ಆನಂದ್ ಬಳಿಕ ನಟ ಶಿವರಾಜ್‌ಕುಮಾರ್ ಅಭಿನಯದ ಎರಡನೇ ಚಿತ್ರ 'ಮನಮೆಚ್ಚಿದ ಹುಡುಗಿ'ಗೂ ಕೂಡ ಇದೇ ಸುಧಾರಾಣಿ ನಾಯಕಿ. ಅಂದಿನ ಕಾಲದ ಬಹುತೇಕ ಎಲ್ಲ ನಟರೊಂದಿಗು ನಟಿಸಿ ಸೈ ಎನಿಸಿಕೊಂಡ ಸುಧಾರಾಣಿಯವರ ಮೊದಲ ಹೆಸರು ಜಯಶ್ರೀ.
ನಟಿ ಸುಧಾರಾಣಿ ಕನ್ನಡದ ಶ್ರೀಗಂಧದ ಗೊಂಬೆ. ಸ್ಯಾಂಡಲ್‌ವುಡ್ ಸಿನಿರಂಗದಲ್ಲಿ ಸುಧಾರಾಣಿಯವರಿಗೆ ಅಪಾರವಾದ ಅಭಿಮಾನಿ ಬಳಗವಿದೆ. ಬಾಲಕಲಾವಿದೆಯಾಗಿ ಬಣ್ಣದ ಬದುಕಿಗೆ ಕಾಲಿಟ್ಟ ನಟಿ ಸುಧಾರಾಣಿ, ಮೊದಲು ಅಭಿನಯಿಸಿದ್ದು ಕ್ವಾಲಿಟಿ ಬಿಸ್ಕೆಟ್ ಜಾಹೀರಾತಿನಲ್ಲಿ ಎನ್ನಲಾಗಿದೆ. ಬಳಿಕ, ಚೈಲ್ಡ್ ಆರ್ಟಿಸ್ಟ್ ಆಗಿ ಕಿಲಾಡಿ ಕಿಟ್ಟು, ಕುಳ್ಳ ಕುಳ್ಳಿ, ಅನುಪಮ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಳಿಕ ಅವರು ನಟ ಶಿವರಾಜ್‌ಕುಮಾರ್ ಮೊಟ್ಟಮೊದಲ ಚಿತ್ರ 'ಆನಂದ್'ಗೆ ನಾಯಕಿಯಾಗಿ ಚಿತ್ರರಂಗದ ಪ್ರಯಾಣ ಆರಂಭಿಸಿದರು.
ಆನಂದ್ ಬಳಿಕ ನಟ ಶಿವರಾಜ್‌ಕುಮಾರ್ ಅಭಿನಯದ ಎರಡನೇ ಚಿತ್ರ 'ಮನಮೆಚ್ಚಿದ ಹುಡುಗಿ'ಗೂ ಕೂಡ ಇದೇ ಸುಧಾರಾಣಿ ನಾಯಕಿ. ಅಂದಿನ ಕಾಲದ ಬಹುತೇಕ ಎಲ್ಲ ನಟರೊಂದಿಗು ನಟಿಸಿ ಸೈ ಎನಿಸಿಕೊಂಡ ಸುಧಾರಾಣಿಯವರ ಮೊದಲ ಹೆಸರು ಜಯಶ್ರೀ. ಚಿತ್ರರಂಗದಲ್ಲಿ ಸುಧಾರಾಣಿ ಹೆಸರಿನಿಂದ ಖ್ಯಾತಿ ಗಳಿಸಿದ ನಟಿ, ಡಾ ರಾಜ್‌ಕುಮಾರ್ ಅವರೊಂದಿಗೆ 'ಜೀವನ ಚೈತ್ರ' ಚಿತ್ರದಲ್ಲಿ ಮಗಳಾಗಿ ಅಮೋಘ ಅಭಿನಯ ನೀಡಿದ್ದಾರೆ.
