ಶುಭ ಪೂಂಜಾಗೆ ಮಾತೃ ವಿಯೋಗ… ನಿನ್ನನ್ನು ಬಿಟ್ಟು ಬದುಕೋ ಶಕ್ತಿ ನನಗಿಲ್ಲ… ಅಮ್ಮನ ಕುರಿತು ನಟಿ ಭಾವುಕ ಪೋಸ್ಟ್

Published : Mar 07, 2025, 04:13 PM ISTUpdated : Mar 07, 2025, 05:23 PM IST
ಶುಭ ಪೂಂಜಾಗೆ ಮಾತೃ ವಿಯೋಗ… ನಿನ್ನನ್ನು ಬಿಟ್ಟು ಬದುಕೋ ಶಕ್ತಿ ನನಗಿಲ್ಲ… ಅಮ್ಮನ ಕುರಿತು ನಟಿ ಭಾವುಕ ಪೋಸ್ಟ್

ಸಾರಾಂಶ

ನಟಿ ಶುಭಾ ಪೂಂಜಾ ಅವರ ತಾಯಿ ಸುಲೋಚನಾ ಪೂಂಜಾ ಮಾರ್ಚ್ 6 ರಂದು ನಿಧನರಾದರು. ತಾಯಿಯ ಅಗಲಿಕೆಯಿಂದ ದುಃಖಿತರಾದ ಶುಭಾ ಪೂಂಜಾ, ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.  

ಕನ್ನಡ ಚಿತ್ರರಂಗದಲ್ಲಿ ಬಹಳ ವರ್ಷಗಳಿಂದ ಗುರುತಿಸಿಕೊಂಡಿರುವ ನಟಿ, ಶುಭಾ ಪೂಂಜಾ (Shubha Poonja) ಅವರ ತಾಯಿ ಸುಲೋಚನ ಪೂಂಜಾ ಅವರು ಮಾಚ್ 6 ರಂದು ನಿಧನರಾಗಿದ್ದು, ನಟಿ ಶುಭ ಪೂಂಜಾ ಅಗಲಿದ ಅಮ್ಮನನ್ನು ಕುರಿತು ಭಾವುಕ ಪೋಸ್ಟ್ ಮಾಡಿದ್ದಾರೆ 

ತಮ್ಮ ಸೋಶಿಯಲ್ ಮೀಡಿಯಾದಲ್ಲಿ (Social media) ಅಮ್ಮನ ಜೊತೆಗಿನ ಫೋಟೊಗಳನ್ನು ಹಂಚಿಕೊಂಡಿರುವ ಶುಭ ಪೂಂಜಾ, ಅಮ್ಮ ನನ್ನ ನೀನು ಯಾಕೆ ಬಿಟ್ಟು ಹೋದೆ ನೀನು ಇಲ್ಲದೆ ನನಗೆ ಜೀವನವಿಲ್ಲ. ನಿನ್ನ ಬಿಟ್ಟು ನನಗೆ ಬದುಕಕ್ಕೆ ಬರೋದು ಇಲ್ಲ.  24 ಗಂಟೆ ನಿನ್ನ ಜೊತೇನೆ ಇರುತ್ತಿದ್ದೆ.  ಈಗ ನಾನು ಏನು ಮಾಡಲಿ ? ಎಲ್ಲಿ ಹೋಗಲಿ? ಯಾರಿಗೋಸ್ಕರ ವಾಪಸ್ ಮನೆಗೆ ಬರಲಿ ? ನೀನು ನನ್ನ ಯಾಕೆ ಬಿಟ್ಟು ಹೋದೆ ? ನನ್ನ ಇಡೀ ಜೀವನಕ್ಕೆ ಅರ್ಥವಿಲ್ಲದೆ ಆಯ್ತು. ನನ್ನ ಇಡೀ ಜೀವನವೇ ನೀನಾಗಿದ್ದೆ ನನ್ನ ಯಾಕೆ ಬಿಟ್ಟು ಹೋದೆ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ. 

