

ಓಬಿರಾಯನ ಕಥೆ ಟೈಟಲ್ ಲಾಂಚ್/ ನಟರಾದ ಸಂಗೀತ ನಿರ್ದೇಶಕ ರಘು ದೀಕ್ಷಿತ್/ ಕೆಜಿಎಫ್ 2 ಬಗ್ಗೆ ಮಹತ್ವದ ವಿಷಯ ಹೇಳಿದ ಯಶ್/ ಬಜೆಟ್ ನಲ್ಲಿ ಹಣ ಮೀಸಲಿಟ್ಟಿದ್ದಕ್ಕೆ ಧನ್ಯವಾದ

ಬೆಂಗಳೂರು(ಮಾ. 05) ಗಾಯಕ, ಸಂಗೀತ ನಿರ್ದೇಶಕ ರಘು ದೀಕ್ಷಿತ್ ಈಗ ಆಕ್ಟರ್ ಆಗಿದ್ದಾರೆ. ನವ ನಿರ್ದೇಶಕ ವಿನಯ್ ಶಾಸ್ತ್ರಿ ನಿರ್ದೇಶನದ ಚಿತ್ರದಲ್ಲಿ ನಟಿಸೋಕೆ ಒಪ್ಪಿಕೊಂಡಿದ್ದಾರೆ. ಸಂಗೀತ ನಿರ್ದೇಶನದ ಜೊತೆಗೆ ರಘು ದೀಕ್ಷಿತ್ ನಟನೆಯನ್ನು ಮಾಡುತ್ತಿದ್ದಾರೆ. ಓಬಿರಾಯನ ಕಥೆ ಹೆಸರಿನ ಚಿತ್ರದ ಟೈಟಲ್ ಲಾಂಚ್ ನಲ್ಲಿ ಸಂಭ್ರಮ ಹಂಚಿಕೊಂಡಿದ್ದಾರೆ.

ಓಬಿರಾಯನ ಕಥೆ ಹೆಸರಿನ ಚಿತ್ರದ ಟೈಟಲ್ ರಾಕಿಂಗ್ ಸ್ಟಾರ್ ಯಶ್  ಲಾಂಚ್ ಮಾಡಿದ್ದಾರೆ. ಹೈದ್ರಾಬಾದ್ ನಿಂದ ಬಂದು ಚಿತ್ರದ ಟೈಟಲ್ ಯಶ್ ಲಾಂಚ್ ಮಾಡಿದರು.

ಚಿತ್ರದ ನಾಯಕ ನಟ ರಾಜೇಶ್ ನಟರಂಗ ನನ್ನ ಆಪ್ತರು, ಅವರಿಂದ ತುಂಬಾ ಕಲಿತಿದ್ದೇನೆ. ರಾಜೇಶ್ ನಟರು ಮಹಾ ಪ್ರತಿಭಾವಂತರು, ಅವರಲ್ಲಿ ನಿರ್ದೇಶಕರಿದ್ದಾರೆ. ಚಿತ್ರದ ಟೈಟಲ್ ಓಬಿರಾಯನ ಕಥೆ  ತುಂಬಾ ಚೆನ್ನಾಗಿದೆ. ನಾವು ಓಬಿರಾಯನ ಕಾಲದ ಧೋರಣೆ ಬಿಟ್ಟು ಮುನ್ನಡೆಯ ಬೇಕು ಎಂದು ಇದೇ ಸಂದರ್ಭದಲ್ಲಿ ಯಶ್ ಹೇಳಿದರು.

ಬಜೆಟ್ ಅಲ್ಲಿ ಫಿಲ್ಮಂ ಸಿಟಿಗಾಗಿ ಹಣ ಮೀಸಲಿಟ್ಟಿರೋದು ಖುಷಿ ತಂದಿದೆ. ಫಿಲ್ಮಂ ಫೆಸ್ಟಿವಲ್ ಉದ್ಘಾಟನೆ ದಿನ ಸ್ಟುಡಿಯೋ ಮಾಡಿ ಅಂತ ಮನವಿ ಮಾಡಿದ್ದೆ.  ಅಂದೇ ಅದೇ ವೇದಿಕೆ ಮೇಲೆ ಸಿಎಂ ಯಡಿಯೂರಪ್ಪ ಶೀಘ್ರವೇ ಮಾಡುತ್ತೇನೆ ಅಂದಿದ್ದರು. ಆ ಪ್ರಕಾರ ಈಗ ಸಿಎಂ ಬಜೆಟ್ ಅಲ್ಲಿ ಹಣ ಘೋಷಣೆ ಮಾಡಿದ್ದಾರೆ. ಸಿನಿಮಾ ರಂಗದ ಪರವಾಗಿ ನಾನು ಧನ್ಯವಾದ ತಿಳಿಸುತ್ತೇನೆ ಎಂದು ಹೇಳಿದರು.

