ಲಾಲ್‌ಬಾಗ್‌ ಕಾರ್ಮಿಕನ ಕ್ಷಮೆ ಕೇಳಿ, ದೊಡ್ಡಗುಣ ಪ್ರದರ್ಶಿಸಿದ ನಟಿ ರಚಿತಾ ರಾಮ್‌

Published : Aug 15, 2023, 03:42 PM ISTUpdated : Aug 17, 2023, 09:47 AM IST
ಲಾಲ್‌ಬಾಗ್‌ ಕಾರ್ಮಿಕನ ಕ್ಷಮೆ ಕೇಳಿ, ದೊಡ್ಡಗುಣ ಪ್ರದರ್ಶಿಸಿದ ನಟಿ ರಚಿತಾ ರಾಮ್‌

ಸಾರಾಂಶ

ಲಾಲ್‌ಬಾಗ್‌ನಲ್ಲಿ ಸ್ವಚ್ಛತಾ ಕಾರ್ಮಿಕನಿಗೆ ಕಾರು ಗುದ್ದಿದ ಬಗ್ಗೆ ಸ್ವತಃ ರಚಿತಾ ರಾಮ್‌ ಕಾರ್ಮಿಕನನ್ನು ಮನೆಗೆ ಕರೆಸಿಕೊಂಡು ಕ್ಷಮೆ ಕೇಳಿ ದೊಡ್ಡಗುಣವನ್ನು ಮೆರೆದಿದ್ದಾರೆ.

ಬೆಂಗಳೂರು (ಆ.15): ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಕಾರಿನಲ್ಲಿ ಹೋಗುವಾಗ, ಆಕಸ್ಮಿಕವಾಗಿ ನಮ್ಮ ಕಾರು ಸ್ವಚ್ಛತಾ ಕಾರ್ಮಿಕನಿಗೆ ಗುದ್ದಿದ ಬಗ್ಗೆ ನನ್ನ ಗಮನಕ್ಕೆ ಬಂದಿರಲಿಲ್ಲ. ನಾನು ಬೇಕಂತಲೇ ತಪ್ಪು ಮಾಡಿಲ್ಲ. ಮನಸಾರೆ ನನ್ನ ಕಡೆಯಿಂದ ಮತ್ತು ನಮ್ಮ ಕಾರಿನ ಡ್ರೈವರ್‌ ಕಡೆಯಿಂದ ಕ್ಷಮೆ ಕೇಳುತ್ತೇನೆ ಅಣ್ಣ ಎಂದು ಕಾರ್ಮಿಕರಿಗೆ ತಿಳಿಸಿದ್ದಾರೆ. 

ಈ ಕುರಿತು ಸ್ವತಃ ರಚಿತಾರಾಮ್‌ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇಂದು ಸ್ವಾತಂತ್ರ್ಯ ದಿನಾಚರಣೆಯನ್ನು ಒಬ್ಬ ಸ್ವಚ್ಛತಾ ಕಾರ್ಮಿಕರ ಕಡೆಯಿಂದ ವಿಶ್‌ ಮಾಡುತ್ತಿದ್ದೇನೆ. ಸ್ವಾತಂತ್ರ್ಯ ದಿನಾಚರಣೆ ಶುಭಾಕಾಂಕ್ಷಲು ಎಂದು ಕಾರ್ಮಿಕ ರಂಗಪ್ಪ ಕಡೆಯಿಂದ ವಿಶ್ ಮಾಡಿಸಿದರು.