ಡಾ ವಿಷ್ಣುವರ್ಧನ್ ಜತೆ ಮಹಾ ಕ್ಷತ್ರಿಯ, ಅಂಬರೀಷ್ ಜತೆ ಮಣ್ಣಿನ ದೋಣಿ ಹಾಗೂ ರವಿಚಂದ್ರನ್ ಜತೆ ಮನೆ ದೇವ್ರು ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಅಂದಿನ ಕಾಲದ ಎಲ್ಲ ಹಿರಿಯ ನಟರ ಜತೆಗೂ ನಟಿಸಿರುವ ಕೀರ್ತಿ ಸುಧಾರಾಣಿಗೆ ಸಲ್ಲುತ್ತದೆ. ಮೈಸೂರು ಮಲ್ಲಿಗೆ ಸಿನಿಮಾಗೆ ರಾಜ್ಯಪ್ರಶಸ್ತಿ ಕೂಡ ಪಡೆದುಕೊಂಡ ಕಲಾವಿದೆ ನಟಿ ಸುಧಾರಾಣಿ. ಕೆಲವು ತಮಿಳು, ತೆಲುಗು ಹಾಗೂ ಕನ್ನಡ ಚಿತ್ರಗಳಲ್ಲಿ ಕೂಡ ಸುಧಾರಾಣಿಯವರು ಅಭಿನಯಿಸಿದ್ದಾರೆ.
ಆದರೆ, 1999ರಲ್ಲಿ ಮದುವೆಯಾಗುವ ಮೂಲಕ ಬಣ್ಣದ ಬದುಕಿನಿಂದ ಸುಧಾರಾಣಿಯವರು ಮೊದಲ ಬಾರಿಗೆ ದೂರವಾದರು. ಆದರೆ, ಮದುವೆ ಅವರ ಪಾಲಿಗೆ ವರವಾಗುವ ಬದಲು ಶಾಫವಾಯಿತು. ಅಮೆರಿಕಾದಲ್ಲಿ ಅನಸ್ತೇಷಿಯಾ ಸ್ಪೆಷಲಿಸ್ಟ್ ಆಗಿದ್ದ ಗಂಡ ಡಾ ಸಂಜಯ್, ಯಾವುದೋ ರಹಸ್ಯ ಕೆಮಿಕಲ್ಸ್ ನೀಡಿ ಸುಧಾರಾಣಿಯವರನ್ನು ಮುಗಿಸಲು ಕೂಡ ಪ್ಲಾನ್ ಮಾಡಿದ್ದರಂತೆ. ಜತೆಗೆ, ಮದುವೆಯಾದ ಸ್ವಲ್ಪ ದಿನಗಳ ಬಳಿಕ ಸುಧಾರಾಣಿಯವರಿಗೆ ಇನ್ನಿಲ್ಲದ ಟಾರ್ಚರ್ ಕೊಡಲು ಶುರು ಮಾಡಿದ್ದರಂತೆ.
ಒಟ್ಟಿನಲ್ಲಿ, ಡಾ ಸಂಜಯ್ ಮೂಲಕ ಅಮೇರಿಕಾದಲ್ಲಿ ಸುಧಾರಾಣಿ ವೈವಾಹಿಕ ಬದುಕು ನರಕವಾಯಿತು. ಗಂಡನಿಂದ ತಪ್ಪಿಸಿಕೊಂಡು ಬಂದು ಗೆಳತಿ ಮನೆಯಲ್ಲಿ ರಹಸ್ಯವಾಗಿ ಆಶ್ರಯ ಪಡೆದು, ಪಾರ್ವತಮ್ಮ ರಾಜ್‌ಕುಮಾರ್ ಹಾಗೂ ಅಂಬರೀಷ್ ಸಹಾಯದಿಂದ ಅಮೆರಿಕಾದಿಂದ ತಪ್ಪಿಸಿಕೊಂಡು ಬಂದು ಸುಧಾರಾಣಿಯವರು ಬೆಂಗಳೂರಿನ ತವರುಮನೆ ಸೇರಿಕೊಂಡರು ಎನ್ನಲಾಗಿದೆ. ಅಂದು ಸುಧಾರಾಣಿಯವರು ಖಿನ್ನತೆಗೆ ಕೂಡ ಜಾರಿದ್ದರಂತೆ.