ಫಿಲ್ಮಂ ಸಿಟಿ ಮೈಸೂರಲ್ಲಿಯೇ ಆದರೆ ಒಳ್ಳೆಯದು, ಚಿತ್ರರಂಗಕ್ಕೆ ಚಿತ್ರೀಕರಣಕ್ಕೆ ಅನುಕೂಲ ಆಗುತ್ತದೆ. ಆದರೆ ಸರ್ಕಾರ ಫಿಲ್ಮಂ ಸಿಟಿಯನ್ನ ಹೆಸರುಘಟ್ಟದಲ್ಲಿಯೇ ಮಾಡೋಕೆ ಹೊರಟಿದೆ. ಆಗಲಿ ಆಗುತ್ತಿದೆ ಅನ್ನೊದೇ ಖುಷಿ. ಸಿನಿಮಾರಂಗಕ್ಕೆ ಅನೇಕರು ಬರುತ್ತಿದ್ದಾರೆ. ಸಿನಿಮಾ ಅನ್ನೊದು ಎಜುಕೇಷನ್ ಥರ ಆಗಬೇಕು ಎಂದು ಹೇಳಲು ರಾಕಿಂಗ್ ಸ್ಟಾರ್ ಮರೆಯಲಿಲ್ಲ.

ಕೆಜಿಎಫ್ ತಂಡದಿಂದ ಅನಂತ್ ನಾಗ್ ಹೊರಕ್ಕೆ!

ಮಾರ್ಚ್ 7 ರಂದು ರಾಧಿಕಾ ಯಶ್ ಜನ್ಮ ದಿನ. ಆದರೆ ಫ್ಯಾನ್ಸ್ ಜೊತೆಗೆ ರಾಧಿಕಾ ಜನ್ಮ ದಿನ ಆಚರಿಸೋದಿಲ್ಲ. ಮಕ್ಕಳೂ ಇದ್ದಾರೆ, ಕೊರೋನಾ ವೈರಸ್ ಕೂಡ ಇದೆ. ಹಾಗಾಗಿ ರಾಧಿಕಾ ಮನೆಯವರೊಂದಿಗೆ ಜನ್ಮದಿನ ಆಚರಣೆ ಮಾಡಿಕೊಳ್ಳಲಿದ್ದಾರೆ ಎಂದು ತಿಳಿಸಿದರು.

ವೈರಸ್ ನಿಂದ ರಕ್ಷಿಸಿಕೊಳ್ಳಲು ಹೈಜನಿಕ್ ಆಗಿರಬೇಕು. ಹ್ಯಾಂಡ್ ಶೇಕ್ ಬದಲು ಅದನ್ನ ತಡೆಯೋಕೆ ನಮ್ಮ ಭಾರತೀಯ ನಮಸ್ಕಾರವೇ ಲೇಸು. ಕೊರೋನಾ ವೈರಸ್ ನಿಂದ ಎಲ್ಲರೂ ಅಲರ್ಟ್  ಆಗಿರಿ ಎಂದು ತಿಳಿಸಿದರು.

ಕೆಜಿಎಫ್-2 ಚಿತ್ರ 2020 ಅಲ್ಲಿಯೇ ರಿಲೀಸ್ ಆಗುತ್ತಿದೆ. ಚಿತ್ರ 1971ರ ಕಾಲಘಟ್ಟದಲ್ಲಿಯೇ ನಡೆಯುತ್ತಿದೆ.  ಚಿತ್ರಕ್ಕಾಗಿ ದೇಹ ತೂಕ ಇಳಿಸಿಕೊಂಡಿದ್ದೇನೆ. ಹೈದ್ರಾಬಾದ್ ಅಲ್ಲಿಯೇ 15 ದಿನ  ಚಿತ್ರೀಕರಣ ನಡೆದಿದೆ. ಚಿತ್ರದ ಪೋಟೋಗಳು ಅದ್ಹೇಗೋ ರಿವೀಲ್ ಆಗುತ್ತವೆ. ನಾವೂ ಕಂಟ್ರೊಲ್ ಮಾಡುವ ಪ್ರಯತ್ನ ಮಾಡುತ್ತೇವೆ.  ಕೆಜಿಎಫ್ 2 ಯಾವಾಗ ಬರುತ್ತೆ ಅಂತ ಹೇಳ್ತಿನಿ.  ಎಪ್ರಿಲ್ ಅಂತ ಹೇಳಿದ್ರು ಜುಲೈಗೂ ಹೇಳಿದ್ರು ಈಗ ಸಂಕ್ರಾಂತಿ ಅಂತ ಹೇಳಿದ್ದಾರೆ.  ಅನಿಲ್ ತದಾನಿ ಅವರೇ ಎರಡು ಸಿನಿಮಾ ರೈಟ್ಸ್ ತೆಗೆದುಕೊಂಡಿದ್ದಾರೆ. ನಾವು ಚರ್ಚೆ ಮಾಡಿಕೊಂಡೇ ಬರುತ್ತೇವೆ . ಪ್ಯಾನ್ ಇಂಡಿಯನ್ ಸಿನಿಮಾ ಟಾಪ್ ಲೆವೆಲ್ ನಲ್ಲಿ ಆತರ ಏನು ಇರೋದಿಲ್ಲ.ಅಲ್ಮೋಸ್ಟ್ ಲಾಸ್ಟ್ , ಮೇಜರ್ ಪೋರ್ಷನ್ ಮುಗಿದಿದೆ ಎಂದು ಯಶ್ ತಿಳಿಸಿದರು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?