ನಿನ್ನೆ ಲಾಲ್‌ಬಾಗ್‌ ಕಾರ್ಯಕ್ರಮಕ್ಕೆ ಹೋದಾಗ ಆಕಸ್ಮಿಕವಾಗಿ ನಡೆದ ಒಂದು ಘಟನೆ ನಡೆಯಿತು. ಆದರೆ, ಇಂದು ನಾನು ವಿಡಯೋ ಮಾಡಿ ಕ್ಷಮೆ ಕೇಳುತ್ತಿದ್ದೇನೆ. ಈ ಬಗ್ಗೆ ನಾನು ಕಾರ್ಯಕ್ರಮಕ್ಕೆ ಹೋದಾಗ ಕಾರು ಗುದ್ದಿದ ಘಟನೆಯ ಬಗ್ಗೆ ನನ್ನ ಗಮನಕ್ಕೆ ಬರಲಿಲ್ಲ. ಅಲ್ಲಿ ಹಲವಾರು ಮೀಡಿಯಾ ಪ್ರೆಂಡ್ಸ್‌ ಇದ್ದರೂ ನನ್ನ ಗಮನಕ್ಕೆ ತಂದಿರಲಿಲ್ಲ. ಆದರೆ, ಒಟ್ಟಾರೆ ನನ್ನ ಕಡೆಯಿಂದ ತಪ್ಪಾಗಿತ್ತು. ನನ್ನ ಕಡೆಯಿಂದ ಅಣ್ಣನಿಗೆ ಕ್ಷಮೆ ಕೇಳುತ್ತಿದ್ದೇನೆ. ಇದು ನಾನು ಬೇಕಂತಲೇ ಮಾಡಿದ ತಪ್ಪಲ್ಲ. ಆಕಸ್ಮಿಕವಾಗಿ ನಡೆದ ತಪ್ಪಾಗಿದೆ. ಹೀಗಾಗಿ, ಅಣ್ಣ ನಾನು ನಿಮ್ಮನ್ನು ಮನಸಾರೆ ಕ್ಷಮೆಯನ್ನು ಕೇಳುತ್ತೇನೆ. ನಮ್ಮ ಚಾಲಕನ ಕಡೆಯಿಂದಲೂ ಕ್ಷಮೆ ಕೇಳುತ್ತೇನೆ. ಈ ವಿಚಾರವಾಗಿ ಕಾರ್ಮಿಕರಿಗೆ ನೋವುಂಟಾಗಿದ್ದರೂ ಇನ್ನೊಮ್ಮೆ ಸಾರಿ ಕೇಳುತ್ತೇನೆ. 

ಕಾರ್ಮಿಕನಿಗೆ ಗುದ್ದಿದ ರಚಿತಾ ರಾಮ್ ಕಾರು, ಮಾನವೀಯತೆ ಮರೆತ್ರಾ ನಟಿ!

ನಾನು ಸ್ವಾತಂತ್ರ್ಯ ದಿನಾಚರಣೆ ದಿನದಂದು ಎಂದಿಗೂ ವಿಶೇಷ ರೀತಿಯಲ್ಲಿ ಶುಭಾಶಯ ಕೋರಿರಲಿಲ್ಲ. ಆದರೆ, ಇಂದು ಬೆಳಗ್ಗೆ ರಂಗಪ್ಪ ಅವರು ನಮ್ಮ ಮನೆಗೆ ಬರುವವರೆಗೂ ಕಾದು, ನಂತರ ಸ್ವಾತಂತ್ರ್ಯ ದಿನಾಚರಣೆ ಮಾಡುತ್ತಿದ್ದೇನೆ. ಇನ್ನು ರಂಗಪ್ಪ ಅವರು ಲಾಲ್‌ಬಾಗ್‌ನಲ್ಲಿ ಕೆಲಸ ಮಾಡುವುದಕ್ಕೆ ಬಿಡುವು ಪಡೆದುಕೊಂಡು ಬಂದಿದ್ದಾರೆ. ಅವರನ್ನು ನೇರವಾಗಿ ಭೇಟಿ ಮಾಡಿ ನಾನು ಕ್ಷಮೆ ಕೇಳುತ್ತಿದ್ದೇನೆ. ಇನ್ನು ಮುಂದಿನ ದಿನಗಳಲ್ಲಿ ಇಂತಹ ತಪ್ಪುಗಳಾಗದಂತೆ ಎಚ್ಚರಿಕೆ ವಹಿಸುತ್ತೇನೆ ಎಂದು ರಚಿತಾ ರಾಮ್‌ ತಿಳಿಸಿದ್ದಾರೆ. 

