ಎಲ್ಲಿ ಹಾಡ್ಬೇಕು ಅನ್ಸುತ್ತೋ ಅಲ್ಲಿ ಹಾಡ್ತೀನಿ, ರೋಡಲ್ಲೂ ಹಾಡ್ತೀನಿ, ಸ್ಟೇಜಲ್ಲೂ ಹಾಡ್ತೀನಿ, ಅಮೆರಿಕಾದಲ್ಲೂ ಹಾಡ್ತೀನಿ, ಗಾಜನೂರಿನಲ್ಲೂ ಹಾಡ್ತೀನಿ. ಹಾಗಾಗಿ ನಂಗೆ ಯಾವ ಜಾಗ ಅನ್ನೋದು ಮುಖ್ಯವಲ್ಲ, ಯಾರ ಮುಂದೆ ನಾನು ಹಾಡ್ತೀನಿ..
ಕನ್ನಡದ ನಟ, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shiva Rajkumar) ಅವರು ಸದ್ಯ ಎರಡು ವಿಭಿನ್ನ ಆಯಾಮಗಳಲ್ಲಿ ಸುದ್ದಿ ಆಗುತ್ತಿದ್ದಾರೆ. ಒಂದು ಅವರ ನಟನೆಯ 'ಭೈರತಿ ರಣಗಲ್' ಸಿನಿಮಾ. ಇನ್ನೊಂದು ನಟ ಶಿವಣ್ಣರ ಅನಾರೋಗ್ಯ. ಕ್ಯಾನ್ಸರ್ (Cancer) ಖಾಯಿಲೆಯಿಂದ ಬಳಲುತ್ತಿರುವ ನಟ ಶಿವಣ್ಣ ಸದ್ಯದಲ್ಲೇ ಟ್ರೀಟ್‌ಮೆಂಟ್‌ಗೆ ಅಮೆರಿಕಾಗೆ ಹೋಗಲಿದ್ದಾರೆ. ಆದರೆ, ಇತ್ತೀಚಿಗಷ್ಟೇ ಬಿಡುಗಡೆ ಆಗಿರುವ ಶಿವರಾಜ್‌ಕುಮಾರ್ ಅಭಿನಯದ 'ಭೈರತಿ ರಣಗಲ್' ಚಿತ್ರವು ಸೂಪರ್ ಹಿಟ್ ಆಗುವತ್ತ ಸಾಗುತ್ತಿದೆ ಎನ್ನಲಾಗಿದೆ.
ಈ ಸಮಯದಲ್ಲಿ ನಟ ಶಿವಣ್ಣ ಈ ಮೊದಲು ಹಲವು ಸಂದರ್ಶನಗಳಲ್ಲಿ ಹೇಳಿರುವ ಮಾತುಗಳು ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗುತ್ತಿವೆ. ಶಿವಣ್ಣ ಅವರು ರಿಯಲ್ ಹೀರೋ ಎಂದರೆ ಯಾರು ಅಂತ ಹೇಳಿದ್ದಾರೆ. ಅಷ್ಟೇ ಅಲ್ಲ, ಅವರ ಅಪರಿಮಿತ ಎನರ್ಜಿಯ ಗುಟ್ಟು ಏನೆಂಬುದನ್ನು ಸಹ ಬಿಚ್ಚಿಟ್ಟಿದ್ದಾರೆ. ಹಾಗಿದ್ದರೆ ಕರುನಾಡ ಚಕ್ರವರ್ತಿ ಶಿವಣ್ಣ ಏನು ಹೇಳಿದ್ದಾರೆ? ಹೀರೋ ಎಂದರೆ ಯಾರು ಎಂಬುದನ್ನು ನೋಡಿ..
undefined
ಡಾ ರಾಜ್ ಜೊತೆ ಭವ್ಯಾ ಒಮ್ಮೆಯೂ ನಟಿಸಲಿಲ್ಲ; ಹೊರಬಿದ್ದಿರುವ ಆ ಗುಟ್ಟು ನಿಜವೇ?