ಇದರ ಜೊತೆಗೆ ‘ನಾನು ಮಾರ್ಚ್ 6 ರಂದು ನನ್ನ ತಾಯಿಯನ್ನು ಕಳೆದುಕೊಂಡೆ. ಒಂದು ದಿನದ ಹಿಂದೆ... ನನ್ನ ಜೀವನ ಅವಳ ಸುತ್ತ ಮಾತ್ರ ಸುತ್ತುತ್ತಿತ್ತು. ಅವಳು ನನ್ನ ಜೀವನ.. ನಾನು ಏನೇ ಮಾಡಿದರೂ ಅದು ಅವಳ ಸುತ್ತಲೂ ಮಾತ್ರ ಇತ್ತು. ಇಂದು ನಾನು ದುರಸ್ತಿ ಮಾಡಲಾಗದಷ್ಟು ವಿನಾಶಗೊಂಡಿದ್ದೇನೆ.. ಅವಳಿಲ್ಲದ ಜೀವನವನ್ನು ನಾನು ಊಹಿಸಲು ಸಾಧ್ಯವಿಲ್ಲ .. ಅವಳಿಲ್ಲದೆ ನನ್ನ ಜೀವನಕ್ಕೆ ಯಾವುದೇ ಅರ್ಥವಿಲ್ಲ .. ನನ್ನ ಹೃದಯವು ಮಿಲಿಯನ್ ತುಂಡುಗಳಾಗಿ ಒಡೆದಿದೆ .. ಏಕೆಂದರೆ ನನ್ನ ತಾಯಿಯೇ ಎಲ್ಲವೂ. ನನ್ನ ಜೀವನ ಎಂದಿಗೂ ಒಂದೇ ಆಗಿರುವುದಿಲ್ಲ .. ಮತ್ತು ನಾನು ಎಂದಿಗೂ ಒಂದೇ ಆಗಿರಲು ಸಾಧ್ಯವಿಲ್ಲ . . . ನನ್ನ ನಗು ಕಳೆದುಹೋಗಿದೆ ಅಮ್ಮಾ.. (I lost my smile) ಎಂದು ಬರೆದುಕೊಂಡಿದ್ದಾರೆ. 

ಶುಭಾ ಪೂಂಜಾ ಮಂಗಳೂರಿನಲ್ಲಿ ಹುಟ್ಟಿ ಬೆಳೆದವರು. ಅವರು ಮಧ್ಯಮ ವರ್ಗದ ಕುಟುಂಬದಿಂದ ಬಂದವರು ಮತ್ತು ಇಬ್ಬರು ಒಡಹುಟ್ಟಿದವರು . ಇವರ ತಂದೆ ಶೇಷಾದ್ರಿ ಪೂಂಜಾ, ತಾಯಿ ಸುಲೋಚನಾ ಪೂಂಜಾ (Sulochana Poonja). ಇದೀಗ ಸುಲೋಚನಾ ಪೂಂಜಾ ನಿಧನರಾಗಿದ್ದಾರೆ.   ಶುಭ ಪೂಂಜಾ ತಾಯಿಗೆ 70 ವರ್ಷ ವಯಸ್ಸಾಗಿತ್ತು.  ನ್ಯುಮೋನಿಯಾ ಅಟ್ಯಾಕ್ (pneumonia attack)  ಆಗಿ ಲಂಗ್ಸ್ ನಲ್ಲಿ ನೀರು ತುಂಬಿದ್ದ ಕಾರಣ ಆರೋಗ್ಯದಲ್ಲಿ ಏರುಪೆರಾಗಿತ್ತು ಎನ್ನಲಾಗಿದೆ. ಅಲ್ಲದೇ ಕಳೆದ ನಾಲ್ಕು ತಿಂಗಳಿನಿಂದ ಆರೋಗ್ಯ ಸಮಸ್ಯೆಯಿಂದ (health issues) ಶುಭ ಪೂಂಜಾ ತಾಯಿ ಬಳಲುತ್ತಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಸುಲೋಚನಾ ಪೂಂಜಾ ನಿಧನರಾಗಿದ್ದಾರೆ. 

ಶುಭ ಪೂಂಜಾ ಜೊತೆಗೆ ಬೆಂಗಳೂರಿನಲ್ಲಿ ವಾಸವಾಗಿದ್ದ ತಾಯಿ ಸುಲೋಚನಾ, ಅನಾರೋಗ್ಯದಿಂದಾಗಿ ಮಾರ್ಚ್ 6 ರಂದು ನಿಧನರಾಗಿದ್ದು, ನೆನ್ನೆ ವಿಧಿವಶರಾದ ತಾಯಿಯ ಪಾರ್ಥಿವ ಶರೀರವನ್ನ ಕುಟುಂಬಸ್ಥರು ಹುಟ್ಟೂರಾದ ಬೆಂಗಳೂರಿಗೆ ತೆಗೆದುಕೊಂಡು ಹೋಗಿದ್ದಾರೆ. ತಾಯಿಯ ಆಸೆಯಂತೆ ಕೊನೆ ಕಾರ್ಯಗಳನ್ನ ಮಂಗಳೂರಿನಲ್ಲಿ ಶುಭ ಪೂಂಜಾ ನೆರವೇರಿಸಿದ್ದಾರೆ. ನಟಿಯ ತಾಯಿಯ ನಿಧನಕ್ಕೆ ಚಿತ್ರರಂಗದ ಗಣ್ಯರು ಹಾಗೂ ಶುಭ ಪೂಂಜಾ ಸ್ನೇಹಿತರು ಸಂತಾಪ ಸೂಚಿಸಿದ್ದಾರೆ.  ಜೊತೆಗೆ ನಟಿಗೆ ಧೈರ್ಯ ಹೇಳಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