ಘಟನೆ ನಡೆದಿದ್ದಾರೂ ಏನು ಇಲ್ಲಿದೆ ನೋಡಿ... ಸ್ಯಾಂಡಲ್‌ವುಡ್ ನಟಿ ರಚಿತಾ ರಾಮ್ (actress rachita ram) ಅವರು ಪ್ರಯಾಣಿಸುತ್ತಿದ್ದ ಕಾರು ಸ್ವಚ್ಛತಾ ಕಾರ್ಮಿಕನಿಗೆ ಗುದ್ದಿ ಭಾರಿ ಅನಾಹತ ತಪ್ಪಿತ್ತು. ರಚಿತಾ ರಾಮ್‌  ಕಾರು ಚಾಲಕನ ಯಡವಟ್ಟಿನಿಂದ ಲಾಲ್ ಬಾಗ್ ನಲ್ಲಿ ಈ ಘಟನೆ ನಿನ್ನೆ (ಆ.14ರ ಸೋಮವಾರ ಮಧ್ಯಾಹ್ನ) ನಡೆದಿತ್ತು.. ಘಟನೆ ನಡೆದಾಗ ರಚಿತಾ ಕಾರಿನಲ್ಲೇ ಇದ್ದರು. ಆದರೆ, ಚಾಲಕನ ನಿರ್ಲಕ್ಷ್ಯವೋ? ಕಾರ್ಮಿಕನ ನಿರ್ಲಕ್ಷ್ಯವೋ? ಗೊತ್ತಿಲ್ಲ. ಆದರೆ, ದುರ್ಘಟನೆ ನಡೆದ ನಂತರವೂ ಕಾರ್ಮಿಕನ ಬಳಿ ಕ್ಷಮೆ ಕೇಳದೇ ಅಲ್ಲಿಂದ ಮುಂದೆ ಹೋಗಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣ ಸೇರಿದಂತೆ ಕಾರ್ಮಿಕರ ಒಕ್ಕೂಟಗಳಿಮದಲೂ ತೀವ್ರ ವಿರೋಧ ವ್ಯಕ್ತವಾಗಿತ್ತು.

ಕೋಟಿ ಮೌಲ್ಯದ ದುಬಾರಿ ಕಾರು ಖರೀದಿಸಿದ ಸ್ಯಾಂಡಲ್‌ವುಡ್ ಗುಳಿ ಕೆನ್ನೆ ಚೆಲುವೆ!

ಕ್ಷಮೆ ಕೇಳುವ ಸೌಜನ್ಯವೂ ತೋರಿಸದೇ ಹೋಗಿದ್ದ ರಚಿತಾ ರಾಮ್‌: ಕಾರು ಗುದ್ದಿದ್ದು ನಂತರವೂ ಕಾರ್ಮಿಕನನ್ನು ತಿರುಗಿಯೂ ನೋಡದೇ, ಕೆಲವು ಮೀಟರ್‌ಗಳ ದೂರದಲ್ಲಿ ಕಾರನ್ನು ನಿಲ್ಲಿಸಿ ಲಾಲ್‌ಬಾಗ್‌ ಅಧಿಕಾರಿಗಳು ಮತ್ತು ಇತರೆ ಗಣ್ಯರನ್ನು ಮಾತನಾಡಿಸುತ್ತಾ ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ ಕಾರ್ಯಕ್ರಮ ವೀಕ್ಷಣೆಗೆ ತೆರಳಿದರು. ಆದರೆ, ಕಾರು ಗುದ್ದಿದ ಬಗ್ಗೆ ಸಾವರಿಸಿಕೊಂಡ ಕಾರ್ಮಿಕನಿಗೆ ಪ್ರಶ್ನೆಯೂ ಮಾಡಲು ಬಿಡದಂತೆ ರಚಿತಾ ರಾಮ್‌ ಅವರ ಬಾಡಿಗಾರ್ಡ್ಸ್ ದಬ್ಬಾಳಿಕೆ ನಡೆಸಿದ್ದಾರೆ ಎಂದು ಆರೋಪವೂ ಕೇಳಿಬಂದಿತತು. ಇನ್ನು ಈ ಘಟನೆ ವಿವಾದದ ಸ್ವರೂಪ ಪಡೆದಕೊಳ್ಳುವ ಮುನ್ನವೇ ನಟಿ ರಚಿತಾ ರಾಮ್ ಘಟನೆ ನಡೆದು ಒಂದು ದಿನದ ನಂತರ ಕಾರ್ಮಿಕನ್ನು ಮನೆಗೆ ಕರೆಸಿಕೊಂಡು ಕ್ಷಮೆ ಕೇಳಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Mark Movie: ಡಿಸೆಂಬರ್‌ನಲ್ಲಿ ಏಕಕಾಲಕ್ಕೆ ಸ್ಟಾರ್‌ಗಳ ಸಿನಿಮಾ ರಿಲೀಸ್;‌ ಕಿಚ್ಚ ಸುದೀಪ್‌ ಏನಂದ್ರು?
ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!