'ಒಬ್ಬ ಅಭಿಮಾನಿಯನ್ನು ಸ್ನೇಹಿತನ ರೀತಿ ನೋಡ್ಬೇಕು.. ಕಳೆದ 39 ವರ್ಷಗಳಿಂದ ಅಭಿಮಾನಿಗಳ ಬಾಯಲ್ಲಿ ಶಿವಣ್ಣ ಶಿವಣ್ಣ ಎಂಬ ಕೂಗು ಕೇಳಿಬರ್ತಿರೋದಕ್ಕೇ ನನಗೆ ಎನರ್ಜಿ ಬರ್ತಿರೋದು. ಬೇರೆ ಯಾವುದೇ ಸೀಕ್ರೆಟ್ ಇಲ್ಲ. ಅಭಿಮಾನಿಗಳ ಪ್ರೋತ್ಸಾಹವೇ ನನಗೆ ಎನರ್ಜಿ. ಯಾರನ್ನೋ ಮೆಚ್ಚಿಸೋದಕ್ಕೆ ನಾನಿಲ್ಲ, ನನಗೆ ಏನು ಇಷ್ಟವೋ ಅದನ್ನೇ ಮಾಡ್ತೀನಿ..
ಎಲ್ಲಿ ಹಾಡ್ಬೇಕು ಅನ್ಸುತ್ತೋ ಅಲ್ಲಿ ಹಾಡ್ತೀನಿ, ರೋಡಲ್ಲೂ ಹಾಡ್ತೀನಿ, ಸ್ಟೇಜಲ್ಲೂ ಹಾಡ್ತೀನಿ, ಅಮೆರಿಕಾದಲ್ಲೂ ಹಾಡ್ತೀನಿ, ಗಾಜನೂರಿನಲ್ಲೂ ಹಾಡ್ತೀನಿ. ಹಾಗಾಗಿ ನಂಗೆ ಯಾವ ಜಾಗ ಅನ್ನೋದು ಮುಖ್ಯವಲ್ಲ, ಯಾರ ಮುಂದೆ ನಾನು ಹಾಡ್ತೀನಿ ಅನ್ನೋದು ಮುಖ್ಯ. ಅಭಿಮಾನಿ ಬಯಸಿದಾಗ ಯಾರು ಮನರಂಜನೆ ನೀಡುತ್ತಾನೋ ಅವನೇ ರಿಯಲ್ ಹೀರೋ' ಎಂದಿದ್ದಾರೆ 'ಕರುನಾಡು ಚಕ್ರವರ್ತಿ' ಖ್ಯಾತಿಯ ನಟ ಶಿವರಾಜ್‌ಕುಮಾರ್.
ದೊಡ್ಮನೆಯ ಮೊದಲ ಲವ್ ಸ್ಟೋರಿ ರಿವೀಲ್; ಶಿವಣ್ಣನ ಮದುವೆಯಲ್ಲೇ ನಡೆದಿತ್ತು ಕಣ್ಣಾಮುಚ್ಚಾಲೆ!
ಅಂದಹಾಗೆ, ನಟ ಶಿವಣ್ಣ ಅವರು ಅಮೆರಿಕದಿಂದ (America) ವಾಪಸ್ ಬಂದ ಬಳಿಕ ಬಹಳಷ್ಟು ಸಿನಿಮಾಗಳ ಶೂಟಿಂಗ್ ಮುಗಿಸಲಿದ್ದಾರೆ. ತಮ್ಮದೇ ಹೋಮ್ ಪ್ರೊಡಕ್ಷನ್, ಗೀತಾ ಶಿವರಾಜ್‌ಕುಮಾರ್ ನಿರ್ಮಾಣದಲ್ಲಿ ಮೂಡಿ ಬರಲಿರುವ 'ಎ ಫಾರ್ ಆನಂದ್' ಚಿತ್ರದಲ್ಲಿ ನಟ ಶಿವರಾಜ್‌ಕುಮಾರ್ ನಟಿಸಲಿದ್ದಾರೆ. ಜೊತೆಗೆ, ರಾಮ್ ಚರಣ್ ನಟನೆಯ ತೆಲುಗು ಸಿನಿಮಾದಲ್ಲೂ ಶಿವಣ್ಣ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಹುಶಃ ಅವೆಲ್ಲವೂ ಮುಂದಿನ ವರ್ಷದ ಫೆಬ್ರವರಿ ಅಥವಾ ಮಾರ್ಚ್ ತಿಂಗಳಿನಲ್ಲಿ ಸಾಧ್ಯವಾಗಬಹುದು ಎನ್ನಲಾಗಿದೆ.