ಬಳಿಕ, 2001ರಲ್ಲಿ ಕುಟುಂಬದ ಹತ್ತಿರದ ಸಂಬಂಧಿ ಗೋವರ್ಧನ್ ಜತೆ ಸುಧಾರಾಣಿಯವರ ಮದುವೆಯಾಯಿತು. ಅವರಿಗೆ ಸ್ವಾತಿ (ನಿಧಿ) ಹೆಸರಿನ ಮಗಳೊಬ್ಬಳಿದ್ದಾರೆ. ಆದರೆ, ಅಚ್ಚರಿ ಎಂಬಂತೆ ಮನೆಯವರು ಅಳೆದುತೂಗಿ ಮಾಡಿದ ಮದುವೆ ಸುಧಾರಾಣಿಗೆ ಮುಳುವಾಯಿತು. ಅದೇ ಮನೆಯವರು ಮಾಡಿದ ಇನ್ನೊಂದು ಮದುವೆ ವರವಾಯಿತು. ಇಂದು ಸುಧಾರಾಣಿ ಗಂಡ ಗೋವರ್ಧನ್ ಹಾಗೂ ಮಗಳೊಂದಿಗೆ ಸುಖ ಸಂಸಾರ ನಡೆಸುತ್ತಿದ್ದಾರೆ.
ದುಬೈನಿಂದ ಬೆಂಗಳೂರಿಗೆ ಬಂದ 'ಕೃಷ್ಣ ಸುಂದರಿ' ಮಾಲಾಶ್ರೀ ಮೀಟ್ ಆಗಿದ್ರು; ಮೂಡುತ್ತಿದ್ಯಾ 'ಹೊಸ ಬೆಳಕು'..!?
ಬೇರೆ ಕೆಲವು ನಟಿಯರಂತೆ, ಸುಧಾರಾಣಿಗೆ ಸಿನಿಮಾ ನಟನೆಯಲ್ಲಿ ತೊಡಗಿಸಿಕೊಂಡಿದ್ದಾಗ ಅಥವಾ ಬಳಿಕ ಕೂಡ ಯಾವುದೇ ವಾದ-ವಿವಾದಗಳು ಅಂಟಿಕೊಳ್ಳಲಿಲ್ಲ. ಯಾರನ್ನೋ ಲವ್ ಮಾಡಿ ಓಡಿ ಹೋಗಲಿಲ್ಲ, ಲವ್ ಮಾಡಿ ಮದುವೆ ಕೂಡ ಆಗಲಿಲ್ಲ. ಆದರೂ ವಿಧಿ ಲಿಖಿತ ಎಂಬಂತೆ ಮೊದಲ ಗಂಡನ ಜತೆಯ ವೈವಾಹಿಕ ಜೀವನ ಸುಧಾರಾಣಿಯವರ ಪಾಲಿಗೆ ನರಕವಾಯಿತು. ಇಂದು ಸುಧಾರಾಣಿ ಪೋಷಕ ನಟಿಯಾಗಿ ಬೆಳ್ಳಿತೆರೆ ಮತ್ತು ಕಿರುತೆರೆ ಎರಡರಲ್ಲೂ ಸಕ್ರಿಯರಾಗಿದ್ದಾರೆ.
ಮಾಲಾಶ್ರೀ ಜತೆ ಬಡಿದಾಡಿದ್ದ ನಟ ಅರ್ಧ ಸೆಂಚುರಿಗೂ ಮೊದಲೇ ಯಾಕೆ ವಿಧಿವಶರಾಗ್ಬಿಟ್ರು!